ಧೂಳೆಬ್ಬಿಸಲು ಬರುತ್ತಿವೆ ಮಹೀಂದ್ರಾ ಥಾರ್ 5 ಡೋರ್, ಬೊಲೆರೋ ನಿಯೋ ಪ್ಲಸ್
ಪ್ರಮುಖ ವಾಹನ ತಯಾರಕ ಕಂಪನಿಯಾಗಿ ಗುರುತಿಸಿಕೊಂಡಿರುವ ಮಹೀಂದ್ರಾ ಎರಡು ನೂತನ ಎಸ್‌ಯುವಿಗಳನ್ನು ಈ ವರ್ಷ ಭಾರತೀಯ ಮಾರುಕಟ್ಟೆಯಲ್ಲಿ ಪರಿಚಯಿಸಲು ಯೋಜಿಸಿದೆ. ಬಹುನೀರಿಕ್ಷಿತ ಮಹೀಂದ್ರಾ ಥಾರ್ 5 ಡೋರ್ ಹಾಗೂ ಟಿಯುವಿ300 ಪ್ಲಸ್ ಆಧಾರಿತ ನವೀಕರಿಸಿದ ಬೊಲೆರೋ ನಿಯೋ ಪ್ಲಸ್ ಶೀಘ್ರದಲ್ಲೇ ಖರೀದಿಗೆ ಸಿಗಲಿದೆ.
ಮಹೀಂದ್ರಾ ಕಂಪನಿ ಈಗಾಗಲೇ ಬೊಲೆರೋ ನಿಯೋ ಪ್ಲಸ್ ಎಸ್‌ಯುವಿಯನ್ನು ಪರೀಕ್ಷಿಸುತ್ತಿದ್ದು, ಮುಂಬರುವ ತಿಂಗಳಲ್ಲಿ ಬಿಡುಗಡೆಯಾಗಲಿದೆ. ಸ್ಕಾರ್ಪಿಯೋ ಕ್ಲಾಸಿಕ್ ಎಸ್‌ಯುವಿಗಿಂದ ಕೊಂಚ ಕಡಿಮೆ ಬೆಲೆಯಲ್ಲಿ ದೊರೆಯಲಿದೆ. ಅಲ್ಲದೆ, ಮಲ್ಟಿಪಲ್ ಸೀಟಿಂಗ್ ಲೇಔಟ್ ಆಯ್ಕೆಯನ್ನು ಹೊಂದಿರಲಿದ್ದು, ಹೊರಭಾಗದಲ್ಲಿ ಸಾಕಷ್ಟು ನವೀಕರಣಗಳನ್ನು ಪಡೆದುಕೊಂಡಿರಲಿದೆ. 15-ಇಂಚಿನ ಅಲಾಯ್ ವೀಲ್ಸ್, ಬಂಪರ್ ಹಾಗೂ ಗ್ರೀಲ್ ವಿನ್ಯಾಸದಲ್ಲಿ ಬದಲಾವಣೆಯನ್ನು ಹೊಂದಿರಲಿದೆ ಎಂದು ಹೇಳಲಾಗಿದೆ. ಇದನ್ನು ಖರೀದಿದಾರರು ಇಷ್ಟಪಡಬಹುದು.

ಮುಂಬರಲಿರುವ ಬೊಲೆರೋ ನಿಯೋ ಪ್ಲಸ್, 5 ರೂಪಾಂತರಗಳು ಹಾಗೂ 7-9 ಆಸನ ವ್ಯವಸ್ಥೆಯಲ್ಲಿ ಗ್ರಾಹಕರಿಗೆ ಖರೀದಿಗೆ ಲಭ್ಯವಾಗಬಹುದು. ಒಳಭಾಗದ ವಿನ್ಯಾಸ ಹಿಂದಿನ ಮಾದರಿ ಬೊಲೆರೋ ನಿಯೋಗೆ ಹೋಲಿಕೆಯಾಗುತ್ತದೆ. ಇದು 1.5 - ಲೀಟರ್ ಡಿಸೇಲ್ ಎಂಜಿನ್ ಆಯ್ಕೆಯನ್ನು ಹೊಂದಿರಲಿದ್ದು, 100 hp ಪವರ್ ಉತ್ಪಾದಿಸುವ ಸಾಮರ್ಥ್ಯ ಪಡೆದುಕೊಂಡಿರಲಿದೆ. 5 ಸ್ವೀಡ್ ಮ್ಯಾನುವಲ್ ಟ್ರಾನ್ಸ್ಮಿಷನ್ ಆಯ್ಕೆಯಲ್ಲಿ ಸಿಗಲಿದೆ. ರೇರ್ ವೀಲ್ ಡ್ರೈವ್ (RWD) ತಂತ್ರಜ್ಞಾನವನ್ನು ಹೊಂದಿರಬಹುದು.
ನೂತನ ಬೊಲೆರೋ ನಿಯೋ ಪ್ಲಸ್ ಹತ್ತಾರು ನವೀನ ವೈಶಿಷ್ಟ್ಯ ಹೊಂದಿದ್ದು, ಪ್ರಮುಖವಾಗಿ ಟಚ್‌ಸ್ಕ್ರೀನ್ ಇನ್ಫೋಟೈನ್‌ಮೆಂಟ್ ಸಿಸ್ಟಮ್, ಮಲ್ಟಿಫಂಕ್ಷನಲ್ ಸ್ಟೀರಿಂಗ್ ವೀಲ್ ಹಾಗೂ ಸೆಮಿ ಡಿಜಿಟಲ್ ಇನ್ಸ್ಟ್ರುಮೆಂಟ್ ಕ್ಲಸ್ಟರ್ ಒಳಗೊಂಡಿರಲಿದೆ. ಜೊತೆಗೆ ಮೆಕ್ಯಾನಿಕಲ್ ಲಾಕಿಂಗ್ ಡಿಫರೆನ್ಷಿಯಲ್ ಅನ್ನು ಹೊಂದಿರಲಿದೆ. ಈ ಎಸ್‌ಯುವಿ ಗ್ರಾಹಕರ ಕೈಗೆಟುಕುವ ಬೆಲೆಯಲ್ಲಿಯೇ ಖರೀದಿಗೆ ಸಿಗಲಿದ್ದು, ರೂ.10.5 ಲಕ್ಷದಿಂದ ರೂ.13 ಲಕ್ಷ ಎಕ್ಸ್ ಶೋರೂಂ ಬೆಲೆಯನ್ನು ಪಡೆದಿರಬಹುದು.

ಮಹೀಂದ್ರಾದ ಮತ್ತೊಂದು ಬಹುನೀರಿಕ್ಷಿತ ಎಸ್‌ಯುವಿ ಥಾರ್ 5 ಡೋರ್ 2024ರ ಆರಂಭದಲ್ಲಿ ಭಾರತದ ಮಾರುಕಟ್ಟೆಯಲ್ಲಿ ಖರೀದಿಗೆ ಸಿಗಬಹುದು. ಇದು ಮುಂಬರಲಿರುವ ಮಾರುತಿ ಸುಜುಕಿ 5 ಡೋರ್ ಜಿಮ್ನಿ ಹಾಗೂ 5 ಡೋರ್ ಫೋರ್ಸ್ ಗೂರ್ಖಾಗೆ ಭಾರೀ ಪೈಪೋಟಿ ನೀಡಲಿದೆ ಎಂದು ಅಂದಾಜಿಸಲಾಗಿದೆ. ಈಗಾಗಲೇ ಹಲವು ಬಾರಿ ಪರೀಕ್ಷಾರ್ಥ ಸಂಚಾರ ನಡೆಸುವಾಗ ಕಂಡುಬಂದಿದ್ದು, 2.0 ಲೀಟರ್ ಟರ್ಬೊ ಪೆಟ್ರೋಲ್ ಮತ್ತು 2.2 ಲೀಟರ್ ಟರ್ಬೊ ಡೀಸೆಲ್ ಎಂಜಿನ್ ಆಯ್ಕೆಯಲ್ಲಿ ಸಿಗಲಿದೆ.
ಕೆಲವೇ ದಿನಗಳ ಹಿಂದೆಯಷ್ಟೇ ಮಹೀಂದ್ರಾ ಕಂಪನಿ 3 ಡೋರ್ ಥಾರ್ ಎಸ್‌ಯುವಿ RWD (ರೇರ್ ವೀಲ್ ಡ್ರೈವ್) ಆವೃತ್ತಿಯನ್ನು ದೇಶೀಯ ಮಾರುಕಟ್ಟೆಯಲ್ಲಿ ಬಿಡುಗಡೆ ಮಾಡಿತ್ತು. ನೂತನ 5 ಡೋರ್ ಥಾರ್ ಕೂಡ ವೈಶಿಷ್ಟ್ಯ ಹಾಗೂ ವಿನ್ಯಾಸದಲ್ಲಿ ಬಹುತೇಕ ಹಿಂದಿನ ಮಾದರಿ 3 ಡೋರ್ ಥಾರ್ ಅನ್ನು ಹೋಲಿಕೆಯಾಗಲಿದೆ. ಆದರೆ, 300 ಎಂಎಂ ಉದ್ದದ ವೀಲ್ ಬೇಸ್ ಅನ್ನು ಪಡೆದುಕೊಂಡಿದೆ. ಈ ಆಫ್-ರೋಡ್ ಎಸ್‌ಯುವಿ ಬೆಲೆ ಬಹುತೇಕ ಗ್ರಾಹಕರ ಕೈಗೆಟುಕಲಿದೆ.
ಸದ್ಯ, ಭಾರತದ ಮಾರುಕಟ್ಟೆಯಲ್ಲಿ ಖರೀದಿಗೆ ದೊರೆಯುವ ಬೊಲೆರೋ ನಿಯೋ, ರೂ.9.48 ಲಕ್ಷದಿಂದ ರೂ.11.99 ಲಕ್ಷ ಬೆಲೆಯಲ್ಲಿ ಸಿಗಲಿದೆ. ಇದರ 1.5 ಲೀಟರ್ ಡಿಸೇಲ್ ಎಂಜಿನ್,100 PS ಗರಿಷ್ಠ ಪವರ್ ಹಾಗೂ 260 Nm ಪೀಕ್ ಟಾರ್ಕ್ ಉತ್ಪಾದಿಸುತ್ತದೆ. ಇದು 5 ಸ್ವೀಡ್ ಮ್ಯಾನುವಲ್ ಟ್ರಾಸ್ಮಿಷನ್ ಆಯ್ಕೆಯನ್ನು ಹೊಂದಿದೆ. ಸುರಕ್ಷತೆಯ ದೃಷ್ಟಿಯಿಂದ ಡುಯಲ್ ಫ್ರಂಟ್ ಏರ್ ಬಾಗ್ಸ್, ABS (ಆಂಟಿಲಾಕ್ ಬ್ರೇಕಿಂಗ್ ಸಿಸ್ಟಮ್), EBD (ಎಲೆಕ್ಟ್ರಾನಿಕ್ ಬ್ರೇಕಿಂಗ್ ಸಿಸ್ಟಮ್) ಪಡೆದುಕೊಂಡಿದೆ.
ಬಹುನೀರಿಕ್ಷಿತ ಮಹೀಂದ್ರಾ ಥಾರ್ 3 ಡೋರ್, ರೂ.9.99 ಲಕ್ಷದಿಂದ ರೂ.16.49 ಲಕ್ಷ ಆನ್-ರೋಡ್ ಬೆಲೆಯಲ್ಲಿ ಖರೀದಿಗೆ ದೊರೆಯಲಿದೆ. ಇದರ 2-ಲೀಟರ್ ಟರ್ಬೊ ಪೆಟ್ರೋಲ್ ಎಂಜಿನ್ 150 PS ಪವರ್ ಹಾಗೂ 320 Nm ಪೀಕ್ ಟಾರ್ಕ್ ಉತ್ಪಾದಿಸುತ್ತದೆ. 2.2-ಲೀಟರ್ ಡೀಸೆಲ್ ಎಂಜಿನ್ 130 PS ಪವರ್ ಹಾಗೂ 300 Nm ಪೀಕ್ ಟಾರ್ಕ್ ಉತ್ಪಾದಿಸುತ್ತದೆ. ಇದು 15.2 kmpl ಮೈಲೇಜ್ ನೀಡಲಿದ್ದು, 7 ಇಂಚಿನ ಟಚ್‌ಸ್ಕ್ರೀನ್ ಇನ್ಫೋಟೈನ್‌ಮೆಂಟ್ ಸಿಸ್ಟಮ್ ಸೇರಿದಂತೆ ಹಲವು ವೈಶಿಷ್ಟ್ಯಗಳನ್ನು ಹೊಂದಿದೆ.


Click it and Unblock the Notifications