ಲಾರಿ ಚಾಲಕನನ್ನೇ ಬೆಚ್ಚಿ ಬೀಳಿಸಿದ ಬೈಕ್ ಸವಾರ... ಇಂಥಾ ಸವಾರರನ್ನು ಕನಸಲ್ಲೂ ನೋಡಿರೋದಿಲ್ಲ!

ಅತಿ ಹೆಚ್ಚು ಅಪಘಾತಗಳು ಸಂಭವಿಸುವ ದೇಶಗಳಲ್ಲಿ ಭಾರತವು ಒಂದು. ಇದಕ್ಕೆ ಮುಖ್ಯ ಕಾರಣ ಟ್ರಾಫಿಕ್ ನಿಯಮಗಳ ಉಲ್ಲಂಘನೆಯಾಗಿದೆ. ನಗರ ಪ್ರದೇಶಗಳಲ್ಲಿ ಕಟ್ಟುನಿಟ್ಟಿನ ನಿಯಮಗಳು ಹಾಗೂ ಪೊಲೀಸರಿಂದಾಗಿ ನಿಯಮಗಳ ಪಾಲನೆ ಮಾಡುತ್ತಾರೆ. ನಗರ ಹೊರವಲಯ ಹಾಗೂ ಹೆದ್ದಾರಿಗಳಲ್ಲಿ ಕ್ಯಾಮರಾಗಳು ಇರುತ್ತವಾದ್ರೂ ನಿಯಮಗಳನ್ನು ಪಾಲಿಸುವವರೇ ಇರೋದಿಲ್ಲ.

ಇದು ಒಂದು ಕಡೆಯಾದ್ರೆ ಇನ್ನೊಂದೆಡೆ ಕಾರು-ಲಾರಿ, ಬಸ್-ಲಾರಿ, ಬೈಕ್-ಲಾರಿ ಹೀಗೆ ಲಾರಿ ಅಥವಾ ಟ್ರಕ್ ಜೊತೆಗೆ ಡಿಕ್ಕಿಯಾಗುವ ಯಾವುದೇ ಅಪಘಾತವಾಗಲಿ ಲಾರಿ ಚಾಲಕರದ್ದೇ ತಪ್ಪು ಎಂಬಂತೆ ನೋಡುವುದು ಸಾಮಾನ್ಯವಾಗಿಬಿಟ್ಟಿದೆ. ರಾಜ್ಯದಿಂದ ರಾಜ್ಯಕ್ಕೆ ನಿದ್ದೆಯಿಲ್ಲದೇ ಚಾಲನೆ ಮಾಡುವುದು, ಕುಡಿದು ಅಪಘಾತಗಳನ್ನು ಮಾಡುತ್ತಾರೆ ಎಂಬ ಕೆಟ್ಟ ಅಭಿಪ್ರಾಯಗಳು ಲಾರಿ ಚಾಲಕರ ಮೇಲಿದೆ.

bike rider

ನಿಜಕ್ಕೆ ಲಾರಿ ಚಾಲಕರು ಹಾಗೆ ಮಾಡುವುದರಿಂದಲೇ ಈ ಕೆಟ್ಟಸರು ಪಡೆದಿದ್ದಾರೆ. ಆದ್ರೆ ಎಲ್ಲಾ ಚಾಲಕರು ಹಾಗೆ ಇರೋದಿಲ್ಲ ಎಂಬುದಕ್ಕೆ ಈ ಘಟನೆ ಸಾಕ್ಷಿಯಾಗಿದೆ. ಪಂಜಾಬ್‌ನಲ್ಲಿ ನಡೆದ ಇತ್ತಿಚಿನ ಘಟನೆಯೊಂದರಲ್ಲಿ ಬೈಕ್ ಓಡಿಸುತ್ತಾ ಬಂದ ವ್ಯಕ್ತಿಯೊಬ್ಬ ಬುದ್ದಿಹೀನವಾಗಿ ರಸ್ತೆಯ ಎಡಭಾಗದಿಂದ ಬಲಭಾಗಕ್ಕೆ ತಿರುಗಿ ತನ್ನ ತಪ್ಪಿನಿಂದಾಗಿ ರಸ್ತೆಯಲ್ಲಿ ದೊಡ್ಡ ಅಪಘಾತಕ್ಕೆ ಕಾರಣವಾಗಿದ್ದಾನೆ.

ಇಡೀ ಘಟನೆಯ ದೃಶ್ಯಗಳು ಸ್ಥಳದಲ್ಲಿದ್ದ ಸಿಸಿಟಿವಿಯಲ್ಲಿ ಸೆರೆಯಾಗಿದ್ದು, ಪಟಿಯಾಲಾ ಲೈವ್ ನ್ಯೂಸ್‌ನ ಫೇಸ್‌ಬುಕ್ ಪುಟದಲ್ಲಿ ಹಂಚಿಕೊಳ್ಳಲಾಗಿದೆ. ರಸ್ತೆಯಲ್ಲಿ ಟ್ರಕ್‌ಗಳು, ಕಾರುಗಳು ಮತ್ತು ಬೈಕ್‌ಗಳೊಂದಿಗೆ ಸಾಮಾನ್ಯ ದಟ್ಟಣೆಯೊಂದಿಗೆ ಸಾಗುತ್ತಿದ್ದ ವೇಳೆ ಮುಂಬರುವ ಜಂಕ್ಷನ್‌ನಲ್ಲಿ ಬಲ ತಿರುವು ತೆಗೆದುಕೊಳ್ಳಲು ಸಂಪೂರ್ಣ ಎಡದಲ್ಲಿದ್ದ ಬೈಕ್ ಸವಾರ ಥಟ್ಟನೆ ಬಲಕ್ಕೆ ತಿರುಗಿ ಗೊಂದಲ ಸೃಷ್ಟಿಸಿದ್ದಾನೆ.

bike rider

ಈ ವೇಳೆ ಟ್ರಕ್ ಚಾಲಕ ಡಿಕ್ಕಿಯನ್ನು ತಪ್ಪಿಸಲು ಬ್ರೇಕ್ ಹಾಕಿದ್ದಾನಾದರೂ ನಿಯಂತ್ರಣವಾಗಿಲ್ಲ. ಆದ್ರೂ ಪ್ರಯತ್ನದ ಭಾಗವಾಗಿ ಲಾರಿಯನ್ನು ಬಲಗಡೆ ರಸ್ತೆಗೆ ತಿರುಗಿಸಿದ್ದಾನೆ. ಒಮ್ಮೆಲೆ ನಿಲ್ಲದ ಟ್ರಕ್ ಬೈಕ್ ಸವಾರನಿಗೆ ಡಿಕ್ಕಿ ಹೊಡೆದಿದೆ. ಬೈಕ್ ನಲ್ಲಿ ಇನ್ನೊಬ್ಬ ವ್ಯಕ್ತಿ ಕೂಡ ಹಿಂದೆ ಕುಳಿತಿದ್ದ, ಅದೇಷ್ಟವಶಾತ್ ಟ್ರಕ್ ಅವರ ಮೇಲೆ ಎರಗಲಿಲ್ಲ.

ಈ ಅಪಘಾತದಲ್ಲಿ ಯಾವುದೇ ಪ್ರಾಣಹಾನಿಯಾಗಲಿಲ್ಲ, ಈ ಘಟನೆಯು ಪ್ರತಿ ದ್ವಿಚಕ್ರ ವಾಹನ ಚಾಲಕರು ತಮ್ಮ ವಾಹನಗಳನ್ನು ಓಡಿಸುವಾಗ ತಿಳಿದಿರಬೇಕಾದ ಕೆಲವು ನಿರ್ಣಾಯಕ ಅಂಶಗಳ ಪ್ರಾಮುಖ್ಯತೆಯನ್ನು ಎತ್ತಿ ತೋರಿಸುತ್ತದೆ. ದ್ವಿಚಕ್ರ ವಾಹನವನ್ನು ಓಡಿಸುವಾಗ ಅನಗತ್ಯವಾಗಿ ತಿರುಗುವುದರಿಂದಾಗುವ ಅನಾಹುತಗಳು ತಪ್ಪಿದ್ದಲ್ಲ. ನಿಯಮಗಳ ಬಗ್ಗೆ ಅರಿವು ಇದ್ದವರು ಯಾರು ಕೂಡ ಹೀಗೆ ಮಾಡೋದಿಲ್ಲ.

ಹಿಂಬರುವ ವಾಹನಗಳನ್ನು ನೋಡುವುದು, ಇಂಡಿಕೇಟರ್ ಬಳಸಿ ತಿರುವು ಪಡೆಯುವುದು, ಬಹು ಮುಖ್ಯವಾಗಿ ತಿರುವು ಪಡೆಯುವ ಮುನ್ನ ತಿರುವು ಇರುವ ಕಡೆಗೆ ಸಂಪೂರ್ಣವಾಗಿ ಬರುವುದು ವಾಹನ ಸವಾರರಿಗೆ ಇರಬೇಕಾದ ಸಾಮಾನ್ಯ ಜ್ಞಾನವಾಗಿದೆ. ಆದರೆ ವಿಡಿಯೋದಲ್ಲಿ ನಾವು ನೋಡಿದ ಸವಾರ ಇಲ್ಲಿ ತಿಳಿಸಲಾದ ಯಾವುದನ್ನು ಪಾಲಿಸಿಲ್ಲ. ಜೊತೆಗೆ ಇದರಲ್ಲಿ ಸಂಪೂರ್ಣ ತಪ್ಪು ಬೈಕ್ ಸವಾರನದ್ದಾಗಿದೆ.

ಈ ವಿಷಯದಲ್ಲಿ ಲಾರಿ ಸವಾರ ಹಾಗೂ ಬೈಕ್ ಸವಾರನ ಕುರಿತು ನಿಮ್ಮ ಅನಿಸಿಕೆಗಳನ್ನು ಕಮೆಂಟ್‌ಗಳಲ್ಲಿ ತಿಳಿಸಿ. ಇಂತಹ ಸಂದರ್ಭಗಳು ಎದುರಾದರೆ ನೀವು ಏನು ಮಾಡಿತ್ತೀರಿ, ದೊಡ್ಡ ವಾಹನಗಳೊಂದಿಗೆ ನಡೆಯುವ ಅಪಘಾತಗಳಲ್ಲಿ ಬಹುತೇಕ ಲಾರಿ ಚಾಲಕರದ್ದೇ ತಪ್ಪು ಎಂದು ನೋಡುವುದು ಎಷ್ಟರ ಮಟ್ಟಿಗೆ ಸರಿ ಎಂಬುದನ್ನು ಕಮೆಂಟ್ ಗಳಲ್ಲಿ ತಿಳಿಸಿ.

Article Published On: Saturday, May 27, 2023, 12:39 [IST]
English summary
Truck bike accident mindless biker video viral
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+