ಹೀಗಿರುತ್ತಾರೆ ನೋಡಿ ಆಪತ್ಭಾಂದವರು! ಮಾನವೀಯತೆ ಮೆರೆದ ಯುವಕರು
ಉತ್ತರ ಭಾರತದಲ್ಲಿ ತೀವ್ರ ಮಳೆಯಾಗುತ್ತಿದ್ದು, ದೆಹಲಿ ಎನ್‌ಸಿಆರ್ ಪ್ರದೇಶದಲ್ಲಿ ದಶಕಗಳಲ್ಲಿಯೇ ಹಿಂದೆಂದು ಕಂಡಿರದಂತಹ ಮಳೆಯಾಗಿದೆ. ದಾಖಲೆಯ ಮಟ್ಟದ ಮಳೆಯು ಈ ಪ್ರದೇಶದಲ್ಲಿ ವಿನಾಶವನ್ನು ಸೃಷ್ಟಿಸಿದೆ. ಪ್ರಮುಖ ರಸ್ತೆಗಳು ಜಲಾವೃತಗೊಂಡು ಕುಟುಂಬವೊಂದು ಕಾರಿನಲ್ಲಿ ಸಿಲುಕಿ ಹೊರಬರಲು ಪರದಾಡುವ ವಿಡಿಯೋ ವೈರಲ್ ಆಗಿದ್ದು, ಮನಕಲಕುವಂತಿದೆ.
ಜಲಾವೃತಗೊಂಡ ರಸ್ತೆಯ ಮಧ್ಯದಲ್ಲಿ ಕಾರು ಸಿಲಿಕಿಕೊಂಡಿದ್ದು ಅದರೊಳಗಿನವರನ್ನು ಸ್ಥಳೀಯರ ಗುಂಪು ರಕ್ಷಿಸುವುದನ್ನು ಈ ವಿಡಿಯೋದಲ್ಲಿ ನೋಡಬಹುದು. ಈ ವೀಡಿಯೊವನ್ನು ಅಲ್ಲೇ ಇದ್ದ ಕಟ್ಟಡದ ಮೇಲಿನಿಂದ ಚಿತ್ರಿಸಲಾಗಿದೆ. ನೀರಿನ ಮಟ್ಟವು ಕಾರಿನ ಬಾನೆಟ್ ಮಟ್ಟವನ್ನು ತಲುಪುತ್ತಿರುವುದನ್ನು ವಿಡಿಯೋದಲ್ಲಿ ಕಾಣಬಹುದು. ಕಾರಿನಲ್ಲಿದ್ದ ಪ್ರಯಾಣಿಕರು ತಮ್ಮನ್ನು ರಕ್ಷಿಸಿಕೊಳ್ಳಲು ಪ್ರಯತ್ನಿಸುತ್ತಿರುವ ದೃಶ್ಯಗಳು ಮನಕಲುಕುವಂತಿವೆ.

ಕಾರಿನಲ್ಲಿದ್ದ ಮಹಿಳಾ ಪ್ರಯಾಣಿಕೆಯೊಬ್ಬರು ಮತ್ತೊಬ್ಬನ ಭುಜದ ಮೇಲೆ ಹತ್ತಿ ಕಾರಿನ ರೂಫ್ ಏರುವುದನ್ನು ನಾವು ನೋಡಬಹುದು. ಸ್ಥಳೀಯರು ಸೊಂಟದವರೆಗೆ ನೀರಿನಲ್ಲಿ ಮುಳುಗಿದ್ದು, ಮಕ್ಕಳು ಕೆಳಗಿಳಿದಿರೆ ನೀರಿನಲ್ಲಿ ಸಂಪೂರ್ಣ ಮುಳುಗುತ್ತಾರೆ. ಹಾಗಾಗಿ ಕಾರಿನ ರೂಫ್ ಏರುವುದೊಂದೆ ಅವರಿಗಿರುವ ಉಪಾಯವಾಗಿದೆ. ಹಾಗೆಂದು ಎಲ್ಲರೂ ಏರಿದ್ರೆ ಕಾರಿನ ರೂಫ್ ಹಾನಿಗೊಂಡು ಮುರಿಯುವ ಸಾಧ್ಯೆಯಿದೆ.
ಇದನ್ನು ಅರಿತು ಕಾರಿನಲ್ಲಿದ್ದವರಿಗೆ ಸಹಾಯ ಮಾಡಲು ಸ್ಥಳೀಯ ಯುವಕರು ಕಾರಿನತ್ತ ಹೋಗುತ್ತಿರುವುದನ್ನು ವಿಡಿಯೋದಲ್ಲಿ ಕಾಣಬಹುದು. ವಿಡಿಯೋ ಸಣ್ಣದ್ದಾಗಿರುವುದರಿಂದ ಕೊನೆಯಲ್ಲಿ ಏನಾಗಿದೆ ಎಂಬುದರ ಬಗ್ಗೆ ವಿವಿರವಾದ ಮಾಹಿತಿ ಇಲ್ಲವಾದರೂ, ಎಲ್ಲರನ್ನು ಸುರಕ್ಷಿತವಾಗಿ ರಕ್ಷಿಸಲಾಗಿದೆ ಎಂದು ತಿಳಿದುಬಂದಿದೆ. ಕಾರಿನಲ್ಲಿ ಮಕ್ಕಳು ಕೂಡ ಇದ್ದರು ಎಂದು ಹೇಳಲಾಗಿದೆ.

ಉತ್ತರ ಭಾರತದಲ್ಲಿ ಭಾರೀ ಮಳೆ: ಉತ್ತರ ಭಾರತದಲ್ಲಿ ಭಾರೀ ಮಳೆಯಾಗುತ್ತಿದ್ದು, ಯಮುನಾ ನದಿಯಲ್ಲಿ ನೀರಿನ ಮಟ್ಟ ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ ದೆಹಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಅವರು ಪರಿಸ್ಥಿತಿಯನ್ನು ಅವಲೋಕಿಸಲು ಸಭೆ ನಡೆಸಿದ್ದಾರೆ. ಯಮುನಾ ನದಿ 206 ಮೀಟರ್ ಗಡಿ ದಾಟಿದರೆ, ನದಿ ದಡದ ನಿವಾಸಿಗಳನ್ನು ಸ್ಥಳಾಂತರಿಸುವುದಾಗಿ ಅವರು ಹೇಳಿದ್ದಾರೆ.
ಇತ್ತ ಹಿಮಾಚಲ ಪ್ರದೇಶ ಸೇರಿದಂತೆ ಉತ್ತರ ಭಾರತದಲ್ಲಿ ಪರಿಸ್ಥಿತಿ ಘೋರವಾಗಿದೆ. ಭಾರೀ ಮಳೆಯಾಗುವ ಸಾಧ್ಯತೆಯಿದೆ ಎಂದು ಹವಾಮಾನ ಇಲಾಖೆ ಎಚ್ಚರಿಕೆ ನೀಡಿರುವುದರಿಂದ ಮುಂದಿನ 24 ಗಂಟೆಗಳ ಕಾಲ ಜಾಗರೂಕರಾಗಿರಿ ಎಂದು ಮುಖ್ಯಮಂತ್ರಿ ಸುಖವಿಂದರ್ ಸಿಂಗ್ ಸುಖು ಮನವಿ ಮಾಡಿದ್ದಾರೆ. ಪಂಜಾಬ್ ಮುಖ್ಯಸ್ಥರು ಅಲ್ಲಿನ ಪರಿಸ್ಥಿತಿಯ ಬಗ್ಗೆ ಅಧಿಕಾರಿಗಳೊಂದಿಗೆ ನಿರಂತರ ಸಂಪರ್ಕದಲ್ಲಿದ್ದಾರೆ ಎಂದು ತಿಳಿಸಿದ್ದಾರೆ.
ಜಲಾವೃತಗೊಂಡ ರಸ್ತೆಗಳಲ್ಲಿ ಪ್ರಯಾಣ ಬೇಡ: ನೀವು ಮುಂದೆ ಜಲಾವೃತ ರಸ್ತೆಯನ್ನು ಕಂಡರೆ ಆ ರಸ್ತೆಗಳ ಬಗ್ಗೆ ಪರಿಚಯವಿಲ್ಲದಿದ್ದರೆ, ಮುಂದೆ ಹೋಗುವುದು ಸುರಕ್ಷಿತವಲ್ಲ. ಅನೇಕ ರಸ್ತೆಗಳು ನೀರಿನ ಅಡಿಯಲ್ಲಿ ಹೊಂಡಗಳನ್ನು ಮರೆಮಾಡಿರುತ್ತವೆ. ತಿಳಿಯದೇ ಮುನ್ನುಗ್ಗಿ ವಾಹನ ಹಾಗೂ ನಿಮ್ಮ ಜೀವಕ್ಕೆ ಕುತ್ತುತಂದುಕೊಳ್ಳುವುದರ ಬದಲು ನಿಂತಲ್ಲಿಯೇ ನಿಲ್ಲಿಸುವುದು ಉತ್ತಮ.
ಡ್ರೈವ್‌ಸ್ಪಾರ್ಕ್ ಕನ್ನಡ ವೆಬ್‌ಸೈಟ್ ತ್ವರಿತ ಆಟೋಮೊಬೈಲ್ ಸುದ್ದಿಗಳನ್ನು ಒದಗಿಸುತ್ತದೆ, ಎಲ್ಲಾ ಸಾಮಾಜಿಕ ಮಾಧ್ಯಮಗಳ ಮೂಲಕ ತಕ್ಷಣವೇ ಓದುಗರೊಂದಿಗೆ ಸುದ್ದಿಗಳನ್ನು ಹಂಚಿಕೊಳ್ಳುತ್ತದೆ. ಇತ್ತೀಚಿನ ಕಾರು, ಬೈಕ್ ಸುದ್ದಿ, ಟೆಸ್ಟ್ ಡ್ರೈವ್ ವರದಿಗಳು ಮತ್ತು ವೀಡಿಯೊಗಳನ್ನು ಪಡೆಯಲು ನಮ್ಮ ಫೇಸ್‌ಬುಕ್, ಇನ್‌ಸ್ಟಾಗ್ರಾಮ್ ಮತ್ತು ಯೂಟ್ಯೂಬ್ ಪೇಜ್‌ಗಳೊಂದಿಗೆ ಸಂಪರ್ಕದಲ್ಲಿರಿ.


Click it and Unblock the Notifications