Toyota: ಉತ್ತಮ ಪ್ರಗತಿ ಸಾಧಿಸಿದ ಟೊಯೊಟಾ.. ಫಾರ್ಚುನರ್, ಇನ್ನೋವಾ ಗ್ರಾಹಕರಿಗೆ ಇಷ್ಟ, ತುಂಬಿದ ಶೋರೂಂ!
ಭಾರತದ ಜನಪ್ರಿಯ ಕಾರು ಮಾರಾಟ ಕಂಪನಿಗಳಲ್ಲಿ ಟೊಯೊಟಾ ಕಿರ್ಲೋಸ್ಕರ್ ಮೋಟಾರ್ (Toyota Kirloskar Motor - TKM) ಪ್ರಮುಖವಾಗಿದೆ. ಕಂಪನಿ ಕಾರುಗಳು ಪ್ರೀಮಿಯಂ ಫೀಚರ್ಸ್ ಹಾಗೂ ನೋಡಲು ಜಬರ್ದಸ್ತ್ ಲುಕ್ ಹೊಂದಿರುವುದರಿಂದ ಹಲವರು ಖರೀದಿಸುತ್ತಾರೆ. ಸದ್ಯ, ಟೊಯೊಟಾದ ನವೆಂಬರ್ (2023) ತಿಂಗಳ ಮಾರಾಟ ವರದಿ ಪ್ರಕಟಗೊಂಡಿದೆ.
ಟೊಯೊಟಾ ಅಧಿಕಾರಿಗಳು ಶುಕ್ರವಾರ ಮಾರಾಟ ವರದಿಯನ್ನು ಬಿಡುಗಡೆಗೊಳಿಸಿದ್ದು, ಕಂಪನಿಯು ಉತ್ತಮವಾಗಿ ಬೆಳವಣಿಗೆ ಸಾಧಿಸಿದೆ ಎಂದು ಘೋಷಿಸಿದ್ದಾರೆ. ಈ ನವೆಂಬರ್ ತಿಂಗಳು 17,818 ಯುನಿಟ್ ಕಾರುಗಳನ್ನು ಮಾರಾಟಗೊಳಿಸಿದ್ದು, ಕಳೆದ ವರ್ಷದ ಇದೇ ಅವಧಿಗೆ ಹೋಲಿಸಿದರೆ (11,765 ಯುನಿಟ್) ವರ್ಷದಿಂದ ವರ್ಷಕ್ಕೆ (Y - O - Y) ಶೇಕಡ 51% ಬೆಳವಣಿಗೆ ಸಾಧಿಸಿದೆ.

ದೇಶೀಯ ಮಾರುಕಟ್ಟೆಯಲ್ಲಿ ಟೊಯೊಟಾ, ಈ ಪರಿಪ್ರಮಾಣದಲ್ಲಿ ಯಶಸ್ಸು ಸಾಧಿಸಲು ಕಾರಣ, ಬಲವಾದ ಎಸ್‌ಯುವಿ ಹಾಗೂ ಎಂಪಿವಿ ಲೈನ್-ಅಪ್. ಕಂಪನಿಯ ಫಾರ್ಚುನರ್ (Fortuner), ಇನ್ನೋವಾ ಕ್ರಿಸ್ಟಾ (Innova Crysta), ಇನ್ನೋವಾ ಹೈಕ್ರಾಸ್ (Innova Hycross) ಕಾರುಗಳನ್ನು ಹೆಚ್ಚಿನ ಮಂದಿ ಇಷ್ಟಪಟ್ಟು ಕೊಂಡುಕೊಳ್ಳುತ್ತಿದ್ದಾರೆ. 2022ರಲ್ಲಿ ಬಿಡುಗಡೆಯಾದ ಮಿಡ್-ಸೈಜ್ ಎಸ್‌ಯುವಿ ಅರ್ಬನ್ ಕ್ರೂಸರ್ ಹೈರೈಡರ್‌ಗೂ ಪ್ರತ್ಯೇಕ ಅಭಿಮಾನಿ ಬಳಗವಿದೆ.
ಭಾರತ ಪ್ರವೇಶಿಸಿ 25 ವರ್ಷ ಪೂರ್ಣಗೊಳಿಸುತ್ತಿರುವ ಟೊಯೊಟಾ, ತನಗಾಗಿ ಕಾರು ಮಾರುಕಟ್ಟೆಯಲ್ಲಿ ಒಂದು ಸ್ಥಾನವನ್ನು ಸಂಪಾದಿಸಿಕೊಂಡಿದೆ. ಈ ವರ್ಷ ಮೊದಲ 11 ತಿಂಗಳಲ್ಲಿಯೇ 2.10 ಲಕ್ಷ ಯುನಿಟ್ ವಾಹನಗಳನ್ನು ಮಾರಾಟಗೊಳಿಸಿ, ಹೋದ ವರ್ಷದ (2022) ಇದೇ ಅವಧಿಗೆ (1.50 ಲಕ್ಷ ಯುನಿಟ್) ಹೋಲಿಕೆ ಮಾಡಿದರೆ, ಶೇಕಡ 40% ಪ್ರಗತಿ ಕಂಡಿದೆ.

ಸದ್ಯ, ದೇಶೀಯ ಮಾರುಕಟ್ಟೆಯಲ್ಲಿ ಖರೀದಿಗೆ ಸಿಗುವ ಟೊಯೊಟಾ ಫಾರ್ಚುನರ್ (Toyota Fortuner), ರೂ.33.43 ಲಕ್ಷದಿಂದ ರೂ.51.44 ಲಕ್ಷ ಎಕ್ಸ್ ಶೋರೂಂ ಬೆಲೆಯನ್ನು ಹೊಂದಿದೆ. ಪೆಟ್ರೋಲ್ ಹಾಗೂ ಡೀಸೆಲ್ ಎಂಜಿನ್ ಆಯ್ಕೆಯಲ್ಲಿ ಸಿಗಲಿದ್ದು, 10.0 kmpl ಮೈಲೇಜ್ ನೀಡುತ್ತದೆ. 8 - ಇಂಚಿನ ಇನ್ಫೋಟೈನ್‌ಮೆಂಟ್ ಸಿಸ್ಟಮ್, ಆಂಡ್ರಾಯ್ಡ್ ಆಟೋ, ಆಪಲ್ ಕಾರ್ ಪ್ಲೇ ಸೇರಿದಂತೆ ಹತ್ತಾರು ವೈಶಿಷ್ಟ್ಯಗಳನ್ನು ಒಳಗೊಂಡಿದೆ.
ಟೊಯೊಟಾ ಇನ್ನೋವಾ ಹೈಕ್ರಾಸ್ ಎಂಪಿವಿ, ರೂ.18.82 ಲಕ್ಷದಿಂದ 30.26 ಲಕ್ಷ ಎಕ್ಸ್ ಶೋರೂಂ ದರದಲ್ಲಿ ಲಭ್ಯವಿದೆ. 2.0 ಲೀಟರ್, 4 ಸಿಲಿಂಡರ್ ನ್ಯಾಚುರಲ್ ಆಸ್ಪಿರೇಟೆಡ್ ಪೆಟ್ರೋಲ್ ಹಾಗೂ 2.0 ಲೀಟರ್, 4 ಸಿಲಿಂಡರ್ ಹೈಬ್ರಿಡ್ ಪೆಟ್ರೋಲ್ ಎಂಜಿನ್ ಹೊಂದಿದ್ದು, 21 kmpl ಮೈಲೇಜ್ ಕೊಡುತ್ತದೆ. 10-ಇಂಚಿನ ಟಚ್‌ಸ್ಕ್ರೀನ್ ಇನ್ಫೋಟೈನ್‌ಮೆಂಟ್ ಡಿಸ್ಪ್ಲೇ, ಡಿಜಿಟಲ್ ಡ್ರೈವರ್ ಡಿಸ್ಪ್ಲೇ ಒಳಗೊಂಡಂತೆ ವಿವಿಧ ಫೀಚರ್ಸ್ ಇವೆ.

ಟೊಯೊಟಾ ಇನ್ನೋವಾ ಕ್ರಿಸ್ಟಾ ಎಂಪಿವಿ, ರೂ.19.99 ಲಕ್ಷದಿಂದ ರೂ.26.05 ಲಕ್ಷ ಎಕ್ಸ್ ಶೋರೂಂ ದರದಲ್ಲಿ ಲಭ್ಯವಿದೆ. 2.4 - ಲೀಟರ್ ಡಿಸೇಲ್ ಎಂಜಿನ್, 5-ಸ್ವೀಡ್ ಮಾನ್ಯವಲ್ ಗೇರ್ ಬಾಕ್ಸ್ ಆಯ್ಕೆಯಲ್ಲಿ ಮಾತ್ರ ಸಿಗುತ್ತದೆ. 8-ಇಂಚಿನ ಟಚ್‌ಸ್ಕ್ರೀನ್ ಇನ್ಫೋಟೈನ್‌ಮೆಂಟ್ ಸಿಸ್ಟಮ್, ಆಟೋಮೆಟಿಕ್ ಕ್ಲೇಮೇಟ್ ಕಂಟ್ರೋಲ್, ಆಂಬಿಯೆಂಟ್ ಲೈಟಿಂಗ್ ಸೇರಿದಂತೆ ಹಲವು ವೈಶಿಷ್ಟ್ಯಗಳನ್ನು ಒಳಗೊಂಡಿದೆ.
ಟೊಯೊಟಾ ಅರ್ಬನ್ ಕ್ರೂಸರ್ ಹೈರೈಡರ್ ರೂ.9.03 ಲಕ್ಷದಿಂದ ರೂ.11.73 ಲಕ್ಷ ಎಕ್ಸ್ ಶೋರೂಂ ಬೆಲೆಯಲ್ಲಿ ಸಿಗುತ್ತದೆ. ಪೆಟ್ರೋಲ್ ಎಂಜಿನ್ ಆಯ್ಕೆಯಲ್ಲಿ ದೊರೆಯುವ ಈ ಕಾರು, ಮ್ಯಾನುವಲ್ ಹಾಗೂ ಆಟೋಮೆಟಿಕ್ ಗೇರ್ ಬಾಕ್ಸ್ ಅನ್ನು ಹೊಂದಿದೆ. 17.03 - 18.76 kmpl ಮೈಲೇಜ್ ನೀಡುತ್ತದೆ. ಜೊತೆಗೆ ಯುವ ಗ್ರಾಹಕರನ್ನು ಆಕರ್ಷಿಸುವ ಹತ್ತಾರು ವೈಶಿಷ್ಟ್ಯಗಳನ್ನು ಪಡೆದಿದೆ.
ಟೊಯೊಟಾ ರೂಮಿಯಾನ್, ರೂ.10.29 ಲಕ್ಷದಿಂದ ರೂ.13.68 ಲಕ್ಷ ಎಕ್ಸ್ ಶೋರೂಂ ಬೆಲೆಯಲ್ಲಿ ಸಿಗುತ್ತದೆ. 7 ಆಸನ ಆಯ್ಕೆಯೊಂದಿರುವ ಈ ಕಾರು, ಪೆಟ್ರೋಲ್ ಹಾಗೂ ಸಿಎನ್‌ಜಿ ಎಂಜಿನ್ ನೊಂದಿಗೆ ಲಭ್ಯವಿದೆ. 7 - ಇಂಚಿನ ಟಚ್‌ಸ್ಕ್ರೀನ್ ಸಿಸ್ಟಮ್, ವೈರ್‌ಲೆಸ್ ಆಂಡ್ರಾಯ್ಡ್ ಆಟೋ ಮತ್ತು ಆಪಲ್ ಕಾರ್ ಪ್ಲೇ, ಸೇರಿದಂತೆ ಹತ್ತಾರು ವೈಶಿಷ್ಟ್ಯಗಳನ್ನು ಹೊಂದಿದೆ.


Click it and Unblock the Notifications