Tata Cars: ಭಾರತದ ರಸ್ತೆಯನ್ನು ಆಳಲು ಬರುತ್ತಿವೆ ಸೂಪರ್ ಮೈಲೇಜ್‌ನ ಟಾಟಾ ಕಾರುಗಳು
ಭಾರತದಲ್ಲಿ ಟಾಟಾ (Tata) ವಿಶ್ವಾಸಾರ್ಹ ವಾಹನ ತಯಾರಕ ಕಂಪನಿಯಾಗಿ ಜನರ ಮನಸ್ಸಿನಲ್ಲಿ ಬೇರು ಬಿಟ್ಟಿದೆ. ಅದರ ಕಾರುಗಳ ಆಕರ್ಷಕ ವೈಶಿಷ್ಟ್ಯ, ವಿನ್ಯಾಸ ಹಾಗೂ ಕೈಗೆಟುಕುವ ಬೆಲೆ ಪ್ರತಿಯೊಬ್ಬ ಗ್ರಾಹಕನನ್ನು ಸೆಳೆಯುತ್ತದೆ. ಕಂಪನಿಯು ದೇಶೀಯ ಖರೀದಿದಾರರಿಗಾಗಿ 4 ಸಿಎನ್‌ಜಿ ಚಾಲಿತ ಕಾರುಗಳನ್ನು ಬಿಡುಗಡೆಗೊಳಿಸಲು ಸಕಲ ಸಿದ್ಧತೆ ನಡೆಸಿದೆ ಎಂದು ವರದಿಯಾಗಿದೆ.
ಮೊದಲಿಗೆ ಅಗ್ಗದ ಬೆಲೆ ಟಿಯಾಗೊ ಹಾಗೂ ಟಿಗೂರ್ ಕಾರುಗಳ ಬಗ್ಗೆ ಮಾತನಾಡೋಣ. ಇವೆರೆಡು ಕಾರುಗಳು ಸಿಎನ್‌ಜಿ ಕಿಟ್ ಆಯ್ಕೆಯಲ್ಲಿ ಭಾರತದ ಮಾರುಕಟ್ಟೆಯಲ್ಲಿ ಖರೀದಿಗೆ ಲಭ್ಯವಿದೆ. ಆದರೆ, ಅವುಗಳ ಸಾಮರ್ಥ್ಯ ತುಂಬಾ ಕಮ್ಮಿ ಇದ್ದು, ಆಲ್ಟ್ರೋಜ್ ಕಾರು ಹೊಂದಿರುವಂತೆ ಟ್ವಿನ್ ಸಿಲಿಂಡರ್ ಸಿಎನ್‌ಜಿ ಕಿಟ್ ಅನ್ನು ಅವಳಡಿಸಿ, ಈ ಕಾರುಗಳನ್ನು ಮಾರಾಟ ಮಾಡಲು ಟಾಟಾ ಸಿದ್ದತೆ ನಡೆಸುತ್ತಿದೆ ಎಂದು ಹೇಳಲಾಗಿದೆ.

ಸದ್ಯ, ಭಾರತದ ಮಾರುಕಟ್ಟೆಯಲ್ಲಿ ಖರೀದಿಗೆ ದೊರೆಯುವ ಟಾಟಾ ಟಿಯಾಗೊ ಸಿಎನ್‌ಜಿ ಕಾರು, ರೂ.8.01 ಲಕ್ಷ ಎಕ್ಸ್ ಶೋರೂಂ ಬೆಲೆಯಲ್ಲಿ ಲಭ್ಯವಿದೆ. 1199 ಸಿಸಿ ಸಾಮರ್ಥ್ಯದ ಎಂಜಿನ್ ಪಡೆದಿರುವ ಈ ಕಾರು, 26.49 km/kg ಮೈಲೇಜ್ ನೀಡುತ್ತದೆ. ಟಿಗೂರ್ ಸಿಎನ್‌ಜಿ ಕಾರು, ರೂ.8.76 ಲಕ್ಷ ಎಕ್ಸ್ ಶೋರೂಂ ದರದಲ್ಲಿ ಸಿಗಲಿದ್ದು, 26.49 km/kg ಇಂಧನ ದಕ್ಷತೆಯನ್ನು ಹೊಂದಿದೆ.
ಟಾಟಾ ಕಂಪನಿಯ ಬಹುನೀರಿಕ್ಷಿತ ಪಂಚ್ ಸಿಎನ್‌ಜಿ ಕಾರು, ಶೀಘ್ರದಲ್ಲೇ ಬಿಡುಗಡೆಯಾಗಲಿದ್ದು, ಈ ಕಾರು, ಮುಂಬೈ - ಪುಣೆ ರಾಷ್ಟ್ರಿಯ ಹೆದ್ದಾರಿಯಲ್ಲಿ ಪರೀಕ್ಷಾರ್ಥ ಸಂಚಾರ ನಡೆಸುವಾಗ ಕಂಡು ಬಂದಿದೆ. ಇದೊಂದು ಮೈಕ್ರೋ ಎಸ್‌ಯುವಿಯಾಗಿರುವುದರಿಂದ ಈ ವಿಭಾಗದಲ್ಲಿ ಯಾವುದೇ ಪ್ರಬಲ ಪ್ರತಿಸ್ಪರ್ಧಿಯಿಲ್ಲ ಎಂದು ಹೇಳಬಹುದು. ಪಂಚ್ ಸಿಎನ್‌ಜಿ ಸರಿ ಸುಮಾರು 30 km/kg ಮೈಲೇಜ್ ನೀಡಬಹುದು ಎಂದು ಅಂದಾಜಿಸಲಾಗಿದೆ.
ಈ ಕಾರು, 1.2 ಲೀಟರ್ 3 ಸಿಲಿಂಡರ್ ಎಂಜಿನ್ ಪಡೆದಿರಲಿದ್ದು, 5 ಸ್ವೀಡ್ MT ಗೇರ್ ಬಾಕ್ಸ್ ಆಯ್ಕೆಯಲ್ಲಿ ಖರೀದಿಗೆ ಸಿಗುವ ನಿರೀಕ್ಷೆಯಿದೆ. ಟಚ್‌ಸ್ಕ್ರೀನ್ ಡಿಸ್ಪ್ಲೇ, ಆಟೋ ಕ್ಲೇಮೇಟ್ ಕಂಟ್ರೋಲ್ ಸೇರಿದಂತೆ ವಿವಿಧ ವೈಶಿಷ್ಟ್ಯಗಳನ್ನು ಹೊಂದಿರಲಿದೆ. ಸುರಕ್ಷತೆಯ ದೃಷ್ಟಿಯಿಂದಲೂ ಅತ್ಯುತ್ತಮವಾಗಿರಲಿದ್ದು, ಮಲ್ಟಿ ಏರ್ ಬಾಗ್ಸ್ ಒಳಗೊಂಡಂತೆ ಹಲವು ಫೀಚರ್ಸ್ ಪಡೆದಿರುವ ನಿರೀಕ್ಷೆಯಿದೆ.
ಹೊಚ್ಚ ಹೊಸ ಟಾಟಾ ಪಂಚ್ ಕಾರು, ಹಬ್ಬದ ವೇಳೆಗೆ ದೇಶೀಯ ಮಾರುಕಟ್ಟೆಗೆ ಎಂಟ್ರಿಕೊಡಲಿದ್ದು, ರೂ.10 ಲಕ್ಷ ಆರಂಭಿಕ ಬೆಲೆಯಲ್ಲಿ ಖರೀದಿಗೆ ಸಿಗಬಹುದು ಎಂದು ಅಂದಾಜಿಸಲಾಗಿದೆ. ಟಾಟಾ ಕಂಪನಿ ಪ್ರತಿಸ್ಪರ್ಧಿ ಕಂಪನಿಗಳಿಗೆ ಟಫ್ ಫೈಟ್ ನೀಡಲು ಹೆಚ್ಚಿನ ಸಂಖ್ಯೆಯಲ್ಲಿ ಮಾರಾಟವಾಗುವ ನೆಕ್ಸಾನ್ ಎಸ್‌ಯುವಿಯಲ್ಲೂ ಟ್ವಿನ್ ಸಿಲಿಂಡರ್ ಸಿಎನ್‌ಜಿ ಅವಳಡಿಸಿ, ಮಾರಾಟ ಮಾಡಬಹುದು ಎಂದು ಹೇಳಲಾಗಿದೆ. ಆ ಬಗ್ಗೆ ಖಚಿತ ಮಾಹಿತಿ ಇಲ್ಲ.
ಸದ್ಯ, ದೇಶೀಯ ಮಾರುಕಟ್ಟೆಯಲ್ಲಿ ಖರೀದಿಗೆ ದೊರೆಯುವ ಟಾಟಾದ ಆಲ್ಟ್ರೋಜ್ ಸಿಎನ್‌ಜಿ ಕಾರಿನ ಬಗ್ಗೆ ಮಾತನಾಡುವುದಾದರೆ, ಈ ಕಾರನ್ನು ಇವತ್ತು ಬುಕ್ಕಿಂಗ್ ಮಾಡಿದರೂ ವಿತರಣೆಯಾಗಲು ಆರು ವಾರಗಳು ಬೇಕಾಗಿದೆ. ರೂ.7.55 ಲಕ್ಷದಿಂದ ರೂ.10.55 ಲಕ್ಷ ಎಕ್ಸ್ ಶೋರೂಂ ಬೆಲೆಯಲ್ಲಿ ಖರೀದಿಗೆ ಲಭ್ಯವಿದ್ದು, ಉತ್ತಮ ಮೈಲೇಜ್ ಹಾಗೂ ಆಕರ್ಷಕ ವೈಶಿಷ್ಟ್ಯದೊಂದಿಗೆ ಸಿಗುತ್ತದೆ.
ಇನ್ನು, ಟಾಟಾ ಕಂಪನಿ, ತನ್ನ ಟಿಯಾಗೊ, ಟಿಗೂರ್, ಪಂಚ್ ಹಾಗೂ ನೆಕ್ಸಾನ್ ಕಾರುಗಳನ್ನು ಸಿಎನ್‌ಜಿ ಕಿಟ್ ಅಳವಡಿಸಿ, ಬಿಡುಗಡೆಗೊಳಿಸುವ ಮೂಲಕ ಈ ವಿಭಾಗದಲ್ಲಿ ಪ್ರತಿಸ್ಪರ್ಧಿ ಕಂಪನಿಗಳಿಗೆ ಸರಿಯಾಗಿಯೇ ಠಕ್ಕರ್ ನೀಡಲು ಮುಂದಾಗಿದೆ. ಈಗಾಗಲೇ ಖರೀದಿದಾರರಲ್ಲಿ ಬಹುನೀರಿಕ್ಷೆ ಹುಟ್ಟಿಸಿರುವ ಪಂಚ್ ಸಿಎನ್‌ಜಿ ಹಬ್ಬಗಳ ಸೀಜನ್ ವೇಳೆಗೆ ಮಾರುಕಟ್ಟೆಗೆ ಅದ್ದೂರಿಯಾಗಿ ಎಂಟ್ರಿ ಕೊಡಲಿದ್ದು, ಹೇಗೆ ಗ್ರಾಹಕರನ್ನು ಆಕರ್ಷಿಸಲಿದೆ ಎಂಬುದನ್ನು ಕಾದುನೋಡಬೇಕಾಗಿದೆ.


Click it and Unblock the Notifications