Triumph ಅಭಿಮಾನಿಗಳು ಹುಚ್ಚೆದ್ದು ಕುಣಿಯುವ ಸುದ್ದಿ... ಸ್ಪೀಡ್ 400 ಆನ್‌ರೋಡ್ ಬೆಲೆ ವೈರಲ್!
ಅಂತರಾಷ್ಟ್ರೀಯ ಬ್ರಾಂಡ್ Triumph ಭಾರತೀಯ ಮಾರುಕಟ್ಟೆಗಾಗಿ ಮೊದಲ ಬಾರಿಗೆ ಕೈಗೆಟುಕುವ ಬೆಲೆಯಲ್ಲಿ ಸ್ಪೀಡ್ 400 ಬೈಕ್ ಅನ್ನು ಪರಿಚಯಿಸಿದ್ದು, ಟ್ರಯಂಫ್ ಅಭಿಮಾನಿಗಳಿಗಳಲ್ಲಿ ನಿರೀಕ್ಷೆಗಳು ಹೆಚ್ಚಾಗಿವೆ. ಆದ್ರೆ ಇದರ ಎಕ್ಸ್ ಶೋರಂ ಬೆಲೆ ರೂ 2.23 ಲಕ್ಷವಿದ್ದು, ಈಗ ಎಲ್ಲರ ಗಮನ ಆನ್‌ರೋಡ್ ಬೆಲೆಯ ಮೇಲಿದೆ.
ಇಲ್ಲಿ ಎಲ್ಲರೂ ಗಮನಿಸಬೇಕಾದ ಮತ್ತೊಂದು ವಿಷಯವಿದೆ. ಈ 2.23 ಲಕ್ಷ ರೂ. ಪರಿಚಯಾತ್ಮಕ ಬೆಲೆಯು ಮೊದಲ 10,000 ಯುನಿಟ್‌ಗಳಿಗೆ ಮಾತ್ರ, ನಂತರದ ಬೈಕ್‌ನ ಬೆಲೆ 2.33 ಲಕ್ಷ ರೂ. ಎಂದು ಕಂಪನಿ ಹೇಳಿಕೊಂಡಿದೆ. ಏನೇ ಆಗಲಿ ಅಂತರಾಷ್ಟ್ರೀಯ ಬ್ರಾಂಡ್‌ವೊಂದು ಭಾರತದಲ್ಲಿ ಮಧ್ಯಮ ಘಾತ್ರದ ಬೈಕನ್ನು ಈ ಬೆಲೆಗೆ ಬಿಡುಗಡೆ ಮಾಡಿರುವುದು ಪ್ರತಿಸ್ಪರ್ಧಿಗಳಿಗೆ ನಡುಕ ಹುಟ್ಟಿಸಿದೆ.

ಇತ್ತೀಚೆಗೆ ದಕ್ಷಿಣ ಭಾರತದ ಟ್ರಯಂಫ್ ಇಂಡಿಯಾ ಡೀಲರ್‌ಶಿಪ್‌ಗಳಿಂದ ಹೊರಬಂದ ಸ್ಪೀಡ್ 400 ಆನ್-ರೋಡ್ ಬೆಲೆ ಕುರಿತ ಫೋಟೊವೊಂದು ಅಂತರ್ಜಾಲದಲ್ಲಿ ವೈರಲ್ ಆಗಿದೆ. ಈ ವೈರಲ್ ಫೋಟೋದಲ್ಲಿನ ಮಾಹಿತಿಯ ಪ್ರಕಾರ, ಹೊಸ ಸ್ಪೀಡ್ 400 ವಿತರಣೆಗಾಗಿ ಕಾತರದಿಂದ ಕಾಯುತ್ತಿರುವ ಗ್ರಾಹಕರ ಬಾಯಿಯಲ್ಲಿ ಹುಳಿಯನ್ನು ಬಿಟ್ಟಂತಾಗಿದೆ.
ರಸ್ತೆ ತೆರಿಗೆಯಲ್ಲಿ ರೂ. 46,553, ನೋಂದಣಿ ಮತ್ತು ಆರ್‌ಟಿಒ ಶುಲ್ಕ ರೂ. 3,937 ಹೊರತುಪಡಿಸಿ, ಡೀಲರ್‌ಶಿಪ್ ವಿತರಣಾ ಶುಲ್ಕವಾಗಿ ರೂ. 17,000 ಮತ್ತು ಇಂಟ್ರೊ ಕಿಟ್‌ಗೆ ರೂ. 8,500 ಅನ್ನು ವಿಧಿಸುತ್ತಿದೆ. ಇದಲ್ಲದೆ, ಟ್ರಯಂಫ್ ಡೀಲರ್‌ಶಿಪ್ ರೂ 2.23 ಲಕ್ಷ, ಎಕ್ಸ್ ಶೋ ರೂಂ ಬೆಲೆಯ ಮೋಟಾರ್‌ಸೈಕಲ್‌ಗೆ ರೂ 23,592 ವಿಮಾ ಶುಲ್ಕವನ್ನು ವಿಧಿಸಿದೆ.

ಒಟ್ಟಾರೆ ಇದು ಸ್ಪೀಡ್ 400 ನ ಆನ್ ರೋಡ್ ರೂ. 3,38,598 ಬೆಲೆಯನ್ನು ಸೂಚಿಸಿದೆ. ಈ ವಿಷಯದ ಬಗ್ಗೆ ಇನ್ನೂ ಟ್ರಯಂಫ್ ಇಂಡಿಯಾದಿಂದ ಯಾವುದೇ ಅಧಿಕೃತ ದೃಢೀಕರಣವಿಲ್ಲ. ಟ್ರಯಂಫ್ ಸ್ಪೀಡ್ 400 ಅನ್ನು ಈ ವಾರ ಬಿಡುಗಡೆ ಮಾಡಲಾಯಿತು, ಜೊತೆಗೆ ಸ್ಕ್ರ್ಯಾಂಬ್ಲರ್ 400X ಅನ್ನು ಸಹ ಅನಾವರಣಗೊಳಿಸಲಾಗಿದೆ.
ಎರಡೂ ಬೈಕ್‌ಗಳನ್ನು ಹೊಸ ಸಿಂಗಲ್ ಸಿಲಿಂಡರ್ ಎಂಜಿನ್ ಪ್ಲಾಟ್‌ಫಾರ್ಮ್‌ನಲ್ಲಿ ನಿರ್ಮಿಸಲಾಗಿದೆ. ಎರಡೂ ಬೈಕ್‌ಗಳು ಲಿಕ್ವಿಡ್ ಕೂಲ್ಡ್, DOHC, 4-ವಾಲ್ವ್, 400cc ಎಂಜಿನ್‌ನಿಂದ ಚಾಲಿತವಾಗಿದ್ದು, 39.45bhp ಮತ್ತು 37.5Nm ಗರಿಷ್ಠ ಟಾರ್ಕ್ ಅನ್ನು ಉತ್ಪಾದಿಸುತ್ತದೆ. ಎರಡೂ ಮೋಟಾರ್‌ಸೈಕಲ್‌ಗಳಲ್ಲಿ ಟ್ಯೂನಿಂಗ್ ಮತ್ತು ಪವರ್ ಡೆಲಿವರಿ ವಿಭಿನ್ನವಾಗಿರಬಹುದು ಎಂದು ನಿರೀಕ್ಷಿಸಲಾಗಿದೆ.

ಎರಡೂ ಬೈಕುಗಳು ಆರು-ಸ್ಪೀಡ್ ಗೇರ್‌ಬಾಕ್ಸ್‌ನೊಂದಿಗೆ ಸ್ಲಿಪ್ಪರ್-ಕ್ಲಚ್ ಅಸಿಸ್ಟ್, ಟ್ರಾಕ್ಷನ್ ಕಂಟ್ರೋಲ್ ಮತ್ತು ಡ್ಯುಯಲ್-ಚಾನೆಲ್ ಎಬಿಎಸ್‌ನೊಂದಿಗೆ ಲಭ್ಯವಿದೆ. ಒಟ್ಟಾರೆ ಇಂತಹ ಪ್ರೀಯಂ ಬ್ರಾಂಡ್‌ನಿಂದ ಹೊರಬರುತ್ತರುವ ಬೈಕ್‌ಗಳು ಸದ್ಯ ಭಾರತೀಯ ಬೈಕ್ ಉತ್ಸಾಹಿಗಳ ನಿತ್ಯ ಬಾಯಿ ಮಾತಾಗಿರುವುದಂತು ಸುಳ್ಳಲ್ಲ. ಮೇಲೆ ತಿಳಿಸಲಾದ ಆನ್‌ರೋಡ್ ಬೆಲೆಗಳ ಕುರಿತು ನಿಮ್ಮ ಅನಿಸಿಕೆಗಳನ್ನು ಕಮೆಂಟ್‌ನಲ್ಲಿ ತಿಳಿಸಿ.
ಡ್ರೈವ್‌ಸ್ಪಾರ್ಕ್ ಕನ್ನಡ ವೆಬ್‌ಸೈಟ್ ತ್ವರಿತ ಆಟೋಮೊಬೈಲ್ ಸುದ್ದಿಗಳನ್ನು ಒದಗಿಸುತ್ತದೆ, ಎಲ್ಲಾ ಸಾಮಾಜಿಕ ಮಾಧ್ಯಮಗಳ ಮೂಲಕ ತಕ್ಷಣವೇ ಓದುಗರೊಂದಿಗೆ ಸುದ್ದಿಗಳನ್ನು ಹಂಚಿಕೊಳ್ಳುತ್ತದೆ. ಇತ್ತೀಚಿನ ಕಾರು, ಬೈಕ್ ಸುದ್ದಿ, ಟೆಸ್ಟ್ ಡ್ರೈವ್ ವರದಿಗಳು ಮತ್ತು ವೀಡಿಯೊಗಳನ್ನು ಪಡೆಯಲು ನಮ್ಮ ಫೇಸ್‌ಬುಕ್, ಇನ್‌ಸ್ಟಾಗ್ರಾಮ್ ಮತ್ತು ಯೂಟ್ಯೂಬ್ ಪೇಜ್‌ಗಳೊಂದಿಗೆ ಸಂಪರ್ಕದಲ್ಲಿರಿ.


Click it and Unblock the Notifications








