Viral video: ಯಮನ ಬಾಗಿಲು ತಟ್ಟಿ ವಾಪಸ್ ಬಂದ ಪುಣ್ಯಾತ್ಮರು! ಸಂಪೂರ್ಣ ದೃಶ್ಯ ಸೆರೆ

ಯುವಕರಿಗೆ ಬೈಕ್ ಕ್ರೇಜ್ ಇರಬೇಕು, ಆದ್ರೆ ಇತರರಿಗೆ ಕಿರಿಕಿರಿ ಮಾಡುವಂತಿರಬಾರದು, ಯುವಕನೊಬ್ಬ ತನ್ನ ಇಬ್ಬರು ಸ್ನೇಹಿತರೊಂದಿಗೆ ತ್ರಿಬಲ್ ರೈಡಿಂಗ್ ಮಾಡುತ್ತಾ ಬಂದು ಮತ್ತೊಂದು ವಾಹನಕ್ಕೆ ಡಿಕ್ಕಿ ಹೊಡೆದ ಘಟನೆ ನಡೆದಿದೆ. ಈ ಅಪಘಾತ ಎಲ್ಲಿ ನಡೆದಿದೆ ಎಂಬುದರ ಬಗ್ಗೆ ಮಾಹಿತಿಯಿಲ್ಲವಾದ್ರೂ ವ್ಲಾಗರ್ ಒಬ್ಬರ ಹೆಲ್ಮೆಟ್ ಕ್ಯಾಮರಾದಲ್ಲಿ ದೃಶ್ಯಗಳು ಸೆರೆಯಾಗಿವೆ.

ಸಾಮಾನ್ಯವಾಗಿ ಪೋಲಿ ಯುವಕರು ನಗರ ರಸ್ತೆಗಳಲ್ಲಿಯೇ ನಿಯಮಗಳನ್ನು ಪಾಲಿಸುವುದಿಲ್ಲ. ಅಂಥದರಲ್ಲಿ ಹೈವೇನಲ್ಲಿ ನಿಯಮಗಳನ್ನು ಪಾಲಿಸುವರೇ? ಇಲ್ಲೂ ಕೂಡ ಹೈವೇನಂತೆ ಕಾಣುವ ರಸ್ತೆಯಲ್ಲಿ ಅಪಘಾತ ಸಂಭವಿಸಿದೆ. ವಿವರವಾದ ಮಾಹಿತಿಗೆ ಹೋಗುವುದಾದರೆ ಯಮಹಾ MT-15 ನಲ್ಲಿ ಸವಾರಿ ಮಾಡುತ್ತಿದ್ದ ಮೂವರು ಸ್ನೇಹಿತರು ಮಹೀಂದ್ರಾ ಬೊಲೆರೊ ಪಿಕ್-ಅಪ್‌ಗೆ ಡಿಕ್ಕಿ ಹೊಡೆದಿದ್ದಾರೆ.

yamaha-mt-15-collided-with-mahindra-bolero-viral-video

ಅಪಘಾತಗಳ ಸಂಖ್ಯೆಯನ್ನು ಕಡಿಮೆ ಮಾಡಲು ಮತ್ತು ಸಂಚಾರ ನಿಯಮ ಉಲ್ಲಂಘನೆಗಳನ್ನು ಪತ್ತೆಹಚ್ಚಲು ಅಧಿಕಾರಿಗಳು ಈಗ ರಸ್ತೆಗಳಲ್ಲಿ ಸಿಸಿ ಕ್ಯಾಮೆರಾಗಳನ್ನು ಅಳವಡಿಸಿದ್ದಾರೆ. ಜೊತೆಗೆ ಟ್ರಾಫಿಕ್ ನಿಯಮ ಉಲ್ಲಂಘನೆಗಳನ್ನು ಹುಡುಕಲು ವೈರಲ್ ವೀಡಿಯೊಗಳಿಗಾಗಿ ಸಾಮಾಜಿಕ ಮಾಧ್ಯಮವನ್ನು ಸಹ ನೋಡುತ್ತಾರೆ. ಹೀಗಿದ್ದರೂ ನಿಯಮಗಳನ್ನು ಉಲ್ಲಂಘಿಸುವ ಜನರಿದ್ದಾರೆ ಎಂಬುದಕ್ಕೆ ಈ ವಿಡಿಯೋ ಸಾಕ್ಷಿಯಾಗಿದೆ.

ಪಶ್ಚಿಮ ಬಂಗಾಳದ ವ್ಯಕ್ತಿಯೊಬ್ಬರು ವಿಡಿಯೋವನ್ನು ಹಂಚಿಕೊಂಡಿದ್ದಾರೆ. ಈ ವೀಡಿಯೋದಲ್ಲಿ, ಬೈಕ್ ಸವಾರರು ಹೆದ್ದಾರಿಯಲ್ಲಿ ಸವಾರಿ ಮಾಡುವುದನ್ನು ನಾವು ನೋಡಬಹುದು, ನಿರಂತರ ವೇಗವನ್ನು ಕಾಯ್ದುಕೊಂಡು, ದುಡುಕಿನ ಸವಾರಿ ಮಾಡುತ್ತಾ ಬರುವ ಯಮಹಾ MT-15 ಬೈಕ್ ಸವಾರ, ಅವನೊಂದಿಗೆ ಬೈಕ್‌ನಲ್ಲಿ ಇದ್ದ ಇಬ್ಬರು ಪ್ರಯಾಣಿಕರು ಕೂಡ ಹೆಲ್ಮೆಟ್ ಧರಿಸಿಲ್ಲ.

yamaha-mt-15-collided-with-mahindra-bolero-viral-video

MT-15 ಸವಾರ ಉದ್ದೇಶಪೂರ್ವಕವಾಗಿ ಕ್ಯಾಮರಾದಲ್ಲಿ ರೆಕಾರ್ಡ್ ಆಗಲು ತನ್ನ ವಾಹನದ ಮುಂದೆ ಸಾಹಸಗಳನ್ನು ಮಾಡುತ್ತಿದ್ದನೆಂದು ಹೆಲ್ಮೆಟ್ ಕ್ಯಾಮರಾ ಧರಿಸಿದ್ದ ವ್ಲಾಗರ್ ಹೇಳಿದ್ದಾನೆ. MT-15 ಸವಾರ ಹಲವು ಬಾರಿ ಅಪಘಾತಗಳಿಂದ ಸ್ವಲ್ಪದರಲ್ಲೇ ಪಾರಾಗಿದ್ದ. ಆದರೆ ಹಲವಾರು ತಪ್ಪಿಸಿಕೊಂಡರೂ ಕೊನೆಗೆ ಅಪಘಾತಕ್ಕೆ ಸಿಲುಕಿ ಮುಖಕ್ಕೆ ತೀವ್ರ ಹಾನಿ ಮಾಡಿಕೊಂಡಿರುವುದನ್ನು ವಿಡಿಯೋದಲ್ಲಿ ನೋಡಬಹುದು.

ವಾಹನಗಳು ನಿಧಾನವಾಗಿ ಚಲಿಸುತ್ತಿದ್ದ ಒಂದು ಸ್ಥಳದಲ್ಲಿ, MT-15 ರೈಡರ್ ವ್ಲಾಗರ್ ಅನ್ನು ಹಿಂದಿಕ್ಕಿದ್ದಾನೆ. ಈ ವೇಳೆ ಎದುರಿದ್ದ ಮಹೀಂದ್ರಾ ಬೊಲೆರೊ ಪಿಕ್-ಅಪ್ ನಿಧಾನವಾಗುವುದನ್ನು ಅವರು ಗಮನಿಸಲಿಲ್ಲ. ಇದನ್ನು ಅರಿತುಕೊಳ್ಳುವ ಹೊತ್ತಿಗೆ ತುಂಬಾ ತಡವಾಗಿತ್ತು. ಬ್ರೇಕ್ ಹಾಕಿದನಾದರೂ ಬೈಕ್‌ನಲ್ಲಿ ಹೆಚ್ಚು ಜನರು ಇದ್ದರಿಂದ, ಬ್ರೇಕ್‌ಗಳು ಪರಿಣಾಮಕಾರಿಯಾಗಿ ಹಿಡಿಯಲಾಗಲಿಲ್ಲ.

MT-15 ABS ನೊಂದಿಗೆ ಬರುತ್ತದೆ, ಆದ್ದರಿಂದ ಮುಂಭಾಗದ ಚಕ್ರಗಳು ಸ್ಕಿಡ್ ಆಗಲಿಲ್ಲ. ಸವಾರನ ಮುಖ ಪಿಕ್-ಅಪ್ ಹಿಂಭಾಗದ ಕಬ್ಬಿಣದ ಬಾಗಿಲಿಗೆ ಅಪ್ಪಳಿಸಿದೆ. ಹಿಂಬದಿ ಕುಳಿತಿದ್ದ ಆತನ ಸ್ನೇಹಿತರು ಸಹ ಸವಾರನಿಗೆ ಡಿಕ್ಕಿ ಹೊಡೆದು ಬಾಗಿಲಿಗೆ ಅಪ್ಪಳಿಸಿದ್ದಾರೆ. ಸವಾರ ಕಬ್ಬಿಣದ ಬಾಗಿಲಿಗೆ ಮೊದಲು ತಲೆ ಹೊಡೆದಿರುವುದು ವೀಡಿಯೊದಿಂದ ಸ್ಪಷ್ಟವಾಗಿದೆ.

ಯುವಕರ ಗಾಯಗಳಿಗೆ ಸಂಬಂಧಿಸಿದ ಹೆಚ್ಚಿನ ಮಾಹಿತಿಯು ವೀಡಿಯೊದಲ್ಲ ಲಭ್ಯವಾಗಿಲ್ಲ. ಸವಾರ ಮತ್ತು ಅವನ ಸ್ನೇಹಿತರು ಗಂಭೀರವಾಗಿ ಗಾಯಗೊಂಡಿಲ್ಲ ಎನ್ನಲಾಗಿದೆ. ಟ್ರಿಪಲ್ ರೈಡಿಂಗ್ ಮಾಡಿದ್ದವರ ಅದೃಷ್ಟವೆಂದರೆ ಅವರ ಹಿಂದೆ ಯಾವುದೇ ವಾಹನ ಇರಲಿಲ್ಲ. ಒಂದು ವೇಳೆ ಇದ್ದಿದ್ದಲ್ಲಿ ತೀವ್ರ ಗಾಯಗಳು ಅಥವಾ ಜೀವ ಕಳೆದುಕೊಳ್ಳುವ ಸಾಧ್ಯತೆಗಳು ಹೆಚ್ಚಾಗಿರುತ್ತಿದ್ದವು.

ರಸ್ತೆಯಲ್ಲಿ ಹೇಗೆ ವರ್ತಿಸಬಾರದು ಎಂಬುದಕ್ಕೆ ಈ ವಿಡಿಯೋ ಒಂದು ಉತ್ತಮ ಉದಾಹರಣೆಯಾಗಿದೆ. ದ್ವಿಚಕ್ರ ವಾಹನ ಎಂದರೆ ಇಬ್ಬರಿಗೆ ಮಾತ್ರ. ಸರಿಯಾದ ರೈಡಿಂಗ್ ಗೇರ್‌ನೊಂದಿಗೆ ಯಾವಾಗಲೂ ಬೈಕ್ ಅನ್ನು ಓಡಿಸಬೇಕು. ಸದ್ಯ ಈ ಅಪಘಾತದಲ್ಲಿನ ಸವಾರರು ಸಿಕ್ಕಿಬಿದ್ದಿದ್ದಾರೆಯೇ, ಅವರಿಗೆ ನಿಯಮ ಉಲ್ಲಂಘನೆಗಾಗಿ ದಂಡವನ್ನು ವಿಧಿಸಲಾಗಿದೆಯೇ ಎಂಬುದರ ಬಗ್ಗೆ ಮಾಹಿತಿ ಲಭ್ಯವಾಗಿಲ್ಲ.

ಡ್ರೈವ್‌ಸ್ಪಾರ್ಕ್ ಕನ್ನಡ ವೆಬ್‌ಸೈಟ್ ತ್ವರಿತ ಆಟೋಮೊಬೈಲ್ ಸುದ್ದಿಗಳನ್ನು ಒದಗಿಸುತ್ತದೆ, ಎಲ್ಲಾ ಸಾಮಾಜಿಕ ಮಾಧ್ಯಮಗಳ ಮೂಲಕ ತಕ್ಷಣವೇ ಓದುಗರೊಂದಿಗೆ ಸುದ್ದಿಗಳನ್ನು ಹಂಚಿಕೊಳ್ಳುತ್ತದೆ. ಇತ್ತೀಚಿನ ಕಾರು, ಬೈಕ್ ಸುದ್ದಿ, ಟೆಸ್ಟ್ ಡ್ರೈವ್ ವರದಿಗಳು ಮತ್ತು ವೀಡಿಯೊಗಳನ್ನು ಪಡೆಯಲು ನಮ್ಮ ಫೇಸ್‌ಬುಕ್, ಇನ್‌ಸ್ಟಾಗ್ರಾಮ್ ಮತ್ತು ಯೂಟ್ಯೂಬ್ ಪೇಜ್‌ಗಳೊಂದಿಗೆ ಸಂಪರ್ಕದಲ್ಲಿರಿ. ನಿಮಗೆ ಯಾವುದೇ ಸುದ್ದಿ ಇಷ್ಟವಾದರೆ ಲೈಕ್, ಕಾಮೆಂಟ್ ಮಾಡುವುದನ್ನು ಮರೆಯದಿರಿ. ಜೊತೆಗೆ ನಿಮ್ಮ ಸ್ನೇಹಿತರಿಗೂ ತಪ್ಪದೆ ಶೇರ್ ಮಾಡಲು ಮರೆಯದಿರಿ.

Article Published On: Tuesday, August 1, 2023, 15:33 [IST]
English summary
Yamaha mt 15 collided with mahindra bolero viral video
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+