Toyota Urban Cruiser Hyryder ಬೆಲೆ ಮತ್ತೆ ಏರಿಕೆ: ಬೇಸ್ ವೇರಿಯೆಂಟ್‌ನಲ್ಲಿ ಭಾರೀ ಹೆಚ್ಚಳ
ಇದೇ ವರ್ಷದ ಆರಂಭದಲ್ಲಿ ಬೆಲೆ ಏರಿಕೆ ಕಂಡಿದ್ದ ಅರ್ಬನ್ ಕ್ರೂಸರ್ ಹೈರೈಡರ್ SUV ಬೆಲೆಯನ್ನು ಟೊಯೋಟಾ ಕಿರ್ಲೋಸ್ಕರ್ ಮೋಟಾರ್ ಮತ್ತೊಮ್ಮೆ ಏರಿಕೆ ಮಾಡಿದೆ. ಈ ಮಧ್ಯಮ ಗಾತ್ರದ SUV ಈ ವರ್ಷದ ಫೆಬ್ರವರಿ ತಿಂಗಳಿನಲ್ಲಿ ತನ್ನ ಮೊದಲ ಬೆಲೆ ಏರಿಕೆಯನ್ನು ಕಂಡಿತ್ತು.
ಟೊಯೋಟಾ ಕಿರ್ಲೋಸ್ಕರ್ ಮೋಟಾರ್ ಜುಲೈ 2022 ರಲ್ಲಿ ಹೊಸ ಅರ್ಬನ್ ಕ್ರೂಸರ್ ಹೈರೈಡರ್ SUV ಅನ್ನು ಭಾರತೀಯ ಮಾರುಕಟ್ಟೆಯಲ್ಲಿ ಪರಿಚಯಿಸಿತು. ಬಳಿಕ 2023 ಫೆಬ್ರವರಿಯಲ್ಲಿ ಮೊದಲ ಬಾರಿಗೆ ಬೆಲೆ ಏರಿಕೆ ಮಾಡಲಾಯಿತು. ಇದೀಗ ಮತ್ತೊಮ್ಮೆ ಟೊಯೊಟಾ ಕಂಪನಿಯು ಅರ್ಬನ್ ಕ್ರೂಸರ್ ಹೈರೈಡರ್ ಬೆಲೆಯನ್ನು 60,000 ರೂ. ವರೆಗೆ ಹೆಚ್ಚಿಸಿದೆ.

ಹೊಸ ಬೆಲೆ:
ಟೊಯೋಟಾ ಅರ್ಬನ್ ಕ್ರೂಸರ್ ಹೈರೈಡರ್ ಬೆಲೆಗಳನ್ನು ರೂಪಾಂತರದ ಆಧಾರದ ಮೇಲೆ 2,000 ರಿಂದ 60,000 ರೂ. ಹೆಚ್ಚಿಸಲಾಗಿದೆ. ಪ್ರವೇಶ ಮಟ್ಟದ S ಹೈಬ್ರಿಡ್ ರೂಪಾಂತರವು ಗರಿಷ್ಠ 60,000 ರೂ. ಹೆಚ್ಚಳವಾಗಿದೆ. ಇತರ ಎರಡು ಹೈಬ್ರಿಡ್ ರೂಪಾಂತರಗಳ ಬೆಲೆಗಳು ತಲಾ 25,000 ರೂ. ಹೆಚ್ಚಳ ಕಂಡಿವೆ.
ಮೈಲ್ಡ್ ಹೈಬ್ರಿಡ್ ರೂಪಾಂತರಗಳಿಗೆ ಸಂಬಂಧಿಸಿದಂತೆ, ಬೇಸ್ E ಟ್ರಿಮ್ ಗರಿಷ್ಠ 25,000 ರೂ.ಗಳ ಹೆಚ್ಚಳವಾಗಿದೆ. S ಟ್ರಿಮ್ ರೂ. 20,000 ರಷ್ಟು ದುಬಾರಿಯಾಗಿದ್ದು, G ಮತ್ತು V ಟ್ರಿಮ್‌ಗಳು ಕನಿಷ್ಠ ರೂ. 2,000 ಹೆಚ್ಚಳವನ್ನು ಕಂಡಿವೆ. ಇದು ಮೈಲ್ಡ್ ಹೈಬ್ರಿಡ್ ರೂಪಾಂತರಗಳ ಪರಿಚಯಾತ್ಮಕ ಬೆಲೆಯ ಅಂತ್ಯವನ್ನು ಸಹ ಸೂಚಿಸುತ್ತಿದೆ.

ಸದ್ಯ ಪೆಟ್ರೋಲ್ ಮತ್ತು ಹೈಬ್ರಿಡ್ ರೂಪಾಂತರಗಳು ಈಗ ರೂ. 10.73 ಲಕ್ಷದಿಂದ ಆರಂಭವಾಗಿ ರೂ. 19.74 ಲಕ್ಷದವರೆಗೆ ಮತ್ತು ಸಿಎನ್‌ಜಿ ರೂಪಾಂತರಗಳು ರೂ. 13.43 ಲಕ್ಷದಿಂದ ಆರಂಭವಾಗಿ ರೂ. 15.31 ಲಕ್ಷದವರೆಗೆ ಹೋಗುತ್ತದೆ. ಎಲ್ಲಾ ಬೆಲೆಗಳು ಎಕ್ಸ್ ಶೋ ರೂಂ ಆಗಿವೆ. ಉಳಿದಂತೆ ಕಾರಿನಲ್ಲಿ ಯಾವುದೇ ಬದಲಾವಣೆಗಳು ಆಗಿಲ್ಲ.
ಹೈರೈಡರ್ ವಿಶೇಷತೆಗಳು:
ಟೊಯೊಟಾ ಹೈರೈಡರ್‌ನ ಹುಡ್ ಅಡಿಯಲ್ಲಿ 1.5-ಲೀಟರ್ ಪೆಟ್ರೋಲ್ ಪವರ್‌ಟ್ರೇನ್ ಇದ್ದು ಇದನ್ನು ಮೈಲ್ಡ್ ಮತ್ತು ಆಟೋ ಚಾರ್ಜಿಂಗ್ ಸ್ಟ್ರಾಂಗ್ ಹೈಬ್ರಿಡ್ ತಂತ್ರಜ್ಞಾನಗಳೊಂದಿಗೆ ನೀಡಲಾಗುತ್ತದೆ. ಮೈಲ್ಡ್ ಹೈಬ್ರಿಡ್ ಪವರ್‌ಟ್ರೇನ್ ಮಾರುತಿ ಸುಜುಕಿ ಬ್ರೆಝಾದಲ್ಲಿ ಕಂಡುಬರುವಂತೆಯೇ ಇದೆ. ಸ್ಟ್ರಾಂಗ್-ಹೈಬ್ರಿಡ್ 116PS ಪವರ್ ಉತ್ಪಾದನೆಯೊಂದಿಗೆ 27.97kmpl ನಷ್ಟು ಮೈಲೇಜ್ ನೀಡಲಿದೆ ಎಂದು ಕಂಪನಿ ಹೇಳಿಕೊಂಡಿದೆ.

ಟೊಯೋಟಾ ಅರ್ಬನ್ ಕ್ರೂಸರ್ ಹೈರೈಡರ್‌ನಲ್ಲಿ ಇ, ಎಸ್, ಜಿ, ವಿ ಟ್ರಿಮ್‌ಗಳು ಮಾತ್ರ ಮೈಲ್ಡ್ ಹೈಬ್ರಿಡ್ ಪವರ್‌ಟ್ರೇನ್ ಹೊಂದಿದದ್ದರೇ ಎಸ್, ಜಿ ಮತ್ತು ವಿ ಟ್ರಿಮ್‌ಗಳಲ್ಲಿ ಮಾತ್ರ ಸ್ಟ್ರಾಂಗ್ ಹೈಬ್ರಿಡ್ ಪವರ್‌ಟ್ರೇನ್ ನೊಂದಿಗೆ ಲಭ್ಯವಿದೆ. ಮೈಲ್ಡ್ ಹೈಬ್ರಿಡ್ ವೇರಿಯೆಂಟ್‌ಗಳಿಗಾಗಿ 6 ಸ್ಪೀಡ್ ಮ್ಯಾನುವಲ್ ಮತ್ತು ಆಟೋಮ್ಯಾಟಿಕ್ ಟ್ರಾನ್ಸ್‌ಮಿಷನ್‌ನೊಂದಿಗೆ ಬರುತ್ತದೆ.
ಸ್ರಾಂಗ್ ಹೈಬ್ರಿಡ್ ಇ ಸಿವಿಟಿ (ಸಿಂಗಲ್-ಸ್ಪೀಡ್ ಟ್ರಾನ್ಸ್ಮಿಷನ್) ಅನ್ನು ಪಡೆಯುತ್ತದೆ. ಹೈರೈಡರ್‌ನ ಮೈಲ್ಡ್ ಹೈಬ್ರಿಡ್ ಮ್ಯಾನುವಲ್ ರೂಪಾಂತರಗಳು ಆಲ್ ವೀಲ್ ಡ್ರೈವ್‌ಟ್ರೇನ್ ಆಯ್ಕೆಯನ್ನು ಸಹ ಪಡೆಯುತ್ತವೆ. ಹೈರೈಡರ್ ಕಿಯಾ ಸೆಲ್ಟೋಸ್, ಹ್ಯುಂಡೈ ಕ್ರೆಟಾ, ಫೋಕ್ಸ್ ವ್ಯಾಗನ್ ಟೈಗನ್ ಮತ್ತು ಸ್ಕೋಡಾ ಕುಶಾಕ್ ನಂತಹ ಕಾರುಗಳೊಂದಿಗೆ ಸೆಗ್ಮೆಂಟ್ ನಲ್ಲಿ ಸ್ಪರ್ಧಿಸುತ್ತಿದೆ.


Click it and Unblock the Notifications








