Toyota: 7 ಜನ ಹೋಗಬಹುದು, 26 ಕಿ.ಮೀ ಮೈಲೇಜ್.. ಈ ಟೊಯೊಟಾ ಕಾರಿಗೆ ಮುಗಿಬಿದ್ದ ಗ್ರಾಹಕರು!

ಟೊಯೋಟಾ ಕಿರ್ಲೋಸ್ಕರ್ ಮೋಟಾರ್ (Toyota Kirloskar Motor - TKM) ದೇಶೀಯ ಮಾರುಕಟ್ಟೆಯಲ್ಲಿ ಇನ್ನೋವಾ ಸರಣಿ ಕಾರುಗಳ ಮಾರಾಟದಿಂದ ಭಾರೀ ಜನಪ್ರಿಯತೆ ಗಳಿಸಿದೆ. ಆದರೆ, ಈ ನವೆಂಬರ್ (2023) ತಿಂಗಳು, ಕಂಪನಿಯ ಹೊಚ್ಚ ಹೊಸ ಎಂಪಿವಿ ರೂಮಿಯನ್ (Toyota Rumion) ಬೇಡಿಕೆ ದ್ವಿಗುಣಗೊಂಡಿದೆ ಎಂಬ ವಿವರಗಳು ಲಭ್ಯವಾಗಿದೆ.

ಟೊಯೊಟಾ ರೂಮಿಯನ್ ಸಿಎನ್‌ಜಿ ರೂಪಾಂತರವನ್ನು ಖರೀದಿಸಲು ಹೆಚ್ಚಿನ ಸಂಖ್ಯೆಯಲ್ಲಿ ಗ್ರಾಹಕರು ಆಸಕ್ತಿ ತೋರಿಸಿದ್ದಾರೆ. ಅಕ್ಟೋಬರ್ ತಿಂಗಳು (2023) ಇದೇ ವೇರಿಯೆಂಟ್ 16 ತಿಂಗಳು ಕಾಯುವಿಕೆ ಅವಧಿ ಹೊಂದಿತ್ತು. ಆದರೀಗ, ಈ ನವೆಂಬರ್‌ನಲ್ಲಿ ನೀವು ರೂಮಿಯನ್ ಎಂಪಿವಿಯನ್ನು ಇವತ್ತು ಬುಕ್ಕಿಂಗ್ ಮಾಡಿದರೂ ಡೆಲಿವರಿ ಪಡೆಯಲು 78 ವಾರಗಳು ಬೇಕಾಗಲಿದೆ ಎಂದು ವರದಿಯಾಗಿದೆ.

Toyota: 7 ಜನ ಹೋಗಬಹುದು, 26 ಕಿ.ಮೀ ಮೈಲೇಜ್.. ಈ ಟೊಯೊಟಾ ಕಾರಿಗೆ ಮುಗಿಬಿದ್ದ ಗ್ರಾಹಕರು!

ಈ ಟೊಯೊಟಾ ರೂಮಿಯನ್ ಎಂಪಿವಿಯ ಪೆಟ್ರೋಲ್ ರೂಪಾಂತರಗಳು ಕೊಂಚ ಕಡಿಮೆ ಕಾಯುವಿಕೆ ಅವಧಿಯನ್ನು ಒಳಗೊಂಡಿದ್ದು, ಖರೀದಿದಾರರಿಗೆ ವಿತರಣೆಯಾಗಲು 26 ವಾರಗಳು ಆಗಲಿದೆ. ಮಾರುತಿ ಸುಜುಕಿ ಎರ್ಟಿಗಾ ರೀ-ಬ್ಯಾಡ್ಜ್ ಆವೃತ್ತಿ ನೂತನ ಟೊಯೊಟಾ ರೂಮಿಯನ್, ವೇರಿಯೆಂಟ್ ಅನುಗುಣವಾಗಿ ರೂ.10.29 ಲಕ್ಷದಿಂದ ರೂ.13.68 ಲಕ್ಷ ಎಕ್ಸ್ ಶೋರೂಂ ಬೆಲೆಯಲ್ಲಿ ಕೆಲವು ತಿಂಗಳ ಹಿಂದೆ ಬಿಡುಗಡೆಯಾಗಿತ್ತು.

ಟೊಯೊಟಾ ರೂಮಿಯನ್ ಎಂಪಿವಿ ಎಸ್, ಜಿ, ವಿ ರೂಪಾಂತರ ಐಕಾನಿಕ್ ಗ್ರೇ, ಸ್ಪಂಕಿ ಬ್ಲೂ, ಕೆಫೆ ವೈಟ್ ಮತ್ತು ಎಂಟೈಸಿಂಗ್ ಸಿಲ್ವರ್ ಸೇರಿದಂತೆ ವಿವಿಧ ಬಣ್ಣಗಳ ಆಯ್ಕೆಯಲ್ಲಿ ದೊರೆಯುತ್ತದೆ. ವಿನ್ಯಾಸದ ದೃಷ್ಟಿಯಿಂದಲೂ ಈ ಕಾರು, ಅತ್ಯುತ್ತಮವಾಗಿದ್ದು, ಇನ್ನೋವಾ ಕ್ರಿಸ್ಟಾದಂತೆ ಪ್ರೊಜೆಕ್ಟರ್ ಹೆಡ್‌ಲ್ಯಾಂಪ್ಸ್, ಡ್ಯುಯಲ್ - ಟೋನ್ ಅಲಾಯ್ ವೀಲ್ಸ್ ಪಡೆದಿದೆ.

Toyota: 7 ಜನ ಹೋಗಬಹುದು, 26 ಕಿ.ಮೀ ಮೈಲೇಜ್.. ಈ ಟೊಯೊಟಾ ಕಾರಿಗೆ ಮುಗಿಬಿದ್ದ ಗ್ರಾಹಕರು!

ಈ ರೂಮಿಯನ್ ಎಂಪಿವಿ ಎರಡು ಎಂಜಿನ್ ಆಯ್ಕೆಯಲ್ಲಿ ಗ್ರಾಹಕರಿಗೆ ಸಿಗುತ್ತದೆ. 1.5 - ಲೀಟರ್ ಕೆ ಸೀರಿಯಸ್ ಪೆಟ್ರೋಲ್ ಎಂಜಿನ್, 101 bhp ಪವರ್, 136.8 Nm ಪೀಕ್ ಟಾರ್ಕ್, ಸಿಎನ್‌ಜಿ ಕಿಟ್ ಪಡೆದಿರುವ ಕಾರು ಇದೇ ಎಂಜಿನ್ ಹೊಂದಿದೆ. ಆದರೆ, ಕಡಿಮೆ ಪವರ್ ಉತ್ಪಾದಿಸುತ್ತದೆ. ಇದು 86.63 bhp ಪವರ್ ಹಾಗೂ 121.5 Nm ಪೀಕ್ ಟಾರ್ಕ್ ಹೊರಹಾಕುವ ಸಾಮರ್ಥ್ಯ ಒಳಗೊಂಡಿದೆ.

ಟೊಯೊಟಾ ರೂಮಿಯನ್ ರೂಪಾಂತರಗಳಿಗೆ ಅನುಗುಣವಾಗಿ 5 - ಸ್ವೀಡ್ ಮ್ಯಾನುವಲ್, 6 - ಸ್ವೀಡ್ ಆಟೋಮೆಟಿಕ್ ಗೇರ್ ಬಾಕ್ಸ್ ಆಯ್ಕೆಯನ್ನು ಹೊಂದಿದೆ. ಇದು 7 ಆಸನಗಳನ್ನು ಒಳಗೊಂಡಿದ್ದು, ಕುಟುಂಬದೊಂದಿಗೆ ಪ್ರಯಾಣಿಸಲು ಹೆಚ್ಚು ಸೂಕ್ತವಾಗಿದೆ. ಮೈಲೇಜ್ ವಿಚಾರವಾಗಿ ಹೇಳುವುದಾದರೆ, ಪೆಟ್ರೋಲ್ ರೂಪಾಂತರ 20.51 km/l ಹಾಗೂ ಸಿಎನ್‌ಜಿ ರೂಪಾಂತರ 26.11 km/kg ಇಂಧನ ದಕ್ಷತೆಯನ್ನು ಹೊಂದಿದೆ.

Toyota: 7 ಜನ ಹೋಗಬಹುದು, 26 ಕಿ.ಮೀ ಮೈಲೇಜ್.. ಈ ಟೊಯೊಟಾ ಕಾರಿಗೆ ಮುಗಿಬಿದ್ದ ಗ್ರಾಹಕರು!

ವೈಶಿಷ್ಟ್ಯದ ವಿಚಾರದಲ್ಲಿ ಈ ಎಂಪಿವಿಗೆ ಸರಿ ಸಾಟಿಯೇ ಇಲ್ಲವೆಂದು ಹೇಳಬಹುದು. ಇದು, 7 - ಇಂಚಿನ ಟಚ್‌ಸ್ಕ್ರೀನ್ ಇನ್ಫೋಟೈನ್‌ಮೆಂಟ್ ಸಿಸ್ಟಮ್, ಟೊಯೊಟಾ ಐ-ಕನೆಕ್ಟ್ ಟೆಕ್ನಲಾಜಿ, ವೈರ್‌ಲೆಸ್ ಆಪಲ್ ಕಾರ್ ಪ್ಲೇ, ಆಂಡ್ರಾಯ್ಡ್ ಆಟೋ, ಆಟೋಮೆಟಿಕ್ ಕ್ಲೇಮೇಟ್ ಕಂಟ್ರೋಲ್, ಹೈಟ್ ಅಡ್ಜಸ್ಟ್ಏಬಲ್ ಡ್ರೈವರ್ ಸೀಟ್, ಕ್ರೂಸ್ ಕಂಟ್ರೋಲ್ ಹಾಗೂ ಪ್ಯಾಡಲ್ ಶಿಫ್ಟರ್‌ ಸೇರಿದಂತೆ ಹತ್ತಾರು ಫೀಚರ್ಸ್ ಒಳಗೊಂಡಿದೆ.

ಸುರಕ್ಷತೆಯ ದೃಷ್ಟಿಯಿಂದಲ್ಲೂ ಟೊಯೊಟಾ ರೂಮಿಯನ್ ಎಂಪಿವಿ ಅತ್ಯಾಧುನಿಕವಾಗಿದ್ದು, 4 ಏರ್‌ಬ್ಯಾಗ್‌, ABS (ಆಂಟಿಲಾಕ್ ಬ್ರೇಕಿಂಗ್ ಸಿಸ್ಟಮ್), EBD (ಎಲೆಕ್ಟ್ರಾನಿಕ್ ಬ್ರೇಕ್‌ಫೋರ್ಸ್ ಡಿಸ್ಟ್ರಿಬ್ಯೂಷನ್), ESC (ಎಲೆಕ್ಟ್ರಾನಿಕ್ ಸ್ಟೆಬಿಲಿಟಿ ಕಂಟ್ರೋಲ್) ರೇರ್ ಪಾರ್ಕಿಂಗ್ ಕ್ಯಾಮೆರಾ ಹಾಗೂ ISOFIX ಚೈಲ್ಡ್ ಸೀಟ್ ಆಂಕರ್‌ ಪಡೆದಿದೆ. ಈ ಕಾರಿಗೆ ಕಿಯಾ ಕ್ಯಾರೆನ್ಸ್‌, ಮಹೀಂದ್ರಾ ಮರಾಜೊ ಪ್ರಬಲ ಪ್ರತಿಸ್ಪರ್ಧಿಯಾಗಿವೆ.

ಇನ್ನು, ಟೊಯೊಟಾ ರೂಮಿಯನ್ ಸಿಎನ್‌ಜಿ ರೂಪಾಂತರಗಳ ಕಾಯುವಿಕೆ ಅವಧಿ ದ್ವಿಗುಣವಾಗುವುದನ್ನು ಗಮನಿಸಿದರೆ, ಈ ಕಾರಿಗೆ ಕೆಲವೇ ದಿನಗಳಲ್ಲಿ ಮತ್ತಷ್ಟು ಬೇಡಿಕೆ ಬರಬಹುದು. ಅದರಲ್ಲೂ ಇದು ಕೈಗೆಟುಕುವ ಬೆಲೆಯಲ್ಲಿ ಗರಿಷ್ಠ ಮೈಲೇಜ್ ನೊಂದಿಗೆ ಖರೀದಿಗೆ ದೊರೆಯುತ್ತಿರುವುದರಿಂದ ಹೆಚ್ಚಿನ ಮಂದಿ ಇಷ್ಟದ ವಾಹನವಾಗಿ ಮಾರ್ಪಟ್ಟಿದೆ ಎಂದು ಹೇಳಿದರೆ ತಪ್ಪಾಗುವುದಿಲ್ಲ.

Article Published On: Thursday, November 16, 2023, 18:06 [IST]
English summary
Toyota rumion november waiting period revealed heavy demand 26 km mileage
Read more on ಟೊಯೊಟಾ toyota
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+