ಶುಭ ಶಕುನ.. ಟೊಯೊಟಾ ರೂಮಿಯನ್ ಆಟ ಶುರು, ಭಾರತೀಯ ಕುಟುಂಬಗಳ ಫೆವರೇಟ್ ಆಗುತ್ತಾ? - ವಿಡಿಯೋ

ಭಾರತದಲ್ಲಿ ಟೊಯೊಟಾ (Toyota) ವಿಶ್ವಾಸಾರ್ಹ ವಾಹನ ತಯಾರಕ ಕಂಪನಿಯಾಗಿ ಖ್ಯಾತಿಗಳಿಸಿದೆ. ಅದರ ಇನ್ನೋವಾ ಸರಣಿ ಕಾರುಗಳಿಗೆ ಪ್ರತ್ಯೇಕ ಅಭಿಮಾನಿ ಬಳಗವಿದೆ. ಕಳೆದ ಕೆಲವು ದಿನಗಳ ಹಿಂದೆ, ಮಾರುತಿ ಸುಜುಕಿ ಎರ್ಟಿಗಾ ರೀ-ಬ್ಯಾಡ್ಜ್ ಆವೃತ್ತಿ ರೂಮಿಯನ್ (Rumion) ಎಂಪಿವಿಯನ್ನು ಕಂಪನಿಯು ದೇಶೀಯ ಮಾರುಕಟ್ಟೆಯಲ್ಲಿ ಬಿಡುಗಡೆಗೊಳಿಸಿತ್ತು.

ಸದ್ಯ, ದೊರೆತ್ತಿರುವ ಮಾಹಿತಿ ಪ್ರಕಾರ, ನೂತನ ಟೊಯೊಟಾ ರೂಮಿಯನ್ ಎಂಪಿವಿ ದೇಶಾದ್ಯಂತ ವಿವಿಧ ಡೀಲರ್‌ಶಿಪ್‌ಗಳನ್ನು ತಲುಪಲು ಆರಂಭಿಸಿದೆ. ಈ ಕಾರು, ಏಳು ಆಸನ ಆಯ್ಕೆ ವ್ಯವಸ್ಥೆಯಲ್ಲಿ ಬೆಂಗಳೂರಿನಲ್ಲಿ ರೂಪಾಂತರಗಳಿಗೆ ಅನುಗುಣವಾಗಿ, ರೂ.12.77 ಲಕ್ಷದಿಂದ ರೂ. 15.07 ಆನ್ - ರೋಡ್ ಬೆಲೆಯಲ್ಲಿ ಖರೀದಿಗೆ ಲಭ್ಯವಿದೆ. ಆಸಕ್ತರು, ರೂ.11,000 ಮುಂಗಡವಾಗಿ ಪಾವತಿಸುವ ಮೂಲಕ ಬುಕ್ಕಿಂಗ್ ಮಾಡಬಹುದು.

ಶುಭ ಶಕುನ.. ಟೊಯೊಟಾ ರೂಮಿಯನ್ ಆಟ ಶುರು, ಭಾರತೀಯ ಕುಟುಂಬಗಳ ಫೆವರೇಟ್ ಆಗುತ್ತಾ? - ವಿಡಿಯೋ

ಬಿಡುಗಡೆಯಾಗಿ ಕೇವಲ ಮೂರ್ನಾಲು ದಿನವಾಗಿದ್ದು, ಟೊಯೊಟಾ ರೂಮಿಯನ್ ಎಂಪಿವಿ ಭರ್ಜರಿ ಬುಕ್ಕಿಂಗ್ ಪಡೆದಿದೆ ಎಂದು ವರದಿಯಾಗಿದೆ. ಆದರೆ, ಕಂಪನಿ ಈ ಸಂಖ್ಯೆಯನ್ನು ಎಲ್ಲಿಯೂ ಬಹಿರಂಗಪಡಿಸಿಲ್ಲ. ಆದರೆ, ವಿವಿಧೆಡೆಗಳಲ್ಲಿ ಕಾಯುವಿಕೆ ಅವಧಿ ಮಾತ್ರ ದಿಢೀರನೇ ಹೆಚ್ಚಳವಾಗಿದೆ. ಕೆಲವೆಡೆ ಈ ಎಂಪಿವಿಯನ್ನು ಇವತ್ತು ಆರ್ಡರ್ ಮಾಡಿದರೂ ವಿತರಣೆ ಪಡೆಯಲು ಆರು ತಿಂಗಳು ಕಾಯಬೇಕು. ಪಂಜಾಬ್ ನಲ್ಲಿ ಎರಡು ತಿಂಗಳ ಬಳಿಕ ಡಿಲೆವರಿಯಾಗಲಿದೆ.

ನೂತನ ಟೊಯೊಟಾ ರೂಮಿಯಾನ್ ಎಂಪಿವಿ ಕೆಫೆ ವೈಟ್, ಐಕಾನಿಕ್ ಗ್ರೇ ಮತ್ತು ಸ್ಪಂಕಿ ಬ್ಲೂ ಸೇರಿದಂತೆ ಐದು ಬಣ್ಣಗಳ ಆಯ್ಕೆಯಲ್ಲಿ ಖರೀದಿಗೆ ಸಿಗುತ್ತದೆ. ಈ ಕಾರು, ಮಾರುತಿ ಸುಜುಕಿ ಎರ್ಟಿಗಾ ರೀ-ಬ್ಯಾಡ್ಜ್ ಆವೃತ್ತಿಯಾಗಿದ್ದರೂ ವಿನ್ಯಾಸದಲ್ಲಿ ಸಾಕಷ್ಟು ಬದಲಾವಣೆಗಳನ್ನು ಹೊಂದಿದೆ. ಪ್ರಮುಖವಾಗಿ, ಬಂಪರ್, ಗ್ರೀಲ್ ಹಾಗೂ ಅಲಾಯ್ ವೀಲ್ಸ್ ಹೊಸದಾಗಿವೆ.

ಟೊಯೊಟಾ ರೂಮಿಯಾನ್ ಎಂಪಿವಿ ಪವರ್ ಟ್ರೈನ್ ಬಗ್ಗೆ ಮಾತನಾಡುವುದಾದರೆ, ಇದು ಪೆಟ್ರೋಲ್/ ಸಿಎನ್‌ಜಿ ಎಂಜಿನ್ ಆಯ್ಕೆಯನ್ನು ಹೊಂದಿದೆ. ಇದರ, 1.5 - ಲೀಟರ್ ಪೆಟ್ರೋಲ್ ಎಂಜಿನ್ 103 PS ಗರಿಷ್ಠ ಪವರ್ ಹಾಗೂ 137 Nm ಪೀಕ್ ಟಾರ್ಕ್ ಉತ್ಪಾದಿಸುತ್ತದೆ. 5 - ಸ್ವೀಡ್ ಮ್ಯಾನುವಲ್/ 6 - ಆಟೋಮೆಟಿಕ್ ಗೇರ್ ಬಾಕ್ಸ್ ಆಯ್ಕೆಯಲ್ಲಿ ಖರೀದಿಗೆ ಸಿಗುತ್ತದೆ. 20.11 kmpl ಮೈಲೇಜ್ ನೀಡುತ್ತದೆ.

ಸಿಎನ್‌ಜಿ ಕಿಟ್ ಹೊಂದಿರುವ ರೂಮಿಯಾನ್, 88 PS ಪವರ್ ಮತ್ತು 121.5 Nm ಪೀಕ್ ಟಾರ್ಕ್ ಉತ್ಪಾದಿಸುವ ಸಾಮರ್ಥ್ಯ ಪಡೆದಿದೆ. 5 - ಸ್ವೀಡ್ ಮ್ಯಾನುವಲ್ ಗೇರ್ ಬಾಕ್ಸ್ ನೊಂದಿಗೆ ಲಭ್ಯವಿದೆ. ಅತಿಹೆಚ್ಚು ಇಂಧನ ದಕ್ಷತೆ ಹೊಂದಿದ್ದು, 26.11km/kg ಮೈಲೇಜ್ ನೀಡುತ್ತದೆ. ಇದೇ ಕಾರಣಕ್ಕೆ ರೂಮಿಯಾನ್ ಎಂಪಿವಿಯನ್ನು ಬಹುತೇಕರು ಇಷ್ಟಪಟ್ಟು ಖರೀದಿ ಮಾಡಬಹುದು.

ಮಾರುತಿ ಸುಜುಕಿ ಎರ್ಟಿಗಾ ರೀ-ಬ್ಯಾಡ್ಜ್ ಆವೃತ್ತಿಯಾಗಿದ್ದರೂ, ಟೊಯೊಟಾ ರೂಮಿಯಾನ್ ಎಂಪಿವಿ, ದೇಶೀಯ ಯುವ ಗ್ರಾಹಕರನ್ನು ಆಕರ್ಷಿಸುವ ಫೀಚರ್ಸ್ ಹೊಂದಿದೆ. 7 - ಇಂಚಿನ ಟಚ್‌ಸ್ಕ್ರೀನ್ ಸಿಸ್ಟಮ್, ವೈರ್‌ಲೆಸ್ ಆಂಡ್ರಾಯ್ಡ್ ಆಟೋ ಮತ್ತು ಆಪಲ್ ಕಾರ್ ಪ್ಲೇ, ಆಟೋಮೆಟಿಕ್ ಕ್ಲೇಮೇಟ್ ಕಂಟ್ರೋಲ್, ಕ್ರೂಸ್ ಕಂಟ್ರೋಲ್ ಹಾಗೂ ಪ್ಯಾಡಲ್ ಶಿಫ್ಟರ್ಸ್ ಅನ್ನು ಒಳಗೊಂಡಿದೆ.

ಟೊಯೊಟಾ ಕಂಪನಿ ರೂಮಿಯಾನ್ ಎಂಪಿವಿಯಲ್ಲಿ ಸುರಕ್ಷತೆಗೆ ಹೆಚ್ಚಿನ ಆದ್ಯತೆ ನೀಡಿದ್ದು, 4 ಏರ್‌ಬ್ಯಾಗ್ಸ್, ABS (ಆಂಟಿಲಾಕ್ ಬ್ರೇಕಿಂಗ್ ಸಿಸ್ಟಮ್), EBD (ಎಲೆಕ್ಟ್ರಾನಿಕ್ ಬ್ರೇಕ್‌ಫೋರ್ಸ್ ಡಿಸ್ಟ್ರಿಬ್ಯೂಷನ್), ESC (ಎಲೆಕ್ಟ್ರಾನಿಕ್ ಸ್ಟೆಬಿಲಿಟಿ ಕಂಟ್ರೋಲ್), ಹಿಲ್ ಹೋಲ್ಡ್ ಅಸಿಸ್ಟ್, ರೇರ್ ಪಾರ್ಕಿಂಗ್ ಕ್ಯಾಮೆರಾ ಹಾಗೂ ISOFIX ಚೈಲ್ಡ್ ಸೀಟ್ ಆಂಕರ್ಸ್ ಪಡೆದಿದೆ. ಇನ್ನು, ರೂಮಿಯಾನ್ ಕಾರಿಗೆ ಕಿಯಾ ಕಾರೆನ್ಸ್, ಮಹೀಂದ್ರಾ ಮರಾಜ್ಜೊ ಮಾರುತಿ ಸುಜುಕಿ ಎರ್ಟಿಗಾ ಪ್ರಬಲ ಪ್ರತಿಸ್ಪರ್ಧಿಯಾಗಿವೆ.

ಡ್ರೈವ್‌ಸ್ಪಾರ್ಕ್ ಕನ್ನಡ ವೆಬ್‌ಸೈಟ್ ತ್ವರಿತವಾಗಿ ಆಟೋಮೊಬೈಲ್ ಸಂಬಂಧಿಸಿದ ಸುದ್ದಿಗಳನ್ನು ನೀಡುತ್ತದೆ. ಜೊತೆಗೆ ಸೋಷಿಯಲ್ ಮೀಡಿಯಾಗಳ ಮೂಲಕ ತಕ್ಷಣವೇ ಓದುಗರೊಂದಿಗೆ ಸುದ್ದಿಗಳನ್ನು ಶೇರ್ ಮಾಡುತ್ತೇವೆ. ಇತ್ತೀಚಿನ ಕಾರು, ಬೈಕ್ ಸುದ್ದಿ, ಟೆಸ್ಟ್ ಡ್ರೈವ್ ವರದಿಗಳು ಮತ್ತು ವೀಡಿಯೊಗಳನ್ನು ಪಡೆಯಲು ನಮ್ಮ ಫೇಸ್‌ಬುಕ್, ಇನ್‌ಸ್ಟಾಗ್ರಾಮ್, ಯೂಟ್ಯೂಬ್ ಪೇಜ್‌ಗಳೊಂದಿಗೆ ಫಾಲೋ ಮಾಡಿ. ನಿಮಗೆ ನಮ್ಮ ಯಾವುದೇ ಸುದ್ದಿ ಇಷ್ಟವಾದರೆ ಲೈಕ್, ಕಾಮೆಂಟ್ ಮಾಡುವುದನ್ನು ಮರೆಯದಿರಿ.

Article Published On: Thursday, August 31, 2023, 12:46 [IST]
English summary
Toyota rumion mpv starts reaching dealerships details
Read more on ಟೊಯೊಟಾ toyota
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+