ವಿದೇಶಿಗರ ಸ್ವದೇಶಿ ವರ್ತನೆ... ಬಿಟ್ಟಿ ಪ್ರಯಾಣ, ಕಾನೂನು ಬಾಹಿರ: ಭಾರತೀಯರು ಹೀಗೆ ಮಾಡೋದೆ ಇಲ್ಲ!
ವಿದೇಶಿಗರ ಸ್ವದೇಶಿ ವರ್ತನೆಗೆ ಸೋಷಿಯಲ್ ಮೀಡಿಯಾ ಫಿದಾ ಆಗಿದೆ. ಆದ್ರೆ ನಮ್ಮ ದೇಶದಲ್ಲೀಗ ಸ್ವದೇಶಿಗರ ಇಂತಹ ದೃಷ್ಯಗಳು ಕಾಣುವುದೇ ತುಂಬಾ ಅಪರೂಪ. ಇದು ಕಾನೂನು ಬಾಹಿರ ಎಂಬುದನ್ನು ಮರೆಯಬಾರದು. ಆ ವಿದೇಶಿಗರಿಗೆ ಇದರ ಬಗ್ಗೆ ಅರಿವಿದೆಯೋ ಇಲ್ಲವೋ ತಿಳಿದಿಲ್ಲ. ಹಿಂಬದಿ ಬರುವ ಕಾರು ಚಾಲಕ ಈ ದೃಷ್ಯಗಳನ್ನು ಹರಿಬಿಟ್ಟಿದ್ದಾನೆ.
ವಿದೇಶಗಳಲ್ಲಿ ಭಾರತವನ್ನು ಹೀಗೆಯೇ ಬಿಂಬಿಸಲಾಗಿದೆ. ಇಲ್ಲಿನ ಸಂಸ್ಕೃತಿಯ ಜೊತೆಗೆ ಬಡತನವನ್ನು ಹೆಚ್ಚಾಗಿ ತೋರಿಸುವ ವಿದೇಶಿ ಪ್ರವಾಸಿಗರು ನಗರಗಳ ಅಭಿವೃದ್ಧಿಯನ್ನು ತೋರುವುದೇ ಇಲ್ಲ. ಒಂದು ವೇಳೆ ತೋರಿಸಿದ್ರು ಅವನ್ನು ಹೆಚ್ಚಾಗಿ ಗಮನಿಸಿದೇ ಬಡತನವೇ ಹೈಲೆಟ್ ಆಗುತ್ತದೆ. ಉದಾಹರಣೆಗೆ ಅಮೆರಿಕಾವನ್ನು ಆರ್ಥಿಕವಾಗಿ ಬಲಿಷ್ಟ ದೇಶ ಎಂದು ಹೇಳಲಾಗುತ್ತದೆ.

ಆದ್ರೆ ಅಮೆರಿಕಾದಲ್ಲೂ ಬಿಕ್ಷುಕರನ್ನು ಕಾಣಬಹುದು, ಅಲ್ಲಿನ ಕೆಲ ಪ್ರದೇಶಗಳಲ್ಲಿ ಮನೆಗಳಿಲ್ಲದೇ ರಸ್ತೆಗಳಲ್ಲಿ ಮಲಗುವ ಜನರಿದ್ದಾರೆ. ಆದ್ರೆ ಈ ವಿಷಯ ಹಲವರಿಗೆ ಗೊತ್ತಿಲ್ಲ್, ಆದ್ರೂ ಅಮೆರಿಕಾ ಎಂದಾಕ್ಷಣ ಸುಂದರ ದೇಶ ಬಡತನವೇ ಇಲ್ಲ ಎಂದು ಹೇಳಿಬಿಡುತ್ತಾರೆ. ಇದಕ್ಕೆ ಕಾರಣ ಒಂದು ವಿಷಯದ ಬಗ್ಗೆ ಪದೆ ಪದೇ ಹೇಳಿ ಅದನ್ನು ಹೈಲೆಟ್ ಮಾಡುವ ಮೂಲಕ ಅದನ್ನೇ ನಿಜವೆಂದು ನಂಬಿಸುತ್ತಾರೆ.
ಹಾಗೆಯೇ ಅಂತರಾಷ್ಟ್ರೀಯ ಮಾದ್ಯಮಗಳು, ನಾಯಕರು ಭಾರತವನ್ನು ಬಡ ರಾಷ್ಟ್ರ ಎಂದು ಹೇಳಿ ಹೇಳಿ ಇಂತಹ ಪರಿಸ್ಥಿತಿ ಬಂದಿದೆ. ವಿದೇಶಿಗರು ನಮ್ಮ ದೇಶದಲ್ಲಿ ಒಂದು ಬಸನ್ನು ಅನಧಿಕೃತವಾಗಿ ಏರಿ ಶುಲ್ಕ ಪಾವತಿಸದೆ ಹಿಂಬದಿ ಕಾನೂನು ಬಾಹಿರವಾಗಿ ಪ್ರಯಾಣಿಸುತ್ತಾರೆ ಅಂದ್ರೆ ಅವರಿಗೆ ನಮ್ಮ ದೇಶದ ಮೇಲೆ ಯಾವ ಅಭಿಪ್ರಾಯ ಇದೆ ಎಂಬದು ಚಿಂತಿಸಬೇಕಾದ ಸಂಗತಿ.

ಇದೇ ಕೆಲಸ ಅವರ ದೇಶಗಳಲ್ಲಿ ಮಾಡಿದ್ರೆ ಪರಿಣಾಮ ಹೇಗಿರಲಿದೆ ಅವರಿಗೆ ಗೊತ್ತು. ಇದೀಗ ಈ ರೀತಿ ಮಾಡಿರುವುದು ಗೋವಾದಲ್ಲಿ, ಈ ವಿಡಿಯೋವನ್ನು ಇಲ್ಲಿನ ಮಪುಸಾದಲ್ಲಿ ಚಿತ್ರೀಕರಿಸಲಾಗಿದೆ. ಇಬ್ಬರು ಪ್ರವಾಸಿಗರು ಬಸ್ಸಿನ ಹಿಂಭಾಗದಲ್ಲಿ ನೇತಾಡುತ್ತಿರುವುದನ್ನು ಇದು ತೋರಿಸುತ್ತದೆ. ಇದು ಕಾನೂನುಬಾಹಿರ ಎಂದು ತಿಳಿದಿರಬೇಕು, ಈ ರೀತಿ ಸಾರ್ವಜನಿಕ ಸಾರಿಗೆಯಲ್ಲಿ ನೇತಾಡುವುದರಿಂದ ದಂಡ ವಿಧಿಸಬಹುದು ಎಂಬ ಭಯವೂ ಇರಬೇಕು.
ಸಾರ್ವಜನಿಕ ಸಾರಿಗೆಯಲ್ಲಿ ಹಣ ಪಾವತಿಸದೆ ಪ್ರಯಾಣಿಸುವುದು ಭಾರತದಲ್ಲಿ ಅಪರಾಧವಾಗಿದೆ. ಇದು ಅಕ್ರಮವಲ್ಲದೇ ಅಪಾಯಕಾರಿಯೂ ಹೌದು. ರಸ್ತೆಯ ಹಂಪ್ ಅಥವಾ ಗುಂಡಿಗಳಲ್ಲಿ ಇಬ್ಬರು ಬೀದ್ದರೂ ಆಶ್ಚರ್ಯವಿಲ್ಲ. ಭಾರತದ ಹಿಂದುಳಿದ ಪ್ರದೇಶಗಳಲ್ಲಿ ಹೇಗೂ ಉತ್ತಮ ರಸ್ತೆಗಳಿಲ್ಲ. ಇನ್ನೊಂದು ವಾಹನದ ಮುಂದೆ ಬಿದ್ದು ಪ್ರಾಣ ಕಳೆದುಕೊಂಡರೆ ದೇಶಕ್ಕೆ ಅದು ಕೆಟ್ಟ ಹೆಸರು.
ಗೋವಾದಲ್ಲಿ ಪ್ರವಾಸಿಗರು ನಿಯಮಗಳನ್ನು ಅನುಸರಿಸದೇ ಅಪಾಯಕಾರಿ, ಆಕ್ಷೇಪಾರ್ಹ ಕೆಲಸಗಳನ್ನು ಮಾಡುವುದನ್ನು ಆಗಾಗ್ಗೆ ಕೇಳುತ್ತಲೇ ಇರುತ್ತೇವೆ. ಅನೇಕ ಸಂದರ್ಭಗಳಲ್ಲಿ ಪ್ರವಾಸಿಗರು ವಾಹನಗಳನ್ನು ಬೀಚ್‌ಗಳಿಗೆ ತೆಗೆದುಕೊಂಡು ಹೋಗುವುದನ್ನು ನಾವು ನೋಡಿದ್ದೇವೆ. ಸ್ಥಳೀಯರ ದೂರುಗಳೊಂದಿಗೆ, ಪೊಲೀಸರು ಆಗಾಗ್ಗೆ ಇಂತಹ ಅಪರಾಧಿಗಳ ವಿರುದ್ಧ ಕ್ರಮ ತೆಗೆದುಕೊಂಡರು ಪದೆ ಪದೇ ಮರುಕಳಿಸುತ್ತಲೇ ಇವೆ.
ಕಾರಣ ಏನಾಗಿರಬಹುದು?: ಗೋವಾದಲ್ಲಿ ಮದ್ಯವೊಂದು ಬಿಟ್ಟರೆ ಎಲ್ಲವೂ ದುಬಾರಿಯಾಗಿರುತ್ತದೆ. ಟ್ಯಾಕ್ಸಿಗಳಲ್ಲಿ ಗೋವಾವನ್ನು ಸುತ್ತುವುದು ತುಂಬಾ ದುಬಾರಿ ಎಂಬುದನ್ನು ಗಮನಿಸಬೇಕು. ಬೈಕ್‌ಗಳು ಅಗ್ಗವಾಗಿ ಸಿಕ್ಕರೂ ವಿದೇಶಿಗರು ಎಂಬ ಕಾರಣಕ್ಕೆ ಅವರಿಂದ ಹೆಚ್ಚಿನ ಹಣ ಪೀಕುತ್ತಾರೆ. ಹಾಗಾಗಿ ಈ ಇಬ್ಬರು ಬಸ್‌ಗೆ ನೇತಾಡಿಕೊಂಡು ಪ್ರಯಾಣಿಸಿರಬಹುದು.
ಹಣ ಕೊಟ್ಟು ಪ್ರಯಾಣಿಸಬಹುದಲ್ಲವೇ ಎಂಬ ಪ್ರಶ್ನೆ ಮೂಡಬಹುದು, ಹೌದು ಹಾಗೂ ಮಾಡಬಹುದು ಆದ್ರೆ ಅವರು ಮೋಜಿಗಾಗಿ ಹಾಗೆ ಮಾಡಿರಬಹುದು. ಇದಕ್ಕೆ ಕಾರಣ ಮೊದಲೇ ಹೇಳಿದಂತೆ ಭಾರತವನ್ನು ಕೆಲವರು ಬಿಂಬಿಸಿರುವುದು. ಇದೇ ಮೋಜಿಗಾಗಿ ಅವರ ದೇಶಗಳಲ್ಲಿ ಹೀಗೆ ಮಾಡಲು ಹೆದರುತ್ತಾರೆ. ಆದ್ರೆ ಇಲ್ಲಿ ಸುಲಭವಾಗಿ ಮಾಡುತ್ತಿದ್ದಾರೆ. ಇದರ ಬಗ್ಗೆ ನಿಮ್ಮ ಅನ್ನಿಸಿಕೆಗಳನ್ನು ಕಮೆಂಟ್‌ನಲ್ಲಿ ತಿಳಿಸಿ.


Click it and Unblock the Notifications








