ಈ ಜನಪ್ರಿಯ ಟೊಯೊಟಾ ಕಾರಿನ ಬೆಲೆ ರೂ.2.10 ಲಕ್ಷ ಏರಿಕೆ
ಜಪಾನ್ ಮೂಲದ ವಾಹನ ತಯರಾಕ ಕಂಪನಿಯಾದ ಟೊಯೊಟಾ ಭಾರತೀಯ ಮಾರುಕಟ್ಟೆಯಲ್ಲಿ ಮಾರಾಟ ಮಾಡುವ ಅತ್ಯಂತ ಪ್ರೀಮಿಯಂ ಕಾರು ವೆಲ್‌ಫೈರ್ ಆಗಿದೆ. ಟೊಯೊಟಾ ವೆಲ್‌ಫೈರ್ ಭಾರತೀಯ ಮಾರುಕಟ್ಟೆಯಲ್ಲಿ ಮರ್ಸಿಡಿಸ್ ಬೆಂಝ್ ವಿ-ಕ್ಲಾಸ್ ಕಾರಿಗೆ ಪೈಪೋಟಿ ನೀಡುತ್ತದೆ. ಇದೀಗ ಟೊಯೊಟಾ ಕಂಪನಿಯು ಈ ವೆಲ್‌ಫೈರ್ ಕಾರಿನ ಬೆಲೆಯನ್ನು ಹೆಚ್ಚಿಸಿದೆ.
ಭಾರತದಲ್ಲಿ CBU ಮಾದರಿಯಾಗಿ ನೀಡಲಾಗುವ ಈ ವೆಲ್‌ಫೈರ್ ಎಂಪಿವಿಯ ಬೆಲೆಯನ್ನು ರೂ.2.10 ಲಕ್ಷಗಳಷ್ಟು ಹೆಚ್ಚಿಸಿದೆ. ಈ ವೆಲ್‌ಫೈರ್ ಕಾರನ್ನು 'ಹೈಬ್ರಿಡ್' ರೂಪಾಂತರದಲ್ಲಿ ನೀಡಲಾಗುತ್ತಿದೆ. ಬೆಲೆ ಏರಿಕೆಯ ಬಳಿಕ ಈ ಟೊಯೊಟಾ ವೆಲ್‌ಫೈರ್ ಕಾರಿನ ಬೆಲೆಯು ಎಕ್ಸ್ ಶೋರೂಂ ಪ್ರಕಾರ ರೂ.96.55 ಲಕ್ಷವಾಗಿದೆ. ಟೊಯೊಟಾ ವೆಲ್‌ಫೈರ್ ಭಾರತೀಯ ಮಾರುಕಟ್ಟೆಯಲ್ಲಿ ಹೆಚ್ಚಿನ ಬೇಡಿಕೆಯನ್ನು ಪಡೆದುಕೊಳ್ಳುವುದರಲ್ಲಿ ಯಶಸ್ವಿಯಾಗಿದೆ.

ಅತ್ಯಾಧುನಿಕ ಫೀಚರ್ಸ್ ಮತ್ತು ತಂತ್ರಜ್ಙಾನವನ್ನು ಒಳಗೊಂಡಿರುವ ವೆಲ್‌ಫೈರ್ ಪ್ರೀಮಿಯಂ ಕಾರು ಗ್ರಾಹಕರನ್ನು ಆಕರ್ಷಿಸುತ್ತಿದೆ. ಐಷಾರಾಮಿ ಟೊಯೊಟಾ ವೆಲ್‌ಫೈರ್ ಮಾದರಿಯು ಎಕ್ಸಿಕ್ಯುಟಿವ್ ಲೌಂಜ್ ಎಂಬ ಒಂದೇ ರೂಪಾಂತರದಲ್ಲಿ ಲಭ್ಯವಿದೆ. ಈ ಟೊಯೊಟಾ ವೆಲ್‌ಫೈರ್ ಕಾರಿನಲ್ಲಿ 2.5 ಲೀಟರ್ ನಾಲ್ಕು ಸಿಲಿಂಡರ್ ಪೆಟ್ರೋಲ್ ಎಂಜಿನ್ ಅನ್ನು ಅಳವಡಿಸಲಾಗಿದೆ. ಇದು ಎರಡು ಎಲೆಕ್ಟ್ರಿಕ್ ಮೋಟರ್‌ಗಳೊಂದಿಗೆ ಜೋಡಿಸಲ್ಪಟ್ಟಿದೆ,
ಇದು ಎಂಜಿನ್ ಒಟ್ಟಾಗಿ 198 ಬಿಹೆಚ್‍ಪಿ ಪವರ್ ಮತ್ತು 235 ಎನ್ಎಂ ಪೀಕ್ ಟಾರ್ಕ್ ಅನ್ನು ಉತ್ಪಾದಿಸುತ್ತದೆ. ಈ ಎಂಜಿನ್ ಅನ್ನು ಸಿವಿಟಿ ಗೇರ್‌ಬಾಕ್ಸ್‌ಗೆ ಜೋಡಿಸಲಾಗಿದೆ. ಈ ಪ್ರೀಮಿಯಂ ವೆಲ್‌ಫೈರ್ ಕಾರಿನ ಒಳಭಾಗದಲ್ಲಿ ಎರಡನೇ ಸಾಲಿನಲ್ಲಿ ಎರಡು ಬೆಲೆಬಾಳುವ ಎಲೆಕ್ಟ್ರಿಕ್ ಆಗಿ ಅಡೆಜೆಸ್ಟ್ ಮಾಡುವ ವಿಐಪಿ ಸೀಟುಗಳನು ಒಳಗೊಂಡಿವೆ. ಇನ್ನು ಇದರಲ್ಲಿ ಕೂಲಿಂಗ್ ಫಂಕ್ಷನ್ ಅನ್ನು ಕೂಡ ಒಳಗೊಂಡಿದೆ. ಜೊತೆಗೆ ಲೆಗ್ ರೆಸ್ಟ್ ಮತ್ತು ರೆಕ್ಲೈನಬಲ್ ಬ್ಯಾಕ್‌ರೆಸ್ಟ್ ಮತ್ತು ಮೆಮೊರಿ ಫಂಕ್ಷನ್ ಅನ್ನು ಒಳಗೊಂಡಿದೆ.
ಈ ಐಷಾರಾಮಿ ವೆಲ್‌ಫೈರ್ ಎಂಪಿವಿಯಲ್ಲಿ 10 ಇಂಚಿನ ಟಚ್‌ಸ್ಕ್ರೀನ್ ಇನ್ಫೋಟೈನ್‌ಮೆಂಟ್ ಸಿಸ್ಟಂ ನೊಂದಿಗೆ ಆಂಡ್ರಾಯ್ಡ್ ಆಟೋ ಮತ್ತು ಆಪಲ್ ಕಾರ್ ಪ್ಲೇಯೊಂದಿಗೆ 13 ಇಂಚಿನ ಹಿಂಭಾಗದ ಡಿಸ್ ಪ್ಲೇಯನ್ನು ರೂಫ್ ಮೇಲೆ ನೀಡಲಾಗಿದೆ. ಇದರೊಂದಿಗೆ ಈ ಎಂಪಿವಿಯಲ್ಲಿ ಸ್ಪೀಕರ್ ಜೆಬಿಎಲ್ ಸೌಂಡ್ ಸಿಸ್ಟಂ, ಎರಡನೇ ಮತ್ತು ಮೂರನೇ ಸಾಲುಗಳಿಗೆ ಸನ್ ಬ್ಲೈಂಡ್ಸ್, 16-ಬಣ್ಣದ ಆಂಬಿಯೆಂಟ್ ಲೈಟಿಂಗ್, ಮೂರು ಹಂತಹ ಆಟೋ ಕ್ಲೈಮೇಟ್ ಕಂಟ್ರೋಲ್, ಆಟೋಮ್ಯಾಟಿಕ್ ಎಲ್ಇಡಿ ಹೆಡ್‌ಲ್ಯಾಂಪ್‌ಗಳುನ್ನು ಒಳಗೊಂಡಿದೆ.
ಸುರಕ್ಷತೆಗಾಗಿ ಈ ಐಷಾರಾಮಿ ವೆಲ್‌ಫೈರ್ ಕಾರಿನಲ್ಲಿ, 7 ಏರ್‌ಬ್ಯಾಗ್‌ಗಳು, ಪನೋರಮಿಕ್ ವ್ಯೂ ಮಾನಿಟರ್, ಫ್ರಂಟ್ ಮತ್ತು ರಿಯರ್ ಪಾರ್ಕಿಂಗ್ ಸೆನ್ಸರ್‌ಗಳನ್ನು ಹೊಂದಿವೆ. ಇದರ ಜೊತೆಗೆ ಎಬಿಎಸ್ ವಿಥ್ ಇಬಿಡಿ ಮತ್ತು ಬ್ರೇಕ್ ಅಸಿಸ್ಟ್, ವೆಹಿಕಲ್ ಡೈನಾಮಿಕ್ ಇಂಟಿಗ್ರೇಟೆಡ್ ಮ್ಯಾನೇಜ್‌ಮೆಂಟ್, ವೆಹಿಕಲ್ ಸ್ಟೆಬಿಲಿಟಿ ಕಂಟ್ರೋಲ್, ಹಿಲ್ ಸ್ಟಾರ್ಟ್ ಅಸಿಸ್ಟ್ ಕಂಟ್ರೋಲ್, ಬ್ರೇಕ್ ಹೋಲ್ಡ್, ಟೈರ್ ಪ್ರೆಶರ್ ಮಾನಿಟರಿಂಗ್ ಸಿಸ್ಟಮ್ ಮತ್ತು ಇನ್ನಷ್ಟು ಅತ್ಯಾಧುನಿಕ ಸುರಕ್ಷತಾ ಫೀಚರ್ಸ್ ಗಳನ್ನು ನೀಡಿದೆ.
ಟೊಯೊಟಾ ಕಂಪನಿಯು ತನ್ನ ಇನ್ನೋವಾ ಹೈಕ್ರಾಸ್ ಎಂಪಿವಿಯ ಬೆಲೆಯನ್ನು ಹೆಚ್ಚಿಸಿತು, ಇದರ ಏಳು ಆಸನಗಳ G ಪೆಟ್ರೋಲ್ ಆವೃತ್ತಿ ಬೆಲೆ ರೂ.25,000 ಏರಿಕೆಯಾಗಿ ಎಕ್ಸ್ ಶೋರೂಂ ದರ ರೂ.18.55 ಲಕ್ಷಕ್ಕೆ ತಲುಪಿದೆ. ಅದೇ ರೀತಿಯಲ್ಲಿ ಎಂಟು ಆಸನಗಳ G, ಏಳು ಆಸನಗಳ GX ಹಾಗೂ ಎಂಟು ಆಸನ ಆಯ್ಕೆಯನ್ನು ಹೊಂದಿರುವ GX ದರಗಳು ಕ್ರಮವಾಗಿ ರೂ.18.60 ಲಕ್ಷ, ರೂ.19.40 ಲಕ್ಷ ಮತ್ತು ರೂ.19.45 ಲಕ್ಷವಾಗಿದೆ.
ಇದರಿಂದಾಗಿ ಪೆಟ್ರೋಲ್ ಆವೃತ್ತಿಗಳ ಬೆಲೆಯು ಶೇಕಡ 1.3% ಏರಿಕೆಯಾಗಿದ್ದು, ಸ್ಟ್ರಾಂಗ್ ಹೈಬ್ರಿಡ್ ಪೆಟ್ರೋಲ್ ಆವೃತ್ತಿಗಳ ದರವನ್ನು ಗರಿಷ್ಠ ಪ್ರಮಾಣದಲ್ಲಿ ಹೆಚ್ಚಳವಾಗಿದೆ ಎಂದು ವರದಿಯಾಗಿದೆ. ಏಳು ಆಸನಗಳ VX ಸ್ಟ್ರಾಂಗ್ ಹೈಬ್ರಿಡ್ ಪೆಟ್ರೋಲ್ ರೂಪಾಂತರದ ಬೆಲೆ ರೂ.75,000 ಏರಿಕೆಯಾಗುವ ಮೂಲಕ ಎಕ್ಸ್ ಶೋರೂಂ ಬೆಲೆ ರೂ.24.76 ಲಕ್ಷಕ್ಕೆ ತಲುಪಿದೆ. ಎಂಟು ಆಸನಗಳ VX ರೂಪಾಂತರದ ಬೆಲೆ ರೂ.5,000 ಹೆಚ್ಚಾಗಿದೆ. ಇನ್ನು, ಟಾಪ್ ಎಂಡ್ ಮಾದರಿ ZX ಬೆಲೆಯು ರೂ.75,000 ಹೆಚ್ಚಳವಾಗಿದೆ.


Click it and Unblock the Notifications