Tata Cars: ಬಿಡುಗಡೆಯಾಗಲಿವೆ ಪವರ್ ಫುಲ್ ಟಾಟಾ ಕಾರುಗಳು.. ಎಲ್ಲ ರೆಕಾರ್ಡ್ ಉಡೀಸ್ ಆದ್ರೂ ಆಶ್ಚರ್ಯವಿಲ್ಲ!
ಮುಂದಿನ 2 - 3 ವರ್ಷಗಳಲ್ಲಿ ಟಾಟಾ ಮೋಟಾರ್ಸ್ (Tata Motors) ಭಾರತದ ಮಾರುಕಟ್ಟೆಯಲ್ಲಿ ವಿವಿಧ ಪವರ್ ಫುಲ್ ಕಾರುಗಳನ್ನು ಬಿಡುಗಡೆ ಮಾಡಲಿದೆ. ಅವು ಮೊದಲಿಗೆ ICE ಚಾಲಿತ ಮಾದರಿಗಳಾಗಿ ಬರಲಿದ್ದು, ಆ ಮೇಲೆ ಎಲೆಕ್ಟ್ರಿಕ್ ಆವೃತ್ತಿಯಾಗಿ ಲಾಂಚ್ ಆಗಲಿವೆ. ಈಗಾಗಲೇ ಭಾರೀ ಪ್ರಮಾಣದಲ್ಲಿ ಕ್ರೇಜ್ ಹುಟ್ಟುಹಾಕಿವೆ.
ಮೊದಲಿಗೆ ಟಾಟಾದ ದೊಡ್ಡ ಮಟ್ಟದಲ್ಲಿ ನೀರಿಕ್ಷೆ ಇಟ್ಟುಕೊಂಡು ಅಭಿವೃದ್ಧಿಪಡಿಸುತ್ತಿರುವ Curvv ಎಸ್‌ಯುವಿ ಬಗ್ಗೆ ಮಾತನಾಡೋಣ. ಕಳೆದ ಜನವರಿ ತಿಂಗಳಲ್ಲಿ ಮುಕ್ತಾಯಗೊಂಡ ದೆಹಲಿ ಆಟೋ ಎಕ್ಸ್‌ಪೋದಲ್ಲಿ Curvv ಕಾನ್ಸೆಪ್ಟ್ ಆವೃತ್ತಿಯನ್ನು ಪ್ರದರ್ಶನ ಮಾಡಿತ್ತು. ಇದು, ಕಂಪನಿಯ ಜನರೇಷನ್ 2 EV ಆರ್ಕಿಟೆಕ್ಚರ್‌ನಲ್ಲಿ ರೆಡಿ ಮಾಡಲಾಗುತ್ತಿದ್ದು, ವಿನ್ಯಾಸ ಹಾಗೂ ವೈಶಿಷ್ಟ್ಯದ ದೃಷ್ಟಿಯಿಂದ ಹೆಚ್ಚು ಅತ್ಯಾಧುನಿಕವಾಗಿರಲಿದೆ.

ಈ ಕಾರು, ಇಂಧನ ಚಾಲಿತ ಹಾಗೂ ಎಲೆಕ್ಟ್ರಿಕ್ ಪವರ್‌ಟ್ರೇನ್ ಆಯ್ಕೆಯಲ್ಲಿ ಬಿಡುಗಡೆಯಾಗಲಿದೆ. ಟಾಟಾದ ನೂತನ 1.2 ಲೀಟರ್ ಟರ್ಬೊ ಎಂಜಿನ್ ಹೊಂದಿರಲಿದ್ದು,125 PS ಗರಿಷ್ಠ ಪವರ್ ಹಾಗೂ 225 Nm ಪೀಕ್ ಟಾರ್ಕ್ ಉತ್ಪಾದಿಸಬಹುದು. ಜೊತೆಗೆ ಎಲೆಕ್ಟ್ರಿಕ್ ಪವರ್‌ಟ್ರೇನ್ ಸಂಪೂರ್ಣ ಚಾರ್ಜಿನಲ್ಲಿ ಗರಿಷ್ಠ ರೇಂಜ್ ನೀಡಲು ಸಾಧ್ಯವಾಗುವಂತೆ ಕಂಪನಿಯು Curvv ಕಾರನ್ನು ತಯಾರಿಸುತ್ತಿದ್ದು, ಮಾರುತಿ ಸುಜುಕಿ ಗ್ರ್ಯಾಂಡ್ ವಿಟಾರಾ, ಹ್ಯುಂಡೈ ಕ್ರೆಟಾ ಕಾರುಗಳಿಗೆ ಪ್ರತಿಸ್ಪರ್ಧಿಯಾಗಲಿದೆ.
ಹ್ಯಾರಿಯರ್ ಇವಿಯನ್ನು ಮುಂದಿನ ಎರಡು ಮೂರು ವರ್ಷಗಳಲ್ಲಿ ಟಾಟಾ ಮೋಟಾರ್ಸ್ ಭಾರತದ ಮಾರುಕಟ್ಟೆಯಲ್ಲಿ ಲಾಂಚ್ ಮಾಡಲಿದೆ. ಇದನ್ನು ಕೂಡ ದೆಹಲಿ ಆಟೋ ಎಕ್ಸ್‌ಪೋದಲ್ಲಿ ಪ್ರದರ್ಶನ ಮಾಡಿತ್ತು. Curvv ಕಾನ್ಸೆಪ್ಟ್ ಆವೃತ್ತಿಯಂತೆಯೇ ಕಂಪನಿಯ ಜನರೇಷನ್ 2 EV ಆರ್ಕಿಟೆಕ್ಚರ್‌ನ್ನು ಆಧರಿಸಿರಲಿದ್ದು, ನವೀಕರಿಸಿದ ಬಂಪರ್ ಹಾಗೂ ಗ್ರೀಲ್ ಅನ್ನು ಪಡೆದಿರಲಿದೆ ಎಂದು ವರದಿಯಾಗಿದೆ.
ಈ ಕಾರು, ಐದು ಆಸನ ಸಾಮರ್ಥ್ಯ ಹೊಂದಿರಲಿದ್ದು, ನೆಕ್ಸಾನ್ ಇವಿಗಿಂದ ಹೆಚ್ಚಿನ ಸಾಮರ್ಥ್ಯದ ಬ್ಯಾಟರಿ ಪ್ಯಾಕ್ ಹೊಂದಿರಲಿದೆ. ಜೊತೆಗೆ ಸಂಪೂರ್ಣ ಚಾರ್ಜಿನಲ್ಲಿ 400 km ರೇಂಜ್ ನೀಡಲಿದೆ ಎಂದು ಅಂದಾಜಿಲಾಗಿದ್ದು, ಸುರಕ್ಷತೆಯ ದೃಷ್ಟಿಯಿಂದಲೂ 6 ಏರ್‌ಬ್ಯಾಗ್ಸ್, ABS (ಆಂಟಿಲಾಕ್ ಬ್ರೇಕಿಂಗ್ ಸಿಸ್ಯಮ್), ESP (ಎಲೆಕ್ಟ್ರಾನಿಕ್ ಸ್ಟೆಬಿಲಿಟಿ ಪ್ರೋಗ್ರಾಂ), TPMS (ಟೈರ್ ಪ್ರೆಶರ್ ಮಾನಿಟರಿಂಗ್ ಸಿಸ್ಟಮ್) ಸೇರಿದಂತೆ ಹತ್ತಾರು ವೈಶಿಷ್ಟ್ಯಗಳನ್ನು ಹೊಂದಿರಲಿದ್ದು, ಸುಮಾರು 30 ಲಕ್ಷ ಬೆಲೆಗೆ ಖರೀದಿಗೆ ಸಿಗಬಹುದು.
ಟಾಟಾ, ತನ್ನ ಮುಂಬರಲಿರುವ ಸಿಯೆರಾ ಕಾರಿನ ಮೇಲೆಯು ಹೆಚ್ಚಿನ ವಿಶ್ವಾಸ ಹೊಂದಿದೆ. ಇದನ್ನು ದೆಹಲಿ ಆಟೋ ಎಕ್ಸ್‌ಪೋದಲ್ಲಿ ಅನಾವರಣ ಮಾಡಿತ್ತು. ಕೆಲವೊಂದು ವರದಿ ಪ್ರಕಾರ, ಈ ಕಾರು ಉತ್ಪಾದನೆಗೆ ಸಿದ್ದವಾಗಿದ್ದು, ಇಂಧನ ಚಾಲಿತ ಹಾಗೂ ಎಲೆಕ್ಟ್ರಿಕ್ ಪವರ್‌ಟ್ರೇನ್ ಆಯ್ಕೆಯಲ್ಲಿ ಖರೀದಿಗೆ ಸಿಗಬಹುದು. ಜೊತೆಗೆ ರೂ.25 ಲಕ್ಷ ಬೆಲೆಯಲ್ಲಿ ದೊರೆಯಲಿದ್ದು, ಸಂಪೂರ್ಣ ಚಾರ್ಜಿನಲ್ಲಿ 400 km ರೇಂಜ್ ನೀಡಬಹುದು.
ಇನ್ನು, ಟಿಯಾಗೊ ಇವಿ ಹಾಗೂ ನೆಕ್ಸಾನ್ ಮಾರಾಟದೊಂದಿಗೆ ಭಾರತದ ಎಲೆಕ್ಟ್ರಿಕ್ ವಾಹನ ಮಾರುಕಟ್ಟೆಯಲ್ಲಿ ಮುಂಚೂಣಿಯಲ್ಲಿರುವ ಟಾಟಾ, ಮುಂಬರುವ ವರ್ಷಗಳಲ್ಲಿ ಈ ಕಾರುಗಳನ್ನು ಬಿಡುಗಡೆಗೊಳಿಸುವ ಮೂಲಕ ತನ್ನದೇ ಛಾಪು ಮೂಡಿಸಬಹುದು. ಜೊತೆಗೆ ನಾವು ಹೇಳಿರುವುದು ಕೇವಲ ಅಂದಾಜು ಬೆಲೆ ಮಾತ್ರ. ಕಂಪನಿಯು ಅದಕ್ಕಿಂತ ಕೈಗೆಟುಕುವ ಬೆಲೆಯಲ್ಲಿಯೇ ದೇಶಿಯ ಗ್ರಾಹಕರಿಗೆ ಖರೀದಿಗೆ ನೀಡಬಹುದು.
ಡ್ರೈವ್‌ಸ್ಪಾರ್ಕ್ ಕನ್ನಡ ವೆಬ್‌ಸೈಟ್ ತ್ವರಿತ ಆಟೋಮೊಬೈಲ್ ಸಂಬಂಧಿಸಿದ ಸುದ್ದಿಗಳನ್ನು ಒದಗಿಸುತ್ತದೆ, ಎಲ್ಲಾ ಸೋಷಿಯಲ್ ಮೀಡಿಯಾಗಳ ಮೂಲಕ ತಕ್ಷಣವೇ ಓದುಗರೊಂದಿಗೆ ಸುದ್ದಿಗಳನ್ನು ಹಂಚಿಕೊಳ್ಳುತ್ತದೆ. ಇತ್ತೀಚಿನ ಕಾರು, ಬೈಕ್ ಸುದ್ದಿ, ಟೆಸ್ಟ್ ಡ್ರೈವ್ ವರದಿಗಳು ಮತ್ತು ವೀಡಿಯೊಗಳನ್ನು ವೀಕ್ಷಿಸಲು ನಮ್ಮ ಫೇಸ್‌ಬುಕ್, ಇನ್‌ಸ್ಟಾಗ್ರಾಮ್ ಮತ್ತು ಯೂಟ್ಯೂಬ್ ಪೇಜ್‌ಗಳನ್ನು ಫಾಲೋ ಮಾಡಿ. ನಿಮಗೆ ಯಾವುದೇ ಸುದ್ದಿ ಇಷ್ಟವಾದರೆ ಲೈಕ್ ಮತ್ತು ಶೇರ್ ಮಾಡುವುದನ್ನು ಮರೆಯದಿರಿ.


Click it and Unblock the Notifications