ಮಾರುತಿ ಎರ್ಟಿಗಾದ ರಿಬ್ಯಾಡ್ಜ್: ಭರ್ಜರಿ ಮೈಲೇಜ್‌ನ ಟೊಯೊಟಾ Rumion ಕಾರಿನ ವಿಶೇಷತೆಗಳು
ಜನಪ್ರಿಯ ಕಾರು ತಯಾರಕ ಕಂಪನಿಯಾದ ಟೊಯೊಟಾ ಕಿರ್ಲೋಸ್ಕರ್ ಮೋಟಾರ್ ಭಾರತೀಯ ಮಾರುಕಟ್ಟೆಯಲ್ಲಿ ಕೊನೆಗೂ ಬಹುನಿರೀಕ್ಷಿತ ಹೊಸ ಎಂಪಿವಿಯನ್ನು ಅನಾವರಣಗೊಳಿಸಿದೆ. ಈ ಹೊಸ ಟೊಯೊಟಾ ಎಂಪಿವಿಗೆ ರೂಮಿಯಾನ್ (Rumion) ಎಂಬ ಹೆಸರನ್ನು ನೀಡಲಾಗಿದೆ. ಇದು ಜನಪ್ರಿಯ ಮಾರುತಿ ಸುಜುಕಿ ಎರ್ಟಿಗಾ (Maruti Suzuki Ertiga) ಎಂಪಿವಿಯ ರಿಬ್ಯಾಡ್ಜ್ ಆವೃತ್ತಿಯಾಗಿದೆ.
ಆಸಕ್ತಿದಾಯಕ ಸಂಗತಿಯೆಂದರೆ ಟೊಯೊಟಾ ಈಗಾಗಲೇ ಕೆಲವು ವಿದೇಶಿ ಮಾರುಕಟ್ಟೆಗಳಲ್ಲಿ ರೂಮಿಯಾನ್ ಅನ್ನು ಮಾರಾಟ ಮಾಡುತ್ತಿದೆ. ಮಾರುತಿ ಸುಜುಕಿ ಎರ್ಟಿಗಾ ಮಾದರಿಯು ಭಾರತೀಯ ಮಾರುಕಟ್ಟೆಯಲ್ಲಿ ಹೆಚ್ಚು ಮಾರಾಟವಾಗುವ ಎಂಪಿವಿಗಳಲ್ಲಿ ಒಂದಾಗಿದೆ. ಸದ್ಯಕ್ಕೆ ಈ ಹೊಸ ಟೊಯೊಟಾ ರೂಮಿಯಾನ್ (Toyota Rumion) ಎಂಪಿವಿಯ ಬೆಲೆ ಮತ್ತು ಬುಕಿಂಗ್ ಮೊತ್ತವನ್ನು ಘೋಷಿಸಲಾಗಿಲ್ಲ. ಟೊಯೊಟಾ ಆಗಿರುವುದರಿಂದ, ರೂಮಿಯಾನ್ 3 ವರ್ಷಗಳು/1,00,000 ಕಿಮೀ ಸ್ಟ್ಯಾಂಡರ್ಡ್ ವಾರಂಟಿಯೊಂದಿಗೆ ಬರುತ್ತದೆ.

ವಿನ್ಯಾಸ: ಟೊಯೊಟಾ ರೂಮಿಯಾನ್ ಕಾರಿಗೆ ಕೆಲವು ಕಾಸ್ಮೆಟಿಕ್ ಬದಲಾವಣೆಗಳನ್ನು ಮಾಡಿದೆ. ಇದು ಇನ್ನೋವಾದಿಂದ ಸ್ಫೂರ್ತಿ ಪಡೆದ ವಿಭಿನ್ನ ಗ್ರಿಲ್ ಅನ್ನು ಪಡೆಯುತ್ತದೆ, ಮುಂಭಾಗದ ಬಂಪರ್ ಕೂಡ ವಿಭಿನ್ನವಾಗಿದೆ ಮತ್ತು ಏರ್ ಡ್ಯಾಮ್‌ಗಾಗಿ ಕ್ರೋಮ್ ಸರೌಂಡ್ ಅನ್ನು ಪಡೆಯುತ್ತದೆ. ಈ ಕಾರಿನ ಬದಿಗಳಲ್ಲಿ, ಎರಡು-ಟೋನ್ ಮಷಿನ್ಡ್ ಫಿನಿಶ್‌ನಲ್ಲಿ ಪೂರ್ಣಗೊಳಿಸಲಾದ ವಿಭಿನ್ನ ಅಲಾಯ್ ವ್ಹೀಲ್ ಗಳನ್ನು ಮಾತ್ರ ಬದಲಾವಣೆಯಾಗಿದೆ.
ಎಂಜಿನ್: ಹೊಸ ಟೊಯೊಟಾ ರೂಮಿಯಾನ್ ಕಾರಿನಲ್ಲಿ ಪೆಟ್ರೋಲ್ ಮತ್ತು ಸಿಎನ್‌ಜಿ ಎಂಬ ಎರಡೂ ಪವರ್‌ಟ್ರೇನ್‌ಗಳೊಂದಿಗೆ ಲಭ್ಯವಿದೆ. ಟೊಯೊಟಾ ರೂಮಿಯಾನ್ ಕಾರು 1.5-ಲೀಟರ್, ನಾಲ್ಕು-ಸಿಲಿಂಡರ್, ನ್ಯಾಚುರಲ್ ಆಸ್ಪರೆಡ್ ಪೆಟ್ರೋಲ್ ಎಂಜಿನ್ ಅನ್ನು ಹೊಂದಿದೆ. ಈ ಎಂಜಿನ್ 6,000 rpm ನಲ್ಲಿ 101 bhp ಪವರ್ ಮತ್ತು 4,400 rpm ನಲ್ಲಿ 136.8 Nm ಟಾರ್ಕ್ ಅನ್ನು ಉತ್ಪಾದಿಸುವ ಸಾಮರ್ಥ್ಯವನ್ನು ಹೊಂದಿದೆ.

ಇನ್ನು CNG ಯಲ್ಲಿ ಚಾಲನೆಯಲ್ಲಿರುವಾಗ, ಈ ಎಂಜಿನ್ 5,500 rpm ನಲ್ಲಿ 86.63 bhp ಪವರ್ ಮತ್ತು 121.5 Nm ಅನ್ನು ಟಾರ್ಕ್ ಅನ್ನು ಉತ್ಪಾದಿಸುವ ಸಾಮರ್ಥ್ಯವನ್ನು ಹೊಂದಿದೆ. ಈ ಎರಡೂ ಪವರ್‌ಟ್ರೇನ್‌ಗಳು 5-ಸ್ಪೀಡ್ ಮ್ಯಾನುವಲ್ ಗೇರ್‌ಬಾಕ್ಸ್ ಅನ್ನು ಪಡೆಯುತ್ತವೆ. ಪೆಟ್ರೋಲ್ ಎಂಜಿನ್ 6-ಸ್ಪೀಡ್ ಟಾರ್ಕ್ ಕರ್ನಾವಾಟರ್ ಗೇರ್ ಬಾಕ್ಸ್ ಅನ್ನು ಸಹ ಪಡೆಯುತ್ತದೆ.
ಇದರ ಪೆಟ್ರೋಲ್ ಆವೃತ್ತಿಯು 20.51 ಕಿ.ಮೀ ಮೈಲೇಜ್ ಅನ್ನು ನೀಡಿದರೆ, CNG ಆವೃತ್ತಿಯು 26.11 ಕಿ.ಮೀ ಮೈಲೇಜ್ ಅನ್ನು ನೀಡುತ್ತದೆ. ಈ ಹೊಸ ಟೊಯೊಟಾ ರೂಮಿಯಾನ್ ಕಾರು ಉತ್ತಮ ಮೈಲೇಜ್ ಅನ್ನು ಹೊಂದಿದೆ. ಇನ್ನು ಈ ಟೊಯೊಟಾ ಕಾರುಗಳ ನಿರ್ವಹಣಾ ವೆಚ್ಚ ಕೂಡ ಕಡಿಮೆಯಾಗಿರುವುದರಿಂದ ಇದು ಹೆಚ್ಚಿನ ಗ್ರಾಹಕರನ್ನು ಸೆಳೆಯಬಹುದು.
ರೂಪಾಂತರಗಳು: ಹೊಸ ಟೊಯೊಟಾ ರೂಮಿಯಾನ್ ಕಾರು S MT/AT, G MT, V MT/AT ಮತ್ತು S MT CNG ಎಂಬ ರೂಪಾಂತರಗಳಲ್ಲಿ ಲಭ್ಯವಿರುತ್ತದೆ. ಈ ಟೊಯೊಟಾ ಕಾರಿನ ಬೆಲೆಯು ಇನ್ನೂ ಘೋಷಣೆಯಾಗಿಲ್ಲ. ಆದರೆ ಮಾರುತಿ ಸುಜುಕಿ ಎರ್ಟಿಗಾಕ್ಕಿಂತ ಸ್ವಲ್ಪ ಹೆಚ್ಚಿರಬಹುದು. ಪ್ರಸ್ತುತ ಮಾರುತಿ ಸುಜುಕಿ ಎರ್ಟಿಗಾ ಕಾರಿನ ಆರಂಭಿಕ ಬೆಲೆಯು ಎಕ್ಸ್ ಶೋರೂಂ ಪ್ರಕಾರ ರೂ.8.64 ಲಕ್ಷವಾಗಿದೆ.
ಟೊಯೊಟಾ ರೂಮಿಯಾನ್ ಭಾರತದಲ್ಲಿ ಟೊಯೊಟಾ ಕಂಪನಿಯ ಹೊಸ ಎಂಪಿವಿಯಾಗಿದೆ. ಜನಪ್ರಿಯ ಇನೋವಾ ಜೊತೆ ಇದ್ದರು ಇದು ಕೈಗೆಟುಕುವ ಕಾಂಪ್ಯಾಕ್ಟ್ ಎಂಪಿವಿಯಾಗಿರಲಿದೆ. ಈ ಹೊಸ ಟೊಯೊಟಾ ರೂಮಿಯಾನ್ ಕಾರು ಈ ವರ್ಷದ ಹಬ್ಬದ ಸೀಸನ್ ನಲ್ಲಿ ಭಾರತೀಯ ಮಾರುಕಟ್ಟೆಯಲ್ಲಿ ಬಿಡುಗಡೆಯಾಗಲಿದೆ. ಈ ಮಾದರಿಯು ಟೊಯೊಟಾ ಕಂಪನಿಯ ಕಾರುಗಳ ಮಾರಾಟದ ಸಂಖ್ಯೆಯನ್ನು ಹೆಚ್ಚಿಸಲು ನೆರವಾಗುತ್ತದೆ.
ಡ್ರೈವ್‌ಸ್ಪಾರ್ಕ್ ಕನ್ನಡ ವೆಬ್‌ಸೈಟ್ ತ್ವರಿತ ಆಟೋಮೊಬೈಲ್ ಸುದ್ದಿಗಳನ್ನು ಒದಗಿಸುತ್ತದೆ, ಎಲ್ಲಾ ಸಾಮಾಜಿಕ ಮಾಧ್ಯಮಗಳ ಮೂಲಕ ತಕ್ಷಣವೇ ಓದುಗರೊಂದಿಗೆ ಸುದ್ದಿಗಳನ್ನು ಹಂಚಿಕೊಳ್ಳುತ್ತದೆ. ಇತ್ತೀಚಿನ ಕಾರು, ಬೈಕ್ ಸುದ್ದಿ, ಟೆಸ್ಟ್ ಡ್ರೈವ್ ವರದಿಗಳು ಮತ್ತು ವೀಡಿಯೊಗಳನ್ನು ಪಡೆಯಲು ನಮ್ಮ ಫೇಸ್‌ಬುಕ್, ಇನ್‌ಸ್ಟಾಗ್ರಾಮ್ ಮತ್ತು ಯೂಟ್ಯೂಬ್ ಪೇಜ್‌ಗಳೊಂದಿಗೆ ಸಂಪರ್ಕದಲ್ಲಿರಿ. ನಿಮಗೆ ಯಾವುದೇ ಸುದ್ದಿ ಇಷ್ಟವಾದರೆ ಲೈಕ್, ಕಾಮೆಂಟ್ ಮಾಡುವುದನ್ನು ಮರೆಯದಿರಿ. ಜೊತೆಗೆ ನಿಮ್ಮ ಸ್ನೇಹಿತರಿಗೂ ತಪ್ಪದೆ ಶೇರ್ ಮಾಡಿ.


Click it and Unblock the Notifications