Volkswagen: ಫೋಕ್ಸ್‌ವ್ಯಾಗನ್ ಟೈಗುನ್ ಗ್ರಾಹಕರಿಗೆ ಶಾಕ್!
ದೇಶೀಯ ಮಾರುಕಟ್ಟೆಯಲ್ಲಿ ಮಿಡ್ ಸೈಜ್ ಎಸ್‌ಯುವಿ ಫೋಕ್ಸ್‌ವ್ಯಾಗನ್ ಟೈಗುನ್ (Volkswagen Taigun) ದೊಡ್ಡ ಮಟ್ಟದಲ್ಲಿ ಖ್ಯಾತಿಗಳಿಸಿದೆ. ಇದೀಗ, ಈ ಕಾರಿನ ಬೆಲೆ (price) ಹೆಚ್ಚಳವಾಗಿದೆ ಎಂದು ಸದ್ಯ ವರದಿಯಾಗಿದೆ. ಎಷ್ಟು ದರ ಏರಿಕೆಯಾಗಿದೆ ಎಂಬುದರ ಬಗ್ಗೆ ಇಲ್ಲಿದೆ ಸಂಪೂರ್ಣ ಮಾಹಿತಿ.
ಫೋಕ್ಸ್‌ವ್ಯಾಗನ್ ಟೈಗುನ್ ಎಸ್‌ಯುವಿ ಬೆಲೆಯೂ ಒಟ್ಟು ರೂ.25,000 ವರೆಗೆ ಹೆಚ್ಚಳವಾಗಿದೆ. ಆದರೆ, ಕಂಪನಿಯು ಬೆಲೆ ಏರಿಕೆ ಹಿಂದಿನ ಯಾವುದೇ ನಿರ್ದಿಷ್ಟ ಕಾರಣವನ್ನು ಹೇಳಿಲ್ಲ. ಆದರೂ ಮಾರುಕಟ್ಟೆ ತಜ್ಞರು, ಕಚ್ಚಾ ಸಾಮಗ್ರಿ ಸೇರಿದಂತೆ ಇತರೆ ಪರಿಕರಗಳ ಬೆಲೆ ಹೆಚ್ಚಳದಿಂದ ಈ ದರ ಏರಿಕೆಯಾಗಿದೆ ಎಂದು ಅಂದಾಜಿಸಿದ್ದಾರೆ. ಟೈಗುನ್, ರೂ.11.62 ಲಕ್ಷದಿಂದ ರೂ.19.76 ಲಕ್ಷ ಎಕ್ಸ್ ಶೋರೂಂ ಬೆಲೆಯನ್ನು ಹೊಂದಿದೆ.

ಈ ಫೋಕ್ಸ್‌ವ್ಯಾಗನ್ ಟೈಗುನ್ ಎಸ್‌ಯುವಿ, 6 ರೂಪಾಂತರಗಳ ಆಯ್ಕೆಯಲ್ಲಿ ಗ್ರಾಹಕರಿಗೆ ಸಿಗುತ್ತದೆ. ಅವುಗಳೆಂದರೆ ಕಂಫರ್ಟ್‌ಲೈನ್, ಹೈಲೈನ್, ಟಾಪ್‌ಲೈನ್, ಜಿಟಿ , ಜಿಟಿ ಪ್ಲಸ್ ಮತ್ತು ಜಿಟಿ ಎಡ್ಜ್. ಇವುಗಳಿಗೆ ಅನುಗುಣವಾಗಿ, ಕಂಪನಿಯು ರೂ.4,000 ದಿಂದ ರೂ.ರೂ.25,000 ವರೆಗೆ ಬೆಲೆಯನ್ನು ಹೆಚ್ಚಿಸಿದೆ. ಈ ಸಂಬಂಧ ಹೆಚ್ಚಿನ ಮಾಹಿತಿಗೆ ನಿಮ್ಮ ಸಮೀಪದ ಡೀಲರ್ ಶಿಪ್ ಭೇಟಿ ನೀಡಿರಿ.
ಟೈಗುನ್, ಎರಡು ಎಂಜಿನ್ ಆಯ್ಕೆಯಲ್ಲಿ ಗ್ರಾಹಕರಿಗೆ ಸಿಗುತ್ತದೆ. 1 - ಲೀಟರ್ ಪೆಟ್ರೋಲ್ ಎಂಜಿನ್, 115 PS ಗರಿಷ್ಠ ಪವರ್ ಹಾಗೂ 178 Nm ಪೀಕ್ ಟಾರ್ಕ್ ಉತ್ಪಾದಿಸುತ್ತದೆ. ಮತ್ತೊಂದು, 1.5 - ಲೀಟರ್ ಪೆಟ್ರೋಲ್ ಎಂಜಿನ್, 150 PS ಪವರ್, 250 Nm ಪೀಕ್ ಟಾರ್ಕ್ ಹೊರಹಾಕುತ್ತದೆ. ಮ್ಯಾನುವಲ್ ಹಾಗೂ ಆಟೋಮೆಟಿಕ್ ಗೇರ್ ಬಾಕ್ಸ್ ಆಯ್ಕೆಯಲ್ಲಿ ಖರೀದಿಗೆ ಲಭ್ಯವಿದೆ.
ಈ ಕಾರು, ಐದು ಆಸನ ಹೊಂದಿದ್ದು, ರೂಪಾಂತರಗಳಿಗೆ ಅನುಗುಣವಾಗಿ 17.23 kmpl ರಿಂದ 19.20 kmpl ಮೈಲೇಜ್ ನೀಡುತ್ತದೆ. ವೈಲ್ಡ್ ಚೆರ್ರಿ ರೆಡ್, ಕ್ಯಾಂಡಿ ವೈಟ್, ಕಾರ್ಬನ್ ಸ್ಟೀಲ್ ಗ್ರೇ ಮತ್ತು ರಿಫ್ಲೆಕ್ಸ್ ಸಿಲ್ವರ್ ಸೇರಿದಂತೆ ವಿವಿಧ ಬಣ್ಣಗಳ ಆಯ್ಕೆಯಲ್ಲಿ ಫೋಕ್ಸ್‌ವ್ಯಾಗನ್ ಟೈಗುನ್ ಎಸ್‌ಯುವಿ ಲಭ್ಯವಿದೆ.
ಫೋಕ್ಸ್‌ವ್ಯಾಗನ್ ಟೈಗುನ್ ಎಸ್‌ಯುವಿ, ಯುವ ಗ್ರಾಹಕರನ್ನು ಆಕರ್ಷಿಸುವ ಹಲವು ವೈಶಿಷ್ಟ್ಯಗಳನ್ನು ಒಳಗೊಂಡಿದೆ. 10.1 - ಇಂಚಿನ ಟಚ್‌ಸ್ಕ್ರೀನ್ ಇನ್ಫೋಟೈನ್‌ಮೆಂಟ್ ಸಿಸ್ಟಮ್, ಕನೆಕ್ಟ್ದ್ ಕಾರ್ ಟೆಕ್, 8-ಇಂಚಿನ ಡಿಜಿಟಲ್ ಇನ್ಸ್ಟ್ರುಮೆಂಟ್ ಕ್ಲಸ್ಟರ್, ಸಬ್ ವೂಫರ್ & ಆಂಪ್ಲಿಫೈಯರ್, ಆಂಬಿಯೆಂಟ್ ಲೈಟಿಂಗ್, ಫುಟ್‌ವೆಲ್ ಲೈಟಿಂಗ್, ಸಿಂಗಲ್-ಪೇನ್ ಸನ್‌ರೂಫ್ ಮತ್ತು ಆಟೋ ಕ್ಲೇಮೇಟ್ ಕಂಟ್ರೋಲ್ ಸೇರಿದಂತೆ ಹಲವು ವೈಶಿಷ್ಟ್ಯಗಳನ್ನು ಹೊಂದಿದೆ.
ಸುರಕ್ಷತೆಯ ದೃಷ್ಟಿಯಿಂದ ಈ ಕಾರು, 6 ಏರ್‌ಬ್ಯಾಗ್, ESC (ಎಲೆಕ್ಟ್ರಾನಿಕ್ ಸ್ಟೆಬಿಲಿಟಿ ಕಂಟ್ರೋಲ್), TPMS (ಟೈರ್ ಪ್ರೆಶರ್ ಮಾನಿಟರಿಂಗ್ ಸಿಸ್ಟಮ್), ರೇರ್ ವ್ಯೂ ಕ್ಯಾಮೆರಾ ಒಳಗೊಂಡಂತೆ ವಿವಿಧ ಸೇಫ್ಟಿ ಫೀಚರ್ಸ್ ಹೊಂದಿದೆ. ಈ ಕಾರಿಗೆ ಹ್ಯುಂಡೈ ಕ್ರೆಟಾ, ಟೊಯೊಟಾ ಹೈರೈಡರ್, ಮಾರುತಿ ಗ್ರಾಂಡ್ ವಿಟಾರಾ, ಕಿಯಾ ಸೆಲ್ಟೋಸ್, ಸ್ಕೋಡಾ ಕುಶಾಕ್, ಎಂಜಿ ಆಸ್ಟರ್, ಸಿಟ್ರಸ್ ಸಿ3 ಏರ್‌ಕ್ರಾಸ್, ಹೋಂಡಾ ಎಲಿವೇಟ್ ಪ್ರತಿಸ್ಪರ್ಧಿಯಾಗಿವೆ.
ಇನ್ನು, ಫೋಕ್ಸ್‌ವ್ಯಾಗನ್ ಟೈಗುನ್ ಬೆಲೆ ಏರಿಕೆಯಾಗಿರುವುದು ಗ್ರಾಹಕರಿಗೆ ಕೊಂಚ ಮಟ್ಟಿಗೆ ಬೇಸರ ತರಿಸಿದೆ. ಆದರೆ, ದರವೂ ದೊಡ್ಡಮಟ್ಟದಲ್ಲಿ ಹೆಚ್ಚಳವಾಗದಿರುವುದು ಖುಷಿಯ ವಿಚಾರವಾಗಿದೆ. ಟೈಗುನ್, ಅತ್ಯುತ್ತಮ ವೈಶಿಷ್ಟ್ಯಗಳನ್ನು ಹೊಂದಿದ್ದು, ಮುಂಬರುವ ದಿನಗಳಲ್ಲಿ ದಸರಾ ಹಾಗೂ ದೀಪಾವಳಿ ಹಬ್ಬಗಳು ಬರುವುದರಿಂದ ಇದಕ್ಕೆ ಮತ್ತಷ್ಟು ಬೇಡಿಕೆ ಬರಬಹುದು.
ಡ್ರೈವ್‌ಸ್ಪಾರ್ಕ್ ಕನ್ನಡ ವೆಬ್‌ಸೈಟ್ ತ್ವರಿತವಾಗಿ ಆಟೋಮೊಬೈಲ್ ಸಂಬಂಧಿಸಿದ ಸುದ್ದಿಗಳನ್ನು ನೀಡುತ್ತದೆ. ಜೊತೆಗೆ ಸೋಷಿಯಲ್ ಮೀಡಿಯಾಗಳ ಮೂಲಕ ತಕ್ಷಣವೇ ಓದುಗರೊಂದಿಗೆ ಸುದ್ದಿಗಳನ್ನು ಶೇರ್ ಮಾಡುತ್ತೇವೆ. ಇತ್ತೀಚಿನ ಕಾರು, ಬೈಕ್ ಸುದ್ದಿ, ಟೆಸ್ಟ್ ಡ್ರೈವ್ ವರದಿಗಳು ಮತ್ತು ವೀಡಿಯೊಗಳನ್ನು ಪಡೆಯಲು ನಮ್ಮ ಫೇಸ್‌ಬುಕ್, ಇನ್‌ಸ್ಟಾಗ್ರಾಮ್, ಯೂಟ್ಯೂಬ್ ಪೇಜ್‌ಗಳೊಂದಿಗೆ ಫಾಲೋ ಮಾಡಿ. ನಿಮಗೆ ನಮ್ಮ ಯಾವುದೇ ಸುದ್ದಿ ಇಷ್ಟವಾದರೆ ಲೈಕ್, ಕಾಮೆಂಟ್ ಮಾಡುವುದನ್ನು ಮರೆಯದಿರಿ.


Click it and Unblock the Notifications








