ಭಾರತ ವಿಶ್ವದ ಅತಿದೊಡ್ಡ ಕಾರು ಮಾರುಕಟ್ಟೆಯಾಗಿ ಬೆಳೆದಿದ್ದು ಹೇಗೆ? ಟಾಟಾ, ಮಹೀಂದ್ರಾ ಮಾಡಿದ್ದೇನು?
ಭಾರತ ಈಗ ವಿಶ್ವದ ಅತಿದೊಡ್ಡ ಕಾರು ಮಾರುಕಟ್ಟೆಯನ್ನು ಹೊಂದಿದೆ, ಆದ್ರೆ ಸ್ವತಂತ್ರ ಪೂರ್ವದಲ್ಲಿ ಕಾರುಗಳೇ ಇಲ್ಲದ ದೇಶ ನಮ್ಮದು. ಕೇವಲ ರಾಜ ಮನೆತನಗಳು, ಬ್ರಿಟೀಷ್ ಅಧಿಕಾರಿಗಳಿಗೆ ಮಾತ್ರ ಕಾರುಗಳು ಸೀಮಿತವಾಗಿದ್ದವು. ಹಾಗಾದ್ರೆ ನಮ್ಮ ದೇಶದಲ್ಲಿ ಕಾರು ಮಾರುಕಟ್ಟೆ ಈ ಮಟ್ಟಕ್ಕೆ ಬೆಳೆದದ್ದು ಹೇಗೆ ಎಂಬುದನ್ನು ಸರಳವಾಗಿ ಇಲ್ಲಿ ತಿಳಿದುಕೊಳ್ಳೋಣ.
ಭಾರತದ ಕಾರು ಇತಿಹಾಸವು ಸುಧೀರ್ಘವಾದದ್ದು, ವಿವರವಾಗಿ ಹೇಳಲು ಒಂದು ಲೇಖನ ಸಾಲುವುದಿಲ್ಲ. ಟಾಟಾ, ಮಾರುತಿ, ಮಹೀಂದ್ರಾ, ಟೊಯೋಟಾ, ಫೋರ್ಡ್, ನಿಸ್ಸಾನ್ ಸೇರಿದಂತೆ ಹಲವು ಕಾರು ಬ್ರಾಂಡ್‌ಗಳು ಭಾರತದ ಆಟೋ ಉದ್ಯಮದಕ್ಕೆ ಬಹಳಷ್ಟು ಕೊಡುಗೆ ನೀಡಿವೆ. ಸದ್ಯ ಇಲ್ಲಿ ಆಟೊ ವಲಯದ ಪ್ರಮುಖ ವಿಷಯಗಳನ್ನು ಮಾತ್ರ ತಿಳಿಸಲಾಗಿದೆ. ಭಾರತದಲ್ಲಿ ಇವುಗಳ ಇತಿಹಾಸವನ್ನು ವಿವರವಾಗಿ ತಿಳಿಯುವ ಆಸಕ್ತಿಯಿದ್ದರೆ ಕಮೆಂಟ್‌ನಲ್ಲಿ ತಿಳಿಸಿ.

ವಿಷಯಕ್ಕೆ ಬಂದರೆ ಮೇಲೆ ಹೇಳಿದಂತೆ ಸ್ವಾತಂತ್ರ್ಯ ಪೂರ್ವದಲ್ಲಿ, ಕಾರುಗಳನ್ನು ಐಷಾರಾಮಿ ವಸ್ತುವೆಂದು ಪರಿಗಣಿಸಲಾಗುತ್ತಿತ್ತು. ಪ್ರಧಾನವಾಗಿ ಗಣ್ಯ ವರ್ಗದವರ ಒಡೆತನದಲ್ಲಿದ್ದವು. ಬಳಿಕ ಆಟೋ ವಲಯದ ಪ್ರಮುಖ ಕ್ರಾಂತಿಯಾಗಿದ್ದು 20 ನೇ ಶತಮಾನದ ಆರಂಭದಲ್ಲಿ, ಮೊದಲ ಆಟೋಮೊಬೈಲ್ ಭಾರತೀಯ ತೀರಕ್ಕೆ ಆಗಮಿಸಿತು. ಇದು ದೇಶದಲ್ಲಿ ಹೊಸ ಯುಗದ ಆರಂಭವನ್ನು ಗುರುತಿಸಿದ ಮಹತ್ವದ ಸಂದರ್ಭವಾಗಿದೆ.
ದೇಶೀಯ ಉತ್ಪಾದನೆಯನ್ನು ಉತ್ತೇಜಿಸಲು ಸರ್ಕಾರವು ನೀತಿಗಳನ್ನು ಜಾರಿಗೆ ತಂದಿತು, ಇದರ ಪರಿಣಾಮವಾಗಿ ಅಂತರಾಷ್ಟ್ರೀಯ ಆಟೋಮೊಬೈಲ್ ದೈತ್ಯರು ಮತ್ತು ಭಾರತೀಯ ಕಂಪನಿಗಳ ನಡುವಿನ ಸಹಯೋಗಕ್ಕೆ ಕಾರಣವಾಯಿತು. ಭಾರತದಲ್ಲಿ ಕೈಗೆಟುಕುವ ಕಾರುಗಳನ್ನು ನೀಡಿದ್ರೆ ಮಾತ್ರ ಆಟೋ ವಲಯ ಬೆಳೆಯುವುದು ಎಂಬುದನ್ನು ಮಾರುತಿ ಉದ್ಯೋಗ್ ಲಿಮಿಟೆಡ್ (ಈಗಿನ ಮಾರುತಿ ಸುಜುಕಿ) ಮನಗಂಡಿತು.

1983 ರಲ್ಲಿ, ಮಾರುತಿ ಉದ್ಯೋಗ್ ಲಿಮಿಟೆಡ್ ಭಾರತೀಯ ಆಟೋಮೊಬೈಲ್ ಉದ್ಯಮವನ್ನು ತನ್ನ ಐಕಾನಿಕ್ ಮಾಡಲ್ ಮಾರುತಿ 800 ನೊಂದಿಗೆ ಕ್ರಾಂತಿಗೊಳಿಸಿತು. ಈ ಮಾದರಿ ಬಗ್ಗೆ ಈಗಿನ ಪ್ರತಿಯೊಬ್ಬ ಭಾರತೀಯನಿಗೂ ಗೊತ್ತೆ ಇದೆ. ಈ ಕಾಂಪ್ಯಾಕ್ಟ್ ಮತ್ತು ಕೈಗೆಟುಕುವ ಕಾರು ದೇಶಾದ್ಯಂತ ಮಧ್ಯಮ ವರ್ಗದ ಕುಟುಂಬಗಳಲ್ಲಿ ಅಗಾಧವಾಗಿ ಜನಪ್ರಿಯತೆ ಗಳಿಸಿತು.
ಈ ಮೂಲಕ ಭಾರತದಲ್ಲಿ ಕಾರುಗಳಿಗೆ ಉತ್ತಮ ಬೇಡಿಕೆಯಿರುವುದು ವಿಶ್ವದೇಶಗಳಿಗೆ ಅರಿವಾಯಿತು. 1991 ರಲ್ಲಿ ಪರಿಚಯಿಸಲಾದ ಉದಾರೀಕರಣ ನೀತಿಗಳೊಂದಿಗೆ, ವಿದೇಶಿ ವಾಹನ ತಯಾರಕರು ಭಾರತೀಯ ಮಾರುಕಟ್ಟೆಯನ್ನು ಪ್ರವೇಶಿಸಿದರು. ಹ್ಯುಂಡೈ, ಹೋಂಡಾ ಮತ್ತು ಟೊಯೋಟಾದಂತಹ ಬ್ರ್ಯಾಂಡ್‌ಗಳು ತಮ್ಮ ತಾಂತ್ರಿಕವಾಗಿ ಮುಂದುವರಿದ ಮತ್ತು ವೈಶಿಷ್ಟ್ಯ-ಸಮೃದ್ಧ ಕಾರುಗಳೊಂದಿಗೆ ಎಂಟ್ರಿಕೊಟ್ಟು ಜನಪ್ರಿಯತೆಯನ್ನು ಗಳಿಸಿದವು.

ಇದರ ಜೊತೆಗೆ ಭಾರತ ಆರ್ಥಿಕವಾಗಿ ಪುಟಿದೇಳುವ ಸಂದರ್ಭದಲ್ಲಿ ಭಾರತೀಯ ಆಟೋ ಕಂಪನಿಗಳು ಕೂಡ ಹುಟ್ಟಿಕೊಂಡವು. 21 ನೇ ಶತಮಾನವು ಟಾಟಾ ಮೋಟಾರ್ಸ್ ಮತ್ತು ಮಹೀಂದ್ರಾ & ಮಹೀಂದ್ರಾ ಮುಂತಾದ ಸ್ಥಳೀಯ ವಾಹನ ತಯಾರಕರ ಉದಯಕ್ಕೆ ಸಾಕ್ಷಿಯಾಯಿತು. ಈ ಬ್ರಾಂಡ್‌ಗಳು ಹಿಂದೆ ವಿದೇಶಿ ಬ್ರಾಂಡ್‌ಗಳಿಗಿಂತ ಹಿಂದುಳಿದಿದ್ದರೂ, ಈಗ ಯಾವುದೇ ತಂತ್ರಜ್ಞಾನವಾಗಲಿ ವಿದೇಶಿ ಬ್ರಾಂಡ್‌ಗಳಿಗೆ ಸೆಡ್ಡುಹೊಡೆಯುವಂತೆ ಬೆಳೆದುನಿಂತಿವೆ.
ಈ ಕಂಪನಿಗಳು ಆರಂಭದಲ್ಲಿ ಟಾಟಾ ನ್ಯಾನೋ ಮತ್ತು ಮಹೀಂದ್ರಾ ಸ್ಕಾರ್ಪಿಯೊದಂತಹ ಹೊಸ ಮಾದರಿಗಳನ್ನು ಪರಿಚಯಿಸಿದವು, ವೈವಿಧ್ಯಮಯ ಗ್ರಾಹಕರ ಆದ್ಯತೆಗಳನ್ನು ಈಗಲೂ ಪೂರೈಸುತ್ತಲೇ ಇವೆ. ವಿಶ್ವದಾದ್ಯಂತ ಸದ್ಯ ಎಲೆಕ್ಟ್ರಿಕ್ ಕಾರುಗಳಿಗೆ ಬೇಡಿಕೆ ಹೆಚ್ಚಾಗಿರುವುದರಿಂದ ಇತ್ತೀಚಿನ ವರ್ಷಗಳಲ್ಲಿ, ಭಾರತದಲ್ಲಿ ಎಲೆಕ್ಟ್ರಿಕ್ ವಾಹನಗಳ (ಇವಿ) ಮೇಲೆ ಹೆಚ್ಚು ಗಮನಹರಿಸುತ್ತಿವೆ.
ಸದ್ಯ ಭಾರತದಲ್ಲಿ ಎಲೆಕ್ಟ್ರಿಕ್ ವಲಯದಲ್ಲಿ ಟಾಟಾ ಮೋಟಾರ್ಸ್‌ನದ್ದೇ ಹವಾ ಮುಂದುವರೆದಿದೆ. ರಾಷ್ಟ್ರೀಯ ಎಲೆಕ್ಟ್ರಿಕ್ ಮೊಬಿಲಿಟಿ ಮಿಷನ್ ಯೋಜನೆ (NEMMP) ಮತ್ತು FAME ಇಂಡಿಯಾ ಯೋಜನೆಯಂತಹ ಉಪಕ್ರಮಗಳೊಂದಿಗೆ, ಪರಿಸರ ಸ್ನೇಹಿ ಸಾರಿಗೆ ಆಯ್ಕೆಗಳನ್ನು ಉತ್ತೇಜಿಸಲು ಸರ್ಕಾರವು ಗುರಿ ಹೊಂದಿದ್ದು, ಸರ್ಕಾರದ ಗುರಿಗೆ ತಕ್ಕಂತೆ ಎಲ್ಲಾ ಬ್ರಾಂಡ್‌ಗಳು ಸಹಕರಿಸುತ್ತಿವೆ.
ಡ್ರೈವ್‌ಸ್ಪಾರ್ಕ್ ಕನ್ನಡ ವೆಬ್‌ಸೈಟ್ ತ್ವರಿತ ಆಟೋಮೊಬೈಲ್ ಸುದ್ದಿಗಳನ್ನು ಒದಗಿಸುತ್ತದೆ, ಎಲ್ಲಾ ಸಾಮಾಜಿಕ ಮಾಧ್ಯಮಗಳ ಮೂಲಕ ತಕ್ಷಣವೇ ಓದುಗರೊಂದಿಗೆ ಸುದ್ದಿಗಳನ್ನು ಹಂಚಿಕೊಳ್ಳುತ್ತದೆ. ಇತ್ತೀಚಿನ ಕಾರು, ಬೈಕ್ ಸುದ್ದಿ, ಟೆಸ್ಟ್ ಡ್ರೈವ್ ವರದಿಗಳು ಮತ್ತು ವೀಡಿಯೊಗಳನ್ನು ಪಡೆಯಲು ನಮ್ಮ ಫೇಸ್‌ಬುಕ್, ಇನ್‌ಸ್ಟಾಗ್ರಾಮ್ ಮತ್ತು ಯೂಟ್ಯೂಬ್ ಪೇಜ್‌ಗಳೊಂದಿಗೆ ಸಂಪರ್ಕದಲ್ಲಿರಿ. ನಿಮಗೆ ಯಾವುದೇ ಸುದ್ದಿ ಇಷ್ಟವಾದರೆ ಲೈಕ್, ಕಾಮೆಂಟ್ ಮಾಡುವುದನ್ನು ಮರೆಯದಿರಿ. ಜೊತೆಗೆ ನಿಮ್ಮ ಸ್ನೇಹಿತರಿಗೂ ತಪ್ಪದೆ ಶೇರ್ ಮಾಡಿ.


Click it and Unblock the Notifications