ಮಾರುತಿ ಎರ್ಟಿಗಾವನ್ನು ಮರೆತುಬಿಡಿ, ಟೊಯೊಟಾ ಹೊಸ SUV 26 ಕಿ.ಮೀ ಮೈಲೇಜ್... ಭಾರೀ ಬುಕಿಂಗ್ಸ್
ದೇಶದಲ್ಲಿ ಎಸ್‌ಯುವಿ ಕ್ರೇಜ್ ಉತ್ತುಂಗಕ್ಕೇರಿದೆ. ವಿವಿಧ ಕಂಪನಿಗಳು ಗ್ರಾಹಕರ ಬೇಡಿಕೆಯಂತೆ ಹೊಸ ಎಸ್‌ಯುವಿಗಳನ್ನು ಬಿಡುಗಡೆ ಮಾಡುತ್ತಿವೆ. ಟೊಯೊಟಾ ಕೂಡ ತನ್ನ Rumion MPV/SUV ಅನ್ನು ಭಾರತೀಯ ಮಾರುಕಟ್ಟೆಯಲ್ಲಿ ಬಿಡುಗಡೆ ಮಾಡಿದೆ. ಇದು ಸದ್ಯ ಗ್ರಾಹಕರಲ್ಲಿ ಸಖತ್ ಬೇಡಿಕೆ ಪಡೆದುಕೊಂಡಿದ್ದು, ಉತ್ತಮ ಬುಕಿಂಗ್ಸ್ ಗಳಿಸುತ್ತಿದೆ.
ಟೊಯೋಟಾ ರೂಮಿಯಾನ್ ಕಾರಿನ ಎಕ್ಸ್ ಶೋ ರೂಂ ಬೆಲೆ ರೂ.10.29 ಲಕ್ಷವಿದ್ದು, ಇದು ಮಾರುತಿ ಸುಜುಕಿ ಎರ್ಟಿಗಾಗಿಂತ 1.65 ಲಕ್ಷ ರೂ. ಹೆಚ್ಚು. ಆದ್ರೂ ಕೂಡ ಉತ್ತಮ ಸೌಕರ್ಯ, ಅತ್ಯುತ್ತಮ ಫಿಚರ್ಸ್ ಹಾಗೂ ಭರ್ಜರಿ ಮೈಲೇಜ್ ನೀಡುವುದರಿಂದ ಮಾರುಕಟ್ಟೆಯಲ್ಲಿ ಉತ್ತಮ ಬೇಡಿಕೆಯನ್ನು ಪಡೆಯುತ್ತಿದೆ.

ಈ 7 ಆಸನಗಳ ಕಾರು S, G ಮತ್ತು V ಎಂಬ ಮೂರು ರೂಪಾಂತರಗಳಲ್ಲಿ ಲಭ್ಯವಿದೆ. ಹಾಗೆಯೇ 5 ಮೊನೊಟೋನ್ ಬಣ್ಣಗಳಲ್ಲಿ ಲಭ್ಯವಿದೆ. ಈ ಕಾರನ್ನು ಖರೀದಿಸಲು ಗ್ರಾಹಕರು ನಿರೀಕ್ಷೆಗಿಂತ ಹೆಚ್ಚು ಸಮಯ ಕಾಯಬೇಕಾಗುತ್ತದೆ. ಪ್ರಸ್ತುತ ಈ ಕಾರಿಗೆ ಕಾಯುವ ಅವಧಿಯು ಬುಕ್ಕಿಂಗ್ ದಿನಾಂಕದಿಂದ 20 ರಿಂದ 24 ವಾರಗಳಿವೆ ಎಂದು ಇತ್ತೀಚೆಗೆ ಕಂಪನಿ ತಿಳಿಸಿದೆ.
ಮೇಲೆ ತಿಳಿಸಿದ G ರೂಪಾಂತರವು ಮಧ್ಯಮ-ಸ್ಪೆಕ್ ಆಗಿದ್ದು, ಇತರ ರೂಪಾಂತರಗಳು ಆಟೋಮ್ಯಾಟಿಕ್ ಟ್ರಾನ್ಸ್‌ಮಿಷನ್‌ದೊಂದಿಗೆ ಬರುತ್ತವೆ. ಕೇವಲ ಪ್ರವೇಶ ಮಟ್ಟದ S ರೂಪಾಂತರ ಮಾತ್ರ ಫ್ಯಾಕ್ಟರಿ-ಫಿಟೆಡ್ CNG ಕಿಟ್ ಅನ್ನು ಒಳಗೊಂಡಿರುತ್ತದೆ. ರೂಮಿಯಾನ್ ಎಕ್ಸ್ ಶೋ ರೂಂ ಬೆಲೆ 10.29 ಲಕ್ಷ ರೂ.ದಿಂದ ಆರಂಭವಾಗಿ ರೂ.13.68 ಲಕ್ಷ ತಲುಪುತ್ತದೆ.

ರೂಮಿಯಾನ್ ಡಿಸೈನ್: ರೂಮಿಯನ್ ಪ್ರೊಜೆಕ್ಟರ್ ಹೆಡ್‌ಲ್ಯಾಂಪ್‌ಗಳು, ಡ್ಯುಯಲ್ ಟೋನ್ ಅಲಾಯ್ ವೀಲ್‌ಗಳು, ಕ್ರೋಮ್ ಇನ್‌ಸರ್ಟ್‌ಗಳು, ವರ್ಟಿಕಲ್ ಎಲ್ಇಡಿ ಟೈಲ್ ಲೈಟ್‌ಗಳು ಸೇರಿಂದತೆ ಇನ್ನೋವಾ ಕ್ರಿಸ್ಟಾದಿಂದ ಪ್ರೇರಿತವಾದ ಹೊಸ ಗ್ರಿಲ್ ಅನ್ನು ಸಹ ಪಡೆದಿದೆ. ನೋಡಲು ಬೃಹತ್ ಆಕಾರದಲ್ಲಿ ಅತ್ಯುತ್ತಮ ವಿನ್ಯಾಸವನ್ನು ಹೊಂದಿದೆ.
ವೈಶಿಷ್ಟ್ಯಗಳು & ಸುರಕ್ಷತೆ: ಕಾರು 7-ಇಂಚಿನ ಟಚ್‌ಸ್ಕ್ರೀನ್, ವೈರ್‌ಲೆಸ್ ಆಂಡ್ರಾಯ್ಡ್ ಆಟೋ, ಆಪಲ್ ಕಾರ್‌ಪ್ಲೇ, ಕ್ರೂಸ್ ಕಂಟ್ರೋಲ್, ಪ್ಯಾಡಲ್ ಶಿಫ್ಟರ್‌ಗಳು, ಆಟೋ ಕ್ಲೈಮೇಟ್ ಕಂಟ್ರೋಲ್, ಡ್ಯುಯಲ್ ಫ್ರಂಟ್ ಏರ್‌ಬ್ಯಾಗ್‌ಗಳು, ಸೈಡ್ ಏರ್‌ಬ್ಯಾಗ್‌ಗಳು, ಎಬಿಎಸ್ ವಿತ್ EBD, ISOFIX ಚೈಲ್ಡ್ ಸೀಟ್ ಆಂಕರ್‌ಗಳು, ಎಲೆಕ್ಟ್ರಾನಿಕ್ ಸ್ಟೆಬಿಲಿಟಿ ಪ್ರೋಗ್ರಾಂ (ESP) ಸೇರಿದಂತೆ ರೂಮಿಯನ್ 6 ಏರ್ ಬ್ಯಾಗ್‌ಗಳನ್ನು ಹೊಂದಿದೆ.

ರೂಮಿಯನ್ 1.5-ಲೀಟರ್ ನ್ಯಾಚುರಲಿ ಆಸ್ಪಿರೇಟೆಡ್ (NA) ಪೆಟ್ರೋಲ್ ಮೋಟರ್‌ನಿಂದ ಚಾಲಿತವಾಗಿದ್ದು, 102bhp ಪವರ್ ಮತ್ತು 137Nm ಟಾರ್ಕ್ ಅನ್ನು ಉತ್ಪಾದಿಸುತ್ತದೆ. 5-ಸ್ಪೀಡ್ ಮ್ಯಾನುವಲ್ ಅಥವಾ 6-ಸ್ಪೀಡ್ ಟಾರ್ಕ್ ಕನ್ವರ್ಟರ್‌ನೊಂದಿಗೂ ಬರುತ್ತದೆ. ಅದೇ ಎಂಜಿನ್ CNG ಮೋಡ್‌ನಲ್ಲಿ 87bhp ಪವರ್ ಮತ್ತು 121.5 ಟಾರ್ಕ್ ಅನ್ನು ಉತ್ಪಾದಿಸುತ್ತದೆ.
ಇದು 5-ಸ್ಪೀಡ್ ಮ್ಯಾನ್ಯುವಲ್ ಟ್ರಾನ್ಸ್ಮಿಷನ್ ಅನ್ನು ಮಾತ್ರ ಬಳಸುತ್ತದೆ. ಹೊಸ ಟೊಯೊಟಾ ರೂಮಿಯಾನ್‌ನ CNG ಮಾದರಿಯು 26.11 kmpl ಮೈಲೇಜ್ ಅನ್ನು ನೀಡುತ್ತದೆ ಎಂದು ARAI ದೃಢಪಡಿಸಿದೆ. ಪೆಟ್ರೋಲ್ AT ಆವೃತ್ತಿಯು 20.51 kmpl ಮೈಲೇಜ್ ನೀಡುತ್ತದೆ. ಅಲ್ಲದೆ, ಪೆಟ್ರೋಲ್ MT ಆವೃತ್ತಿಯ ಮಾದರಿಯು 20.11 kmpl ಮೈಲೇಜ್ ನೀಡುತ್ತದೆ.

ಡ್ರೈವ್‌ಸ್ಪಾರ್ಕ್ ಕನ್ನಡ ವೆಬ್‌ಸೈಟ್ ತ್ವರಿತವಾಗಿ ಆಟೋಮೊಬೈಲ್ ಸಂಬಂಧಿಸಿದ ಸುದ್ದಿಗಳನ್ನು ನೀಡುತ್ತದೆ. ಜೊತೆಗೆ ಸೋಷಿಯಲ್ ಮೀಡಿಯಾಗಳ ಮೂಲಕ ತಕ್ಷಣವೇ ಓದುಗರೊಂದಿಗೆ ಸುದ್ದಿಗಳನ್ನು ಶೇರ್ ಮಾಡುತ್ತೇವೆ. ಇತ್ತೀಚಿನ ಕಾರು, ಬೈಕ್ ಸುದ್ದಿ, ಟೆಸ್ಟ್ ಡ್ರೈವ್ ವರದಿಗಳು ಮತ್ತು ವೀಡಿಯೊಗಳನ್ನು ಪಡೆಯಲು ನಮ್ಮ ಫೇಸ್‌ಬುಕ್, ಇನ್‌ಸ್ಟಾಗ್ರಾಮ್, ಯೂಟ್ಯೂಬ್ ಪೇಜ್‌ಗಳೊಂದಿಗೆ ಫಾಲೋ ಮಾಡಿ. ನಿಮಗೆ ನಮ್ಮ ಯಾವುದೇ ಸುದ್ದಿ ಇಷ್ಟವಾದರೆ ಲೈಕ್, ಕಾಮೆಂಟ್ ಮಾಡುವುದನ್ನು ಮರೆಯದಿರಿ.


Click it and Unblock the Notifications