Tata Cars: ಬರಲಿವೆ ಶಕ್ತಿಯುತ ಟಾಟಾ ಕಾರುಗಳು, ಎದುರಾಳಿಗಳು ಧೂಳೀಪಟ

ಟಾಟಾ (Tata) ವಿಶ್ವಾಸಾರ್ಹ ಕಾರು ತಯಾರಕ ಕಂಪನಿಯಾಗಿ ಖ್ಯಾತಿಗಳಿಸಿದೆ. ಗ್ರಾಹಕರ ಅಭಿರುಚಿಗೆ ತಕ್ಕಂತೆ ಕೈಗೆಟುಕುವ ಬೆಲೆಯಲ್ಲಿ ವಿವಿಧ ಕಾರುಗಳನ್ನು ಬಿಡುಗಡೆಗಳಿಸುತ್ತಿರುತ್ತದೆ. ಮುಂಬರುವ ದಿನಗಳಲ್ಲಿ ಆಕರ್ಷಕ ವೈಶಿಷ್ಟ್ಯ ಹಾಗೂ ವಿನ್ಯಾಸ ಹೊಂದಿರುವ ಶಕ್ತಿಯುತ ಕಾರುಗಳನ್ನು ಲಾಂಚ್ ಮಾಡಲು ಎಲ್ಲ ರೀತಿಯ ಸಿದ್ಧತೆಯನ್ನು ನಡೆಸುತ್ತಿದೆ.

ಮೊದಲಿಗೆ ಟಾಟಾ, ಕೆಲವೇ ದಿನಗಳಲ್ಲಿ ದೇಶೀಯ ಮಾರುಕಟ್ಟೆಯಲ್ಲಿ ಬಿಡುಗಡೆಗೊಳಿಸಲಿರುವ ಪಂಚ್ ಸಿಎನ್‌ಜಿ (Punch CNG) ಕಾರಿನ ಬಗ್ಗೆ ಮಾತನಾಡೋಣ. ಇದೊಂದು ಮೈಕ್ರೋ ಎಸ್‌ಯುವಿಯಾಗಿದ್ದು, ಜನವರಿಯಲ್ಲಿ ನಡೆದ ದೆಹಲಿ ಆಟೋ ಎಕ್ಸ್‌ಪೋದಲ್ಲಿ ಕಂಪನಿಯು ಈ ಕಾರನ್ನು ಅನಾವರಣ ಮಾಡಿತ್ತು. ಇದು, ವಿವಿಧ ರೂಪಾಂತರಗಳ ಆಯ್ಕೆಯಲ್ಲಿ 1.2 ಲೀಟರ್ 3 ಸಿಲಿಂಡರ್ ನ್ಯಾಚುರಲ್ ಆಸ್ಪಿರೇಟೆಡ್ ಪೆಟ್ರೋಲ್ ಎಂಜಿನ್ ಆಯ್ಕೆಯಲ್ಲಿ ಖರೀದಿಗೆ ಸಿಗುವ ಸಾಧ್ಯತೆಯಿದೆ.

Tata Cars: ಬರಲಿವೆ ಶಕ್ತಿಯುತ ಟಾಟಾ ಕಾರುಗಳು, ಎದುರಾಳಿಗಳು ಧೂಳೀಪಟ

ಪಂಚ್ ಸಿಎನ್‌ಜಿ , 73.5 PS ಗರಿಷ್ಠ ಪವರ್ ಉತ್ಪಾದಿಸುವ ಸಾಮರ್ಥ್ಯ ಪಡೆದಿರಲಿದ್ದು, 5 ಮ್ಯಾನುವಲ್ ಗೇರ್ ಬಾಕ್ಸ್ ಆಯ್ಕೆಯಲ್ಲಿ ಸಿಗಬಹುದು. ಸಿಎನ್‌ಜಿ ಆವೃತ್ತಿಯಾಗಿರುವುದರಿಂದ ಗರಿಷ್ಠ ಇಂಧನ ದಕ್ಷತೆ ಹೊಂದಿರಲಿದ್ದು, 30 kmpl ಮೈಲೇಜ್ ನೀಡಬಹುದು ಎಂದು ಅಂದಾಜಿಸಲಾಗಿದೆ. ಸದ್ಯ, ಖರೀದಿಗೆ ಸಿಗುವ ಪಂಚ್ ಕಾರಿನ ರೀತಿಯಲ್ಲಿಯೇ ಆಕರ್ಷಕ ವೈಶಿಷ್ಟ್ಯಗಳನ್ನು ಹೊಂದಿರಲಿದ್ದು, ಸುರಕ್ಷತೆಯ ದೃಷ್ಟಿಯಿಂದಲ್ಲೂ ಅತ್ಯಾಧುನಿಕವಾಗಿರಲಿದೆ. ರೂ.10 ಲಕ್ಷ ಆರಂಭಿಕ ಬೆಲೆಯಲ್ಲಿ ಖರೀದಿಗೆ ಸಿಗಬಹುದು ಎಂದು ಹೇಳಲಾಗಿದೆ.

ಟಾಟಾ ಮೋಟಾರ್ಸ್, ತನ್ನ ಬಹುನೀರಿಕ್ಷಿತ ನೆಕ್ಸಾನ್ ಫೇಸ್‌ಲಿಫ್ಟ್ ಎಸ್‌ಯುವಿಯನ್ನು ಸೆಪ್ಟೆಂಬರ್‌ ತಿಂಗಳಲ್ಲಿ ಭಾರತದ ಮಾರುಕಟ್ಟೆಯಲ್ಲಿ ಬಿಡುಗಡೆಗೊಳಿಸುವ ಸಾಧ್ಯತೆಯಿದೆ. ಬಹುತೇಕ Curvv ಕಾನ್ಸೆಪ್ಟ್ ಕಾರಿಗೆ ಹೋಲಿಕೆಯಾಗುವ ಒಂದಷ್ಟು ಡಿಸೈನ್ ಹೊಂದಲಿದ್ದು, ಅತ್ಯಾಧುನಿಕ ವೈಶಿಷ್ಟ್ಯಗಳನ್ನು ಪಡೆದುಕೊಂಡಿರಲಿದೆ. ದೊಡ್ಡದಾದ ಟಚ್‌ಸ್ಕ್ರೀನ್, ಹೊಸದಾದ 2 ಸ್ಪೋಕ್ ಸ್ಟೀರಿಂಗ್ ವೀಲ್, 360-ಡಿಗ್ರಿ ಕ್ಯಾಮೆರಾ ಒಳಗೊಂಡಿರಲಿದ್ದು, 1.2 ಲೀಟರ್ DI ಪೆಟ್ರೋಲ್ ಎಂಜಿನ್ ಆಯ್ಕೆಯಲ್ಲಿ ಖರೀದಿಗೆ ಸಿಗಬಹುದು.

Tata Cars: ಬರಲಿವೆ ಶಕ್ತಿಯುತ ಟಾಟಾ ಕಾರುಗಳು, ಎದುರಾಳಿಗಳು ಧೂಳೀಪಟ

ಪ್ರಸ್ತುತ ದೇಶದಲ್ಲಿ ಖರೀದಿಗೆ ಸಿಗುವ ಟಾಟಾ ನೆಕ್ಸಾನ್, ರೂ.8 ಲಕ್ಷದಿಂದ ರೂ.14.60 ಲಕ್ಷ ಎಕ್ಸ್ ಶೋರೂಂ ಬೆಲೆಯನ್ನು ಹೊಂದಿದೆ. ಐದು ಆಸನ ಆಯ್ಕೆ ವ್ಯವಸ್ಥೆಯಲ್ಲಿ ದೊರೆಯುವ ಕಾರು, ಪೆಟ್ರೋಲ್ ಹಾಗೂ ಡೀಸೆಲ್ ಎಂಜಿನ್ ಆಯ್ಕೆಯಲ್ಲಿ ಸಿಗಲಿದೆ. 24.07 kmpl ಮೈಲೇಜ್ ನೀಡುತ್ತದೆ. 7 ಇಂಚಿನ ಟಚ್‌ಸ್ಕ್ರೀನ್ ಇನ್ಫೋಟೈನ್‌ಮೆಂಟ್ ಸಿಸ್ಟಮ್, ಆಂಡ್ರಾಯ್ಡ್ ಆಟೋ, ಆಪಲ್ ಕಾರ್ ಪ್ಲೇ ಸೇರಿದಂತೆ ಹತ್ತಾರು ವೈಶಿಷ್ಟ್ಯಗಳನ್ನು ಪಡೆದಿದೆ.

ಮುಂಬರಲಿರುವ ಟಾಟಾ ಹ್ಯಾರಿಯರ್ ಹಾಗೂ ಸಫಾರಿ ಫೇಸ್‌ಲಿಫ್ಟ್ ಆವೃತ್ತಿಗಳು ಬಹುತೇಕ ದೆಹಲಿ ಆಟೋ ಎಕ್ಸ್‌ಪೋದಲ್ಲಿ ಅನಾವರಣಗೊಂಡ ಹ್ಯಾರಿಯರ್ ಇವಿಯನ್ನೇ ಹೋಲಿಕೆಯಾಗುತ್ತವೆ. ಬಹುತೇಕ ಹೊರ ಭಾಗ ಹಾಗೂ ಒಳಭಾಗದ ವಿನ್ಯಾಸದಲ್ಲಿ ಸಾಕಷ್ಟು ಬದಲಾವಣೆಗಳನ್ನು ಹೊಂದಿರಲಿದ್ದು, ಅತ್ಯಾಧುನಿಕ ವೈಶಿಷ್ಟ್ಯಗಳನೊಂದಿಗೆ 1.5 ಲೀಟರ್ DI ಪೆಟ್ರೋಲ್ ಹಾಗೂ 2.0 ಟರ್ಬೊ ಡೀಸೆಲ್ ಎಂಜಿನ್ ಆಯ್ಕೆಯಲ್ಲಿ ಗ್ರಾಹಕರಿಗೆ ಖರೀದಿಗೆ ಸಿಗಬಹುದು.

ಈಗಾಗಲೇ, ಟಾಟಾ ಭಾರತದ ಮಾರುಕಟ್ಟೆಯಲ್ಲಿ ನೆಕ್ಸಾನ್ ಇವಿಯ ಪ್ರೈಮ್ ಹಾಗೂ ಮ್ಯಾಕ್ಸ್ ರೂಪಾಂತರಗಳನ್ನು ಮಾರಾಟ ಮಾಡುತ್ತಿದೆ. ಇದೀಗ, ಮತ್ತಷ್ಟು ನವೀಕರಣದೊಂದಿಗೆ ನೆಕ್ಸಾನ್ ಇವಿಯನ್ನು ಬಿಡುಗಡೆಗೊಳಿಸಲು ಸಿದ್ದತೆ ನಡೆಸುತ್ತಿದ್ದು, ದೊಡ್ಡದಾದ ಬ್ಯಾಟರಿ ಆಯ್ಕೆ ಹಾಗೂ ಗರಿಷ್ಠ ರೇಂಜ್ ನೊಂದಿಗೆ ಬರಬಹುದು. ಈ ಬಗ್ಗೆ ಸದ್ಯಕ್ಕೆ ಅಧಿಕೃತ ಮಾಹಿತಿ ಲಭ್ಯವಾಗಿಲ್ಲ. ಕೆಲವೇ ದಿನಗಳಲ್ಲಿ ಸ್ಪಷ್ಟತೆ ಸಿಗಲಿದೆ.

ಟಾಟಾ ಪಂಚ್ ಮೈಕ್ರೋ ಎಸ್‌ಯುವಿ ಎಲೆಕ್ಟ್ರಿಕ್ ರೂಪದಲ್ಲಿ ಮುಂದಿನ ವರ್ಷ ಭಾರತದಲ್ಲಿ ಬಿಡುಗಡೆಯಾಗಲಿದೆ ಎಂದು ಹಲವು ಮಾಧ್ಯಮಗಳು ವರದಿ ಮಾಡಿವೆ. ಆದರೆ, ಕಂಪನಿ ಕಡೆಯಿಂದ ಈ ಬಗ್ಗೆ ಯಾವುದೇ ವಿವರಗಳು ಸಿಕ್ಕಿಲ್ಲ. ಈ ಕಾರು, ಪವರ್ ಫುಲ್ ಬ್ಯಾಟರಿ ಆಯ್ಕೆಯೊಂದಿಗೆ ಬರಲಿದ್ದು, ಸಂಪೂರ್ಣ ಚಾರ್ಜಿನಲ್ಲಿ 350 km ರೇಂಜ್ ನೀಡಬಹುದು. ಸುಮಾರು ರೂ.12 ಲಕ್ಷ ಬೆಲೆಯಲ್ಲಿ ಖರೀದಿಗೆ ಸಿಗಬಹುದು ಎಂದು ಅಂದಾಜಿಸಲಾಗಿದೆ.

ಒಟ್ಟಾರೆ, ಟಾಟಾ ದೇಶದಲ್ಲಿ ಮುಂಬರುವ ದಿನಗಳಲ್ಲಿ ಅತ್ಯಾಧುನಿಕ ವೈಶಿಷ್ಟ್ಯಗಳನ್ನು ಹೊಂದಿರುವ ಆರು ಕಾರುಗಳನ್ನು ಬಿಡುಗಡೆಗೊಳಿಸಲು ಸಿದ್ಧತೆ ನಡೆಸಿದ್ದು, ಗ್ರಾಹಕರು ದೊಡ್ಡಮಟ್ಟದಲ್ಲಿ ನೀರಿಕ್ಷೆಯನ್ನು ಇಟ್ಟುಕೊಂಡಿದ್ದಾರೆ. ಇವು ಕೈಗೆಟುಕುವ ಬೆಲೆಯಲ್ಲಿ ದೊರೆಯುವುದರಿಂದ ಹೆಚ್ಚಿನ ಸಂಖ್ಯೆಯಲ್ಲಿ ದೇಶೀಯ ಖರೀದಿದಾರರು ಕೊಂಡುಕೊಳ್ಳಬಹುದು ಎನ್ನುವ ವಿಶ್ವಾಸದಲ್ಲಿ ಕಂಪನಿಯಾಗಿದೆ. ಈ ಕಾರುಗಳು ಮಾರುಕಟ್ಟೆಗೆ ಬಂದ ಮೇಲೆ ಪ್ರತಿಸ್ಪರ್ಧಿಗಳಿಗೆ ಪ್ರಬಲ ಪೈಪೋಟಿ ನೀಡುವುದು ಖಚಿತ.

Article Published On: Thursday, July 27, 2023, 16:45 [IST]
English summary
Upcoming 6 tata cars launching soon india details
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+