White cars: ಬಿಳಿ ಕಾರುಗಳಿಗೇಕೆ ಹೆಚ್ಚಿನ ಡಿಮ್ಯಾಂಡ್... ಎಷ್ಟೇ ಪಂಟರಾಗಿದ್ರೂ ಈ ವಿಷಯಗಳು ತಿಳಿದಿರುವುದಿಲ್ಲ!

ಭಾರತ ಮಾತ್ರವಲ್ಲದೆ ಜಗತ್ತಿನಾದ್ಯಂತ ಕಪ್ಪು ಡಾಂಬರು ರಸ್ತೆಗಳು ಬಹುತೇಕ ಬಿಳಿ ಕಾರುಗಳಿಂದ ತುಂಬಿವೆ. ಸಮೀಕ್ಷೆಗಳ ಪ್ರಕಾರ ಭೂಮಿಯ ಮೇಲಿನ ಶೇ 40 ಕ್ಕಿಂತ ಹೆಚ್ಚು ಕಾರುಗಳು ಬಿಳಿ ಬಣ್ಣದ್ದಾಗಿವೆ. ಕಾರು ಖರೀದಿಸುವಾಗ ಜನರು ಬಿಳಿ ಬಣ್ಣವನ್ನೇ ಏಕೆ ಬಯಸುತ್ತಾರೆ? ಬಿಳಿ ಕಾರು ಖರೀದಿಸಲು ಹಲವಾರು ಕಾರಣಗಳಿವೆ ಎಂದು ಹೇಳಲಾಗುತ್ತದೆ.

ಮರುಮಾರಾಟ ಮೌಲ್ಯ (Resale Value): ದೇಶದಲ್ಲಿ ಹೆಚ್ಚು ಬೇಡಿಕೆಯಿರುವ ಬಣ್ಣಗಳಲ್ಲಿ ಬಿಳಿ ಬಣ್ಣ ಒಂದಾಗಿದೆ. ಕಾರುಗಳಲ್ಲಿ ಅತ್ಯಂತ ಸಾಮಾನ್ಯವಾದ ಬಣ್ಣ ಕೂಡ ಬಿಳಿಯಾಗಿರುವುದರಿಂದ ಸೆಕೆಂಡ್ ಹ್ಯಾಂಡ್ ಮಾರುಕಟ್ಟೆಯಲ್ಲಿ ಇದಕ್ಕೆ ಬೇಡಿಕೆ ಹೆಚ್ಚು. ಜನರು ಬಿಳಿಯನ್ನು ಇಷ್ಟಪಡುವ ಇನ್ನೊಂದು ಕಾರಣವೆಂದರೆ ಮತ್ತೆ ಬಣ್ಣ ಹಾಕಿದಾಗ ಈಗಿರುವ ಬಣ್ಣವನ್ನು ಹೊಂದಿಸಲು ಸ್ವಲ್ಪ ಸುಲಭವಾಗುತ್ತದೆ. ಆದ್ದರಿಂದ ಬಿಳಿ ಬಣ್ಣವು ಅತ್ಯುತ್ತಮ ಮರುಮಾರಾಟ ಮೌಲ್ಯವನ್ನು ಹೊಂದಿದೆ.

why-white-cars-high-demand-know-these-secrets

ಖರೀದಿಸಲು ಅಗ್ಗ: ಹೋಂಡಾ ಕಂಪನಿ ಹೊರತುಪಡಿಸಿ ಹೆಚ್ಚಿನ ಇತರ ಕಾರು ತಯಾರಕರು ಸಾಮಾನ್ಯವಾಗಿ ಬಿಳಿ ಬಣ್ಣವನ್ನು ಅಗ್ಗದ ಬೆಲೆಯಲ್ಲಿ ನೀಡುತ್ತಾರೆ. ಏಕೆಂದರೆ ಇತರ ಬಣ್ಣಗಳಿಗೆ ಹೋಲಿಸಿಕೊಂಡರೆ ಪೇಂಟಿಂಗ್ ವೆಚ್ಚ ಕಡಿಮೆ ಇರುತ್ತದೆ. ಸಾಮಾನ್ಯವಾಗಿ ಗ್ರಾಹಕರು ಸಾಧ್ಯವಾದಷ್ಟು ಹಣ ಉಳಿಸುವ ಆಯ್ಕೆ ಇದ್ದಾಗ ಬಿಳಿ ಬಣ್ಣವನ್ನು ಏಕೆ ಖರೀದಿಸುವುದಿಲ್ಲ ಹೇಳಿ?

ನಿರ್ವಹಿಸಲು ಸುಲಭ: ಬಿಳಿ ಬಣ್ಣವು ಹಗುರವಾದ ಬಣ್ಣವಾಗಿರುವುದರಿಂದ ಸಾಬೀತಾಗಿರುವ ಸತ್ಯವೇನೆಂದರೆ ಡೆಂಟ್‌ಗಳು ಮತ್ತು ಸಣ್ಣ ಗೀರುಗಳು ಬಿಳಿ ಬಣ್ಣಗಳಲ್ಲಿ ಹೆಚ್ಚಾಗಿ ಗೋಚರಿಸುವುದಿಲ್ಲ. ಆದರೆ ಇತರ ಬಣ್ಣಗಳಿಗೆ ಸಣ್ಣ ಗೀರು ಬಿದ್ದರೂ ಎದ್ದು ಕಾಣುತ್ತದೆ. ಹಾಗಾಗಿ ಈ ವಿಷಯದಲ್ಲಿ ನಿರ್ವವಣೆ ಕೂಡ ಬಿಳಿ ಬಣ್ಣದ ಕಾರುಗಳನ್ನು ಹೊಂದಿರುವವರಿಗೆ ಕಡಿಮೆ ಇರುತ್ತದೆ.

why-white-cars-high-demand-know-these-secrets

ಧೂಳು ಮುಕ್ತ: ಹೌದು ಕೇಳಲು ವಿಚಿತ್ರವೆನಿಸಿದರು ನಿಜ, ಸಾಮಾನ್ಯವಾಗಿ ಬಿಳಿ ಬಣ್ಣದ ಕಾರುಗಳಿಗೆ ಹೆಚ್ಚು ಧೂಳು ಕೂರುತ್ತದೆ ಎಂದು ಭಾವಿಸುತ್ತಾರೆ. ಆದರೆ ಇದು ತಪ್ಪು, ಒಂದು ಜಾಗದಲ್ಲಿ ಬಿಳಿ ಹಾಗೂ ಕಪ್ಪು ಬಣ್ಣದ ಕಾರನ್ನು ಪಕ್ಕ ಪಕ್ಕದಲ್ಲಿ ನಿಲ್ಲಿಸಿ ಎರಡು ದಿನಗಳ ಬಳಿಕ ನೋಡಿದ್ರೆ ಬಿಳಿ ಕಾರಿನ ಮೇಲೂ ಧೂಳಿತಿರುತ್ತದೆ. ಆದ್ರೆ ಕಪ್ಪು ಕಾರಿನ ಮೇಲೆ ಅದಕ್ಕಿಂತ ಹೆಚ್ಚಿನ ಧೂಳು ಎದ್ದು ಕಾಣುತ್ತದೆ.

ಇದಕ್ಕೆ ಕಾರಣ ಗಾಢ ಬಣ್ಣಗಳು ಧೂಳನ್ನು ಎದ್ದು ಕಾಣುವಂತೆ ಮಾಡುತ್ತವೆ. ಬಿಳಿ ಬಣ್ಣ ಎಷ್ಟು ಹಗುರವಾದ ಬಣ್ಣ ಎಂಬುದು ಎಲ್ಲರಿಗೂ ತಿಳಿದೇ ಇದೆ. ಹಾಗಾಗಿಯೇ ಬಿಳಿ ಬಣ್ಣದ ಕಾರು ಅದರ ಮೇಲೆ ಕಡಿಮೆ ಗೋಚರಿಸುವ ಧೂಳಿಗೆ ಸಾಕ್ಷಿಯಾಗುತ್ತದೆ. ಆದ್ರೆ ಬಿಳಿ ವಾಹನಗಳನ್ನು ತಿಂಗಳುಗಟ್ಟಲೆ ಸುಮ್ಮನೆ ನಿಲ್ಲಿಸಿದರೇ ಇತರ ಬಣ್ಣದ ವಾಹನಗಳಂತೆ ಕೆಟ್ಟದಾಗಿ ಕಾಣುತ್ತವೆ ಎಂಬುದನ್ನು ಮರೆಯದಿರಿ.

why-white-cars-high-demand-know-these-secrets

ಇದರ ಹಿಂದಿದೆ ವಿಜ್ಞಾನ: ಬೇಸಿಗೆಯಲ್ಲಿ ಬಿಸಿ ವಾತಾವರಣ, ಸೂರ್ಯನ ಬೆಳಕಿನಿಂದಾಗಿ ವಾಹನದ ಒಳಭಾಗವು ತುಂಬಾ ಬಿಸಿಯಾಗುತ್ತದೆ. ಗಾಢವಾದ ಬಣ್ಣಗಳು (Dark colours) ಹಗುರವಾದ ಬಣ್ಣಗಳಿಗಿಂತ ಹೆಚ್ಚು ಶಾಖವನ್ನು ಹೀರಿಕೊಳ್ಳುತ್ತವೆ. ಎಲ್ಲರಿಗೂ ತಿಳಿದಿರುವಂತೆ ಬಿಳಿ ಬಣ್ಣವು ಹಗುರವಾಗಿರುತ್ತದೆ. ಆದ ಕಾರಣ ಬಿಸಿ ವಾತವಾರಣದಲ್ಲಿ ತಕ್ಕಮಟ್ಟಿಗೆ ಇತರ ಬಣ್ಣದ ವಾಹನಗಳಿಗಿಂತ ಉತ್ತಮವೆಂದೇ ಹೇಳಬಹುದು.

ಬಿಳಿ ಬಣ್ಣಕ್ಕಿದೆ ಹೆಚ್ಚಿನ ಮಹತ್ವ: ಭಾರತದಲ್ಲಿ ಸಂಕೃತಿ-ಸಂಪ್ರದಾಯಗಳಿಗೆ ಹೆಚ್ಚಾಗಿ ಆದ್ಯತೆ ನೀಡಲಾಗುತ್ತದೆ. ಬಿಳಿ ಬಣ್ಣವು ಶಾಂತಿ, ಶುಚಿತ್ವ, ಶುದ್ಧತೆಗೆ ಸಂಕೇತವಾಗಿದೆ. ಅಲ್ಲದೇ ಭಾರತ ಸರ್ಕಾರ ಸಾಮಾನ್ಯವಾಗಿ ತನ್ನ ಅಧಿಕಾರಿಗಳಿಗೆ ಬಿಳಿ ವಾಹನವನ್ನು ನೀಡುತ್ತದೆ, ಇದು ಸೊಬಗು ಮತ್ತು ಶಕ್ತಿಯನ್ನು ಸಂಕೇತಿಸುತ್ತದೆ. ಹೀಗೆ ಒಂದೆಡೆ ಸಾಂಪ್ರದಾಯಿಕ ಹಾಗೂ ಕೆಲ ತಾಂತ್ರಿಕ ಹಾಗೂ ವಿನ್ಞಾನ ಗುಣಗಳನ್ನು ಹೊಂದಿರುವ ಮೂಲಕ ಬಿಳಿ ಬಣ್ಣವು ಹೆಚ್ಚಿನ ಆದ್ಯತೆ ಪಡೆದಿದೆ.

why-white-cars-high-demand-know-these-secrets

ಡ್ರೈವ್‌ಸ್ಪಾರ್ಕ್ ಕನ್ನಡ ವೆಬ್‌ಸೈಟ್ ತ್ವರಿತ ಆಟೋಮೊಬೈಲ್ ಸುದ್ದಿಗಳನ್ನು ಒದಗಿಸುತ್ತದೆ, ಎಲ್ಲಾ ಸಾಮಾಜಿಕ ಮಾಧ್ಯಮಗಳ ಮೂಲಕ ತಕ್ಷಣವೇ ಓದುಗರೊಂದಿಗೆ ಸುದ್ದಿಗಳನ್ನು ಹಂಚಿಕೊಳ್ಳುತ್ತದೆ. ಇತ್ತೀಚಿನ ಕಾರು, ಬೈಕ್ ಸುದ್ದಿ, ಟೆಸ್ಟ್ ಡ್ರೈವ್ ವರದಿಗಳು ಮತ್ತು ವೀಡಿಯೊಗಳನ್ನು ಪಡೆಯಲು ನಮ್ಮ ಫೇಸ್‌ಬುಕ್, ಇನ್‌ಸ್ಟಾಗ್ರಾಮ್ ಮತ್ತು ಯೂಟ್ಯೂಬ್ ಪೇಜ್‌ಗಳೊಂದಿಗೆ ಸಂಪರ್ಕದಲ್ಲಿರಿ. ನಿಮಗೆ ಯಾವುದೇ ಸುದ್ದಿ ಇಷ್ಟವಾದರೆ ಲೈಕ್, ಕಾಮೆಂಟ್ ಮಾಡುವುದನ್ನು ಮರೆಯದಿರಿ. ಜೊತೆಗೆ ನಿಮ್ಮ ಸ್ನೇಹಿತರಿಗೂ ತಪ್ಪದೆ ಶೇರ್ ಮಾಡಿ.

Article Published On: Wednesday, August 2, 2023, 12:22 [IST]
English summary
Why white cars high demand know these secrets
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+