ಏಪ್ರಿಲ್ 1 ರಿಂದ ದುಬಾರಿಯಾಗಲಿವೆ ಈ ಜನಪ್ರಿಯ ಫೋಕ್ಸ್‌ವ್ಯಾಗನ್ ಕಾರುಗಳು...

ಜನಪ್ರಿಯ ವಾಹನ ತಯಾರಕ ಸಂಸ್ಥೆಯಾದ ಫೋಕ್ಸ್‌ವ್ಯಾಗನ್ ಇಂಡಿಯಾ ತನ್ನ ಟೈಗನ್ ಎಸ್‌ಯುವಿ ಮತ್ತು ವರ್ಟಸ್ ಸೆಡಾನ್ ಮಾದರಿಗಳ ಬೆಲೆಗಳನ್ನು ಮುಂದಿನ ತಿಂಗಳಿನಿಂದ ಶೇಕಡಾ 2 ರಷ್ಟು ಹೆಚ್ಚಿಸುವುದಾಗಿ ಘೋಷಿಸಿದೆ, ಇದರಿಂದ ಜನಪ್ರಿಯ ಫೋಕ್ಸ್‌ವ್ಯಾಗನ್ ಟೈಗನ್ ಎಸ್‍ಯುವಿ ಮತ್ತು ವರ್ಟಸ್ ಸೆಡಾನ್ ಮಾದರಿಗಳು ದುಬಾರಿಯಾಗಳಿವೆ.

ಫೋಕ್ಸ್‌ವ್ಯಾಗನ್ ಇಂಡಿಯಾ ತನ್ನ ಟೈಗನ್ ಎಸ್‌ಯುವಿ ಮತ್ತು ವರ್ಟಸ್ ಸೆಡಾನ್ ಮಾದರಿಗಳ ಬೆಲೆಗಳ ಏಪ್ರಿಲ್ 1 ರಿಂದ ಹೆಚ್ಚಿಸಲಿದೆ. ಜರ್ಮನ್ ವಾಹನ ತಯಾರಕರಾದ ಫೋಕ್ಸ್‌ವ್ಯಾಗನ್ ತನ್ನ ಬೆಲೆ ಏರಿಕೆಯನ್ನು ಸಮರ್ಥಿಸಲು ಕೆಲವು ಫೀಚರ್ಸ್ ಗಳನ್ನು ಸೇರಿಸಿದ್ದಾರೆ. 2023ರ ಫೋಕ್ಸ್‌ವ್ಯಾಗನ್ ಟೈಗನ್ ಎಸ್‌ಯುವಿ ಮತ್ತು ವರ್ಟಸ್ ಸೆಡಾನ್ ಮಾದರಿಗಳು ಈಗ ಎಲ್ಲಾ ರೂಪಾಂತರಗಳಲ್ಲಿ ಸ್ಟ್ಯಾಂಡರ್ಡ್ ಆಗಿ ಹಿಂಬದಿಯ ಫಾಗ್ ಲ್ಯಾಂಪ್‌ಗಳೊಂದಿಗೆ ಬರುತ್ತವೆ.

ದುಬಾರಿಯಾಗಲಿವೆ ಈ ಜನಪ್ರಿಯ ಫೋಕ್ಸ್‌ವ್ಯಾಗನ್ ಕಾರುಗಳು...

ಇನ್ನು ಆಟೋ ಹೆಡ್‌ಲೈಟ್‌ಗಳು, ಆಟೋ ಕಮಿಂಗ್ ಹೋಮ್ ಮತ್ತು ಲೀವಿಂಗ್ ಹೋಮ್ ಲೈಟ್‌ಗಳಂತಹ ಫೀಚರ್ಸ್ ಗಳು ಹೈಲೈನ್ ಟ್ರಿಮ್ ಮಟ್ಟದಿಂದ ಲಭ್ಯವಿರುತ್ತದೆ. ಇನ್ನು 2023ರ ಫೋಕ್ಸ್‌ವ್ಯಾಗನ್ ಟೈಗನ್ ಎಸ್‍ಯುವಿ ಮತ್ತು ವರ್ಟಸ್ ಸೆಡಾನ್ ಮಾದರಿಗಳು ಹೆಚ್ಚು ಕಠಿಣವಾದ RDE ಮತ್ತು BS6 ಹಂತ 2 ಎಮಿಷನ್ ಮಾನದಂಡಗಳನ್ನು ಅನುಸರಿಸುತ್ತವೆ.ನವೀಕರಿಸಿದ ಕಾರುಗಳು E20 ಇಂಧನಕ್ಕೆ ಸಹ ಹೊಂದಿಕೊಳ್ಳುತ್ತವೆ.

ಹೊಸ ಫೋಕ್ಸ್‌ವ್ಯಾಗನ್ ಟೈಗನ್ ಎಸ್‌ಯುವಿ ಮತ್ತು ವರ್ಟಸ್ ಸೆಡಾನ್ ಎರಡನ್ನೂ ಒಂದೇ MQB-A0 IN ಪ್ಲಾಟ್‌ಫಾರ್ಮ್‌ನಲ್ಲಿ ನಿರ್ಮಿಸಲಾಗಿದೆ. ಇದಲ್ಲದೆ, ನವೀಕರಿಸಿದ ಗ್ಲೋಬಲ್-ಎನ್‌ಸಿಎಪಿ ಅಡಿಯಲ್ಲಿ ಎರಡೂ ಮಾದರಿಗಳು 5-ಸ್ಟಾರ್ ಸುರಕ್ಷತಾ ರೇಟಿಂಗ್ ಅನ್ನು ಗಳಿಸಿವೆ. ನವೀಕರಿಸಿದ ಬೆಲೆಗಳು ಈ ತಿಂಗಳ ಆರಂಭದಿಂದ ಜಾರಿಯಲ್ಲಿದ್ದರೂ, ಇತ್ತೀಚೆಗೆ ಪರಿಚಯಿಸಲಾದ ಕೊಡುಗೆಗಳು ಮತ್ತು ರಿಯಾಯಿತಿಗಳು ಫೋಕ್ಸ್‌ವ್ಯಾಗನ್ ವರ್ಟಸ್ ಮತ್ತು ಟೈಗನ್ ಅನ್ನು ಮೊದಲಿಗಿಂತ ಹೆಚ್ಚು ಆಕರ್ಷಕವಾಗಿಸುತ್ತವೆ.

ದುಬಾರಿಯಾಗಲಿವೆ ಈ ಜನಪ್ರಿಯ ಫೋಕ್ಸ್‌ವ್ಯಾಗನ್ ಕಾರುಗಳು...

ಮೊದಲಿಗೆ ಟೈಗನ್ ಎಸ್‍ಯುವಿಯ ಬಗ್ಗೆ ಹೇಳುವುದಾದರೆ, ಫೋಕ್ಸ್‌ವ್ಯಾಗನ್ ಇಂಡಿಯಾ ಈ ಟೈಗನ್ ಎಸ್‌ಯುವಿಯನ್ನು ಭಾರತೀಯ ಮಾರುಕಟ್ಟೆಯಲ್ಲಿ ಕಳೆದ ವರ್ಷದ ಸೆಪ್ಟೆಂಬರ್ ತಿಂಗಳಿನಲ್ಲಿ ಬಿಡುಗಡೆಗೊಳಿಸಿತ್ತು. ಇದು ಭಾರತದಲ್ಲಿ ಫೋಕ್ಸ್‌ವ್ಯಾಗನ್‌ನಿಂದ ಕೈಗೆಟುವ ದರದ ಕಾಂಪ್ಯಾಕ್ಟ್ ಎಸ್‌ಯುವಿಯಾಗಿದೆ. ಭಾರತದಲ್ಲಿ ವೋಕ್ಸ್‌ವ್ಯಾಗನ್ ಟೈಗನ್‌ನ ಒಂದು ವರ್ಷದ ನೆನಪಿಗಾಗಿ, ಈ ಜರ್ಮನ್ ಕಾರು ತಯಾರಕರು ಇತ್ತೀಚೆಗೆ ಎಸ್‍ಯುವಿಯ ಮೊದಲ ಆ್ಯನಿರ್ವಸರಿ ಎಡಿಷನ್ ಅನ್ನು ಪರಿಚಯಿಸಿದರು.

ಇನ್ನು ಈ ಎಸ್‍ಯುವಿಯಲ್ಲಿ 1.5 ಲೀಟರ್ ಟರ್ಬೊ ಪೆಟ್ರೋಲ್ ಎಂಜಿನ್ 150 ಬಿಹೆಚ್‍ಪಿ ಪವರ್ ಮತ್ತು 250 ಎನ್ಎಂ ಟಾರ್ಕ್ ಅನ್ನು ಉತ್ಪಾದಿಸುವ ಸಾಮರ್ಥ್ಯವನ್ನು ಹೊಂದಿದೆ. ಇನ್ನು 1.0 ಲೀಟರ್ ಎಂಜಿನ್ 6-ಸ್ಪೀಡ್ ಮ್ಯಾನುವಲ್ ಮತ್ತು 6-ಸ್ಪೀಡ್ ಆಟೋಮ್ಯಾಟಿಕ್ ಟ್ರಾನ್ಸ್‌ಮಿಷನ್‌ನೊಂದಿಗೆ ಲಭ್ಯವಿದೆ. ಇದರೊಂದಿಗೆ 1.5 ಲೀಟರ್ ಎಂಜಿನ್ 6-ಸ್ಪೀಡ್ ಮ್ಯಾನುವಲ್ ಮತ್ತು DSG ಗೇರ್ ಬಾಕ್ಸ್ ಆಯ್ಕೆಯೊಂದಿಗೂ ಲಭ್ಯವಿದೆ.

ದುಬಾರಿಯಾಗಲಿವೆ ಈ ಜನಪ್ರಿಯ ಫೋಕ್ಸ್‌ವ್ಯಾಗನ್ ಕಾರುಗಳು...

ಇನ್ನು ಫೋಕ್ಸ್‌ವ್ಯಾಗನ್ ವರ್ಟಸ್ ಮಾದರಿಯು ಟೈಗನ್ ಕಾಂಪ್ಯಾಕ್ಟ್ ಎಸ್‍ಯುವಿ ನಂತರ ಭಾರತ 2.0 ಯೋಜನೆಯ ಅಡಿಯಲ್ಲಿ ಬಿಡುಗಡೆಯಾದ ಫೋಕ್ಸ್‌ವ್ಯಾಗನ್‌ನ ಎರಡನೇ ಮಾದರಿಯಾಗಿದೆ. ಈ ಫೋಕ್ಸ್‌ವ್ಯಾಗನ್ ವರ್ಟಸ್ ಕಾರು ಮುಂಭಾಗ ಮಸ್ಕಲರ್ ಲುಕ್ ಅನ್ನು ಹೂಂದಿದೆ. ಈ ಹೊಸ ಫೋಕ್ಸ್‌ವ್ಯಾಗನ್ ವಿರ್ಟಸ್ ಕಾರು ದೇಶದಲ್ಲಿ ವೆಂಟೊ ಮಾದರಿಯ ಬದಲಿಯಾಗಿದೆ, ಇದು ಅದರ ಬದಲಿಗಿಂತ ದೊಡ್ಡದಾಗಿದೆ ಮತ್ತು ಸುಸಜ್ಜಿತವಾಗಿದೆ.

ವರ್ಟಸ್ ಸೆಡಾನ್ ಎರಡು ಎಂಜಿನ್ ಆಯ್ಕೆಗಳನ್ನು ಪಡೆಯುತ್ತದೆ. ಇದರಲ್ಲಿ 1.0 ಲೀಟರ್ TSI ಪೆಟ್ರೋಲ್ ಎಂಜಿನ್ 113 ಬಿಹೆಚ್‍ಪಿ ಪವರ್ ಮತ್ತು 175 ಎನ್ಎಂ ಟಾರ್ಕ್ ಅನ್ನು ಉತ್ಪಾದಿಸುತ್ತದೆ. ಈ ಎಂಜಿನ್ ನೊಂದಿಗೆ 6-ಸ್ಪೀಡ್ ಮ್ಯಾನುವಲ್ ಅಥವಾ ಆಯ್ಕೆಯ 6-ಸ್ಪೀಡ್ ಟಾರ್ಕ್ ಕರ್ನ್ವಾಟರ್ ಅನ್ನು ಪಡೆಯುತ್ತದೆ. ಇದರೊಂದಿಗೆ 1.5 ಲೀಟರ್ TSI ಪೆಟ್ರೋಲ್ ಎಂಜಿನ್ 148 ಬಿಹೆಚ್‍ಪಿ ಪವರ್ ಮತ್ತು 250 ಎನ್ಎಂ ಟಾರ್ಕ್ ಅನ್ನು ಉತ್ಪಾದಿಸುತ್ತದೆ.

More from DriveSpark

Article Published On: Thursday, March 23, 2023, 8:30 [IST]
English summary
Volkswagen taigun and virtus to become more expensive from april 1 details
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+