ಭಾರತದಲ್ಲಿ ಕ್ರಾಂತಿ ಮಾಡಲು ಬರುತ್ತಿದೆ ಹೊಸ ಟಾಟಾ ಎಲೆಕ್ಟ್ರಿಕ್ ಕಾರುಗಳು: ಇವುಗಳೇ ನೋಡಿ..!

ಭಾರತದಲ್ಲಿ ಇಂಧನ ಬೆಲೆಗಳು ಗಗನಕ್ಕೆರಿದೆ. ಏರುತ್ತಿರುವ ಇಂಧನ ಬೆಲೆಗಳಿಂದ ಪಾರಾಗಲು ಜನರು ಪರ್ಯಾಯ ಆಯ್ಕೆಗಳನ್ನು ಹುಡುಕಲು ಪ್ರಾರಂಭಿಸಿದ್ದಾರೆ. ಇದರಿಂದ ಜನರು ನಿಧಾನವಾಗಿ ಎಲೆಕ್ಟ್ರಿಕ್ ಕಾರುಗಳ ಕಡೆ ಮುಖ ಮಾಡುತ್ತಿದ್ದಾರೆ. ದೇಶಿಯ ಮಾರುಕಟ್ಟೆಯಲ್ಲಿ ಎಲೆಕ್ಟ್ರಿಕ್ ವಾಹನಗಳ ಮಾರಾಟವು ತಿಂಗಳಿನಿಂದ ತಿಂಗಳ ಬೆಳವಣಿಗೆಯು ಹೆಚ್ಚಾಗಿದೆ.

ಈ ವೇಳೆ ಟಾಟಾ ಭಾರತೀಯ ಮಾರುಕಟ್ಟೆಯ ಎಲೆಕ್ಟ್ರಿಕ್ ಕಾರುಗಳ ವಿಭಾಗದಲ್ಲಿ ಪಾರುಪತ್ಯ ಮುಂದುವರೆಸಲು ಪ್ರಯತ್ನಿಸುತ್ತಿದೆ. ಸದ್ಯ ಭಾರತದಲ್ಲಿ ಎಲೆಕ್ಟ್ರಿಕ್ ಕಾರುಗಳ ವಿಭಾಗದಲ್ಲಿ ಟಾಟಾ ಮೇಲುಗೈಯನ್ನು ಸಾಧಿಸಿದೆ. ಟಾಟಾ ಮೋಟಾರ್ಸ್ ಪ್ರಸ್ತುತ ಎಲೆಕ್ಟ್ರಿಕ್ ಪ್ಯಾಸೆಂಜರ್ ಕಾರು ವಿಭಾಗದಲ್ಲಿ ಶೇಕಡಾ 80 ಕ್ಕಿಂತ ಹೆಚ್ಚು ಮಾರುಕಟ್ಟೆ ಪಾಲನ್ನು ಹೊಂದಿದೆ. ಹೆಚ್ಚುತ್ತಿರುವ ಬೇಡಿಕೆಯನ್ನು ಪೂರೈಸಲು ಸ್ವದೇಶಿ ಟಾಟಾ ಮೋಟರ್ಸ್ ಕಂಪನಿಯು ದೇಶದಲ್ಲಿ 1 ಲಕ್ಷ ಎಲೆಕ್ಟ್ರಿಕ್ ವಾಹನಗಳನ್ನು ಉತ್ಪಾದಿಸುವ ಗುರಿಯನ್ನು ಹೊಂದಿದೆ. ಭಾರತದಲ್ಲಿ ಬಿಡುಗಡೆಯಾಗಲಿವು ಬಹುನಿರೀಕ್ಷಿತ ಟಾಟಾ ಕಾರುಗಳ ಮಾಹಿತಿ ಇಲ್ಲಿದೆ.

ಕ್ರಾಂತಿ ಮಾಡಲು ಬರುತ್ತಿದೆ ಹೊಸ ಟಾಟಾ ಎಲೆಕ್ಟ್ರಿಕ್ ಕಾರುಗಳು

ಟಾಟಾ ಹ್ಯಾರಿಯರ್ ಇವಿ
ಟಾಟಾ ಮೋಟಾರ್ಸ್ ತನ್ನ ಹ್ಯಾರಿಯರ್ ಇವಿ ಕಾನ್ಸೆಪ್ಟ್ ಮಾದರಿಯನ್ನು ಅನಾವರಣಗೊಳಿಸಿ ಎಲೆಕ್ಟ್ರಿಕ್ ಕಾರುಗಳ ವಿಭಾಗದಲ್ಲಿ ಹೊಸ ಸಂಚಲನವನ್ನು ಮೂಡಿಸಲು ಸಜ್ಜಾಗಿದೆ. ಗ್ರೇಟರ್ ನೋಯ್ಡಾದಲ್ಲಿ ನಡೆಯುತ್ತಿರುವ 2023 ಆಟೋ ಎಕ್ಸ್‌ಪೋದಲ್ಲಿ ಟಾಟಾ ಹ್ಯಾರಿಯರ್ ಎಲೆಕ್ಟ್ರಿಕ್ ಎಸ್‍ಯುವಿಯನ್ನು ಅನಾವರಣಗೊಳಿಸಿತು. ಹೊಸ ಟಾಟಾ ಹ್ಯಾರಿಯರ್ ಎಲೆಕ್ಟ್ರಿಕ್ ಎಸ್‍ಯುವಿಯನ್ನು ಕಂಪನಿಯ ಮೊದಲ 'ಬಾರ್ನ್ ಎಲೆಕ್ಟ್ರಿಕ್' ಪ್ಲಾಟ್‌ಫಾರ್ಮ್‌ನಲ್ಲಿ ವಿನ್ಯಾಸಗೊಳಿಸಲಾಗಿದೆ, ಇದು ಎರಡು ಮತ್ತು ಮೂರು-ಸಾಲು ಸೀಟಿಂಗ್ ಕಾನ್ಫಿಗರೇಶನ್‌ಗಳೊಂದಿಗೆ ಬಹು ಬಾಡಿ ಶೈಲಿಗಳಿಗೆ ಹೊಂದಿಕೊಳ್ಳುತ್ತದೆ.

ಈ ಇವಿ ಕಾನ್ಸೆಪ್ಟ್ ಬ್ರ್ಯಾಂಡ್‌ನ ಹೊಸ ಎಲೆಕ್ಟ್ರಿಕ್ ಸ್ಕೇಟ್‌ಬೋರ್ಡ್ ಆರ್ಕಿಟೆಕ್ಚರ್‌ನ ನಮ್ಯತೆ ಮತ್ತು ಬಹುಮುಖತೆಯನ್ನು ಪ್ರದರ್ಶಿಸುತ್ತವೆ. ಈ ಹೊಸ ಟಾಟಾ ಹ್ಯಾರಿಯರ್ ಇವಿ ಕಾನ್ಸೆಪ್ಟ್ ಮುಂಭಾಗದ ಫಾಸಿಕವು ಜೊತೆಗೆ ಅದರ ಹಿಂಭಾಗದಲ್ಲಿ ವಿಸ್ತರಿಸಿರುವ ಪ್ರಕಾಶಿತ 'T' ಲೋಗೋವನ್ನು ಹೊಂದಿದೆ. ಟಾಟಾದ ಮೀಸಲಾದ ಜೆನ್ 3 (ಬಾರ್ನ್ ಎಲೆಕ್ಟ್ರಿಕ್) ಆರ್ಕಿಟೆಕ್ಚರ್ ಐಸಿ ಎಂಜಿನ್ ಆಧಾರಿತ ಪ್ಲಾಟ್‌ಫಾರ್ಮ್‌ನ ಪ್ಯಾಕೇಜಿಂಗ್ ಮತ್ತು ವಿನ್ಯಾಸದ ನಿರ್ಬಂಧಗಳಿಂದ ಮುಕ್ತವಾಗಿದೆ ಎಂದು ಹೇಳಲಾಗುತ್ತದೆ. ICE-ಚಾಲಿತ ಹ್ಯಾರಿಯರ್ ಮತ್ತು ಸಫಾರಿ ಎಸ್‍ಯುವಿಗಳ ಎಲೆಕ್ಟ್ರಿಕ್ ಒಮೆಗಾ ಆರ್ಕ್ ಪ್ಲಾಟ್‌ಫಾರ್ಮ್ ಅನ್ನು ಆಧರಿಸಿದೆ.

ಕ್ರಾಂತಿ ಮಾಡಲು ಬರುತ್ತಿದೆ ಹೊಸ ಟಾಟಾ ಎಲೆಕ್ಟ್ರಿಕ್ ಕಾರುಗಳು

ಟಾಟಾ ಸಿಯೆರಾ ಇವಿ
ಟಾಟಾ ಮೋಟಾರ್ಸ್ 2023ರ ಆಟೋ ಎಕ್ಸ್ ಪೋದಲ್ಲಿ ಉತ್ಪಾದನೆಗೆ ಸಿದ್ಧವಾಗಿರುವ ಸಿಯೆರಾ ಎಲೆಕ್ಟ್ರಿಕ್ ಎಸ್‍ಯುವಿಯನ್ನು ಈಗಾಗಲೇ ಅನಾವರಣಗೊಳಿಸಿದೆ. ಟಾಟಾದ ಕಾರುಗಳ ಸರಣಿಯಲ್ಲಿ ಸಫಾರಿ ಎಸ್‍ಯುವಿ ಮಾದರಿಯ ಮೇಲಿನ ಸ್ಥಾನವನ್ನು ಪಡೆದುಕೊಳ್ಳುತ್ತದೆ. ಅಲ್ಲದೇ ಇದನ್ನು ಪೆಟ್ರೋಲ್ ರೂಪಾಂತರದಲ್ಲಿಯೂ ಬಿಡುಗಡೆಯಾಗಲಿದೆ. ಗ್ರೇಟರ್ ನೋಯ್ಡಾದಲ್ಲಿ ನಡೆದ 2023ರ ಆಟೋ ಎಕ್ಸ್‌ಪೋದಲ್ಲಿ ಪ್ರದರ್ಶಿಸಿದ ಟಾಟಾ ಮೋಟಾರ್ಸ್‌ನ ಎಲೆಕ್ಟ್ರಿಕ್ ಕಾರುಗಳಲ್ಲಿ ಸಿಯೆರಾ ಇವಿ ಕೂಡ ಒಂದಾಗಿದೆ. ಟಾಟಾದ ಲೈನಪ್‌ನ ಸಿಯೆರಾ ಎಲೆಕ್ಟ್ರಿಕ್ ಎಸ್‍ಯುವಿ ಮಾದರಿಯು ICE ವಾಹನಗಳನ್ನು ಹುಟ್ಟುಹಾಕಲು ಬಳಸಬಹುದಾದ ಸ್ಕೇಲೆಬಲ್ ಪ್ಲಾಟ್‌ಫಾರ್ಮ್‌ನಲ್ಲಿದೆ.

ಟಾಟಾ ಸಿಯೆರಾ ಇವಿ 2020ದಲ್ಲಿ ಆಟೋ ಎಕ್ಸ್‌ಪೋದ ಹಿಂದಿನ ಆವೃತ್ತಿಯಲ್ಲಿ ಮೊದಲ ಬಾರಿಗೆ ಕಾಣಿಸಿಕೊಂಡ ಕಾನ್ಸೆಪ್ಟ್ ಗಿಂತ ಹೆಚ್ಚು ಉತ್ಪಾದನೆಗೆ ಸಿದ್ಧವಾಗಿದೆ. ಸಿಯೆರಾ ಇವಿಯ ಒಟ್ಟಾರೆ ನೋಟವು 2020 ರಿಂದ ಹೆಚ್ಚು ಬದಲಾವಣೆಗಳನ್ನು ಮಾಡಲಾಗಿಲ್ಲ. ಮುಂದಿನ ದಿನಗಳಲ್ಲಿ ಈ ಹೊಸ ಟಾಟಾ ಸಿಯೆರಾ ಎಲೆಕ್ಟ್ರಿಕ್ ಎಸ್‍ಯುವಿಯ ಬಗ್ಗೆ ಹೆಚ್ಚಿನ ಮಾಹಿತಿಗಳು ಬಹಿರಂಗವಾಗಲಿದೆ. ಎರಡನೆಯದು 40.5kWh ಬ್ಯಾಟರಿ ಪ್ಯಾಕ್‌ನೊಂದಿಗೆ 437 ಕಿ.ಮೀ ರೇಂಜ್ ಅನ್ನು ನೀಡಬಹುದು ಇದರಲ್ಲಿ ಎಲೆಕ್ಟ್ರಿಕ್ ಮೋಟರ್ ಕೂಡ ಇದೆ. ಸೆಟಪ್ 143bhp ಪವರ್ ಮತ್ತು 250Nm ಟಾರ್ಕ್ ಅನ್ನು ನೀಡುತ್ತದೆ.

ಕ್ರಾಂತಿ ಮಾಡಲು ಬರುತ್ತಿದೆ ಹೊಸ ಟಾಟಾ ಎಲೆಕ್ಟ್ರಿಕ್ ಕಾರುಗಳು

ಟಾಟಾ Curvv ಇವಿ
ಸ್ವದೇಶಿ ವಾಹನ ತಯಾರಕ ಕಂಪನಿಯಾದ ಟಾಟಾ ಮೋಟಾರ್ಸ್ 2023ರ ಆಟೋ ಎಕ್ಸ್‌ಪೋದಲ್ಲಿ ತನ್ನ ಹೊಸ Curvv ಕಾನ್ಸೆಪ್ಟ್ ಆವೃತ್ತಿಯನ್ನು ಅನಾವರಣಗೊಳಿಸಿತು. ಈ ಹೊಸ ಟಾಟಾ Curvv ICE ಆವೃತ್ತಿಯು ಉತ್ಪಾದನೆಗೆ ಸಿದ್ಧವಾಗಲು ಹತ್ತಿರದಲ್ಲಿದೆ. ಈ ಹೊಸ ಟಾಟಾ ಕಾನ್ಸೆಪ್ಟ್ ಮಾದರಿಯು ಕೆಂಪು ಬಣ್ಣವನ್ನು ಹೊಂದಿದೆ. ಇನ್ನು 2023ರ ಆಟೋ ಎಕ್ಸ್‌ಪೋದಲ್ಲಿ ಪ್ರದರ್ಶಿಸಲಾದ ಟಾಟಾ Curvv ಕಳೆದ ವರ್ಷ ಎಲೆಕ್ಟ್ರಿಕ್ ವಾಹನ ಕಾನ್ಸೆಪ್ಟ್ ರೂಪದಲ್ಲಿ ತೋರಿಸಿದ್ದಕ್ಕಿಂತ ಸ್ವಲ್ಪ ಭಿನ್ನವಾಗಿದೆ. ಆದರೆ ಟಾಟಾ Curvv ಮಾದರಿಯು ಎಲೆಕ್ಟ್ರಿಕ್ ರೂಪದಲ್ಲಿ ಮೊದಲು ಬಿಡುಗಡೆಯಾಗುವ ಸಾಧ್ಯತೆಗಳಿದೆ.

ಉತ್ಪಾದನೆಗೆ ಸಿದ್ಧವಾಗಿರುವ ಮಾದರಿಯನ್ನು 2024 ರಲ್ಲಿ ಬಿಡುಗಡೆ ಮಾಡಲಾಗುವುದು ಎಂದು ಕಂಪನಿಯು ದೃಢಪಡಿಸಿದೆ. ಇದು ಟಾಟಾದ ಜನರೇಷನ್ 2EV ಆರ್ಕಿಟೆಕ್ಚರ್ ಅನ್ನು ಆಧರಿಸಿದೆ, ಇದು ಬಹು ಬಾಡಿಸ್ಟೈಲ್ ಮತ್ತು ಪವರ್‌ಟ್ರೇನ್ ಆಯ್ಕೆಗಳೊಂದಿಗೆ ಹೊಂದಿಕೊಳ್ಳುತ್ತದೆ. AWD ಸಿಸ್ಟಂ ಅನ್ನು ಒದಗಿಸುವ ಡ್ಯುಯಲ್ ಮೋಟಾರ್ ಸೆಟಪ್ ಸೇರಿದಂತೆ ದೊಡ್ಡ ಬ್ಯಾಟರಿಗಳು ಮತ್ತು ವಿಭಿನ್ನ ಪವರ್‌ಟ್ರೇನ್‌ಗಳನ್ನು ಅಳವಡಿಸಲು ಪ್ಲಾಟ್‌ಫಾರ್ಮ್ ಅನ್ನು ವಿನ್ಯಾಸಗೊಳಿಸಲಾಗಿದೆ. ಎಲೆಕ್ಟ್ರಿಕ್ ವಾಹನಗಳ ಮಾರಾಟವಾನ್ನು ಹೆಚ್ಚಿಸಲು ಟಾಟಾ ಕಂಪನಿಯು Curvv ಎಸ್‍ಯುವಿಯನ್ನು ಬಿಡುಗಡೆಗೊಳಿಸಲಿದೆ.

Article Published On: Tuesday, January 17, 2023, 13:51 [IST]
English summary
Upcoming tata electric cars in india details in kannada
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+