ಜನಪ್ರಿಯ ಮಾರುತಿ ಸೆಲೆರಿಯೊ ಕಾರಿನ ರೀಬ್ಯಾಡ್ಜ್ ಆದ ಟೊಯೊಟಾ Vitz ಅನಾವರಣ

ದೈತ ವಾಹನ ತಯಾರಕ ಕಂಪನಿಗಳಾದ ಮಾರುತಿ ಸುಜುಕಿ ಮತ್ತು ಟೊಯೊಟಾ ನಡುವಿನ ಪಾಲುದಾರಿಕೆಯು, ಎರಡೂ ಕಂಪನಿಗಳಿಗೂ ಬಹಳ ಫಲಪ್ರದವಾಗಿದೆ. ಭಾರತೀಯ ಮಾರುಕಟ್ಟೆಯಲ್ಲಿ ಈ ಕಂಪನಿಗಳು, ವಿಟಾರಾ ಬ್ರೆಝಾ ಎಸ್‍ಯುವಿಯ ರೀಬ್ಯಾಡ್ಜ್ ಆಗಿ ಅರ್ಬನ್ ಕ್ರೂಸರ್ ಅನ್ನು ಮಾರಾಟವಾಗುತ್ತಿದ. ಇನ್ನು ಮಾರುತಿ ಬಲೆನೊ ಕಾರನ್ನು ಗ್ಲಾಂಝಾ ಎಂಬ ಹೆಸರಿನಲ್ಲಿ ಮಾರಾಟವಾಗುತ್ತಿದ.

ಟೊಯೊಟಾ ಇನೋವಾ ಹೈಕ್ರಾಸ್ ಕಾರಿನ ರೀಬ್ಯಾಡ್ಜ್ ಆಗಿ ಮಾರುತಿ ಕಾರು ಬರಲಿದೆ. ಇವುಗಳು ಒಂದೇ ರೀತಿಯ ಕಾರುಗಳಿವೆ ಆದರೆ ಬೇರೆ ಬ್ರಾಂಡ್‌ನ ಅಡಿಯಲ್ಲಿ ಮಾರಾಟ ಮಾಡುವುದರಿಂದ ಕಂಪನಿಯ ಬ್ಯಾಡ್ಜ್ ಅನ್ನು ವಿನ್ಯಾಸಗೊಳಿಸಲಾಗಿದೆ. ಮಾರುತಿ ಸುಜುಕಿ ಮತ್ತು ಟೊಯೊಟಾ ಕಂಪನಿಗಳ ನಡುವಿನ ಈ ಬ್ಯಾಡ್ಜ್ ವಿನಿಮಯ ಕಾರ್ಯಕ್ರಮವು ಕೇವಲ ಭಾರತೀಯ ಮಾರುಕಟ್ಟೆಗೆ ಸೀಮಿತವಾಗಿಲ್ಲ. ದಕ್ಷಿಣ ಆಫ್ರಿಕಾದಂತಹ ಮಾರುಕಟ್ಟೆಗಳಲ್ಲಿಯೂ ಕೂಡ ಟೊಯೊಟಾ ಸ್ಟಾರ್ಲೆಟ್ (ರೀಬ್ಯಾಡ್ಜ್ ಮಾಡಲಾದ ಬಲೆನೊ), ಅರ್ಬನ್ ಕ್ರೂಸರ್ (ರೀಬ್ಯಾಡ್ಜ್ ವಿಟಾರಾ ಬ್ರೆಜ್ಜಾ) ಮತ್ತು ರುಮಿಯಾನ್ (ರೀಬ್ಯಾಡ್ಜ್ ಎರ್ಟಿಗಾ) ಅನ್ನು ಮಾರಾಟ ಮಾಡುತ್ತದೆ.

ಮಾರುತಿ ಸೆಲೆರಿಯೊ ಕಾರಿನ ರೀಬ್ಯಾಡ್ಜ್ ಆದ ಟೊಯೊಟಾ Vitz ಅನಾವರಣ

ಇವುಗಳು ಮಾರುತಿ ಸುಜುಕಿ ಕಾರುಗಳ ರೀಬ್ಯಾಡ್ಜ್ ಆವೃತ್ತಿಗಳಾಗಿದೆ, ಅಲ್ಲದೇ ಈ ಕಾರುಗಳನ್ನು ಭಾರತದಿಂದ ರವಾನಿಸಲಾಗಿದೆ.ಇದೀಗ ಟೊಯೊಟಾ Vitz ಕಾರನ್ನು ದಕ್ಷಿಣ ಆಫ್ರಿಕಾದಲ್ಲಿ ಪ್ರದರ್ಶಿಸಲಾಗಿದೆ, ಇದು ಮೂಲತಃ ಮಾರುತಿ ಸುಜುಕಿ ಸೆಲೆರಿಯೊ ಕಾರಿನ ರೀಬ್ಯಾಡ್ಜ್ ಆವೃತ್ತಿಯಾಗಿದೆ. ಸೆಲೆರಿಯೊ ಕಾರಿಗೆ ಹೋಲಿಸಿದರೆ ಟೊಯೊಟಾ Vitz ಕಾರಿನಲ್ಲಿ ಯಾವುದೇ ಬದಲಾವಣೆಗಳನ್ನು ಹೊಂದಿಲ್ಲ. ಈ ಹೊಸ ಕಾರನ್ನು ಜೋಹಾನ್ಸ್‌ಬರ್ಗ್‌ನಲ್ಲಿ ನಡೆದ ಟೊಯೊಟಾ ಸ್ಟೇಟ್ ಆಫ್ ಮೋಟಾರ್ ಇಂಡಸ್ಟ್ರಿ (SOMI) ಸಮಾರಂಭದಲ್ಲಿ Vitz ಅನ್ನು ಇತ್ತೀಚೆಗೆ ಅನಾವರಣಗೊಳಿಸಲಾಯಿತು.

ಈ ಟೊಯೊಟಾ Vitz ಅನ್ನು ರೀಬ್ಯಾಡ್ಜ್ ಮಾಡಿದ ಸೆಲೆರಿಯೊ ಎಂದು ಬಿಡುಗಡೆಗೊಂಡ ಮೊದಲ ದೇಶ ದಕ್ಷಿಣ ಆಫ್ರಿಕಾ. ಟೊಯೋಟಾ ಇದನ್ನು 2023ರ ಎರಡನೇ ತ್ರೈಮಾಸಿಕದಲ್ಲಿ ದಕ್ಷಿಣ ಆಫ್ರಿಕಾದಲ್ಲಿ ಪ್ರಾರಂಭಿಸಲು ಯೋಜಿಸಿದೆ. ಸೆಲೆರಿಯೊವನ್ನು ಈಗಾಗಲೇ ದಕ್ಷಿಣ ಆಫ್ರಿಕಾದಲ್ಲಿ ಸುಜುಕಿ ಬ್ರಾಂಡ್‌ನಲ್ಲಿ ಬಿಡುಗಡೆ ಮಾಡಲಾಗಿದೆ. ಈ ಕಾರು 3,695 ಎಂಎಂ ಉದ್ದ, 1,655 ಎಂಎಂ ಅಗಲ, 1,555 ಎಂಎಂ ಎತ್ತರ ಮತ್ತು 2,435 ಎಂಎಂ ವ್ಹೀಲ್ ಬೆಸ್ ಅನ್ನು ಹೊಂದಿದೆ.

ಸೆಲೆರಿಯೊ ಕಾರನ್ನು ವ್ಯಾಗನ್ಆರ್, ಸ್ವಿಫ್ಟ್ ಮತ್ತು ಬಲೆನೊ ಮಾದರಿಗಳ ಉತ್ಪಾದನೆಗಾಗಿ ಬಳಕೆ ಮಾಡಲಾಗುತ್ತಿರುವ ಹಾರ್ಟ್ಟೆಕ್ ಪ್ಲ್ಯಾಟ್‌ಫಾರ್ಮ್ ಆಧರಿಸಿ ಅಭಿವೃದ್ದಿಗೊಳಿಸಿದೆ. ಈ ಪ್ಲ್ಯಾಟ್‌ಫಾರ್ಮ್ ನಿಂದಾಗಿ ಸೆಲೆರಿಯೊ ಕಾರು ಈ ಹಿಂದಿನ ಮಾದರಿಗಿಂತಲೂ ತುಸು ಹೆಚ್ಚುವರಿ ಸ್ಥಳಾವಕಾಶ ಹೊಂದಿದೆ. ಭಾರತದಲ್ಲಿ ಸೆಲೆರಿಯೊ ಏಳು ವೆರಿಯೆಂಟ್‌‌ಗಳೊಂದಿಗೆ ಆರ್ಕ್ಟಿಕ್ ವೈಟ್, ಸಿಲ್ಕಿ ಸಿಲ್ವರ್, ಗ್ಲಿಸ್ಟೆನಿಂಗ್ ಗ್ರೇ, ಸಾಲಿಡ್ ಫೈರ್ ರೆಡ್, ಸ್ಪೀಡಿ ಬ್ಲೂ ಮತ್ತು ಕೆಫೀನ್ ಬ್ರೌನ್ ಎಂಬ ಸಿಂಗಲ್ ಟೋನ್ ಬಣ್ಣಗಳ ಆಯ್ಕೆಯಲ್ಲಿ ಲಭ್ಯವಿದೆ.

ಈ ಸೆಲೆರಿಯೊ ಕಾರು ಆಕರ್ಷಕವಾದ ಗ್ರಿಲ್, ರಿಫ್ರೆಶ್‌ ಫ್ರಂಟ್ ಫಾಸಿಯಾದೊಂದಿಗೆ ಪರಿಷ್ಕೃತ ಬಂಪರ್, ವೃತ್ತಾಕಾರವಾದ ಹೆಡ್‌ಲ್ಯಾಂಪ್‌ಗಳು, ಕ್ರೋಮ್ ಸ್ಟ್ರಿಪ್ ಮೂಲಕ ಸಂಪರ್ಕ ಹೊಂದುವ ಸಿಗ್ನೇಚರ್ ಲೋಗೋ ಪಡೆದುಕೊಂಡಿದೆ. ಈ ಸೆಲೆರಿಯೊ ಕಾರಿನಲ್ಲಿ ಲೋ ಟ್ರಿಮ್‌ಗಳಿಗಾಗಿ ಸಾಧಾರಣ ಅಲಾಯ್ ವ್ಹೀಲ್ ಗಳನ್ನು ಜೋಡಿಸಿದ್ದು, ಉನ್ನತ ರೂಪಾಂತರಗಳಿಗಾಗಿ ಬ್ಲ್ಯಾಕ್ ಬಣ್ಣದ 15-ಇಂಚಿನ ಅಲಾಯ್ ವ್ಹೀಲ್ ಜೋಡಣೆಯೊಂದಿಗೆ ಅತ್ಯುತ್ತಮ ಫೀಚರ್ಸ್ ಒಳಗೊಂಡ ಇಂಟಿರಿಯರ್ ನೀಡಿದೆ. ಇದೇ ಫಿಚರ್ಸ್ ಹೊಸ ಟೊಯೊಟಾ ರೀಬ್ಯಾಡ್ಜ್ ಆವೃತ್ತಿಯಲ್ಲಿರುತ್ತದೆ.

ಈ ಕಾರಿನಲ್ಲಿ ಸ್ಮಾರ್ಟ್‌ಪ್ಲೇ ಸ್ಟುಡಿಯೋ ಇನ್ಫೋಟೈನ್‌ಮೆಂಟ್ ಸಿಸ್ಟಂ ಒಳಗೊಂಡಿರುವ 7.0-ಇಂಚಿನ ಟಚ್ ಸ್ಕ್ರೀನ್ ಇನ್ಪೋಟೈನ್‌ಮೆಂಟ್ ಸಿಸ್ಟಂ ಅನ್ನು ನೀಡಿದೆ, ಇದು ಆಪಲ್ ಕಾರ್ ಪ್ಲೇ ಮತ್ತು ಮತ್ತು ಆಂಡ್ರಾಯ್ಡ್ ಆಟೋ ಕನೆಕ್ಟಿವಿಟಿ ಫೀಚರ್ಸ್ ಸಹ ಒಳಗೊಂಡಿರುತ್ತದೆ. ಈ ಕಾರಿನಲ್ಲಿ ಆಲ್ ಬ್ಲ್ಯಾಕ್ ಥೀಮ್ ಹೊಂದಿರುವ ಒಳಾಂಗಣ ಸೌಲಭ್ಯದೊಂದಿಗೆ ಫ್ಲಕ್ಸ್ ಅಲ್ಯುನಿಯಂ ಆಕ್ಸೆಂಟ್ ಜೊತೆಗೆ ಸ್ಟ್ರೀರಿಂಗ್ ವ್ಹೀಲ್, ಎಸಿ ವೆಂಟ್ಸ್, ಸೆಂಟರ್ ಕನ್ಸೊಲ್, ಸ್ಟಾರ್ಟ್/ಸ್ಟಾಪ್ ಬಟನ್, ಎಲೆಕ್ಟ್ರಿಕ್ ಮೂಲಕ ಹೊಂದಾಣಿಕೆ ಮಾಡಬಹುದಾದ ರಿಯಲ್ ವ್ಯೂ ಮಿರರ್, ಕೀ ಲೆಸ್ ಎಂಟ್ರಿ ಜೊತೆಗೆ ಮ್ಯಾನುವಲ್ ಎಸಿ ಕಂಟ್ರೋಲ್ ಯನಿಟ್ ಹೊಂದಿದೆ.

ಹೊಸ ಟೊಯೊಟಾ Vitz ಕಾರಿನಲ್ಲಿ ಸುರಕ್ಷತೆಗಾಗಿ ಡ್ಯುಯಲ್ ಏರ್‌ಬ್ಯಾಗ್, ಎಬಿಎಸ್ ಜೊತೆ ಇಬಿಡಿ, ಬ್ರೇಕ್ ಅಸಿಸ್ಟ್, ರಿಯರ್ ಪಾರ್ಕಿಂಗ್ ಸೆನ್ಸಾರ್ ಜೊತೆಗೆ ಹಿಲ್ ಹೋಲ್ಡ್ ಅಸಿಸ್ಟ್ ಸೌಲಭ್ಯಗಳನ್ನು ನೀಡಲಾಗಿದೆ. ಈ ಕಾರಿನಲ್ಲಿ ಕೆ10ಸಿ ಡ್ಯುಯಲ್ ಜೆಟ್ 1.0-ಲೀಟರ್ ತ್ರಿ ಸಿಲಿಂಡರ್ ಪೆಟ್ರೋಲ್ ಎಂಜಿನ್‌ ಜೋಡಣೆ ಮಾಡಿದ್ದು, ಇದು ಅತ್ಯುತ್ತಮ ಮೈಲೇಜ್ ನೀಡುತ್ತದೆ. ಈ ಕಾರು ಮುಂದಿನ ದಿನಗಳಲ್ಲಿ ದಕ್ಷಿಣ ಆಫ್ರಿಕಾದ ಮಾರುಕಟ್ಟೆಯಲ್ಲಿ ಮಾರಾಟವಾಗಲಿದೆ. ಆದರೆ ಈ ಕಾರು ಬಾರತೀಯ ಮಾರುಕಟ್ಟೆಯಲ್ಲಿ ಬಿಡುಗಡೆಯಾಗುವ ಸಾಧ್ಯತೆಯು ಕಡಿಮೆಯಾಗಿದೆ.

Article Published On: Saturday, January 28, 2023, 10:49 [IST]
English summary
Toyota vitz unveiled the rebadged of maruti celerio details in kannada
Read more on ಟೊಯೊಟಾ toyota
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+