Just In
- 22 min ago
ಅಗ್ಗದ ಬೆಲೆಯ 'ಹಾಪ್ ಲಿಯೋ ಇ-ಸ್ಕೂಟರ್' ಶೀಘ್ರ ಬಿಡುಗಡೆ: 120 ಕಿಮೀ ರೇಂಜ್ ಕೊಡುತ್ತೆ!
- 5 hrs ago
ಅಶೋಕ್ ಲೇಲ್ಯಾಂಡ್ ಬಡಾ ದೋಸ್ತ್ ಎಕ್ಸ್ಪ್ರೆಸ್ ಸಿಎನ್ಜಿ ಅನಾವರಣ: 1,000 ಕಿ.ಮೀ ಮೈಲೇಜ್ ನೀಡುತ್ತೆ!
- 16 hrs ago
ಏರ್‌ಬ್ಯಾಗ್ ಸಮಸ್ಯೆ, 17 ಸಾವಿರಕ್ಕೂ ಹೆಚ್ಚು ಕಾರುಗಳನ್ನು ಹಿಂಪಡೆಯಲಿದೆ ಮಾರುತಿ ಸುಜುಕಿ
- 17 hrs ago
ಬೆಲೆ ಇಳಿಸಿ, ಹೆಚ್ಚಿನ ಮೈಲೇಜ್ನೊಂದಿಗೆ ನೆಕ್ಸಾನ್ ಇವಿಯನ್ನು ಬಿಡುಗಡೆಗೊಳಿಸಿದ ಟಾಟಾ
Don't Miss!
- News
ಉತ್ತಮ ಕಾರ್ಯಕ್ರಮ ಕೊಡದಿದ್ದರೆ 2028ರಲ್ಲಿ ಜೆಡಿಎಸ್ ಪಕ್ಷ ವಿಸರ್ಜನೆ: ಕುಮಾರಸ್ವಾಮಿ
- Movies
ಪಠಾಣ್ ವಿವಾದ:"ಸಿನಿಮಾಗಳ ಬಗ್ಗೆ ಅನಗತ್ಯ ಹೇಳಿಕೆ ನೀಡಬೇಡಿ" ಬಿಜೆಪಿ ಮುಖಂಡರಿಗೆ ಮೋದಿ ಸಂದೇಶ
- Lifestyle
Shukra Gochar 2022 : ಕುಂಭ ರಾಶಿಗೆ ಶುಕ್ರ ಸಂಚಾರ: ಈ ಅವಧಿ ದ್ವಾದಶ ರಾಶಿಗಳಲ್ಲಿ ಯಾರಿಗೆ ಶುಭ, ಯಾರಿಗಲ್ಲ
- Finance
ಗಾರ್ಮೆಂಟ್ಸ್ ಕೆಲಸಗಾರರ ವೇತನ ಶೇ.14ರಷ್ಟು ಏರಿಕೆ, ಸಂಬಳ ಎಷ್ಟಾಗಿದೆ?
- Sports
IND vs NZ: ಅಂತಿಮ ಓವರ್ನಲ್ಲಿ ಬ್ರೇಸ್ವೆಲ್ ಔಟ್ ಮಾಡಲು ಕೊಹ್ಲಿ ಸಲಹೆ ಬಹಿರಂಗಪಡಿಸಿದ ಠಾಕೂರ್
- Technology
ಈ ಅಗ್ಗದ ಸ್ಮಾರ್ಟ್ಫೋನ್ ಬೆಲೆಯಲ್ಲಿ ಈಗ ಸಖತ್ ಡಿಸ್ಕೌಂಟ್!
- Education
KVS Recruitment 2022 : ಕೇಂದ್ರೀಯ ವಿದ್ಯಾಲಯ ಸಂಗತನ್ ದಲ್ಲಿ 13404 ಹುದ್ದೆಗಳ ನೇಮಕಾತಿ
- Travel
ಯಾವುದೇ ಚಿಂತೆ ಇಲ್ಲದೆ ಸುಖಕರ ಪ್ರಯಾಣ ಅನುಭವಿಸಲು ಇಲ್ಲಿದೆ ಸಲಹೆಗಳು
ಏರ್‌ಬ್ಯಾಗ್ ಸಮಸ್ಯೆ: 1 ಸಾವಿರಕ್ಕೂ ಹೆಚ್ಚು ಕಾರುಗಳನ್ನು ಹಿಂಪಡೆಯಲಿದೆ ಟೊಯೊಟಾ
ಜನಪ್ರಿಯ ಕಾರು ತಯಾರಕ ಕಂಪನಿಯಾದ ಟೊಯೊಟಾ ಕಿರ್ಲೋಸ್ಕರ್ ಮೋಟಾರ್ (TKM) ತನ್ನ ಅರ್ಬನ್ ಕ್ರೂಸರ್ ಹೈರೈಡರ್ ಮತ್ತು ಗ್ಲಾಂಝಾ ಕಾರುಗಳನ್ನು ತಾಂತ್ರಿಕ ದೋಷದಿಂದ ಹಿಂಪಡೆಯುವುದಾಗಿ ಘೋಷಿಸಿದೆ. 2022ರ ಡಿಸೆಂಬರ್ 8 ಮತ್ತು 2023ರ ಜನವರಿ ತಿಂಗಳುಗಳ ನಡುವೆ ತಯಾರಿಸ್ಪಟ್ಟ ಅರ್ಬನ್ ಕ್ರೂಸರ್ ಹೈರೈಡರ್ ಮತ್ತು ಗ್ಲಾಂಝಾ ಕಾರುಗಳನ್ನು ಹಿಂಪಡೆಯುತ್ತಿದೆ.
ಟೊಯೊಟಾ ಅರ್ಬನ್ ಕ್ರೂಸರ್ ಹೈರೈಡರ್ ಮತ್ತು ಗ್ಲಾಂಝಾ ಮಾದರಿಗಳ ಒಟ್ಟು 1,390 ಯುನಿಟ್‌ಗಳನ್ನು ಹಿಂಪಡೆಯಲಾಗುತ್ತಿದೆ. ಟೊಯೊಟಾ ಕಂಪನಿಯ ಪ್ರಕಾರ, ಏರ್‌ಬ್ಯಾಗ್‌ನ ನಿಯಂತ್ರಕ ಜೋಡಣೆಯಲ್ಲಿ ದೋಷ ಕಂಡು ಬಂದಿದೆ. ಪೀಡಿತ ಕಾರುಗಳ ಗ್ರಾಹಕರಿಗೆ ಟೊಯೊಟಾ ಕಂಪನಿಯು ಕಾರುಗಳ ಏರ್‌ಬ್ಯಾಗ್‌ನ ಸಮಸ್ಯೆಯನ್ನು ಉಚಿತವಾಗಿ ಬದಲಾಯಿಸುತ್ತದೆ. ದೋಷ ಕಂಡು ಬಂದ ಕಾರುಗಳ ಮಾಲೀಕರಿಗೆ ವಾಹನ ಬಳಕೆಯನ್ನು ಕಡಿಮೆ ಮಾಡಲು ಕಂಪನಿಯು ಮನವಿ ಮಾಡಿದ್ದಾರೆ. ಟೊಯೊಟಾ ಡೀಲರ್‌ಶಿಪ್‌ಗಳು ಭಾಗದ ಅಗತ್ಯ ಬದಲಿಗಾಗಿ ಈ ವಾಹನಗಳ ಗ್ರಾಹಕರನ್ನು ಪ್ರತ್ಯೇಕವಾಗಿ ಸಂಪರ್ಕಿಸುತ್ತವೆ.
ಮಾರುತಿ ಸುಜುಕಿ ಕಂಪನಿಯ ಜನಪ್ರಿಯ ಆಲ್ಟೋ ಕೆ10, ಬಲೆನೊ, ಎಸ್-ಪ್ರೆಸ್ಸೊ, ಇಕೋ, ಬ್ರೆಝಾ ಮತ್ತು ಗ್ರ್ಯಾಂಡ್ ವಿಟಾರಾ ಮಾದರಿಗಳಲ್ಲಿ ಇದೇ ರೀತಿಯ ಸಮಸ್ಯೆಗಳನ್ನು ಕಂಡು ಬಂದಿದೆ. ಈ 6 ಮಾದರಿಗಳ 17 ಸಾವಿರಕ್ಕೂ ಹೆಚ್ಚು ಕಾರುಗಳನ್ನು ಹಿಂಪಡೆದಿದೆ. ಇನು ಮಾರುತಿ ಸುಜುಕಿ ಕಂಪನಿಯು ದೋಷಯುಕ್ತ ಮಾದರಿಗಳ ಮಾಲೀಕರನ್ನು ಸಂಪರ್ಕಿಸುತ್ತದೆ. ದೋಷ ಕಂಡು ಬಂದ ಕಾರುಗಳ ಏರ್‌ಬ್ಯಾಗ್ ಸಮಸ್ಯೆಯನ್ನು ಉಚಿತವಾಗಿ ಕಂಪನಿಯು ಸರಿಪಡಿಸುತ್ತದೆ.ಇನ್ನು ಮಾರುತಿ ಸುಜುಕಿ ಈಗಾಗಲೇ ಜನವರಿ 16ರಿಂದ ಜಾರಿಗೆ ಬರುವಂತೆ ತನ್ನ ಎಲ್ಲಾ ಮಾದರಿಗಳ ಕಾರುಗಳ ಬೆಲೆಗಳನ್ನು ಏರಿಕೆ ಮಾಡಿದೆ.
ಇನ್ನು ಟೊಯೊಟಾ ಅರ್ಬನ್ ಕ್ರೂಸರ್ ಹೈರೈಡರ್ ಎಸ್‍ಯುವಿಯ ಬಗ್ಗೆ ಹೇಳುವುದಾದರೆ, ಮಧ್ಯಮ ಕ್ರಮಾಂಕದ ಕಾರುಗಳಲ್ಲಿ ಸ್ಟ್ರಾಂಗ್ ಹೈಬ್ರಿಡ್ ತಂತ್ರಜ್ಞಾನ ಸೌಲಭ್ಯವನ್ನು ಹೊಂದಿರುವ ಮೊದಲ ಕಾರು ಎಂಬ ಹೆಗ್ಗಳಿಕೆಗೆ ಪಾತ್ರವಾಗಿರುವ ಟೊಯೊಟಾ ಹೈರೈಡರ್ ಕಾರು ಮಾದರಿಯು ಇ, ಎಸ್, ಜಿ, ವಿ ವೆರಿಯೆಂಟ್‌ಗಳನ್ನು ಹೊಂದಿದ್ದು, 1.5 ಲೀಟರ್ ಪೆಟ್ರೋಲ್ ಮಾದರಿಯಲ್ಲಿ ವಿವಿಧ ವೆರಿಯೆಂಟ್ ಅನುಗುಣವಾಗಿ ಸ್ಮಾರ್ಟ್ ಹೈಬ್ರಿಡ್ ಮತ್ತು ಸ್ಟ್ರಾಂಗ್ ಹೈಬ್ರಿಡ್ ತಂತ್ರಜ್ಞಾನ ನೀಡಲಾಗಿದೆ. ಸ್ಟ್ರಾಂಗ್ ಹೈಬ್ರಿಡ್ ಮಾದರಿಯಲ್ಲಿರುವ 1.5 ಲೀಟರ್ ಅಟ್ಕಿನ್ಸನ್ ಪೆಟ್ರೋಲ್ ಎಂಜಿನ್ ಅತ್ಯುತ್ತಮ ಇಂಧನ ದಕ್ಷತೆ ಹೊಂದಿದೆ.
ಸ್ಟ್ರಾಂಗ್ ಹೈಬ್ರಿಡ್ ಪೆಟ್ರೋಲ್ ಎಂಜಿನ್ ಮಾದರಿಯು 87 ಬಿಎಚ್‌ಪಿ ಮತ್ತು 122 ಎನ್ಎಂ ಟಾರ್ಕ್ ಉತ್ಪಾದಿಸಲಿದ್ದಲ್ಲಿ 177.6 ವೊಲ್ಟ್ ಎಲೆಕ್ಟ್ರಿಕ್ ಮೋಟಾರ್ ಸೌಲಭ್ಯದೊಂದಿಗೆ 79 ಬಿಎಚ್‌ಪಿ ಮತ್ತು 141 ಎನ್ಎಂ ಟಾರ್ಕ್ ಉತ್ಪಾದಿಸುತ್ತದೆ. ಸ್ಟ್ರಾಂಗ್ ಹೈಬ್ರಿಡ್ ತಂತ್ರಜ್ಞಾನ ಹೊಂದಿರುವ ಹೈರೈಡರ್ ವೆರಿಯೆಂಟ್‌ಗಳಲ್ಲಿ ಟೊಯೊಟಾ ಕಂಪನಿಯು ಇ-ಸಿವಿಟಿ ಆಟೋಮ್ಯಾಟಿಕ್ ಗೇರ್‌ಬಾಕ್ಸ್ ಆಯ್ಕೆಯನ್ನು ಸ್ಟ್ಯಾಂಡರ್ಡ್ ಆಗಿ ನೀಡಿದ್ದು, ಇದು ಪ್ರತಿ ಲೀಟರ್ ಪೆಟ್ರೋಲ್‌ಗೆ ಗರಿಷ್ಠ 27.97 ಕಿ.ಮೀ ಮೈಲೇಜ್ ಹಿಂದಿರುಗಿಸುತ್ತದೆ.
ಇನ್ನು ಸ್ಮಾರ್ಟ್ ಹೈಬ್ರಿಡ್ ಹೈರೈಡರ್‌ನಲ್ಲಿ ಟೊಯೊಟಾ ಕಂಪನಿಯು ಮಾರುತಿ ಸುಜುಕಿಯಿಂದ ಎರವಲು ಪಡೆಯಲಾದ 1.5-ಲೀಟರ್ K15C ಸ್ಮಾರ್ಟ್-ಹೈಬ್ರಿಡ್ ಜೊತೆಗೆ ಇಂಟಿಗ್ರೇಟೆಡ್ ಸ್ಟಾರ್ಟರ್ ಜನರೇಟರ್ (ISG) ಒದಗಿಸಲಿದ್ದು, ಇದು ಕೂಡಾ ಉತ್ತಮ ಇಂಧನ ದಕ್ಷತೆಯೊಂದಿಗೆ ಪರ್ಫಾಮೆನ್ಸ್ ಕಾಯ್ದುಕೊಳ್ಳಲು ಸಹಕಾರಿಯಾಗಿದೆ. ಸ್ಮಾರ್ಟ್ ಹೈಬ್ರಿಡ್ ಹೊಂದಿರುವ ಪೆಟ್ರೋಲ್ ಎಂಜಿನ್ ಮಾದರಿಯು 103 ಬಿಎಚ್‌ಪಿ ಮತ್ತು 137 ಎನ್ಎಂ ಟಾರ್ಕ್ ಅನ್ನು ಉತ್ಪಾದಿಸಲಿದ್ದು, ಈ ಎಂಜಿನ್‌ನಲ್ಲಿ ಕಂಪನಿಯು 5-ಸ್ಪೀಡ್ ಮ್ಯಾನುವಲ್ ಅಥವಾ 6-ಸ್ಪೀಡ್ ಟಾರ್ಕ್ ಕನ್ವರ್ಟರ್ ಆಟೋಮ್ಯಾಟಿಕ್ ಗೇರ್‌ಬಾಕ್ಸ್ ಆಯ್ಕೆಯನ್ನು ನೀಡಿದೆ.
ಟೊಯೊಟಾ ಕಂಪನಿಯು ತನ್ನ ನವೀಕರಿಸಿದ ಗ್ಲಾಂಝಾ ಪ್ರೀಮಿಯಂ ಹ್ಯಾಚ್‌ಬ್ಯಾಕ್ ಅನ್ನು ಭಾರತೀಯ ಮಾರುಕಟ್ಟೆಯಲ್ಲಿ ಕಳೆದ ವರ್ಷದ ಮಾರ್ಚ್ 15 ರಂದು ಬಿಡುಗಡೆಗೊಳಿಸಿತ್ತು. ಹೊಸ ಮಾದರಿಯು ಸ್ಲೀಕರ್ ವಿನ್ಯಾಸ ಮತ್ತು ಹೆಚ್ಚುವರಿ ವೈಶಿಷ್ಟ್ಯಗಳನ್ನು ಮತ್ತು ಪವರ್‌ಟ್ರೇನ್‌ಗೆ ನವೀಕರಣಗಳನ್ನು ಪಡೆದುಕೊಂಡಿತ್ತು. ಈ ಟೊಯೊಟಾ ಗ್ಲಾಂಝಾ ಕಾರು ಮಾರುತಿ ಸುಜುಕಿ ಬಲೆನೊ ಮಾದರಿಯ ರಿಬ್ಯಾಡ್ಜ್ ಆವೃತ್ತಿಯಾಗಿದೆ. ಈ ಟೊಯೊಟಾ ಗ್ಲಾಂಝಾ ಕಾರು ಹಿಂದಿನ ಮಾದರಿಗಿಂತ ಹೆಚ್ಚು ಸ್ಪೋರ್ಟಿಯರ್ ವಿನ್ಯಾಸದ ಶೈಲಿಯನ್ನು ಹೊಂದಿದೆ.
ಈ ಟೊಯೊಟಾ ಗ್ಲಾಂಝಾ ಕಾರಿನ ವಿನ್ಯಾಸದ ಬಗ್ಗೆ ಹೆಳುವುದಾದರೆ, ಈ ಕಾರಿನ ಮುಂಭಾಗದ ಹೊಸ ವಿನ್ಯಾಸ ಶೈಲಿಯೊಂದಿಗೆ ಬಂದಿದೆ. ಇದು ಟೊಯೊಟಾದ ಜಾಗತಿಕ ಕಾರುಗಳಿಗೆ ಅನುಗುಣವಾಗಿರುತ್ತದೆ. ಇದು ಕ್ಯಾಮ್ರಿ ತರಹದ ಮುಂಭಾಗದ ಗ್ರಿಲ್ ಮತ್ತು ಬಂಪರ್, ಹೊಸ ಕ್ರೋಮ್ ಮತ್ತು ಎಲ್-ಆಕಾರದ ಎಲ್ಇಡಿ ಡಿಆರ್ಎಲ್ (ಡೇಟೈಮ್ ರನ್ನಿಂಗ್ ಲ್ಯಾಂಪ್) ಗಳನ್ನು ಒಳಗೊಂಡಿದೆ. ಈ ಟೊಯೊಟಾ ಗ್ಲಾಂಝಾ ಕಾರಿನ ಹಿಂಭಾಗವು ಸ್ವಲ್ಪ ಪರಿಷ್ಕೃತ ಬಂಪರ್ ಮತ್ತು ಟೈಲ್-ಲೈಟ್‌ಗಾಗಿ ಹೊಸ ಇನ್‌ಸರ್ಟ್‌ಗಳೊಂದಿಗೆ ಬರುತ್ತದೆ.