TPMS ಸಿಸ್ಟಂ ಅಂದ್ರೆ ಏನು? ಕಾರುಗಳ ಸುರಕ್ಷತೆಯಲ್ಲಿ ಇದರ ಪಾತ್ರವೇನು?
ಪ್ರಸ್ತುತ ದಿನಗಳಲ್ಲಿ ಕಾರುಗಳನ್ನು ಖರೀದಿಸುವುದು ಒಂದು ರೀತಿಯ ಕ್ರೇಜ್ ಆಗಿ ಹೋಗಿದೆ. ಇನ್ನು ಕಾರುಗಳನ್ನು ಖರೀದಿಸುವಾಗ ನೀವು ಕೆಲವು ವಿಚಾರಗಳ ಬಗ್ಗೆ ಗಮನಿಸಬೇಕಿರುವುದು ಅನಿವಾರ್ಯವಾಗಿದೆ. ಇದರಲ್ಲಿ TPMS ಸಿಸ್ಟಂ ಬಗ್ಗೆ ನೀವು ತಿಳಿದುಕೊಳ್ಳಬೇಕಿರುವುದು ಅತಿ ಅವಶ್ಯಕತೆಯಾಗಿದೆ.
ಹೌದು, TPMS ಸಿಸ್ಟಂ ಇತ್ತೀಚಿನ ಕಾರುಗಳಲ್ಲಿ ಸಾಮಾನ್ಯವಾಗಿ ಕಾಣಿಸಿಕೊಳ್ಳುತ್ತಿದೆ. ಇದರಿಂದ ಕಾರು ಮಾಲೀಕರು ಸಾಕಷ್ಟು ಸುರಕ್ಷತೆಯನ್ನು ಪಡೆದುಕೊಳ್ಳಲಿದ್ದಾರೆ ಅನ್ನೊದು ಇಂಟ್ರೆಸ್ಟಿಂಗ್ ವಿಚಾರವಾಗಿದೆ. ಈ ಒಂದು ಸಿಸ್ಟಂನಿಂದ ನಿಮ್ಮ ಕಾರು ಅಪಘಾತಗಳನ್ನು ತಡೆಗಟ್ಟಬಹುದು ಅಂದ್ರೆ ನೀವು ಊಹಿಸಿಕೊಳ್ಳಿ. ಹಾಗಾದ್ರೆ ಕಾರುಗಳಲ್ಲಿ TPMS ಸಿಸ್ಟಂ ವಿಶೇಷತೆ ಏನು? ಇದರ ಅವಶ್ಯಕತೆ ಏನು ಅನ್ನೊದನ್ನ ಈ ಲೇಖನದಲ್ಲಿ ತಿಳಿಸಿಕೊಡ್ತೀವಿ ಓದಿರಿ.

TPMS ಸಿಸ್ಟಂ ಎಂದರೇನು?
TPMS ಎಂದರೆ ಕಾರನ್ನು ಚಾಲನೆ ಮಾಡುವಾಗ ಅದರ ಟೈರ್ ಪ್ರೆಶರ್ ಅನ್ನು ಮೇಲ್ವಿಚಾರಣೆ ಮಾಡುವ ಸಿಸ್ಟಂ ಇದಾಗಿದೆ. ಇದರಿಂದ ನಿಮ್ಮ ಟೈರ್‌ಗಳ ಒತ್ತಡದ ಬಗ್ಗೆ ತಿಳಿಸಲಿದ್ದು, ಸಂಬಾವ್ಯ ಅಪಘಾತಗಳನ್ನು ತಡೆಗಟ್ಟಲಿದೆ. ನಿಮ್ಮ ಕಾರುಗಳ ಟೈರ್‌ನ ಒತ್ತಡದಲ್ಲಿ ಬದಲಾವಣೆಯಾದರೆ ಕೂಡಲೇ ಚಾಲಕರಿಗೆ ಮಾಹಿತಿ ನೀಡಲಿದೆ. ಇದು ವಾಹನದ ಸುರಕ್ಷತೆಯ ದೃಷ್ಟಿಯಿಂದ TPMS ಸಿಸ್ಟಂ ಪ್ರಮುಖ ಸ್ಥಾನವನ್ನು ಪಡೆದುಕೊಂಡಿದೆ.
ಇನ್ನು TPMS ಸೆನ್ಸಾರ್‌ಗಳನ್ನು ಒಳಗೊಂಡಿದ್ದು, ರಿಸೀವರ್ ಮತ್ತು ಡಿಸ್ಪ್ಲೇ ಯುನಿಟ್‌ನಲ್ಲಿ ಕಂಡುಬರಲಿದೆ. ಇದರ ಸೆನ್ಸಾರ್ ಟೈರ್‌ನ ಕವಾಟದ ಕಾಂಡಕ್ಕೆ ಸಂಪರ್ಕ ಹೊಂದಿದ್ದು, ಟೈರ್‌ಗಳ ಗಾಳಿಯ ಒತ್ತಡ ಮತ್ತು ತಾಪಮಾನವನ್ನು ಮೇಲ್ವಿಚಾರಣೆ ಮಾಡಲಿದೆ. ಇದರಿಂದ ಸೆನ್ಸಾರ್‌ಗಳು ಡೇಟಾವನ್ನು ರಿಸೀವರ್‌ಗೆ ರವಾನಿಸಲಿದೆ. ಇದು ನಂತರದಲ್ಲಿ ಡಿಸ್‌ಪ್ಲೇ ಯೂನಿಟ್‌ಗೆ ಕಳುಹಿಸಲಿದೆ.

ಇದಲ್ಲದೆ ಸಾಮಾನ್ಯ TPMS ಡಿವೈಸ್ ಅನ್ನು ಬಳಸಿಕೊಂಡು TPMS ಅನ್ನು ಇಂಟರ್‌ನಲ್ ಆಗಿ ಕೂಡ ಕನೆಕ್ಟ್ ಮಾಡಬಹುದು. ಇದರಲ್ಲಿ ಎರಡು ರೀತಿಯ ವಿಧಗಳನ್ನು ಕಾಣಬಹುದಾಗಿದೆ. ಇವುಗಳನ್ನು ಡೈರೆಕ್ಟ್ TPMS ಮತ್ತು ಇನ್ ಡೈರೆಕ್ಟ್ TPMS ಎಂದು ಹೆಸರಿಸಲಾಗಿದೆ. ಇದರಲ್ಲಿ ಡೈರೆಕ್ಟ್ TPMS ಪ್ರತಿ ಟೈರ್‌ನ ಒತ್ತಡವನ್ನು ಪ್ರತ್ಯೇಕವಾಗಿ ಮೇಲ್ವಿಚಾರಣೆ ಮಾಡುತ್ತದೆ. ಇನ್ನು ನೇರ TPMS ಹೆಚ್ಚು ನಿಖರ ಮತ್ತು ನೈಜ-ಸಮಯದ ಒತ್ತಡದ ಮಾಹಿತಿಯನ್ನು ತಿಳಿಸುತ್ತದೆ. ಆದರೆ,ಪರೋಕ್ಷ TPMS ನೇರ TPMSಗಿಂತ ಕಡಿಮೆ ನಿಖರವಾದ ಮಾಹಿತಿಯನ್ನು ನೀಡುತ್ತದೆ.ಆದರೆ,ಮೌಲ್ಯಯುತ ಎಚ್ಚರಿಕೆಗಳನ್ನು ಈ ಮೂಲಕ ಪಡೆದುಕೊಳ್ಳಬಹುದು. ಏಕೆಂದರೆ ಇನ್ ಡೈರೆಕ್ಟ್ TPMS ನಿಮಗೆ ಪ್ರತಿಯೊಂದು ಟೈರ್‌ನ ಒತ್ತಡವನ್ನು ಪ್ರತ್ಯೇಕವಾಗಿ ಹೇಳುವ ಬದಲು ಒಟ್ಟಿಗೆ ಹೇಳಲಿದೆ.
TPMS ಸಿಸ್ಟಂ ಯಾಕೆ ಅತಿಮುಖ್ಯವಾಗಿದೆ?
TPMS ಸಿಸ್ಟಂ ಕಾರುಗಳಲ್ಲಿ ಅತಿ ಮುಖ್ಯವಾದ ಫೀಚರ್ಸ್ ಆಗಿದೆ. ಇದರ ಕಾರ್ಯನಿರ್ವಹಣೆ ಕಾರುಗಳ ಅಪಘಾತವನ್ನು ತಡೆಗಟ್ಟುವಲ್ಲಿ ಪ್ರಮುಖ ಪಾತ್ರವಹಿಸಲಿವೆ. ಇದು ಸರಿಯಾದ ಟೈರ್ ಪ್ರೆಶರ್ ಅನ್ನು ಪರಿಶೀಲಿಸುವ ಮೂಲಕ ಸುರಕ್ಷತೆಯನ್ನು ಹೆಚ್ಚಿಸುತ್ತದೆ. ಟೈರ್ ಒತ್ತಡವು ಉತ್ತಮವಾಗಿದ್ದರೆ, ಕಾರು ರಸ್ತೆಯ ಮೇಲೆ ಸ್ಥಿರವಾಗಿರುತ್ತದೆ ಮತ್ತು ಚಾಲನೆ ಮಾಡುವಾಗ ಟೈರ್ ಹಾನಿಗೊಳಗಾಗುವ ಸಾಧ್ಯತೆ ಕಡಿಮೆ ಇರುತ್ತದೆ.

ಮತ್ತೊಂದೆಡೆ, ಅತಿಯಾಗಿ ಗಾಳಿ ತುಂಬಿದ ಟೈರ್‌ಗಳು ಟೈರ್ ಮತ್ತು ರಸ್ತೆಯ ನಡುವಿನ ಸಂಪರ್ಕ ಪ್ರದೇಶವನ್ನು ಕಡಿಮೆ ಮಾಡುತ್ತದೆ, ಇದು ಎಳೆತಕ್ಕೆ ಕಾರಣವಾಗುತ್ತದೆ. ಜೊತೆಗೆ ಸ್ಕಿಡ್ಡಿಂಗ್‌ಸಹ ಸಂಭವಿಸಬಹುದು. ಈ ಮೂಲಕ ನೀವು ನಿಗದಿ ಪಡಿಸಿದ ಟೈರ್ ಒತ್ತಡದಲ್ಲಿ ಏನಾದರೂ ಬದಲಾವಣೆ ಕಂಡುಬಂದರೆ TPMS ಚಾಲಕನನ್ನು ಎಚ್ಚರಿಸುತ್ತದೆ. ಈ ಮೂಲಕ ಸರಿಪಡಿಸಲು ತಕ್ಷಣದ ಕ್ರಮವನ್ನು ತೆಗೆದುಕೊಳ್ಳಲು ಅವರಿಗೆ ಅವಕಾಶ ನೀಡುತ್ತದೆ.ಇದೆಲ್ಲದರ ಜೊತೆಗೆ TPMS ಟೈರ್ ಜೀವಿತಾವಧಿಯನ್ನು ಹೆಚ್ಚಿಗೆ ಮಾಡಲಿದೆ.


Click it and Unblock the Notifications








