Toyota: ಟೊಯೊಟಾದ ಈ ಕಾರಿಗಾಗಿ ಶೋರೂಂ ಎಡತಾಕಿದ ಗ್ರಾಹಕ, 26 ಕಿ.ಮೀ ಮೈಲೇಜ್, 7 ಜನ ಹೋಗಬಹುದು!
ಟೊಯೊಟಾ (Toyota) ಜನಪ್ರಿಯ ಕಾರು ತಯಾರಕ ಕಂಪನಿಯಾಗಿ ಗುರುತಿಸಿಕೊಂಡಿದ್ದು, ದೇಶೀಯ ಮಾರುಕಟ್ಟೆಯಲ್ಲಿ 7 ಜನ ಆರಾಮದಾಯವಾಗಿ ಕುಳಿತುಕೊಂಡ ಹೋಗಬಹುದಾದ ರೂಮಿಯನ್ (Rumion) ಎಂಪಿವಿಯನ್ನು ಮಾರಾಟ ಮಾಡುತ್ತಿದೆ. ಸದ್ಯ, ಈ ಕಾರಿಗೆ ಕಂಡು ಕೇಳರಿಯದ ಬೇಡಿಕೆ ಬಂದಿದ್ದು, ಗ್ರಾಹಕರು ಶೋರೂಂನ್ನು ಎಡತಾಕುತ್ತಿದ್ದಾರೆ.
ಟೊಯೊಟಾ ಇಂಡಿಯಾದ ಅಧಿಕೃತ ವೆಬ್‌ಸೈಟ್ ನಲ್ಲಿ 1 ಡಿಸೆಂಬರ್ 2023ಕ್ಕೆ ಅನ್ವಯವಾಗುವಂತೆ ಕಂಪನಿಯ ವಿವಿಧ ಮಾದರಿಗಳ ಕಾಯುವ ಅವಧಿ ಬಗ್ಗೆ ಮಾಹಿತಿಯನ್ನು ಪ್ರಕಟಿಸಲಾಗಿದೆ. ಟೊಯೊಟಾ ರೂಮಿಯನ್ (Toyota Rumion) ಎಂಪಿವಿಗೆ ಖರೀದಿದಾರರಿಂದ ಭಾರೀ ಬೇಡಿಕೆ ಇರುವುದರಿಂದ ಸಿಎನ್‌ಜಿ ರೂಪಾಂತಗಳ ಬುಕ್ಕಿಂಗ್ ಅನ್ನು ಪ್ರಸ್ತುತ ತಿಂಗಳು ಕೂಡ ತಾತ್ಕಾಲಿಕವಾಗಿ ಸ್ಥಗಿತಗೊಳಿಸಲಾಗಿದೆ.

ಅದೇ ರೀತಿಯಲ್ಲಿ ಟೊಯೊಟಾ ರೂಮಿಯನ್ ಎಂಪಿವಿಯ ಪೆಟ್ರೋಲ್ ರೂಪಾಂತರಗಳಿಗೂ ಸಖತ್ ಡಿಮ್ಯಾಂಡ್ ಬಂದಿದ್ದು, ಈ ಡಿಸೆಂಬರ್ ತಿಂಗಳು 5 - 6 ತಿಂಗಳು ಕಾಯುವಿಕೆ ಅವಧಿಯನ್ನು ಹೊಂದಿವೆ. ಈ ರೂಮಿಯನ್ ಎಂಪಿವಿ, ಮಾರುತಿ ಸುಜುಕಿ ಎರ್ಟಿಗಾದ ರೀ - ಬ್ಯಾಡ್ಜ್ ಆವೃತ್ತಿಯಾಗಿದ್ದು, ಭಾರತದಲ್ಲಿ ಟೊಯೊಟಾ ಹಾಗೂ ಮಾರುತಿ ಸುಜುಕಿ ಕಂಪನಿಗಳು ಪಾಲುದಾರಿಕೆ ಹೊಂದಿರುವುದು ಇಲ್ಲಿ ಗಮನಿಸಬೇಕಾದ ಅಂಶವಾಗಿದೆ.
ಸದ್ಯ, ದೇಶೀಯ ಮಾರುಕಟ್ಟೆಯಲ್ಲಿ ಟೊಯೊಟಾ ರೂಮಿಯನ್, ರೂ.10.29 ಲಕ್ಷದಿಂದ ರೂ.13.68 ಲಕ್ಷ ಎಕ್ಸ್ ಶೋರೂಂ ಬೆಲೆಯಲ್ಲಿ ಖರೀದಿಗೆ ಸಿಗುತ್ತದೆ. ಎಸ್, ಜಿ, ವಿ ರೂಪಾಂತರ ಹಾಗೂ ಐಕಾನಿಕ್ ಗ್ರೇ, ಸ್ಪಂಕಿ ಬ್ಲೂ, ಕೆಫೆ ವೈಟ್ ಮತ್ತು ಎಂಟೈಸಿಂಗ್ ಸಿಲ್ವರ್ ಸೇರಿದಂತೆ ವಿವಿಧ ಬಣ್ಣಗಳ ಆಯ್ಕೆಯಲ್ಲಿ ಲಭ್ಯವಿದ್ದು, ವಿನ್ಯಾಸದ ದೃಷ್ಟಿಯಿಂದಲೂ ಅತ್ಯುತ್ತಮವಾಗಿದೆ.

ಟೊಯೊಟಾ ರೂಮಿಯನ್ ಎಂಪಿವಿ 2 ಎಂಜಿನ್ ಆಯ್ಕೆಯಲ್ಲಿ ದೊರೆಯುತ್ತದೆ. 1.5-ಲೀಟರ್ ಕೆ ಸೀರಿಯಸ್ ಪೆಟ್ರೋಲ್ ಎಂಜಿನ್, 101 bhp ಪವರ್, 136.8 Nm ಪೀಕ್ ಟಾರ್ಕ್ ಉತ್ಪಾದಿಸುತ್ತದೆ. ಸಿಎನ್‌ಜಿ ಕಿಟ್ ಪಡೆದಿರುವ ಕಾರು ಇದೇ ಎಂಜಿನ್ ಹೊಂದಿದೆ. ಆದರೆ, 86.63 bhp ಪವರ್ ಹಾಗೂ 121.5 Nm ಪೀಕ್ ಟಾರ್ಕ್ ಹೊರಹಾಕುವ ಸಾಮರ್ಥ್ಯ ಪಡೆದಿದೆ.
ಈ ಟೊಯೊಟಾ ರೂಮಿಯನ್ ಎಂಪಿವಿಯ ಗೇರ್ ಬಾಕ್ಸ್ ಆಯ್ಕೆ ಕುರಿತು ಮಾತನಾಡುವುದಾದರೆ, ಇದು, ವೇರಿಯೆಂಟ್ ಅನ್ವಯ 5 - ಸ್ವೀಡ್ ಮ್ಯಾನುವಲ್, 6 - ಸ್ವೀಡ್ ಆಟೋಮೆಟಿಕ್ ಗೇರ್ ಬಾಕ್ಸ್ ಆಯ್ಕೆಯನ್ನು ಒಳಗೊಂಡಿದೆ. ಜೊತೆಗೆ ಯಾವ ದ್ವಿಚಕ್ರ ವಾಹನಕ್ಕೂ ಕಮ್ಮಿ ಇಲ್ಲದಂತೆ ಮೈಲೇಜ್ ನೀಡಲಿದ್ದು, ಪೆಟ್ರೋಲ್ ರೂಪಾಂತರ 20.51 km/l ಹಾಗೂ ಸಿಎನ್‌ಜಿ ರೂಪಾಂತರ 26.11 km/kg ಇಂಧನ ದಕ್ಷತೆಯನ್ನು ಹೊಂದಿದೆ.
ವೈಶಿಷ್ಟ್ಯದ ವಿಚಾರವಾಗಿ ಹೇಳುವುದಾದರೆ, ಈ ಕಾರು ಸಾಕಷ್ಟು ಅತ್ಯಾಧುನಿಕ ವೈಶಿಷ್ಟ್ಯಗಳನ್ನು ಒಳಗೊಂಡಿದೆ. ಪ್ರಮುಖವಾಗಿ , 7-ಇಂಚಿನ ಟಚ್‌ಸ್ಕ್ರೀನ್ ಇನ್ಫೋಟೈನ್‌ಮೆಂಟ್ ಸಿಸ್ಟಮ್, ವೈರ್‌ಲೆಸ್ ಆಪಲ್ ಕಾರ್ ಪ್ಲೇ, ಆಂಡ್ರಾಯ್ಡ್ ಆಟೋ, ಆಟೋಮೆಟಿಕ್ ಕ್ಲೇಮೇಟ್ ಕಂಟ್ರೋಲ್ ಅನ್ನು ಹೊಂದಿದೆ. ಸುರಕ್ಷತೆಯ ದೃಷ್ಟಿಯಿಂದ 4 ಏರ್‌ಬ್ಯಾಗ್, ABS (ಆಂಟಿಲಾಕ್ ಬ್ರೇಕಿಂಗ್ ಸಿಸ್ಟಮ್) ಪಡೆದಿದೆ.
ಭಾರತದ ಮಾರುಕಟ್ಟೆಯಲ್ಲಿ ಟೊಯೊಟಾ ರೂಮಿಯನ್ ಎಂಪಿವಿಗೆ ಕಿಯಾ ಕ್ಯಾರೆನ್ಸ್, ಮಹೀಂದ್ರಾ ಮರಾಜೊ ಪ್ರಬಲ ಪ್ರತಿಸ್ಪರ್ಧಿಯಾಗಿವೆ. ಈ ಡಿಸೆಂಬರ್ ತಿಂಗಳಿಗೆ ಸಿಎನ್‌ಜಿ ಮಾದರಿಗಳಿಗೆ ಭಾರೀ ಬೇಡಿಕೆ ಸೃಷ್ಟಿಯಾದ ಹಿನ್ನೆಲೆ, ಬುಕ್ಕಿಂಗ್ ಅನ್ನು ತಾತ್ಕಾಲಿಕವಾಗಿ ಸ್ಥಗಿತಗೊಳಿಸಲಾಗಿದೆ. ಮುಂಬರುವ ದಿನಗಳಲ್ಲಿ ಆರ್ಡರ್ ಸ್ವೀಕರಿಸುವುದು ಆರಂಭಿಸಬಹುದು. ಹೀಗೆ ಮುಂದುವರಿದರೆ, ರೂಮಿಯನ್ ಎಲ್ಲರ ಫೆವರೇಟ್ ವಾಹನವಾಗುವುದರಲ್ಲಿ ಎರಡು ಮಾತಿಲ್ಲ.
ಡ್ರೈವ್‌ಸ್ಪಾರ್ಕ್ ಕನ್ನಡ ವೆಬ್‌ಸೈಟ್ ತ್ವರಿತವಾಗಿ ಆಟೋಮೊಬೈಲ್ ಸಂಬಂಧಿಸಿದ ಸುದ್ದಿಗಳನ್ನು ನೀಡುತ್ತದೆ. ಜೊತೆಗೆ ಸೋಷಿಯಲ್ ಮೀಡಿಯಾಗಳ ಮೂಲಕ ತಕ್ಷಣವೇ ಓದುಗರೊಂದಿಗೆ ಸುದ್ದಿಗಳನ್ನು ಶೇರ್ ಮಾಡುತ್ತೇವೆ. ಇತ್ತೀಚಿನ ಕಾರು, ಬೈಕ್ ಸುದ್ದಿ, ಟೆಸ್ಟ್ ಡ್ರೈವ್ ವರದಿಗಳು ಮತ್ತು ವೀಡಿಯೊಗಳನ್ನು ಪಡೆಯಲು ನಮ್ಮ ಫೇಸ್‌ಬುಕ್, ಇನ್‌ಸ್ಟಾಗ್ರಾಮ್, ಯೂಟ್ಯೂಬ್ ಪೇಜ್‌ಗಳೊಂದಿಗೆ ಫಾಲೋ ಮಾಡಿ. ನಿಮಗೆ ನಮ್ಮ ಯಾವುದೇ ಸುದ್ದಿ ಇಷ್ಟವಾದರೆ ಲೈಕ್, ಕಾಮೆಂಟ್ ಮಾಡುವುದನ್ನು ಮರೆಯದಿರಿ.


Click it and Unblock the Notifications