Toyota Hyryder: 'ಮೇಡ್ ಇನ್ ಇಂಡಿಯಾ' ಟೊಯೊಟಾ ಅರ್ಬನ್ ಕ್ರೂಸರ್ ಹೈರೈಡರ್ ಬಿಡುಗಡೆ, ಎಲ್ಲಿ?

ಜಪಾನ್ ವಾಹನ ತಯಾರಕ ಟೊಯೊಟಾದ ಎಸ್‌ಯುವಿಗಳು ಭಾರತದಲ್ಲಿ ದೊಡ್ಡ ಮಟ್ಟದಲ್ಲಿ ಜನಪ್ರಿಯತೆ ಗಳಿಸಿವೆ. ಇದೀಗ, ಕಂಪನಿಯು ಮೇಡ್ ಇನ್ ಇಂಡಿಯಾ 'ಅರ್ಬನ್ ಕ್ರೂಸರ್ ಹೈರೈಡರ್' ಅನ್ನು ಅರ್ಬನ್ ಕ್ರೂಸರ್ ಹೆಸರಿನಲ್ಲಿ ಒಂದೇ ಎಂಜಿನ್ ಆಯ್ಕೆಯಲ್ಲಿ ದಕ್ಷಿಣ ಆಫ್ರಿಕಾದಲ್ಲಿ ಬಿಡುಗಡೆಗೊಳಿಸಿದೆ. ಹೆಚ್ಚಿನ ಮಾಹಿತಿ ಇಲ್ಲಿದೆ.

ಅದ್ದೂರಿಯಾಗಿ ಲಾಂಚ್ ಆಗಿರುವ 'ಅರ್ಬನ್ ಕ್ರೂಸರ್' ಮೂರು ರೂಪಾಂತರಗಳ ಆಯ್ಕೆಯಲ್ಲಿ ಸೌತ್ ಆಫ್ರಿಕಾದ ರಾಂಡ್ 329,400 (ಭಾರತದ ರೂಪಾಯಿ 14.8 ಲಕ್ಷ) ಬೆಲೆಯಲ್ಲಿ ಖರೀದಿಗೆ ಲಭ್ಯವಿದೆ. ಜೊತೆಗೆ 1.5 ಲೀಟರ್ ನ್ಯಾಚುರಲ್ ಆಸ್ಪಿರೇಟೆಡ್ ಪೆಟ್ರೋಲ್ ಎಂಜಿನ್, 5 ಸ್ವೀಡ್ ಮ್ಯಾನುವಲ್ ಅಥವಾ 4 ಸ್ವೀಡ್ ಆಟೋಮೆಟಿಕ್ ಗೇರ್ ಬಾಕ್ಸ್ ನೊಂದಿಗೂ ಸಿಗುತ್ತಿದೆ. ಆದರೆ, ಗಮನಿಬೇಕಾದ ಅಂಶವೆಂದರೆ, ಅಲ್ಲಿನ ಗ್ರಾಹಕರಿಗೆ 1.5 ಲೀಟರ್ ಸ್ಟ್ರಾಂಗ್ ಹೈಬ್ರಿಡ್ ಪೆಟ್ರೋಲ್ ಎಂಜಿನ್ ನಲ್ಲಿ ದೊರೆಯುತ್ತಿಲ್ಲ.

Toyota Hyryder: ಮೇಡ್ ಇನ್ ಇಂಡಿಯಾ ಟೊಯೊಟಾ ಅರ್ಬನ್ ಕ್ರೂಸರ್ ಹೈರೈಡರ್ ಬಿಡುಗಡೆ, ಎಲ್ಲಿ?

ದಕ್ಷಿಣ ಆಫ್ರಿಕಾದಲ್ಲಿ ಬಿಡುಗಡೆಯಾಗಿರುವ ಅರ್ಬನ್ ಕ್ರೂಸರ್ XS, XR ಮತ್ತು XR AT ರೂಪಾಂತರಗಳು ಕೆಲವೊಂದು ವೈಶಿಷ್ಟ್ಯಗಳನ್ನು ಕಳೆದುಕೊಂಡಿವೆ. ಪ್ರಮುಖವಾಗಿ ದೊಡ್ಡದಾದ ಇನ್ಫೋಟೈನ್‌ಮೆಂಟ್ ಯೂನಿಟ್, ಡಿಜಿಟಲ್ ಇನ್ಸ್ಟ್ರುಮೆಂಟ್ ಕ್ಲಸ್ಟರ್, 360 ಡಿಗ್ರಿ ಕ್ಯಾಮೆರಾವನ್ನು ಪಡೆದಿಲ್ಲ. ಆದರೂ 7 ಇಂಚಿನ ಟಚ್‌ಸ್ಕ್ರೀನ್ ಇನ್ಫೋಟೈನ್‌ಮೆಂಟ್ ಯುನಿಟ್, ಕೀಲೆಸ್ ಎಂಟ್ರಿ, ಪುಶ್ ಸ್ಟಾರ್ಟ್/ಸ್ಟಾಪ್ ಬಟನ್, ಕ್ರೂಸ್ ಕಂಟ್ರೋಲ್ ಸೇರಿದಂತೆ ಹತ್ತಾರು ವೈಶಿಷ್ಟ್ಯಗಳನ್ನು ಹೊಂದಿವೆ.

ಎಂಜಿನ್ ಆಯ್ಕೆ ಬಗ್ಗೆ ಮಾತನಾಡವುದಾದರೆ, ಇದು ಮಾರುತಿ ಸುಜುಕಿ ಕಾರುಗಳು ಹೊಂದಿರುವಂತೆಯೇ 1.5 ಲೀಟರ್ TNGA ಅಟ್ಕಿನ್ಸನ್ ಸೈಕಲ್ ಎಂಜಿನ್ ಹೊಂದಿದ್ದು, 92 hp ಗರಿಷ್ಠ ಪವರ್ ಮತ್ತು 122 Nm ಪೀಕ್ ಟಾರ್ಕ್ ಉತ್ಪಾದಿಸುವ ಸಾಮರ್ಥ್ಯ ಪಡೆದಿದೆ. ಇನ್ನು, ಭಾರತದ ಮಾರುಕಟ್ಟೆಯಲ್ಲಿ ಖರೀದಿಗೆ ದೊರೆಯುವ ಅರ್ಬನ್ ಕ್ರೂಸರ್ ಹೈರೈಡರ್, ರೂ.10.73 ಲಕ್ಷದಿಂದ ರೂ.19.74 ಲಕ್ಷ ಎಕ್ಸ್ ಶೋರೂಂ ದರವನ್ನು ಸಿಗಲಿದೆ.

ಇದರ ಪವರ್ ಫುಲ್ 1.5 ಲೀಟರ್ ಮೈಲ್ಡ್ ಹೈಬ್ರಿಡ್ ಪೆಟ್ರೋಲ್ ಎಂಜಿನ್, 103 PS ಗರಿಷ್ಠ ಪವರ್ ಹಾಗೂ 137 Nm ಪೀಕ್ ಟಾರ್ಕ್ ಉತ್ಪಾದಿಸುತ್ತದೆ. 1.5 ಲೀಟರ್ ಸ್ಟ್ರಾಂಗ್ ಹೈಬ್ರಿಡ್ ಎಂಜಿನ್ ಹೆಚ್ಚುವರಿಯಾಗಿ 116 PS ಪವರ್ ಉತ್ಪಾದಿಸುವ ಸಾಮರ್ಥ್ಯ ಹೊಂದಿದೆ. 5 ಸ್ವೀಡ್ ಮ್ಯಾನುವಲ್ ಅಥವಾ 6 ಸ್ವೀಡ್ ಆಟೋಮೆಟಿಕ್ ಟ್ರಾಸ್ಮಿಷನ್ ಆಯ್ಕೆಯಲ್ಲಿ ದೊರೆಯಲಿದ್ದು, 19.39 - 27.97 kmpl ಮೈಲೇಜ್ ನೀಡುತ್ತದೆ.

ದೇಶದಲ್ಲಿ ದೊರೆಯುವ ಅರ್ಬನ್ ಕ್ರೂಸರ್ ಹೈರೈಡರ್ ಯಾವೆಲ್ಲ ವೈಶಿಷ್ಟ್ಯಗಳನ್ನು ಪಡೆದಿದೆ ಎಂಬುದನ್ನು ನೋಡುವುದಾದರೆ, 9 ಇಂಚಿನ ಟಚ್‌ಸ್ಕ್ರೀನ್ ಇನ್ಫೋಟೈನ್‌ಮೆಂಟ್ ಸಿಸ್ಟಮ್, ವೆಂಟಿಲೇಟೆಡ್ ಫ್ರಂಟ್ ಸೀಟ್ ಸೇರಿದಂತೆ ಹಲವು ಫೀಚರ್ಸ್ ಹೊಂದಿದೆ. ಸುರಕ್ಷತೆಯ ದೃಷ್ಟಿಯಿಂದ 6 ಏರ್‌ಬ್ಯಾಗ್ಸ್, ABS (ಆಂಟಿಲಾಕ್ ಬ್ರೇಕಿಂಗ್ ಸಿಸ್ಟಮ್), TPMS (ಟೈರ್ ಪ್ರೆಶರ್ ಮಾನಿಟರಿಂಗ್ ಸಿಸ್ಟಮ್) ಒಳಗೊಂಡಿದೆ.

ಟೊಯೊಟಾ ಇತ್ತೀಚೆಗೆ ಸಿಎನ್‌ಜಿ ಆಯ್ಕೆಯಲ್ಲೂ ಅರ್ಬನ್ ಕ್ರೂಸರ್ ಹೈರೈಡರ್ ಎಸ್‌ಯುವಿಯನ್ನು ಭಾರತದ ಮಾರುಕಟ್ಟೆಯಲ್ಲಿ ಬಿಡುಗಡೆ ಮಾಡಿತ್ತು. ಇದು G ಹಾಗೂ S ಎಂಬ ಎರಡು ರೂಪಾಂತರದ ಆಯ್ಕೆಯಲ್ಲಿ ಖರೀದಿಗೆ ಸಿಗಲಿದ್ದು, G ವೇರಿಯೆಂಟ್ ರೂ.15.29 ಲಕ್ಷ, S ವೇರಿಯೆಂಟ್ ರೂ.13.23 ಲಕ್ಷ ಎಕ್ಸ್ ಶೋರೂಂ ಬೆಲೆಯಲ್ಲಿ ದೊರೆಯಲಿದೆ. ಪೆಟ್ರೋಲ್ ಮ್ಯಾನುವಲ್ ರೂಪಾಂತರಕ್ಕಿಂತ ಕೊಂಚ ದುಬಾರಿಯಾಗಿದೆ.

ಒಟ್ಟಾರೆ, ದೇಶದಲ್ಲಿ ಗರಿಷ್ಠ ಕಾಯಿವಿಕೆ ಅವಧಿಯನ್ನು ಹೊಂದಿರುವ ಅರ್ಬನ್ ಕ್ರೂಸರ್ ಹೈರೈಡರ್ ಅನ್ನು ಟೊಯೊಟಾ ಕಂಪನಿ ಅರ್ಬನ್ ಕ್ರೂಸರ್ ಹೆಸರಿನಲ್ಲಿ ಒಂದೇ ಎಂಜಿನ್ ಆಯ್ಕೆಯಲ್ಲಿ ಬಿಡುಗಡೆ ಮಾಡಿದೆ. ಆದರೆ, ಅಲ್ಲಿ ಲಾಂಚ್ ಆಗಿರುವ ಕಾರು ಕೆಲವೊಂದು ವೈಶಿಷ್ಟ್ಯಗಳನ್ನು ಕಳೆದುಕೊಂಡಿದೆ. ಆದರೂ, ಮೇಡ್ ಇನ್ ಇಂಡಿಯಾ ಎಸ್‌ಯುವಿಗೆ ಅಲ್ಲಿನ ಗ್ರಾಹಕರಿಂದ ಯಾವ ರೀತಿ ಪ್ರತಿಕ್ರಿಯೆ ಪಡೆದುಕೊಳ್ಳಲಿದೆ ಎಂಬುದನ್ನು ಕಾದುನೋಡಬೇಕಾಗಿದೆ.

Article Published On: Thursday, May 11, 2023, 22:09 [IST]
English summary
Toyota urban cruiser hyryder launched south africa details
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+