Hero Karizma: ಹೊಸ ಹೀರೋ ಕರಿಜ್ಮಾ ವೇಗಕ್ಕೆ ಸಾರಿಸಾಟಿ ಇದ್ಯಾ?, ವಿಡಿಯೋದಲ್ಲಿ ಬಯಲಾಯ್ತು ಸತ್ಯ!
ಕಳೆದ ಕೆಲವು ವರ್ಷಗಳ ಹಿಂದೆ, ದೇಶದ ಯುವಕರನ್ನು ನಿಮ್ಮ ಮೆಚ್ಚಿನ ಬೈಕ್ ಯಾವುದೆಂದು ಕೇಳಿದರೆ, ತಕ್ಷಣ ಬರುತ್ತಿದ್ದ ಒಂದೇ ಉತ್ತರ ಹೀರೋ ಕರಿಜ್ಮಾ (Hero Karizma) ಎಂದು. ಅಷ್ಟರಮಟ್ಟಿಗೆ ಈ ಮೋಟಾರ್ ಸೈಕಲ್ ಜನಪ್ರಿಯವಾಗಿತ್ತು. ಇತ್ತೀಚೆಗೆ, ನವೀಕರಣದೊಂದಿಗೆ ಹೊಸ ಕರಿಜ್ಮಾ ಎಕ್ಸ್ಎಂಆರ್ ಬೈಕ್‍ನ್ನು ಹೀರೋ ಮೋಟೊಕಾರ್ಪ್ ಬಿಡುಗಡೆಗೊಳಿಸಿತ್ತು.
ಕೆಲವೇ ದಿನಗಳ ಹಿಂದೆಯಷ್ಟೇ ಬ್ಲಾಗರ್‌ವೊಬ್ಬ, ನೂತನ ಕರಿಜ್ಮಾ ಬೈಕ್‍ನ ಟಾಪ್ ಸ್ಪೀಡ್ ಅನ್ನು ಪರೀಕ್ಷೆ ಮಾಡಿದ್ದಾನೆ. ಆ ವಿಡಿಯೋವನ್ನು ಯೂಟ್ಯೂಬ್ ವಾಹಿನಿಯಲ್ಲಿ ಹಂಚಿಕೊಳ್ಳಲಾಗಿದೆ. 210 ಸಿಸಿ ಲಿಕ್ವಿಡ್ ಕೂಲ್ಡ್ ಎಂಜಿನ್ ಹೊಂದಿರುವ ಕಂಪನಿಯ ಮೊದಲ ಮೋಟಾರ್ ಸೈಕಲ್ ಇದಾಗಿದ್ದು, ಬಹುತೇಕರಿಗೆ ರಸ್ತೆಗೆ ಬಂದ ಮೇಲೆ ಹೇಗೆ ಗರಿಷ್ಠ ವೇಗವನ್ನು ಪಡೆಲಿದೆ ಎಂಬ ಕುತೂಹಲವಿರಬಹುದು. ಅದಕೆಲ್ಲ ಬ್ಲಾಗರ್ ಉತ್ತರ ಕೊಡಲು ಪ್ರಯತ್ನಿಸಿದ್ದಾರೆ.

ಹೀರೋ ಕರಿಜ್ಮಾ ಎಕ್ಸ್ಎಂಆರ್ ಬೈಕಿನ ಟಾಪ್ ಸ್ವೀಡ್ ತಿಳಿಯುವ ಮೊದಲು, ಅದರ ಎಂಜಿನ್ ಕಾರ್ಯಕ್ಷಮತೆ ಬಗ್ಗೆ ಮಾತನಾಡೋಣ. ಈ ಮೋಟಾರ್ ಸೈಕಲ್, 210 ಸಿಸಿ ಸಿಂಗಲ್ ಸಿಲಿಂಡರ್, ಲಿಕ್ವಿಡ್ ಕೂಲ್ಡ್, 4 ವಾಲ್ವ್, DOHC ಎಂಜಿನ್ ಹೊಂದಿದ್ದು, 9,250rpmನಲ್ಲಿ 25.15 bhp ಗರಿಷ್ಠ ಪವರ್ ಮತ್ತು 7,250rpmನಲ್ಲಿ 20.4 Nm ಪೀಕ್ ಟಾರ್ಕ್ ಉತ್ಪಾದಿಸುತ್ತದೆ. ಜೊತೆಗೆ 6-ಸ್ಪೀಡ್ ಗೇರ್‌ಬಾಕ್ಸ್‌ನೊಂದಿಗೆ ಲಭ್ಯವಿದೆ.
ಬ್ಲಾಗರ್, ನೂತನ ಕರಿಜ್ಮಾ ಎಕ್ಸ್ಎಂಆರ್ ಬೈಕ್ ಓಡಿಸಲು ಆರಂಭಿಸಿದಾಗ ಒಂದನೇ ಗೇರ್‌ನಲ್ಲಿ ಗಂಟೆಗೆ 45 ಕಿಮೀ ತಲುಪುತ್ತದೆ. ಮತ್ತೆ ಆತ ಗೇರ್ ಬದಲಿಸಿ, ಎರಡನೇ ಗೇರ್‌ಗೆ ಹೋದಾಗ 65 ಕಿಮೀ ವೇಗಕ್ಕೆ ಹೋಗುತ್ತದೆ. ನಂತರ ಮೂರನೇ ಗೇರ್‌ನಲ್ಲಿ 86 ಕಿಮೀ ಟಾಪ್ ಸ್ವೀಡ್ ಪಡೆಯುವುದನ್ನು ವಿಡಿಯೋದಲ್ಲಿ ನೋಡಬಹುದು.
ಆತ, ನಾಲ್ಕನೇ ಗೇರ್‌ನಲ್ಲಿ ಹೀರೋ ಕರಿಜ್ಮಾ ಎಕ್ಸ್ಎಂಆರ್ ಬೈಕ್‍ನ್ನು ಗಂಟೆಗೆ 108 ಕಿಮೀ ವೇಗಕ್ಕೆ ಓಡಿಸುತ್ತಾನೆ. ಐದನೇ ಗೇರ್‌ನಲ್ಲಿ 126 ಕಿಮೀ ವೇಗವನ್ನು ತಲುಪತ್ತದೆ. ಆರನೇ ಗೇರ್‌ನಲ್ಲಿ 141 ಕಿಮೀ ಟಾಪ್ ಸ್ವೀಡ್ ಪಡೆಯುತ್ತದೆ. ಅಂತಿಮವಾಗಿ, ವಿಡಿಯೋ ಮುಕ್ತಾಯವಾಗುವ ವೇಳೆಗೆ ಗಂಟೆಗೆ 147 ಕಿಮೀ ವೇಗವನ್ನು ಮುಟ್ಟಿತು ಎಂಬುದನ್ನು ತೋರಿಸಲಾಗಿದೆ. ಆದರೆ, ಆ ಬ್ಲಾಗರ್ ವೇಗ ಪರೀಕ್ಷೆಯನ್ನು ರೇಸ್ ಟ್ರಾಕ್ ನಲ್ಲಿ ಮಾಡದೇ ಸಾರ್ವಜನಿಕ ರಸ್ತೆಯಲ್ಲಿ ನಡೆಸಿದ್ದು ತಪ್ಪು.
ಸದ್ಯ, ಭಾರತದ ಮಾರುಕಟ್ಟೆಯಲ್ಲಿ ಖರೀದಿಗೆ ದೊರೆಯುವ ಹೀರೋ ಕರಿಜ್ಮಾ ಎಕ್ಸ್ಎಂಆರ್ ಬೈಕ್, ರೂ.2,21,200 (ಬೆಂಗಳೂರು ಆನ್ - ರೋಡ್) ಬೆಲೆಯನ್ನು ಹೊಂದಿದೆ. ಐಕಾನಿಕ್ ಯೆಲ್ಲೋ, ಟರ್ಬೊ ರೆಡ್ ಮತ್ತು ಮ್ಯಾಟ್ ಫ್ಯಾಂಟಮ್ ಬ್ಲ್ಯಾಕ್ ಬಣ್ಣಗಳ ಆಯ್ಕೆಯಲ್ಲಿ ದೊರೆಯುತ್ತದೆ. 11 ಲೀಟರ್ ಸಾಮರ್ಥ್ಯದ ಫ್ಯುಯೆಲ್ ಟ್ಯಾಂಕ್ ಒಳಗೊಂಡಿದೆ.
ಈ ಹೀರೋ ಕರಿಜ್ಮಾ ಎಕ್ಸ್ಎಂಆರ್ ಮೋಟಾರ್ ಸೈಕಲ್, ಎಲ್ಇಡಿ ಹೆಡ್‌ಲ್ಯಾಂಪ್ಸ್, ಡೇಂಜರ್ ಸ್ವಿಚ್, ಬ್ಯಾಕ್‌ಲಿಟ್ ಸ್ವಿಚ್‌ಗೇರ್, ಎಲ್ಇಡಿ ಟೈಲ್‌ಲ್ಯಾಂಪ್ಸ್, ಎಲ್ಇಡಿ ಟರ್ನ್ ಇಂಡಿಕೇಟರ್ ಅನ್ನು ಹೊಂದಿದೆ. ಸ್ಮಾರ್ಟ್ ಫೋನ್ ಕನೆಕ್ಟ್ದ್ LCD ಡಿಸ್ಪ್ಲೇ, ಡ್ಯುಯಲ್ - ಚಾನೆಲ್ ABS (ಆಂಟಿಲಾಕ್ ಬ್ರೇಕಿಂಗ್ ಸಿಸ್ಟಮ್), ಫಾಸ್ಟ್ ಚಾರ್ಜಿಂಗ್ ಯುಎಸ್‌ಬಿ ಪೋರ್ಟ್ ಸೇರಿದಂತೆ ಹತ್ತಾರು ವೈಶಿಷ್ಟ್ಯಗಳನ್ನು ಹೊಂದಿದೆ.
ಹೀರೋ ಕರಿಜ್ಮಾ, ಫ್ರಂಟ್ ಟೆಲಿಸ್ಕೋಪಿಕ್ ಪೋರ್ಕ್ಸ್, ರೇರ್ ಮೊನೊಶಾಕ್ ಸಸ್ಪೆನ್ಷನ್ ಸೆಟಪ್ ಹೊಂದಿದೆ. ಬ್ರೇಕಿಂಗ್ ಸಿಸ್ಟಮ್ ವಿಚಾರಕ್ಕೆ ಬರುವುದಾದರೆ, ಮುಂಭಾಗ 300 ಎಂಎಂ, ಹಿಂಭಾಗ 230 ಎಂಎಂ ಅಳತೆಯ ಡಿಸ್ಕ್ ಬ್ರೇಕ್ ಆಯ್ಕೆಯನ್ನು ಪಡೆದಿದೆ. ಜೊತೆಗೆ 17 - ಇಂಚಿನ ಅಲಾಯ್ ವೀಲ್ಸ್, ಫ್ರಂಟ್ 100/80, ರೇರ್ 140/70 ಅಳತೆಯ ಟೈಯರ್ಸ್ ಒಳಗೊಂಡಿದೆ.
ಡ್ರೈವ್‌ಸ್ಪಾರ್ಕ್ ಕನ್ನಡ ವೆಬ್‌ಸೈಟ್ ತ್ವರಿತವಾಗಿ ಆಟೋಮೊಬೈಲ್ ಸಂಬಂಧಿಸಿದ ಸುದ್ದಿಗಳನ್ನು ನೀಡುತ್ತದೆ. ಜೊತೆಗೆ ಸೋಷಿಯಲ್ ಮೀಡಿಯಾಗಳ ಮೂಲಕ ತಕ್ಷಣವೇ ಓದುಗರೊಂದಿಗೆ ಸುದ್ದಿಗಳನ್ನು ಶೇರ್ ಮಾಡುತ್ತೇವೆ. ಇತ್ತೀಚಿನ ಕಾರು, ಬೈಕ್ ಸುದ್ದಿ, ಟೆಸ್ಟ್ ಡ್ರೈವ್ ವರದಿಗಳು ಮತ್ತು ವೀಡಿಯೊಗಳನ್ನು ಪಡೆಯಲು ನಮ್ಮ ಫೇಸ್‌ಬುಕ್, ಇನ್‌ಸ್ಟಾಗ್ರಾಮ್, ಯೂಟ್ಯೂಬ್ ಪೇಜ್‌ಗಳೊಂದಿಗೆ ಫಾಲೋ ಮಾಡಿ. ನಿಮಗೆ ನಮ್ಮ ಯಾವುದೇ ಸುದ್ದಿ ಇಷ್ಟವಾದರೆ ಲೈಕ್, ಕಾಮೆಂಟ್ ಮಾಡುವುದನ್ನು ಮರೆಯದಿರಿ.


Click it and Unblock the Notifications