ಇನೋವಾ ಹೈಕ್ರಾಸ್ ಬಳಿಕ ಮತ್ತೊಂದು 7-ಸೀಟರ್ ಕಾರ್ ಬಿಡುಗಡೆಗೊಳಿಸಲು ಸಜ್ಜಾದ ಟೂಯೊಟಾ
ಜನಪ್ರಿಯ ಕಾರು ತಯಾರ ಕಂಪನಿಯಾದ ಟೊಯೊಟಾ ಇತ್ತೀಚೆಗೆ ಹೊಸ ಅರ್ಬನ್ ಕ್ರೂಸರ್ ಹೈರೈಡರ್ ಮತ್ತು ಇನೋವಾ ಹೈಕ್ರಾಸ್ ಎಂಬ ಎರಡು ಬಹುನಿರೀಕ್ಷಿತ ಯುಟಿಲಿಟಿ ವಾಹನಗಳನ್ನು ಬಿಡುಗಡೆ ಮಾಡಿತು. ಇದೀಗ ಟೊಯೊಟಾ ಕಂಪನಿಯು ಭಾರತೀಯ ಮಾರುಕಟ್ಟೆಗಾಗಿ ಹೊಸ ಎಸ್‍ಯುವಿಯು ಕೂಪೆಯನ್ನು ಬಿಡುಗಡೆಗೊಳಿಸಲು ಸಜ್ಜಾಗುತ್ತಿದೆ.
ಹೊಸ ಟೊಯೊಟಾ ಕೂಪೆ ಮಾದರಿಯು ಹೊಸ ಸುಜುಕಿ ಫ್ರಾಂಕ್ಸ್ ಅನ್ನು ಆಧರಿಸಿದೆ. ಇನ್ನು ಹೊಸ ವರದಿ ಪ್ರಕಾರ, ಟೊಯೊಟಾ ಕೊರೊಲ್ಲಾ ಕ್ರಾಸ್ ಆಧಾರಿತ ದೊಡ್ಡದಾದ 3-ಸಾಲು ಎಸ್‌ಯುವಿಯಲ್ಲಿ ಕೆಲಸ ಮಾಡುತ್ತಿದೆ. ಈ ಹೊಸ ಕೊರೊಲ್ಲಾ ಕ್ರಾಸ್ 7-ಸೀಟರ್ ಎಸ್‌ಯುವಿ ಹ್ಯುಂಡೈ ಅಲ್ಕಾಜರ್, ಮಹೀಂದ್ರಾ ಎಕ್ಸ್‌ಯುವಿ700 ಮತ್ತು ಜೀಪ್ ಮೆರಿಡಿಯನ್ ಎಸ್‍ಯುವಿಗಳಿಗೆ ಪೈಪೋಟಿ ನೀಡುತ್ತದೆ. ಜಾಗತಿಕ ಮಾರುಕಟ್ಟೆಗಳಲ್ಲಿ ಮಾರಾಟದಲ್ಲಿರುವ ಟೊಯೊಟಾ ಕೊರೊಲ್ಲಾ ಕ್ರಾಸ್ 5-ಸೀಟರ್ ಕಾರ್ ಹ್ಯುಂಡೈ ಕ್ರೆಟಾ ಮತ್ತು ಹೋಂಡಾ HR-V ಎಸ್‍ಯುವಿಗಳಿಗೆ ಪೈಪೋಟಿ ನೀಡುತ್ತದೆ.

ಜಾಗತಿಕ ಮಾರುಕಟ್ಟೆಯಲ್ಲಿರುವ ಟೊಯೊಟಾ ಕೊರೊಲ್ಲಾ ಕ್ರಾಸ್ ಕಾರ್ 2,640 mm ವ್ಹೀಲ್‌ಬೇಸ್ ಅನ್ನು ಹೊಂದಿದ್ದು, ಇದು ಕ್ರೆಟಾಗೆ ಅನುಗುಣವಾಗಿರುತ್ತದೆ. ಭಾರತದಲ್ಲಿ ಬಿಡುಗಡೆಯಾಗಲಿರುವ ಹೊಸ ಟೊಯೊಟಾ ಕೊರೊಲ್ಲಾ ಕ್ರಾಸ್ 7-ಸೀಟರ್ ಎಸ್‌ಯುವಿ ಇನೋವಾ ಕ್ರಾಸ್ ಹೈಕ್ರಾಸ್‌ಗೆ ಆಧಾರವಾಗಿರುವ ಟಿಎನ್‌ಜಿಎ-ಸಿ ಪ್ಲಾಟ್‌ಫಾರ್ಮ್ ಅನ್ನು ಆಧರಿಸಿದೆ. ಹೊಸ ಎಸ್‍ಯುವಿ ಹೈಕ್ರಾಸ್‌ನೊಂದಿಗೆ ಯುನಿಟ್ ಗಳು ಮತ್ತು ಪವರ್‌ಟ್ರೇನ್‌ಗಳನ್ನು ಹಂಚಿಕೊಳ್ಳಬಹುದು. ವಾಸ್ತವವಾಗಿ, ಎಸ್‍ಯುವಿಯನ್ನು ಅದೇ ಉತ್ಪಾದನಾ ಸಾಲಿನಲ್ಲಿ ತಯಾರಿಸಬಹುದು ಎಂದು ಹೇಳಲಾಗುತ್ತಿದೆ.
ಈ ಟೊಯೊಟಾ ಇನೋವಾ ಹೈಕ್ರಾಸ್ ಕಾರ್ 2,850 ಎಂಎಂ ವ್ಹೀಲ್‌ಬೇಸ್ ಹೊಂದಿದ್ದರೆ, ಕೊರೊಲ್ಲಾ ಕ್ರಾಸ್ 5-ಸೀಟರ್ ಮಾದರಿಯು 2,640 ಎಂಎಂ ವೀಲ್‌ಬೇಸ್ ಅನ್ನು ಹೊಂದಿದೆ. ಟೊಯೊಟಾ ಕಂಪನಿಯು ಸುಮಾರು 150 ಎಂಎಂ ವೀಲ್‌ಬೇಸ್ ಅನ್ನು ಹೆಚ್ಚಿಸಬಹುದು, ಇದು ಹೆಚ್ಚುವರಿ ಸೀಟ್‌ಗಳನ್ನು ಸೇರಿಸಲು ಬ್ರ್ಯಾಂಡ್‌ಗೆ ಸಹಾಯ ಮಾಡುತ್ತದೆ. ಟೊಯೊಟಾ ಪ್ರಸ್ತುತ 3-ಸಾಲಿನ ಎಸ್‍ಯುವಿ ವಿಭಾಗದಲ್ಲಿ ಫಾರ್ಚುನರ್ ಅನ್ನು ಮಾರಾಟ ಮಾಡುತ್ತಿದೆ. ಇದು ಗಮನಾರ್ಹವಾಗಿ ಹೆಚ್ಚಿನ ಬೆಲೆಯನ್ನು ಹೊಂದಿದೆ.
ಹೊಸ ಹೈಕ್ರಾಸ್ ಪ್ಲಾಟ್‌ಫಾರ್ಮ್ ಆಧಾರಿತ 7-ಸೀಟುಗಳ ಎಸ್‍ಯುವಿಯು ಫಾರ್ಚುನರ್‌ಗಿಂತ ಕೆಳಗಿನ ಸ್ಥಾನದಲ್ಲಿರುತ್ತದೆ. ಇನ್ನು ಈ ಹೊಸ ಎಸ್‍ಯುವಿಯು ಜೀಪ್ ಮೆರಿಡಿಯನ್, ಮಹೀಂದ್ರಾ ಎಕ್ಸ್‌ಯುವಿ700 ಮತ್ತು ಇತರ ಎಸ್‍ಯುವಿಗಳಿಗೆ ಪೈಪೋಟಿ ನೀಡುತ್ತದೆ. ಈ ಹೊಸ ಟೊಯೊಟಾ ಕೊರೊಲ್ಲಾ ಕ್ರಾಸ್ 7-ಸೀಟರ್ ಎಸ್‌ಯುವಿ ಫ್ಲೆಕ್ಸಿಬಲ್ ಸೀಟ್‌ಗಳನ್ನು ಹೊಂದಿರುತ್ತದೆ, ಏಕೆಂದರೆ ಫ್ಲಾಟ್ ಫ್ಲೋರ್ ಅನ್ನು ರಚಿಸಲು ಹಿಂದಿನ ಸೀಟುಗಳನ್ನು ಮಡಚಬಹುದು. ಈ ಎಸ್‍ಯುವಿ ಎಲೆಕ್ಟ್ರಿಕ್ ಚಾಲಿತ ಟೈಲ್‌ಗೇಟ್ ಅನ್ನು ಸಹ ಪಡೆಯಬಹುದು.
ಟೊಯೊಟಾ ಕಂಪನಿಯು 3ನೇ ಸಾಲಿನ ಸೀಟುಗಳಿಗೆ ಸುಲಭವಾಗಿ ಪ್ರವೇಶಿಸಲು ಉದ್ದವಾದ ಹಿಂಭಾಗದ ಡೋರುಗಳನ್ನು ಸೇರಿಸುತ್ತದೆ. ಟೊಯೊಟಾದ ಇಂಜಿನಿಯರ್‌ಗಳು ಈ ಹೊಸ ಎಸ್‍ಯುವಿಯ C ಮತ್ತು D ಪಿಲ್ಲರ್‌ಗಳಿಗೆ ಕೆಲವು ಬದಲಾವಣೆಗಳನ್ನು ಮಾಡುವ ಸಾಧ್ಯತೆಯಿದೆ ಈ ಹೊಸ ಟೊಯೊಟಾ ಎಸ್‍ಯುವಿ ತೆಳ್ಳಗಿನ ಡಿ ಪಿಲ್ಲರ್ ಮತ್ತು ದೊಡ್ಡದಾದ ಗ್ಲಾಸ್ ಮನೆ ನೆ ಪ್ರದೇಶವು ಮೂರನೇ ಸಾಲಿನಲ್ಲಿ ಗೋಚರತೆಯನ್ನು ಸುಧಾರಿಸಲು ಸಹಾಯ ಮಾಡುತ್ತದೆ. ಇನ್ನು ಟೊಯೊಟಾ ಕೊರೊಲ್ಲಾ ಕ್ರಾಸ್ 7-ಸೀಟರ್ ಎಸ್‌ಯುವಿ TNGA-C ಪ್ಲಾಟ್‌ಫಾರ್ಮ್ ಅಡಿಯಲ್ಲಿ ತಯಾರಿಸಲಾಗುತ್ತದೆ.
ಈ ಹೊಸ ಎಸ್‍ಯುವಿ ಜಾಗತಿಕ-ಸ್ಪೆಕ್ ಮಾದರಿಯಿಂದ ವಿಭಿನ್ನವಾಗಿ ಕಾಣುವಂತೆ ವಿನ್ಯಾಸ ಬದಲಾವಣೆಗಳನ್ನು ಪಡೆಯುವ ಸಾಧ್ಯತೆಯಿದೆ.ಹೈಕ್ರಾಸ್‌ಗಾಗಿ ಎಂಜಿನ್ ಆಯ್ಕೆಗಳನ್ನು ಹಂಚಿಕೊಳ್ಳುವ ಸಾಧ್ಯತೆಯಿದೆ. ಇದು ಎರಡು ಎಂಜಿನ್ ಆಯ್ಕೆಗಳೊಂದಿಗೆ ನೀಡಲಾಗುವ ಸಾಧ್ಯತೆಯಿದೆ. ಇದರಲ್ಲಿ 2.0 ನ್ಯಾಚುರಲ್ ಆಸ್ಪೈರರ್ಡ್ ಎಂಜಿನ್ 172 ಬಿಹೆಚ್‍ಪಿ ಪವರ್ ಅನ್ನು ಉತ್ಪಾದಿಸುವ ಸಾಮರ್ಥ್ಯವನ್ನು ಹೊಂದಿದೆ. ಇನ್ನು ಈ ಹೊಸ ಎಸ್‍ಯುವಿಯು ಲೀಟರ್ ಪೆಟ್ರೋಲ್ 186 ಬಿಹೆಚ್‍ಪಿ ಪವರ್ ಎಂಜಿನ್ ಅನ್ನು ಉತ್ಪಾದಿಸುವ ಸಾಮರ್ಥ್ಯವನ್ನು ಹೊಂದಿದೆ.
ಇದರ ಜೊತೆಗೆ ಸೆಲ್ಫ್ ಚಾರ್ಜಿಂಗ್ ಸ್ಟ್ರಾಂಗ್ ಹೈಬ್ರಿಡ್ ತಂತ್ರಜ್ಞಾನವನ್ನು ಹೊಂದಿದೆ. ಇನ್ನು ಟೊಯೊಟಾ ಕಿರ್ಲೋಸ್ಕರ್ ಮೋಟಾರ್ (TKM) ಭಾರತೀಯ ಮಾರುಕಟ್ಟೆಯಲ್ಲಿ 2023ರ ಇನೋವಾ ಕ್ರಿಸ್ಟಾ ಎಂಪಿವಿಯನ್ನು ಮರುಪರಿಚಯಿಸಲು ಸಜ್ಜಾಗಿದೆ. ಈ ಹೊಸ ಟೊಯೊಟಾ ಇನೋವಾ ಕ್ರಿಸ್ಟಾ (Toyota Innova Crysta) ಎಂಪಿವಿಯ ಖರೀದಿಗಾಗಿ ಬುಕ್ಕಿಂಗ್ ಅನ್ನು ಈಗಾಗಲೇ ಪ್ರಾರಂಭಿಸಲಾಗಿದೆ. ಈ ಹೊಸ ಎಂಪಿವಿಯನ್ನು ಖರೀದಿಸಲು ಬಯಸುವ ಗ್ರಾಹಕರು ಟೋಕನ್ ಮೊತ್ತ ರೂ.50,000 ಪಾವತಿಸಿ ಬುಕ್ಕಿಂಗ್ ಮಾಡಿಕೊಳ್ಳಬಹುದು.


Click it and Unblock the Notifications