ಕ್ಯಾಪ್ಟನ್ ಸೀಟ್‌ಗಳೊಂದಿಗೆ ಆಕರ್ಷಕ ಲುಕ್‌ನಲ್ಲಿ ಮಾಡಿಫೈಗೊಂಡು ಮಿಂಚಿದ ಟೊಯೊಟಾ ಕ್ವಾಲಿಸ್
ಭಾರತದಲ್ಲಿ ಟೊಯೊಟಾ ಕ್ವಾಲಿಸ್‌ಗಳು ಇಂದಿಗೂ ಬಳಕೆಯಲ್ಲಿವೆ, ವಾಹನ ಸ್ಥಗಿತಗೊಂಡರು ಮಾಲೀಕರು ಮಾಡಿಫೈಗೊಳಿಸಿ ಬಳಸುತ್ತಿದ್ದಾರೆ. ಇದು ವಿಶಾಲವಾದ ಕ್ಯಾಬಿನ್, ಪ್ರೀಮಿಯಂ ನೋಟ ಮತ್ತು ಅತ್ಯಂತ ವಿಶ್ವಾಸಾರ್ಹ ಎಂಜಿನ್ ಹೊಂದಿರುವುದು ಆಗಿನ ಕಾಲಕ್ಕೆ ಹಲವರ ಮನಗೆದ್ದಿತ್ತು. ಇತ್ತೀಚೆಗೆ ಇಂತಹದೇ ಕ್ವಾಲಿಸ್ ಆಕರ್ಷಕ ಲುಕ್‌ನಲ್ಲಿ ಮಾಡಿಫೈಗೊಂಡಿರುವುದನ್ನು ಇಲ್ಲಿ ನೋಡೋಣ.
ಟೊಯೋಟಾ ಭಾರತೀಯ ಮಾರುಕಟ್ಟೆಗೆ ಅಧಿಕೃತವಾಗಿ ನೀಡಿದ ಮೊದಲ ಉತ್ಪನ್ನವೆಂದರೆ ಕ್ವಾಲಿಸ್ MPV. ಇದನ್ನು 2000 ರಲ್ಲಿ ಬಿಡುಗಡೆ ಮಾಡಿ 2004 ರವರೆಗೆ ಮಾರಾಟಕ್ಕೆ ಲಭ್ಯವಿರಿಸಲಾಗಿತ್ತು. ಕ್ವಾಲಿಸ್ ಕಡಿಮೆ ಸಮಯದಲ್ಲಿ ಖರೀದಿದಾರರಲ್ಲಿ ಸಾಕಷ್ಟು ಜನಪ್ರಿಯತೆ ಗಳಿಸಿತ್ತು. ಆಗಿನ ಕಾಲಕ್ಕೆ ಟೊಯೊಟಾ ಕ್ವಾಲಿಸ್ ತನ್ನ ವಿಭಾಗದಲ್ಲಿ ಮಹೀಂದ್ರಾ ಬೊಲೆರೊ ಮತ್ತು ಟಾಟಾ ಸುಮೊಗಳೊಂದಿಗೆ ಸ್ಪರ್ಧಿಸುತ್ತಿತ್ತು. ಇಂದಿಗೂ ಸಹ, ಉತ್ತಮವಾಗಿ ನಿರ್ವಹಿಸಲಾದ ಟೊಯೋಟಾ ಕ್ವಾಲಿಸ್‌ಗಳನ್ನು ಅಲ್ಲಲ್ಲಿ ನೋಡಬಹುದು.

ಇದೀಗ ಅಂದವಾಗಿ ಮಾಡಿಫೈಗೊಳಿಸಿರುವ ಕ್ವಾಲಿಸ್ MPV ವಿಡಿಯೋವನ್ನು ದಾಜಿಶ್.ಪಿ ಎಂಬುವರು ತಮ್ಮ ಯೂಟ್ಯೂಬ್ ಚಾನೆಲ್‌ನಲ್ಲಿ ಅಪ್‌ಲೋಡ್ ಮಾಡಿದ್ದಾರೆ. ಈ ಕಾರನ್ನು ಸಂಪೂರ್ಣವಾಗಿ ಫ್ಯಾಕ್ಟರಿ ಸ್ಥಿತಿಗೆ ಮರುಸ್ಥಾಪಿಸಲಾಗಿದೆ. ಇದು ಈಗ ಕಸ್ಟಮ್ ಒಳಾಂಗಣದೊಂದಿಗೆ ಬರುತ್ತದೆ. ಈ ಕ್ವಾಲಿಸ್‌ನ ಮಾಲೀಕರು ಕಾರನ್ನು ಅದರ ಮೂಲ ಹಸಿರು ಮತ್ತು ಸಿಲ್ವರ್ ಡ್ಯುಯಲ್-ಟೋನ್‌ನಲ್ಲಿ ಪುನಃ ರೀಪೇಂಟ್ ಮಾಡಿಸಿದ್ದಾರೆ. ಕೊಚ್ಚಿಯ ಗ್ಯಾರೇಜ್‌ನಲ್ಲಿ ಪೇಂಟಿಂಗ್ ಕೆಲಸ ಮಾಡಲಾಗಿದೆ ಎಂದು ವಿಡಿಯೋದಲ್ಲಿ ವಿವರಿಸಲಾಗಿದೆ.
ಈ MPV ಯಲ್ಲಿನ ಹೆಡ್‌ಲ್ಯಾಂಪ್‌ಗಳನ್ನು ಬದಲಾಯಿಸಲಾಗಿದ್ದು, ಸ್ಟಾಕ್‌ಗಳು ಹಳದಿ ಬಣ್ಣವನ್ನು ಹೊಂದಿವೆ. ಹ್ಯಾಲೊಜೆನ್ ಹೆಡ್ ಲೈಟ್ ಸೆಟಪ್ ಹೊಂದಿದ್ದು, ಕ್ಲಿಯರ್ ಲೆನ್ಸ್ ಇಂಡಿಕೇಟರ್‌ಗಳನ್ನು ನೀಡಲಾಗಿದೆ. ಹಾಗೆಯೇ ಮಾಲೀಕ ಹೆಚ್ಚು ಆಕರ್ಷಣೀಯವಾಗಿ ಕಾಣಲು ಹೆಡ್‌ಲ್ಯಾಂಪ್ ಮೇಲೆ ಆಫ್ಟರ್‌ಮಾರ್ಕೆಟ್ LED DRL ಅನ್ನು ಸೇರಿಸಿದ್ದಾರೆ. MPV ಯ ಮುಂಭಾಗದ ಬಂಪರ್ ಪ್ಲಾಸ್ಟಿಕ್‌ನಿಂದ ಮಾಡಿದ ಕಂಪನಿ ಅಳವಡಿಸಿದ ಬುಲ್‌ಬಾರ್ ಅನ್ನು ನೋಡಬಹುದು. ಇದನ್ನು ಡೀಲರ್‌ಶಿಪ್‌ಗಳಿಂದ ಅಕ್ಸೆಸೊರಿಯಾಗಿ ಪಡಿಯಲಾಗಿದೆ.

ಬುಲ್‌ಬಾರ್‌ನ ಕೆಳಗೆ ದೊಡ್ಡ ಫಾಗ್ ಲ್ಯಾಂಪ್ ಘಟಕವಿದೆ. ಹಾಗೆಯೇ ಪ್ರೀಮಿಯಂ ಆಗಿ ಕಾಣಲು ಬಾನೆಟ್ ಮೇಲೆ ಟೊಯೋಟಾ ಲೋಗೋವನ್ನು ಸ್ಥಾಪಿಸಲಾಗಿದೆ. ಮಾಲೀಕರು ಸೌದಿ ಅರೇಬಿಯಾದಿಂದ ಇದನ್ನು ಖರೀದಿಸಿರುವುದಾಗಿ ತಿಳಿಸಿದ್ದಾರೆ. ಸೈಡ್ ಪ್ರೊಫೈಲ್‌ನಲ್ಲಿ ಈ MPV ಸ್ಟಾಕ್ 14 ಇಂಚಿನ ಸ್ಟೀಲ್ ರಿಮ್‌ಗಳನ್ನು ಆಫ್ಟರ್‌ಮಾರ್ಕೆಟ್‌ನಲ್ಲಿ ಪಡೆದ 15 ಇಂಚಿನ ಅಲಾಯ್ ವೀಲ್‌ಗಳೊಂದಿಗೆ ಬದಲಾಯಿಸಲಾಗಿದೆ. ಮುಂಭಾಗದ ಗ್ರಿಲ್, ಟೈಲ್‌ಗೇಟ್, ORVM ಗಳ ಮೇಲಿನ ಕ್ರೋಮ್ ಸಾಕಷ್ಟು ಆಕರ್ಷಕವಾಗಿ ಕಾಣುತ್ತದೆ.
ಇನ್ನು ಇಂಟೀರಿಯರ್‌ಗೆ ಬಂದರೆ, ಈ ಕ್ವಾಲಿಸ್‌ನ ಮಾಲೀಕರು ಇಲ್ಲೂ ಆಕರ್ಷಕವಾಗಿ ಕಸ್ಟಮೈಸ್ ಮಾಡಿಸಿದ್ದಾರೆ. ಕ್ವಾಲಿಸ್‌ನಲ್ಲಿರುವ ಫ್ಯಾಬ್ರಿಕ್ ಸೀಟ್‌ಗಳನ್ನು ಕಸ್ಟಮ್ ಫಿಟ್ ಲೆಥೆರೆಟ್ ಅಪ್ಹೋಲ್ಸ್ಟರಿಯೊಂದಿಗೆ ಬದಲಾಯಿಸಲಾಗಿದೆ. ಪ್ರೀಮಿಯಂ ಆಗಿ ಕಾಣಲು ಕಂದು ಬಣ್ಣದ ಸೀಟ್‌ಗಳನ್ನು ಹಾಕಿಸಿದ್ದಾರೆ. ಸ್ಟೀರಿಂಗ್ ವೀಲ್, ಡ್ಯಾಶ್ ಬೋರ್ಡ್, ಸೆಂಟರ್ ಕನ್ಸೋಲ್ ಮತ್ತು ಡೋರ್‌ನಲ್ಲಿರುವ ಎಲ್ಲಾ ಮೂಲ ಬಟನ್‌ಗಳನ್ನು ಹಾಗೆಯೇ ಉಳಿಸಿಕೊಳ್ಳಲಾಗಿದೆ. ಹಾಗೆಯೇ ಮೂಲ ಇನ್ಸ್ಟ್ರುಮೆಂಟ್ ಕ್ಲಸ್ಟರ್ ಸ್ಟಾಕ್ ಆಗಿಯೇ ಉಳಿದಿದೆ.
ಎರಡನೇ ಸಾಲಿನ ಪ್ರಯಾಣಿಕರಿಗೆ ಎರಡು ಮೀಸಲಾದ ಇನ್ಫೋಟೈನ್‌ಮೆಂಟ್ ಸ್ಕ್ರೀನ್‌ಗಳಿವೆ. ಎರಡನೇ ಸಾಲಿನಲ್ಲಿ ಈಗ ಕ್ಯಾಪ್ಟನ್ ಸೀಟ್‌ಗಳಿವೆ. IRVM ಒಂದು ಆಫ್ಟರ್ ಮಾರ್ಕೆಟ್ ಘಟಕವಾಗಿದ್ದು, ರಿವರ್ಸ್ ಪಾರ್ಕಿಂಗ್ ಕ್ಯಾಮೆರಾ ಮತ್ತು ಸೆನ್ಸರ್‌ಗಳಿಂದ ಫೀಡ್ ಅನ್ನು ಸಹ ತೋರಿಸುತ್ತದೆ. ಈ ವಿಡಿಯೋದಲ್ಲಿ ಕಾಣುವ ಕ್ವಾಲಿಸ್ 2 ಲಕ್ಷ ಕಿ.ಮೀ ಓಡಿದೆ, ಆದರೆ ಟೊಯೊಟಾಗೆ ಇದು ದೊಡ್ಡ ಸಂಖ್ಯೆಯೇನಲ್ಲ. ಏಕೆಂದರೆ ಈ ಎಂಜಿನ್‌ಗಳು ದೀರ್ಘಕಾಲ ಬಾಳಿಕೆ ಬರುತ್ತವೆ ಎಂಬುದು ಎಲ್ಲರಿಗೂ ತಿಳಿದಿರುವ ವಿಷಯವೇ.
ಡ್ರೈವ್‌ಸ್ಪಾರ್ಕ್ ಕನ್ನಡ ವೆಬ್‌ಸೈಟ್ ತ್ವರಿತ ಆಟೋಮೊಬೈಲ್ ಸುದ್ದಿಗಳನ್ನು ಒದಗಿಸುತ್ತದೆ, ಎಲ್ಲಾ ಸಾಮಾಜಿಕ ಮಾಧ್ಯಮಗಳ ಮೂಲಕ ತಕ್ಷಣವೇ ಓದುಗರೊಂದಿಗೆ ಸುದ್ದಿಗಳನ್ನು ಹಂಚಿಕೊಳ್ಳುತ್ತದೆ. ಇತ್ತೀಚಿನ ಕಾರು, ಬೈಕ್ ಸುದ್ದಿ, ಟೆಸ್ಟ್ ಡ್ರೈವ್ ವರದಿಗಳು ಮತ್ತು ವೀಡಿಯೊಗಳನ್ನು ಪಡೆಯಲು ನಮ್ಮ ಫೇಸ್‌ಬುಕ್, ಇನ್‌ಸ್ಟಾಗ್ರಾಮ್ ಮತ್ತು ಯೂಟ್ಯೂಬ್ ಪೇಜ್‌ಗಳೊಂದಿಗೆ ಸಂಪರ್ಕದಲ್ಲಿರಿ. ನಿಮಗೆ ಯಾವುದೇ ಸುದ್ದಿ ಇಷ್ಟವಾದರೆ ಲೈಕ್, ಕಮೆಂಟ್ ಮಾಡುವುದನ್ನು ಮರೆಯದಿರಿ. ಜೊತೆಗೆ ನಿಮ್ಮ ಸ್ನೇಹಿತರಿಗೂ ತಪ್ಪದೆ ಶೇರ್ ಮಾಡಿ.


Click it and Unblock the Notifications








