ಎಲೆಕ್ಟ್ರಿಕ್ ಕಾರು ವಿಭಾಗದಲ್ಲಿ ಟಾಟಾ ಪಾರುಪತ್ಯ: ಸೆಡ್ಡು ಹೊಡೆಯಲು ಸಜ್ಜಾಗುತ್ತಿದೆ ಮಾರುತಿ, ಟೊಯೊಟಾ

ಭಾರತದಲ್ಲಿ ಎಲೆಕ್ಟ್ರಿಕ್ ಕಾರುಗಳಿಗೆ ಭಾರೀ ಬೇಡಿಕೆಯನ್ನು ಪಡೆದುಕೊಳ್ಳುತ್ತಿದೆ. ಸದ್ಯ ದೇಶಿಯ ಮಾರುಕಟ್ಟೆಯ ಎಲೆಕ್ಟ್ರಿಕ್ ಕಾರುಗಳ ವಿಭಾಗದಲ್ಲಿ ಟಾಟಾ ಮೋಟಾರ್ಸ್ ಪಾರುಪತ್ಯ ಸಾಧಿಸುತ್ತಿದೆ. ಇದೀಗ ಟೊಯೊಟಾ ಕಂಪನಿಯು ಹೊಸ ಎಲೆಕ್ಟ್ರಿಕ್ ಕಾರನ್ನು ಬಿಡುಗಡೆಗೊಳಿಸಲು ಸಜ್ಜಾಗುತ್ತಿದೆ. ಟೊಯೊಟಾ ಅರ್ಬನ್ (Toyota Urban) ಎಸ್‌ಯುವಿ ಕಾನ್ಸೆಪ್ಟ್ ಎಂಬ ಹೆಸರನ್ನು ನೀಡಲಾಗಿದೆ.

ಹೊಸ ಟೊಯೊಟಾ ಎಲೆಕ್ಟ್ರಿಕ್ ಎಸ್‍ಯುವಿಯು ಮಾರುತಿ ಸುಜುಕಿ ಇವಿಎಕ್ಸ್ ಇವಿಯನ್ನು ಆಧಾರವಾಗಿರುವ -ಹೊಸ ಬಾರ್ನ್-ಎಲೆಕ್ಟ್ರಿಕ್ ಪ್ಲಾಟ್‌ಫಾರ್ಮ್ ಅನ್ನು ಆಧರಿಸಿದೆ. ಟೊಯೊಟಾ ಅರ್ಬನ್ ಎಸ್‌ಯುವಿ ಕಾನ್ಸೆಪ್ಟ್ ಆಧಾರಿತ ಎಸ್‌ಯುವಿ ಮಾರುತಿ ಇವಿಎಕ್ಸ್‌ನೊಂದಿಗೆ ಸಾಕಷ್ಟು ಯುನಿಟ್ ಗಳು ಹಂಚಿಕೊಳ್ಳುತ್ತದೆ ಮತ್ತು ಈ ಪ್ರಕ್ರಿಯೆಯು ಸ್ಪರ್ಧಾತ್ಮಕ ಬೆಲೆಯನ್ನು ಸಾಧಿಸಲು ಸಹಾಯ ಮಾಡುತ್ತದೆ. ಎರಡೂ ಮಾದರಿಗಳು ಪ್ಲಾಟ್‌ಫಾರ್ಮ್, ಪವರ್‌ಟ್ರೇನ್ ಸೆಟಪ್ ಮತ್ತು ಬಾಡಿ ಪ್ಯಾನೆಲ್‌ಗಳ ಜೊತೆಗೆ ಆಂತರಿಕ ವಿನ್ಯಾಸವನ್ನು ಹಂಚಿಕೊಳ್ಳುತ್ತವೆ.

Toyota Urban

ವಿನ್ಯಾಸ: ಹೊಸ ಟೊಯೊಟಾ ಎಲೆಕ್ಟ್ರಿಕ್ ಕಾರು ಒಟ್ಟಾರೆ ಪ್ರೊಫೈಲ್ eVX ಕಾನ್ಸೆಪ್ಟ್ ಮಾದರಿಗೆ ಹೋಲುತ್ತದೆ. ಟೊಯೊಟಾದ ಮುಂಭಾಗದಲ್ಲಿ ಟೊಯೊಟಾದ ಸಿಗ್ನೇಚರ್ ಸ್ಟೈಲಿಂಗ್‌ನೊಂದಿಗೆ ಬರುತ್ತದೆ. ಟೊಯೊಟಾ ಅರ್ಬನ್ ಎಸ್‌ಯುವಿ ಕಾನ್ಸೆಪ್ಟ್ ಫ್ರಂಟ್ ಫ್ಯಾಸಿಕಾವು ಸಿ-ಆಕಾರದ ಹೆಡ್‌ಲ್ಯಾಂಪ್‌ಗಳು, ಕ್ಲೋಸ್-ಆಫ್ ಫ್ರಂಟ್ ಗ್ರಿಲ್ ಮತ್ತು ಕ್ಲೀನರ್ ಬಂಪರ್‌ನೊಂದಿಗೆ ಬರುತ್ತದೆ.

ಈ ಟೊಯೊಟಾ ಅರ್ಬನ್ ಎಲೆಕ್ಟ್ರಿಕ್ ಎಸ್‍ಯುವಿಯು ವ್ಹೀಲ್ ಅರ್ಚರ್ ಗಳನ್ನು ಹೊಂದಿದೆ ಮತ್ತು ಅದರ ಸುತ್ತಲೂ ಕ್ಲಾಡಿಂಗ್ ಅನ್ನು ಹೊಂದಿದೆ. ಇನ್ನು ಈ ಎಲೆಕ್ಟ್ರಿಕ್ ಕಾರಿನಲ್ಲಿ ಡೋರ್ ಹ್ಯಾಂಡಲ್ ಗಳನ್ನು C-ಪಿಲ್ಲರ್‌ನಲ್ಲಿ ಸಂಯೋಜಿಸಲಾಗಿದೆ. ಹಿಂಭಾಗದಲ್ಲಿ, ಮಾರುತಿ eVX ಮಾದರಿಗೆ ಹೋಲಿಸಿದರೆ ಟೊಯೊಟಾ ಎಲೆಕ್ಟ್ರಿಕ್ ಎಸ್‍ಯುವಿಯು ಪರಿಷ್ಕೃತ ಹಿಂಭಾಗದ ಬಂಪರ್ ಮತ್ತು ಟೈಲ್‌ಗೇಟ್ ಅನ್ನು ಪಡೆಯುತ್ತದೆ.

Toyota Urban

ಅಯಾಮಗಳು: ಹೊಸ ಟೊಯೊಟಾ ಎಲೆಕ್ಟ್ರಿಕ್ ಎಸ್‍ಯುವಿಯು 4300 ಎಂಎಂ ಉದ್ದ, 1820 ಎಂಎಂ ಅಗಲ ಮತ್ತು 1620 ಎಂಎಂ ಎತ್ತರವನ್ನು ಹೊಂದಿದೆ. ಇನ್ನು EVX ಮಾದರಿಗೆ ಹೋಲಿಸಿದರೆ ಹೊಸ ಮಾದರಿಯು 20mm ಅಗಲ ಮತ್ತು ಎತ್ತರ ಕಡಿಮೆಯಾಗಿದೆ. ಇನ್ನು ಉದ್ದವು ಒಂದೇ ಆಗಿರುತ್ತದೆ. ಮಾರುತಿ ಮತ್ತು ಟೊಯೊಟಾ ಎಲೆಕ್ಟ್ರಿಕ್ ಎಸ್‍ಯುವಿಗಳು ಹೊಸ ಸ್ಕೇಟ್‌ಬೋರ್ಡ್ ಪ್ಲಾಟ್‌ಫಾರ್ಮ್ ಅನ್ನು ಆಧರಿಸಿವೆ.

ಈ ಹೊಸ ಪ್ಲಾಟ್‌ಫಾರ್ಮ್ ಸುಜುಕಿ ಮತ್ತು ಟೊಯೊಟಾ ಎಲೆಕ್ಟ್ರಿಕ್ ವಾಹನಗಳನ್ನು ಸಹ ಬೆಂಬಲಿಸುತ್ತದೆ. ಆಂತರಿಕವಾಗಿ 27PL ಎಂದು ಕರೆಯಲ್ಪಡುವ ಹೊಸ ಸ್ಕೇಟ್‌ಬೋರ್ಡ್ ಪ್ಲಾಟ್‌ಫಾರ್ಮ್ ಅನ್ನು ಟೊಯೋಟಾದ 40PL ಎಲೆಕ್ಟ್ರಿಕ್ ಸ್ಕೇಟ್‌ಬೋರ್ಡ್ ಆರ್ಕಿಟೆಕ್ಚರ್‌ನಿಂದ ಪಡೆಯಲಾಗಿದೆ. eVX-ಆಧಾರಿತ ಎಸ್‍ಯುವಿ ಪ್ರೀಮಿಯಂ ಆಂತರಿಕ ಜೊತೆಗೆ ಉತ್ತಮ ಸೌಕರ್ಯ ಮತ್ತು ಅನುಕೂಲತೆಯ ವೈಶಿಷ್ಟ್ಯಗಳೊಂದಿಗೆ ಬರುತ್ತದೆ.

Toyota Urban

ಟೊಯೊಟಾ ಅರ್ಬನ್ ಎಸ್‌ಯುವಿ ಕಾನ್ಸೆಪ್ಟ್ ಮುಂಭಾಗದ ವ್ಹೀಲ್ ಮತ್ತು ಆಲ್-ವೀಲ್ ಡ್ರೈವ್ ಆಯ್ಕೆಗಳೊಂದಿಗೆ ನೀಡಲಾಗುವುದು ಎಂದು ನಿರೀಕ್ಷಿಸಲಾಗಿದೆ. AWD ಆಯ್ಕೆಗಳನ್ನು ಜಾಗತಿಕ ಮಾರುಕಟ್ಟೆಗಳಲ್ಲಿ ಪರಿಚಯಿಸುವ ಸಾಧ್ಯತೆಯಿದೆ. ಆಟೋ ಎಕ್ಸ್‌ಪೋ 2023 ರಲ್ಲಿ, ಮಾರುತಿ ಸುಜುಕಿ eVX ಎಲೆಕ್ಟ್ರಿಕ್ ಎಸ್‍ಯುವಿಯು 60kWh ಬ್ಯಾಟರಿ ಪ್ಯಾಕ್‌ನೊಂದಿಗೆ ಅಳವಡಿಸಲಾಗಿದೆ. ಟೊಯೊಟಾದ ಎಲೆಕ್ಟ್ರಿಕ್ ಎಸ್‌ಯುವಿಯಲ್ಲಿ ಇದೇ ಬ್ಯಾಟರಿ ಪ್ಯಾಕ್‌ ಅನ್ನು ನೀಡಲಾಗುವುದು ಎಂದು ನಿರೀಕ್ಷಿಸಲಾಗಿದೆ.

ಅರ್ಬನ್ ಎಸ್‌ಯುವಿ ಕಾನ್ಸೆಪ್ಟ್ ಸಿಂಗಲ್ ಚಾರ್ಜ್‌ನಲ್ಲಿ 400-500 ಕಿಮೀ ರೇಂಜ್ ಅನ್ನು ನೀಡುವ ಸಾಧ್ಯತೆಯಿದೆ. ಟೊಯೊಟಾ ಯುರೋಪ್‌ಗಾಗಿ 3 ಎಲೆಕ್ಟ್ರಿಕ್ ಎಸ್‌ಯುವಿಗಳನ್ನು ಸಿದ್ಧಪಡಿಸುತ್ತಿದೆ ಮತ್ತು ಅರ್ಬನ್ ಎಸ್‌ಯುವಿ ಕಾನ್ಸೆಪ್ಟ್ ಆಧಾರಿತ ಮಾದರಿಯು ಅವುಗಳಲ್ಲಿ ಒಂದಾಗಲಿದೆ. ಅರ್ಬನ್ ಎಸ್‌ಯುವಿ ಕಾನ್ಸೆಪ್ಟ್ ಭಾರತದಲ್ಲಿಯೂ ಬಿಡುಡೆಯಾಗಲಿದೆ. ಅರ್ಬನ್ ಎಸ್‌ಯುವಿ ಎಲೆಕ್ಟ್ರಿಕ್‌ನ ಪ್ರಮುಖ ವಿವರಗಳನ್ನು 2024 ರಲ್ಲಿ ಬಹಿರಂಗಪಡಿಸಲಾಗುವುದು ಎಂದು ಟೊಯೊಟಾ ಖಚಿತಪಡಿಸಿದೆ.

ಡ್ರೈವ್‌ಸ್ಪಾರ್ಕ್ ಕನ್ನಡ ವೆಬ್‌ಸೈಟ್ ತ್ವರಿತ ಆಟೋಮೊಬೈಲ್ ಸುದ್ದಿಗಳನ್ನು ಒದಗಿಸುತ್ತದೆ, ಎಲ್ಲಾ ಸಾಮಾಜಿಕ ಮಾಧ್ಯಮಗಳ ಮೂಲಕ ತಕ್ಷಣವೇ ಓದುಗರೊಂದಿಗೆ ಸುದ್ದಿಗಳನ್ನು ಹಂಚಿಕೊಳ್ಳುತ್ತದೆ. ಇತ್ತೀಚಿನ ಕಾರು, ಬೈಕ್ ಸುದ್ದಿ, ಟೆಸ್ಟ್ ಡ್ರೈವ್ ವರದಿಗಳು ಮತ್ತು ವೀಡಿಯೊಗಳನ್ನು ಪಡೆಯಲು ನಮ್ಮ ಫೇಸ್‌ಬುಕ್, ಇನ್‌ಸ್ಟಾಗ್ರಾಮ್ ಮತ್ತು ಯೂಟ್ಯೂಬ್ ಪೇಜ್‌ಗಳೊಂದಿಗೆ ಸಂಪರ್ಕದಲ್ಲಿರಿ. ನಿಮಗೆ ಯಾವುದೇ ಸುದ್ದಿ ಇಷ್ಟವಾದರೆ ಲೈಕ್, ಕಾಮೆಂಟ್ ಮಾಡುವುದನ್ನು ಮರೆಯದಿರಿ. ಜೊತೆಗೆ ನಿಮ್ಮ ಸ್ನೇಹಿತರಿಗೂ ತಪ್ಪದೆ ಶೇರ್ ಮಾಡಲು ಮರೆಯದಿರಿ.

Article Published On: Wednesday, December 6, 2023, 11:18 [IST]
English summary
Toyota urban suv concept top things details
Read more on ಟೊಯೊಟಾ toyota
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+