Volkswagen: ಫೋಕ್ಸ್‌ವ್ಯಾಗನ್‌ನ ಈ ಕಾರಿಗೆ 4.2 ಲಕ್ಷ ರೂಪಾಯಿ ರಿಯಾಯಿತಿ, ಇನ್ನೂ ತುಂಬಿ ತುಳುಕಲಿವೆ ಡೀಲರ್‌ಶಿಪ್‌!

ಫೋಕ್ಸ್‌ವ್ಯಾಗನ್ (Volkswagen) ವಿಶ್ವಾಸಾರ್ಹ ಕಾರು ತಯಾರಕ ಕಂಪನಿಯಾಗಿ ಖ್ಯಾತಿಗಳಿಸಿದೆ. ಇದೀಗ, ತನ್ನ ಜನಪ್ರಿಯ ಟೈಗುನ್ (Tiguan) ಮಾದರಿ ಮೇಲೆ ವರ್ಷಾಂತ್ಯದಲ್ಲಿ ಭಾರೀ ರಿಯಾಯಿತಿ (Discount)ಯನ್ನು ಘೋಷಣೆ ಮಾಡಿದೆ. ಇದರಿಂದಾಗಿ ಈ ಕಾರಿಗೆ ಒಮ್ಮೆಲೆ ದೊಡ್ಡ ಮಟ್ಟದಲ್ಲಿ ಬೇಡಿಕೆ ಬಂದರೂ ಅಚ್ಚರಿಯಿಲ್ಲ.

ಫೋಕ್ಸ್‌ವ್ಯಾಗನ್ ಕಂಪನಿ, ಟೈಗುನ್ ಎಸ್‌ಯುವಿ ಮೇಲೆ ರೂ.4.2 ಲಕ್ಷ ಡಿಸ್ಕೌಂಟ್ ನೀಡಿದೆ. ಇದು ನಗದು ರಿಯಾಯಿತಿ, ಎಕ್ಸ್ಚೇಂಜ್ ಬೋನಸ್, ಕಾರ್ಪೊರೇಟ್ ಡಿಸ್ಕೌಂಟ್ ಅನ್ನು ಒಳಗೊಂಡಿದೆ. ಸದ್ಯ, ಟೈಗುನ್ ರೂ.35.17 ಲಕ್ಷ ಎಕ್ಸ್ ಶೋರೂಂ ಬೆಲೆಯನ್ನು ಹೊಂದಿದ್ದು, ಈ ರಿಯಾಯಿತಿ ಸೌಲಭ್ಯವನ್ನು ಪಡೆದಿರುವುದರಿಂದ ರೂ.30.97 ಲಕ್ಷ (ಎಕ್ಸ್ ಶೋರೂಂ) ದರದಲ್ಲಿ ಗ್ರಾಹಕರಿಗೆ ಸಿಗಲಿದೆ.

Volkswagen: ಫೋಕ್ಸ್‌ವ್ಯಾಗನ್‌ನ ಈ ಕಾರಿಗೆ 4.2 ಲಕ್ಷ ರೂಪಾಯಿ ರಿಯಾಯಿತಿ, ಇನ್ನೂ ತುಂಬಿ ತುಳುಕಲಿವೆ ಡೀಲರ್‌ಶಿಪ್‌!

ಒಟ್ಟು ರೂ.4.2 ಲಕ್ಷ ರಿಯಾಯಿತಿಯಲ್ಲಿ ರೂ.75,000 ನಗದು ರಿಯಾಯಿತಿ (Cash Discount), ರೂ.75,000 ವಿನಿಮಯ ಬೋನಸ್ (Exchange Bonus) ರೂ.1 ಲಕ್ಷವರೆಗೆ ಕಾರ್ಪೊರೇಟ್ ಬೆನಿಫಿಟ್ (Corporate Benefit), ರೂ. 86,000 ಮೌಲ್ಯದ 4 ವರ್ಷಗಳ ಉಚಿತ ಸರ್ವಿಸ್ ಪ್ಯಾಕೇಜ್, ರೂ.84,000 ಮೌಲ್ಯದ ಸ್ಪೆಷಲ್ ಬೆನಿಫಿಟ್ ಅನ್ನು ಒಳಗೊಂಡಿದೆ.

ಫೋಕ್ಸ್‌ವ್ಯಾಗನ್ ಟೈಗುನ್ 5 ಆಸನ ಆಯ್ಕೆ ವ್ಯವಸ್ಥೆಯನ್ನು ಹೊಂದಿದ್ದು, ನೈಟ್‌ಶೇಡ್ ಬ್ಲೂ, ಪ್ಯೂರ್ ವೈಟ್, ಓರಿಕ್ಸ್ ವೈಟ್, ಡೀಪ್ ಬ್ಲ್ಯಾಕ್, ಡಾಲ್ಫಿನ್ ಗ್ರೇ, ರಿಫ್ಲೆಕ್ಸ್ ಸಿಲ್ವರ್ ಸೇರಿದಂತೆ 7 ಮೊನೊಟೋನ್ ಬಣ್ಣಗಳ ಆಯ್ಕೆಯಲ್ಲಿ ದೊರೆಯುತ್ತದೆ. ಜೊತೆಗೆ AWD (ಆಲ್ ವೀಲ್ ಡ್ರೈವ್) ತಂತ್ರಜ್ಞಾನವನ್ನು ಪಡೆದಿದೆ.

ಈ ಫೋಕ್ಸ್‌ವ್ಯಾಗನ್ ಟೈಗುನ್ ಎಸ್‌ಯುವಿ, 2 - ಲೀಟರ್ ಟರ್ಬೊ ಪೆಟ್ರೋಲ್ ಎಂಜಿನ್ ಆಯ್ಕೆಯನ್ನು ಒಳಗೊಂಡಿದ್ದು, 190 PS ಗರಿಷ್ಠ ಪವರ್ ಹಾಗೂ 320 Nm ಪೀಕ್ ಟಾರ್ಕ್ ಉತ್ಪಾದಿಸುವ ಸಾಮರ್ಥ್ಯವನ್ನು ಹೊಂದಿದೆ. 7 - ಸ್ವೀಡ್ DCT (ಡ್ಯೂಯಲ್ ಕ್ಲಚ್ ಆಟೋಮೆಟಿಕ್) ಗೇರ್ ಬಾಕ್ಸ್ ಆಯ್ಕೆಯಲ್ಲಿ ಗ್ರಾಹಕರಿಗೆ ಸಿಗುತ್ತದೆ.

Volkswagen: ಫೋಕ್ಸ್‌ವ್ಯಾಗನ್‌ನ ಈ ಕಾರಿಗೆ 4.2 ಲಕ್ಷ ರೂಪಾಯಿ ರಿಯಾಯಿತಿ, ಇನ್ನೂ ತುಂಬಿ ತುಳುಕಲಿವೆ ಡೀಲರ್‌ಶಿಪ್‌!

ಟೈಗುನ್ ಯುವ ಗ್ರಾಹಕರನ್ನು ಆಕರ್ಷಿಸುವ ಹತ್ತಾರು ವೈಶಿಷ್ಟ್ಯಗಳನ್ನು ಹೊಂದಿದೆ. ಮುಖ್ಯವಾಗಿ 8 - ಇಂಚಿನ ಟಚ್‌ಸ್ಕ್ರೀನ್ ಸಿಸ್ಟಮ್, ಆಂಡ್ರಾಯ್ಡ್ ಆಟೋ, ಆಪಲ್ ಕಾರ್ ಪ್ಲೇ, ಡಿಜಿಟಲ್ ಇನ್ಸ್ಟ್ರುಮೆಂಟ್ ಕ್ಲಸ್ಟರ್, ಆಕರ್ಷಕ ಸನ್‌ರೂಫ್, ಕನೆಕ್ಟ್ದ್ ಕಾರ್ ಟೆಕ್, 3 - ಜೋನ್ ಕ್ಲೇಮೇಟ್ ಕಂಟ್ರೋಲ್, ಪವರ್ ಅಡ್ಜಸ್ಟ್ಏಬಲ್ ಡ್ರೈವರ್ ಸೀಟ್, 30 - ಕಲರ್ ಆಂಬಿಯೆಂಟ್ ಲೈಟಿಂಗ್ ಸೇರಿದಂತೆ ಹತ್ತಾರು ವೈಶಿಷ್ಟ್ಯಗಳನ್ನು ಹೊಂದಿದೆ.

ಸುರಕ್ಷತೆಯ ದೃಷ್ಟಿಯಿಂದ ಫೋಕ್ಸ್‌ವ್ಯಾಗನ್ ಟೈಗುನ್ ಎಸ್‌ಯುವಿ, 6 ಏರ್‌ಬ್ಯಾಗ್‌, TPMS (ಟೈರ್ ಪ್ರೆಶರ್ ಮಾನಿಟರಿಂಗ್ ಸಿಸ್ಟಮ್), ESC (ಎಲೆಕ್ಟ್ರಾನಿಕ್ ಸ್ಟೆಬಿಲಿಟಿ ಕಂಟ್ರೋಲ್), ಹಿಲ್ ಅಸಿಸ್ಟ್, ಹಿಲ್ ಡಿಸೆಂಟ್ ಕಂಟ್ರೋಲ್, ಪಾರ್ಕ್ ಅಸಿಸ್ಟ್, ರೇರ್ ವ್ಯೂ ಕ್ಯಾಮೆರಾ ಹಾಗೂ ISOFIX ಚೈಲ್ಡ್-ಸೀಟ್ ಮೌಂಟ್‌ ಒಳಗೊಂಡಂತೆ ವಿವಿಧ ಸೇಫ್ಟಿ ಫೀಚರ್ಸ್ ಇವೆ.

Volkswagen: ಫೋಕ್ಸ್‌ವ್ಯಾಗನ್‌ನ ಈ ಕಾರಿಗೆ 4.2 ಲಕ್ಷ ರೂಪಾಯಿ ರಿಯಾಯಿತಿ, ಇನ್ನೂ ತುಂಬಿ ತುಳುಕಲಿವೆ ಡೀಲರ್‌ಶಿಪ್‌!

ಫೋಕ್ಸ್‌ವ್ಯಾಗನ್ ಟೈಗುನ್ ಕಾರಿಗೆ ಜೀಪ್ ಕಂಪಾಸ್, ಹ್ಯುಂಡೈ ಟಕ್ಸನ್ ಮತ್ತು ಸಿಟ್ರಸ್ ಸಿ5 ಏರ್‌ಕ್ರಾಸ್ ಪ್ರಬಲ ಪ್ರತಿಸ್ಪರ್ಧಿಯಾಗಿವೆ. ಸದ್ಯ, ಕಂಪನಿಯು ಟೈಗುನ್ ಎಸ್‌ಯುವಿಗೆ ವರ್ಷಾಂತ್ಯದಲ್ಲಿ ಭರ್ಜರಿ ರಿಯಾಯಿತಿ ನೀಡಿರುವುದು ಗ್ರಾಹಕರಿಗೆ ಖುಷಿ ತಂದಿದ್ದು, ಹೆಚ್ಚಿನ ಸಂಖ್ಯೆಯಲ್ಲಿ ಖರೀದಿಸಲು ಮುಂದಾಗಬಹುದು. ಈ ಕಾರಣಕ್ಕೆ ಟೈಗುನ್‌ಗೆ ಮುಂಬರುವ ದಿನಗಳಲ್ಲಿ ಹೆಚ್ಚಿನ ಬೇಡಿಕೆ ಸೃಷ್ಟಿಯಾಗಬಹುದು.

ಡ್ರೈವ್‌ಸ್ಪಾರ್ಕ್ ಕನ್ನಡ ವೆಬ್‌ಸೈಟ್ ತ್ವರಿತವಾಗಿ ಆಟೋಮೊಬೈಲ್ ಸಂಬಂಧಿಸಿದ ಸುದ್ದಿಗಳನ್ನು ನೀಡುತ್ತದೆ. ಜೊತೆಗೆ ಸೋಷಿಯಲ್ ಮೀಡಿಯಾಗಳ ಮೂಲಕ ತಕ್ಷಣವೇ ಓದುಗರೊಂದಿಗೆ ಸುದ್ದಿಗಳನ್ನು ಶೇರ್ ಮಾಡುತ್ತೇವೆ. ಇತ್ತೀಚಿನ ಕಾರು, ಬೈಕ್ ಸುದ್ದಿ, ಟೆಸ್ಟ್ ಡ್ರೈವ್ ವರದಿಗಳು ಮತ್ತು ವೀಡಿಯೊಗಳನ್ನು ಪಡೆಯಲು ನಮ್ಮ ಫೇಸ್‌ಬುಕ್, ಇನ್‌ಸ್ಟಾಗ್ರಾಮ್, ಯೂಟ್ಯೂಬ್ ಪೇಜ್‌ಗಳೊಂದಿಗೆ ಫಾಲೋ ಮಾಡಿ. ನಿಮಗೆ ನಮ್ಮ ಯಾವುದೇ ಸುದ್ದಿ ಇಷ್ಟವಾದರೆ ಲೈಕ್, ಕಾಮೆಂಟ್ ಮಾಡುವುದನ್ನು ಮರೆಯದಿರಿ.

More from DriveSpark

Article Published On: Wednesday, December 6, 2023, 12:09 [IST]
English summary
Volkswagen tiguan car get rs 4 2 lakh big discount
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+