Toyota Hilux: ಏನ್ ಪವರ್ ಮಾರಾಯ! ಬುಲ್ಡೋಜರ್‌ನಂತೆ ಸುಲಭವಾಗಿ ಎಳೆತಂದ ಪಿಕಪ್ ಟ್ರಕ್
ಟೊಯೋಟಾ ಭಾರತ ಮಾತ್ರವಲ್ಲ ಜಾಗತಿಗವಾಗಿ ತನ್ನ ಜನಪ್ರಿಯ ಮಾದರಿಗಳಿಂದ ಗುರ್ತಿಸಿಕೊಂಡಿದೆ. ಸದ್ಯ ಭಾರತದಲ್ಲಿ ಟೊಯೊಟಾ ಇನ್ನೋವಾ, ಫಾರ್ಚುನರ್, ಗ್ಲಾಂಜಾ ಮತ್ತು ಲ್ಯಾಂಡ್ ಕ್ರೂಸರ್‌ನಂತಹ ಅತ್ಯಂತ ಜನಪ್ರಿಯ ಮಾದರಿಗಳನ್ನು ನೀಡುತ್ತಿದೆ. ಇವಿಷ್ಟೇ ಅಲ್ಲದೇ ಪವರ್‌ಫುಲ್ ಪಿಕಪ್ ಟ್ರಕ್ ಆದ Toyota Hilux ಅನ್ನು ಕಳೆದ ವರ್ಷ ಬಿಡುಗಡೆ ಮಾಡಿದೆ.
ಇದು ಅನೇಕ ಆಫ್-ರೋಡ್ ಉತ್ಸಾಹಿಗಳು ಬಯಸುತ್ತಿರುವ ಬಹುಬೇಡಿಕೆಯ SUV ಆಗಿದೆ. ಈ ವಾಹನಕ್ಕೆ ಎಲ್ಲಿಲ್ಲದ ಬೇಡಿಕೆಯಿದೆ, ಯಾವ ಮಟ್ಟಿಗೆ ಅಂದ್ರೆ ಟೊಯೋಟಾ ಬುಕಿಂಗ್ ಸ್ವೀಕರಿಸುವುದನ್ನೇ ತಾತ್ಕಾಲಿಕವಾಗಿ ನಿಲ್ಲಿಸಬೇಕಾಯಿತು. ಆ ಮಟ್ಟದ ಬೇಡಿಕೆಯೊಂದಿಗೆ ಮಾರುಕಟ್ಟೆಯಲ್ಲಿ ಸದ್ದು ಮಾಡಿದ ಈ ವಾಹನ, ಸದ್ಯ ತನ್ನ ಪವರ್ ಹೇಗಿದೆ ಎಂಬುದನ್ನು ಮತ್ತೊಮ್ಮೆ ಸಾಭೀತುಪಡಿಸಿದೆ.

as_we_disclose Instagram ಎಂಬ ಖಾತೆಯಲ್ಲಿ ಹಂಚಿಕೊಂಡಿರುವ ವಿಡಿಯೋದಲ್ಲಿ Toyota Hilux ರಸ್ತೆ ಬದಿ ಹಳ್ಳಕ್ಕೆ ಜಾರಿದ್ದ ಬಸ್ಸನ್ನು ಸುಲಭವಾಗಿ ಹೊರಗೆ ಎಳತಂದಿದೆ. "ಚಿಕ್ಕಮಗಳೂರಿನಿಂದ ಬೆಂಗಳೂರಿಗೆ ಹಿಂತಿರುಗುವಾಗ, ರಸ್ತೆಯಿಂದ ಪಕ್ಕದ ಸಣ್ಣ ಹಳ್ಳಕ್ಕೆ ಜಾರಿ ಸಿಕ್ಕಿಬಿದ್ದಿದ್ದ ಬಸ್ ಅನ್ನು ಸಾಧ್ಯವಾದಷ್ಟು ಪ್ರಯತ್ನಗಳಿಂದ ಬಸ್ ಸಿಬ್ಬಂದಿ ಹೊರತರಲು ಯತ್ನಿಸಿದ್ದಾರೆ, ಆದರೆ ಬಸ್ ಹೊರಬಂದಿಲ್ಲ.
ರಸ್ತೆ ಬದಿಯ ಕೆಸರಿನ ಮೇಲೆ ಬಸ್ ನಿಲ್ಲಿಸಿದಾಗ ಬಸ್‌ನ ಹಿಂಬದಿಯ ಚಕ್ರಗಳು ಹಳ್ಳಕ್ಕೆ ಜಾರಿರುವ ಸಾಧ್ಯತೆ ಇದೆ. ಇದು ಹಿಂಬದಿ-ಚಕ್ರ-ಚಾಲನಾ ವಾಹನವಾಗಿರುವುದರಿಂದ, ಹಿಂಬದಿಯ ಚಕ್ರಗಳು ಕೆಸರಿನಲ್ಲಿ ಸಿಲುಕಿರುವುದರಿಂದ ತಾನಾಗಿ ಹೊರಬರುಲು ಸಾಧ್ಯವಾಗಿಲ್ಲ. ಇದೇ ವೇಳೆ ಅದೇ ರಸ್ತೆಯಲ್ಲಿ Toyota Hilux ರಿಕವರಿ ಉಪಕರಣಗಳನ್ನು ಒಯ್ಯುತ್ತಿತ್ತು.

ವೀಡಿಯೊದಲ್ಲಿ ಕಾಣುವ Hilux ಅನ್ನು ಆಫ್-ರೋಡಿಂಗ್‌ಗಾಗಿ ಮಾಡಿಫೈಗೊಳಿಸಿದಂತೆ ತೋರುತ್ತಿದೆ. ಅಲಾಯ್ ವೀಲ್‌ಗಳು ಮತ್ತು ಪಿಕಪ್‌ನಲ್ಲಿರುವ ಟೈರ್‌ಗಳು ಸ್ಟಾಕ್‌ಗಿಂತ ವಿಭಿನ್ನವಾಗಿ ಕಾಣುತ್ತಿವೆ. ಬಸ್ಸಿನ ಮುಂಭಾಗಕ್ಕೆ ಟೋ ಸ್ಟ್ರಾಪ್ ಅನ್ನು ಜೋಡಿಸಿ ಹಿಲಕ್ಸ್ ಬಸ್ ಅನ್ನು ಎಳೆಯಲು ಪ್ರಾರಂಭಿಸಿತು. ಸ್ವಲ್ಪ ವೀಲ್ ಸ್ಪಿನ್ ಇತ್ತು ಆದರೆ, ಹಿಲಕ್ಸ್ ಎಳೆತಕ್ಕೆ ಸೆಕೆಂಡುಗಳಲ್ಲಿ ಬಸ್ ರಸ್ತೆಗೆ ಬಂದಿದೆ.
ಜಾಗತಿಕವಾಗಿ ಪ್ರಸಿದ್ಧವಾದ ಪಿಕ್-ಅಪ್ ಟ್ರಕ್ ಆಗಿರುವುದರಿಂದ, ಇದು ಅತ್ಯಂತ ಕಠಿಣವಾದ ಭೂಪ್ರದೇಶಗಳನ್ನು ಸಹ ನಿಭಾಯಿಸಲು ತಯಾರಿಸಲಾಗಿದೆ. ಇದು ಅತ್ಯಂತ ಸಮರ್ಥ ಆಫ್-ರೋಡರ್ ಆಗಿದ್ದು, ಇತ್ತೀಚೆಗೆ ಭಾರತೀಯ ಸೇನೆ ಕೂಡ ಟೊಯೋಟಾ ಹಿಲಕ್ಸ್ 4×4 ಐಷಾರಾಮಿ ಪಿಕಪ್ ಟ್ರಕ್ ಅನ್ನು ತಮ್ಮ ಫ್ಲೀಟ್‌ಗೆ ಸೇರಿಸುವುದಾಗಿ ಘೋಷಿಸಿದೆ.
ಟೊಯೊಟಾ ಹಿಲಕ್ಸ್ ಅನ್ನು ಒಂದೇ 2.8-ಲೀಟರ್ ನಾಲ್ಕು-ಸಿಲಿಂಡರ್ ಡೀಸೆಲ್ ಎಂಜಿನ್‌ನೊಂದಿಗೆ ನೀಡಲಾಗುತ್ತದೆ. ಇದು ಮ್ಯಾನುವಲ್ ಟ್ರಾನ್ಸ್‌ಮಿಷನ್‌ನೊಂದಿಗೆ ಗರಿಷ್ಠ 204 PS ಮತ್ತು 420 Nm ಪೀಕ್ ಟಾರ್ಕ್ ಅನ್ನು ಉತ್ಪಾದಿಸುವ ಸಾಮರ್ಥ್ಯವನ್ನು ಹೊಂದಿದೆ. ಈ ಪಿಕಪ್ ಟ್ರಕ್‌ನ ಎಲ್ಲಾ ರೂಪಾಂತರಗಳು 4×4 ಸಿಸ್ಟಂನೊಂದಿಗೆ ಪ್ರಮಾಣಿತವಾಗಿ ಲಭ್ಯವಿದೆ.
ಟೊಯೊಟಾ ಹಿಲಕ್ಸ್ ಸದ್ಯದ ಬೆಲೆಯು 30.41 ಲಕ್ಷ ರೂ.ಗಳಿಂದ (ಎಕ್ಸ್ ಶೋರೂಂ) ಪ್ರಾರಂಭವಾಗುತ್ತದೆ. ಇದು 700 ಎಂಎಂ ವಾಟರ್ ವೇಡಿಂಗ್ ಸಾಮರ್ಥ್ಯವನ್ನು ಹೊಂದಿದೆ. ಜೊತೆಗೆ ಟೊಯೋಟಾ ಎಲ್‌ಎಸ್‌ಡಿ, ಎಲೆಕ್ಟ್ರಾನಿಕ್ ಡಿಫರೆನ್ಷಿಯಲ್ ಲಾಕ್, ಹಿಂಭಾಗದ ಡಿಫ್ ಲಾಕ್‌ಗಳು ಅನ್ನು ಸಹ ಹೊಂದಿದೆ. ಈ ವಾಹನದ ಬಗ್ಗೆ ನಿಮ್ಮ ಅನಿಸಿಕೆಗಳನ್ನು ಕಮೆಂಟ್‌ನಲ್ಲಿ ತಿಳಿಸಿ.


Click it and Unblock the Notifications