Upcoming Tata SUVs: ಭಾರತದಲ್ಲಿ ಧೂಳೆಬ್ಬಿಸಲು ಟಾಟಾ ರೆಡಿ.. ಬರಲಿವೆ ಬೊಂಬಾಟ್ ಕಾರುಗಳು
ಟಾಟಾ ಕಂಪನಿಯ ಕಾರುಗಳೆಂದರೆ ಯಾರಿಗೆ ಇಷ್ಟವಿರುವುದಿಲ್ಲ ಹೇಳಿ. ಅವುಗಳ ಉತ್ತಮ ಕಾರ್ಯಕ್ಷಮತೆ, ಆಕರ್ಷಕ ವೈಶಿಷ್ಟ್ಯಗಳು ಪ್ರತಿಯೊಬ್ಬರನ್ನು ಸೆಳೆಯುತ್ತವೆ. ಸದ್ಯ, ಕಂಪನಿಯು ಗ್ರಾಹಕರ ಅಭಿರುಚಿಗೆ ತಕ್ಕಂತೆ ICE (ಇಂಟರ್ನಲ್ ಕಂಬುಸ್ಟಿವ್ನ್ ಎಂಜಿನ್) ಹಾಗೂ ಎಲೆಕ್ಟ್ರಿಕ್ ಪವರ್‌ಟ್ರೇನ್ ಆಧಾರಿತ ಬೊಂಬಾಟ್ ಎಸ್‌ಯುವಿಗಳನ್ನು ಅಭಿವೃದ್ಧಿಪಡಿಸುತ್ತಿದೆ.
ಕಳೆದ ಜನವರಿಯಲ್ಲಿ ದೆಹಲಿಯಲ್ಲಿ ನಡೆದ ಆಟೋ ಎಕ್ಸ್‌ಪೋದಲ್ಲಿ ಟಾಟಾ ಮೋಟಾರ್ಸ್, 'Curvv' (ಕಾನ್ಸೆಪ್ಟ್) ಕಾರನ್ನು ಅನಾವರಣ ಮಾಡಿತ್ತು. ಇದು ಬಹುತೇಕ 2024ರಲ್ಲಿ ಭಾರತದ ಮಾರುಕಟ್ಟೆಯಲ್ಲಿ ಬಿಡುಗಡೆಯಾಗಲಿದೆ. ಮೊದಲಿಗೆ ICE ಚಾಲಿತ ಮಾದರಿಯಾಗಿ ಬರಲಿದ್ದು, ಆ ಬಳಿಕ ಎಲೆಕ್ಟ್ರಿಕ್ ಆವೃತ್ತಿಯಾಗಿ ಗ್ರಾಹಕರಿಗೆ ಖರೀದಿಗೆ ಲಭ್ಯವಾಗಲಿದೆ. ಸಖತ್ ಕ್ರೇಜ್ ಹುಟ್ಟು ಹಾಕಿರುವ ಈ ಎಸ್‌ಯುವಿ, ಹ್ಯುಂಡೈ ಕ್ರೆಟಾ, ಕಿಯಾ ಸೆಲ್ಟೋಸ್ ಕಾರುಗಳಿಗೆ ಭಾರೀ ಪೈಪೋಟಿ ನೀಡಬಹುದು.

ಟಾಟಾ Curvv ಬಗ್ಗೆ ದೊರೆತ್ತಿರುವ ಒಂದಷ್ಟು ಮಾಹಿತಿ ಪ್ರಕಾರ, ICE ಚಾಲಿತ ಮಾದರಿ, ಹೊಸದಾದ 1.2 ಲೀಟರ್ ಟರ್ಬೊ ಎಂಜಿನ್ ಪಡೆದಿರಲಿದ್ದು, 125 PS ಗರಿಷ್ಠ ಪವರ್ ಹಾಗೂ 225 Nm ಪೀಕ್ ಟಾರ್ಕ್ ಉತ್ಪಾದಿಸುವ ಸಾಮರ್ಥ್ಯ ಹೊಂದಿರಲಿದೆ. ಎಲೆಕ್ಟ್ರಿಕ್ ಆವೃತ್ತಿ, 400 - 500 km ರೇಂಜ್ ನೀಡಬಹುದು ಎಂದು ವರದಿಯಾಗಿದ್ದು, AWD (ಆಲ್ ವೀಲ್ ಡ್ರೈವ್) ಆಯ್ಕೆಯಲ್ಲಿ ಮಾರುಕಟ್ಟೆಗೆ ಬರಬಹುದು.
ಟಾಟಾ, ದೇಶೀಯವಾಗಿ ಅತಿಹೆಚ್ಚಿನ ಸಂಖ್ಯೆಯಲ್ಲಿ ಮಾರಾಟ ಮಾಡುವ ಎಸ್‌ಯುವಿಗಳಲ್ಲಿ ನೆಕ್ಸಾನ್ ಪ್ರಮುಖವಾಗಿದೆ. ಇದರ 5 ಲಕ್ಷ ಯುನಿಟ್ ಸೇಲ್ ಮಾಡಿ, ಕಂಪನಿಯು ಈಗಾಗಲೇ ಐತಿಹಾಸಿಕ ಮೈಲಿಗಲ್ಲನ್ನು ನಿರ್ಮಾಣ ಮಾಡಿದೆ. ಕೆಲವೇ ತಿಂಗಳಲ್ಲಿ ನೂತನ ವಿನ್ಯಾಸ ಹಾಗೂ ಆಕರ್ಷಕ ವೈಶಿಷ್ಟ್ಯಗಳೊಂದಿಗೆ ನವೀಕರಿಸಿದ ನೆಕ್ಸಾನ್ ಬಿಡುಗಡೆ ಮಾಡಲಿದ್ದು, ಪರೀಕ್ಷಾರ್ಥ ಸಂಚಾರ ನಡೆಸುವ ಮೂಲಕ ಟಾಟಾ ಅಗತ್ಯ ಸಿದ್ಧತೆಯನ್ನು ನಡೆಸುತ್ತಿದೆ.

ಸದ್ಯ, ಭಾರತ ಮಾರುಕಟ್ಟೆಯಲ್ಲಿ ಟಾಟಾ ನೆಕ್ಸಾನ್ ರೂ.7.80 ಲಕ್ಷದಿಂದ ರೂ.14.35 ಲಕ್ಷ (ಎಕ್ಸ್ ಶೋರೂಂ) ದರವನ್ನು ಗ್ರಾಹಕರಿಗೆ ಖರೀದಿಗೆ ಸಿಗಲಿದ್ದು, 1.2 ಲೀಟರ್ ಥ್ರೀ ಸಿಲಿಂಡರ್ ಟರ್ಬೊ ಪೆಟ್ರೋಲ್ ಹಾಗೂ 1.5 ಲೀಟರ್ ಫೋರ್ ಸಿಲಿಂಡರ್ ಡಿಸೇಲ್ ಎಂಜಿನ್ ಆಯ್ಕೆಯನ್ನು ಹೊಂದಿದೆ. ಟಾಟಾ ನೆಕ್ಸಾನ್ ಎಲೆಕ್ಟ್ರಿಕ್ ಕಾರು, ರೂ.14.49 ಲಕ್ಷ ಆರಂಭಿಕ ಬೆಲೆಯನ್ನು ಹೊಂದಿದ್ದು, ಫುಲ್ ಚಾರ್ಜಿನಲ್ಲಿ 312 ಕಿ.ಮೀ.ರೇಂಜ್ ನೀಡುವ ಸಾಮರ್ಥ್ಯ ಪಡೆದಿದೆ.
ಟಾಟಾದ ಜನಪ್ರಿಯ ಕಾರುಗಳಲ್ಲಿ ಸಿಯೆರಾ ಒಂದಾಗಿತ್ತು. ಆದರೆ, ಬೇಡಿಕೆ ಕಳೆದುಕೊಂಡು ನಿಧಾನವಾಗಿ ದೇಶೀಯ ಮಾರುಕಟ್ಟೆಯಿಂದ ದೂರವಾಯಿತು. ಜನವರಿಯಲ್ಲಿ ದೆಹಲಿಯಲ್ಲಿ ಆಯೋಜಿಸಿದ್ದ ಆಟೋ ಎಕ್ಸ್‌ಪೋದಲ್ಲಿ ಟಾಟಾ, ಮತ್ತೆ ಸಿಯೆರಾ ಕಾನ್ಸೆಪ್ಟ್ ಎಸ್‌ಯುವಿಯನ್ನು ಅನಾವರಣ ಮಾಡಿತು. ಇದು ಮಹೀಂದ್ರಾ ಸ್ಕಾರ್ಪಿಯೊ ಎನ್ ಕಾರಿಗೆ ಪೈಪೋಟಿ ನೀಡಲು 7 ಆಸನ ಹಾಗೂ ಹೊಸದಾದ 1.5 ಲೀಟರ್ TGDi ಪೆಟ್ರೋಲ್ ಎಂಜಿನ್ ಆಯ್ಕೆಯಲ್ಲಿ 2025ರಲ್ಲಿ ಬಿಡುಗಡೆಯಾಗಲಿದೆ.

ಬಹುನೀರಿಕ್ಷಿತ ಹ್ಯಾರಿಯರ್ ಹಾಗೂ ಸಫಾರಿ ಎಸ್‌ಯುವಿಗಳು 2024ರ ಆರಂಭದಲ್ಲಿ ಭಾರತದ ಮಾರುಕಟ್ಟೆಯಲ್ಲಿ ಬಿಡುಗಡೆಯಾಗಲಿದ್ದು, ಹೊಸದಾದ 1.5 ಲೀಟರ್ tGDi ಪೆಟ್ರೋಲ್ ಎಂಜಿನ್ ಜೊತೆಗೆ ಹತ್ತು ಹಲವು ವೈಶಿಷ್ಟ್ಯಗಳನ್ನು ಹೊಂದಿರಲಿದೆ. ಅದಾದ ಒಂದು ವರ್ಷಗಳ ಬಳಿಕ, ಇವರೆಡು ಕಾರುಗಳು ಎಲೆಕ್ಟ್ರಿಕ್ ಪವರ್‌ಟ್ರೇನ್ ಪಡೆದುಕೊಂಡು 2025ರೊಳಗೆ ಲಾಂಚ್ ಆಗಲಿದ್ದು, ಸಂಪೂರ್ಣ ಚಾರ್ಜಿನಲ್ಲಿ 400 ರಿಂದ 500 ರೇಂಜ್ ನೀಡುವ ಸಾಮರ್ಥ್ಯ ಹೊಂದಿವೆ.
ಒಟ್ಟಾರೆಯಾಗಿ, ಕಾಲಕ್ಕೆ ತಕ್ಕಂತೆ ಟಾಟಾ ಕಂಪನಿ ಕೂಡ ಹೊಂದಿಕೊಳ್ಳುತ್ತಿದ್ದು, ICE ಚಾಲಿತ ಕಾರುಗಳಂತೆ ಎಲೆಕ್ಟ್ರಿಕ್ ಪವರ್‌ಟ್ರೇನ್ ಪಡೆದಿರುವ ಕಾರುಗಳನ್ನು ಅಭಿವೃದ್ಧಿಪಡಿಸುವ ಕಾರ್ಯದಲ್ಲಿ ನಿರತವಾಗಿದೆ. ಮುಂದಿನ ಒಂದರೆಡು ವರ್ಷದಲ್ಲಿ ಭಾರತದ ರಸ್ತೆಗಳಲ್ಲಿ ಇವೇ ಅಬ್ಬರಿಸಲಿವೆ. ಮೊದಲೇ ಟಾಟಾ ಕಾರುಗಳು ಕೈಗೆಟುಕುವ ದರವನ್ನು ಹೊಂದಿದ್ದು, ನೂತನ ಕಾರುಗಳು ಭರಪೂರ ವೈಶಿಷ್ಟ್ಯಗಳೊಂದಿಗೆ ಅಗ್ಗದ ಬೆಲೆಯಲ್ಲಿಯೇ ಬಿಡುಗಡೆಯಾಗಬಹುದು.


Click it and Unblock the Notifications