ಹೆದ್ದಾರಿಯಲ್ಲಿ ಎಮ್ಮೆಗೆ ಬಡಿದ್ರೆ ಹೀಗಾ ಮಾಡೋದು! ಗ್ರಾಮಸ್ಥರ ಕೋಪಕ್ಕೆ XUV500 ಮಾಲೀಕ ಕಕ್ಕಾಬಿಕ್ಕಿ

ನಮ್ಮ ದೂರದ ಪ್ರಯಾಣವನ್ನು ಮತ್ತಷ್ಟು ಸುಗಮಗೊಳಿಸುವಲ್ಲಿ ಹೆದ್ದಾರಿಗಳ ಪಾತ್ರ ಮಹತ್ವದ್ದು, ಆದರೆ ಹೆದ್ದಾರಿ ಮಾರ್ಗದಲ್ಲಿ ಸಿಗುವ ಹಲವು ಹಳ್ಳಿಗಳು ಪ್ರಯಾಣಿಕರಿಗೆ ತೊಂದರೆಯಾಗಿ ಮಾರ್ಪಟ್ಟಿವೆ. ಹೆದ್ದಾರಿಗಳಲ್ಲಿ ಸಾಕು ಪ್ರಾಣಿಗಳನ್ನು ಬಿಡಬೇಡಿ ಎಂದು ಹೆದ್ದಾರಿ ಪ್ರಾಧಿಕಾರ ಹೇಳುತ್ತಲೇ ಇದ್ದರೂ ಇದನ್ನು ಕಡೆಗಣಿಸಲಾಗುತ್ತಿದೆ.

ಹೆದ್ದಾರಿಗಳಿರುವುದೇ ವೇಗದ ಪ್ರಯಾಣಕ್ಕಾಗಿ, ಆದರೆ ಬಹುತೇಕ ಸಾಕು ಪ್ರಾಣಿಗಳು ಡಿಕ್ಕಿಗೆ ಬಲಿಯಾಗುತ್ತಿರುವುದು ಅಲ್ಲಿನ ಊರಿನವರಿಂದಲೇ ಎಂಬುದು ನಿಜ. ಇತ್ತೀಚೆಗೆ ಮಹೀಂದ್ರಾ XUV500 ಎಮ್ಮೆಗೆ ಡಿಕ್ಕಿ ಹೊಡೆದ ಕಾರಣ ಅಲ್ಲಿನ ಊರಿನವರು ಕಾರನ್ನು ಧ್ವಂಸಗೊಳಿಸಿದ ಘಟನೆ ನಡೆದಿದೆ. ಈ ಕುರಿತ ವಿಡಿಯೋ ಕೂಡ ವೈರಲ್ ಆಗಿದ್ದು, ಕೊನೆಗೆ ಏನಾಯ್ತು ಎಂಬುದನ್ನು ಇಲ್ಲಿ ನೋಡೋಣ.

xuv 500 hit the buffalo

ವೀಡಿಯೊದ ಪ್ರಕಾರ, ಹೆದ್ದಾರಿಯಲ್ಲಿ ಮಹೀಂದ್ರಾ XUV500 ತುಸು ವೇಗದಲ್ಲಿದ್ದಾಗ ಇದ್ದಕ್ಕಿದ್ದಂತೆ ಕಾರಿನ ಮುಂದೆ ಎಮ್ಮೆ ಎದುರಾಗಿ ಡಿಕ್ಕಿ ಹೊಡೆದಿದೆ. ಕೂಡಲೇ ಗ್ರಾಮಸ್ಥರು ಕಾರಿನ ಸುತ್ತ ಜಮಾಯಿಸಿ ವಾಹನದಲ್ಲಿದ್ದ ಪ್ರಯಾಣಿಕರ ಮೇಲೆ ದೌರ್ಜನ್ಯ ಎಸಗಿದ್ದಾರೆ ಎನ್ನಲಾಗಿದೆ. ಅವರ ಮೇಲೆ ಕಲ್ಲುಗಳಿಂದ ದಾಳಿ ಕೂಡ ಮಾಡಿದ್ದು, ಕಾರನ್ನು ಹಾನಿ ಮಾಡಲು ಮುಂದಾಗಿದ್ದರು ಎಂದು ತಿಳಿದುಬಂದಿದೆ.

ಕಾರು ಮಾಲೀಕರು ಅಪಘಾತ ಸಂಭವಿಸಿದ ತಕ್ಷಣ ಪೊಲೀಸರಿಗೆ ಕರೆ ಮಾಡಿದ್ದಾರೆ. ಪೊಲೀಸರು ಬರುವುದು ಹೇಗೂ ತಡವಾಗುವುದರಿಂದ ಯಾವುದಕ್ಕೂ ಕೋಪಗೊಳ್ಳದೇ ಗ್ರಾಮಸ್ಥರೊಂದಿಗೆ ಶಾಂತವಾಗಿ ವ್ಯವರಿಸುತ್ತಿದ್ದರು. ಈ ವೇಳೆ ಎಮ್ಮೆಯ ಸಂಪೂರ್ಣ ಮೊತ್ತವನ್ನು ಚಾಲಕ ನೀಡಬೇಕೆಂದು ಒತ್ತಾಯಿಸಿದರು. ಇದೇ ವೇಳೆ ಅವರಲ್ಲೊಬ್ಬ ಟ್ರ್ಯಾಕ್ಟರ್ ತಂದು ಕಾರಿಗೆ ಡಿಕ್ಕಿ ಹೊಡೆದು ಹಾನಿಗೊಳಿಸಿದ್ದಾನೆ.

xuv 500 hit the buffalo

ಕಾರು ಮಾಲೀಕ ಹಾಗೂ ಪ್ರಯಾಣಿಕರು ಎಷ್ಟೇ ಕೇಳಿಕೊಂಡರೂ ಕೇಳದೇ ಕಾರನ್ನು ಹಾನಿಗೊಳಿಸುವುದನ್ನು ವಿಡಿಯೋದಲ್ಲಿ ನೋಡಬಹುದು. ನಂತರ ಸ್ಥಳಕ್ಕೆ ಆಗಮಿಸಿದ ಪೊಲೀಸರು ಸಾಕು ಪ್ರಾಣಿಯನ್ನು ಸಾರ್ವಜನಿಕ ರಸ್ತೆಗೆ ಬಿಟ್ಟಿದ್ದಕ್ಕೆ ಗ್ರಾಮಸ್ಥರಿಗೆ ಕ್ಲಾಸ್ ತೆಗೆದುಕೊಂಡರು. ಅಲ್ಲದೆ ಗ್ರಾಮಸ್ಥರ ವಿರುದ್ಧ ಪ್ರಕರಣ ದಾಖಲಿಸಿಕೊಂಡು ಸಮೀಪದ ಪೊಲೀಸ್ ಠಾಣೆಗೆ ಕರೆದೊಯ್ದರು ಎಂದು ತಿಳಿದುಬಂದಿದೆ.

ಇಂತಹ ಪರಿಸ್ಥಿತಿ ಎದುರಾದ್ರೆ ಹೀಗೆ ಮಾಡಿ: ಇಂತಹ ಪರಿಸ್ಥಿತಿ ಎದುರಾದ್ರೆ ಯಾವಾಗಲೂ ಶಾಂತವಾಗಿರಬೇಕು. ಗ್ರಾಮಸ್ಥರು ನಿಮ್ಮನ್ನು ಸುತ್ತುವರೆದರೆ ಮೊದಲು ಹೆದ್ದಾರಿ ಅಧಿಕಾರಿಗಳಿಗೆ ಅಥವಾ ಪೊಲೀಸರಿಗೆ ಕರೆ ಮಾಡಿ. ಪೊಲೀಸರು ಬರುವವರೆಗೆ ಪರಿಸ್ಥಿತಿಯನ್ನು ನಿಯಂತ್ರಣದಲ್ಲಿಟ್ಟುಕೊಳ್ಳುವುದು ತುಂಬಾ ಮುಖ್ಯ. ಗ್ರಾಮಸ್ಥರ ಮೇಲೆ ತಿರುಗಿಬಿದ್ದರೇ ನಮಗೆ ಅಪಾಯ ಕಟ್ಟಿಟ್ಟಬುತ್ತಿ ಎಂಬುದನ್ನು ಮರಿಯಬೇಡಿ.

xuv 500 hit the buffalo

ಡ್ಯಾಷ್ ಕ್ಯಾಮ್ ಮುಖ್ಯ: ಕಾರು ಬಳಸುವ ಪ್ರತಿಯೊಬ್ಬರು ಡ್ಯಾಷ್ ಕ್ಯಾಮ್ ಬಳಸುವುದು ತುಂಬಾ ಮುಖ್ಯ, ಹೆದ್ದಾರಿಯಲ್ಲಿ ಪ್ರಯಾಣಿಸುವಾಗ ಇನ್ನೂ ಮುಖ್ಯ. ಪರಿಸ್ಥಿತಿಯನ್ನು ಸಾಕ್ಷ್ಯ ಸಮೇತ ಸ್ಥಳೀಯ ಅಧಿಕಾರಿಗಳಿಗೆ ತೋರಿಸುವಲ್ಲಿ ಡ್ಯಾಷ್ ಕ್ಯಾಮ್ ಬಹಳ ಪ್ರಮುಖ ಪಾತ್ರ ವಹಿಸುತ್ತದೆ. ಹಾಗಾಗಿ ಡ್ಯಾಷ್ ಕ್ಯಾಮ್ ಬಳಸುವುದರಿಂದ ನಮ್ಮನ್ನು ನಾವು ಸೇಫ್ ಮಾಡಿಕೊಳ್ಳಬಹುದು.

ಗ್ರಾಮಸ್ಥರು ಪ್ರಾಣಿಗಳನ್ನು ರಸ್ತೆಗೆ ಬಿಡಬೇಡಿ: ಮೊದಲಿಗೆ ಹೆದ್ದಾರಿಯಿರುವುದು ವಾಹನಗಳಿಗಾಗಿ, ಪ್ರಾಣಿಗಳನ್ನು ರಸ್ತೆಗೆ ಬಿಟ್ಟು ಅಪಘಾತವಾದ್ರೆ ಪ್ರಯಾಣಿಕರ ಮೇಲೆ ಯಾವುದೇ ಅಪರಾದ ಹೊರೆಸಲಾಗುವುದಿಲ್ಲ ಎಂಬುದನ್ನು ತಿಳಿದುಕೊಳ್ಳಬೇಕು. ಹಾಗೆಯೇ ಒಂದು ವೇಳೆ ಗ್ರಾಮಸ್ಥರು ಪ್ರಯಾಣಿಕರ ಮೇಲೆ ದೌರ್ಜನ್ಯ ಎಸಗಿದರೆ ಪೊಲೀಸರ ಕ್ರಮಕ್ಕೆ ತುತ್ತುಗುವುದು ಖಚಿತ ಎಂಬುದಕ್ಕೆ ಈ ಘಟನೆಯೇ ಉತ್ತಮ ಉದಾಹರಣೆಯಾಗಿದೆ.

Article Published On: Saturday, June 10, 2023, 10:02 [IST]
English summary
Xuv 500 hit the buffalo villagers damaged car
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+