ಮಾರುಕಟ್ಟೆ ಶೇಕ್: ರತನ್ ಟಾಟಾ ಕಂಪನಿಯಿಂದ ಹೊಸ ಕಾರುಗಳು ಅಖಾಡಕ್ಕೆ... ವಿದೇಶಿ ಕಂಪನಿಗಳಿಗೆ ನಡುಕ!

ಸ್ವದೇಶಿ ಕಾರು ತಯಾರಕ ಕಂಪನಿಯಾದ ಟಾಟಾ ಮೋಟಾರ್ಸ್ (Tata Motors) ತನ್ನ ಜನಪ್ರಿಯ ಮಾಡೆಲ್ ಗಳನ್ನು ಭರ್ಜರಿಯಾಗಿ ಮಾರಾಟ ಮಾಡುತ್ತಿದೆ. ಟಾಟಾ ತನ್ನ ನೆಕ್ಸಾನ್ ಮತ್ತು ಪಂಚ್‌ನೊಂದಿಗೆ ಭಾರತೀಯ ಮಾರುಕಟ್ಟೆಯಲ್ಲಿ ಮೂರನೇ ಅತಿದೊಡ್ಡ ಕಾರು ತಯಾರಕರಾಗಿದ್ದಾರೆ. ಸದ್ಯ ಭಾರತದಲ್ಲಿ ಅತಿ ಹೆಚ್ಚು ಮಾರಾಟವಾಗುವ ಕಾರು ಟಾಟಾ ಪಂಚ್ ಆಗಿದೆ. ಅಷ್ಟರ ಮಟ್ಟಿಗೆ ಟಾಟಾ ಕಾರುಗಳು ಜನಪ್ರಿಯತೆ ಗಳಿಸಿದೆ. ಇದೀಗ ಟಾಟಾ ಕಂಪನಿಯು ಹೊಸ ಎರಡೂ ಎಸ್‍ಯುವಿಗಳನ್ನು ಬಿಡುಗಳಿಸಲು ಸಜ್ಜಾಗಿದೆ. ಈ ಹೊಸ ಟಾಟಾ ಎಸ್‍ಯುವಿಗಳ ಬಗ್ಗೆ ಮಾಹಿತಿ ಇಲ್ಲಿದೆ.

ಟಾಟಾ ಕರ್ವ್ ICE: ಟಾಟಾ ಮೋಟಾರ್ಸ್ ಕರ್ವ್ ಎಲೆಕ್ಟ್ರಿಕ್ ಕೂಪೆ ಎಸ್‌ಯುವಿಯನ್ನು ದೇಶೀಯ ಮಾರುಕಟ್ಟೆಯಲ್ಲಿ ಕೆಲವೇ ದಿನಗಳ ಹಿಂದೆ ಬಿಡುಗಡೆಗೊಳಿಸಿತು. ಇದೀಗ ಹೊಸ ಟಾಟಾ ಕರ್ವ್ ICE ಎಸ್‍ಯುವಿಯು ಬಿಡುಗಡೆಗೊಳಿಸಲು ಸಜ್ಜಾಗಿದೆ. ಟಾಟಾ ಕರ್ವ್ ICE (Tata Curvv ICE) ಮಾದರಿಯು ಭಾರತೀಯ ಮಾರುಕಟ್ಟೆಯಲ್ಲಿ ಬಿಡುಗಡೆಯಾದ ಬಳಿಕ ಹ್ಯುಂಡೈ ಕ್ರೆಟಾ, ಕಿಯಾ ಸೆಲ್ಟೋಸ್, ಮಾರುತಿ ಗ್ರ್ಯಾಂಡ್ ವಿಟಾರಾ, ಟೊಯೊಟಾ ಹೈರೈಡರ್ ಮತ್ತು ಹೋಂಡಾ ಎಲಿವೇಟ್ ಎಸ್‍ಯುವಿಗಳಿಗೆ ಪೈಪೋಟಿ ನೀಡುತ್ತದೆ.

Tata Curvv ICE

ಟಾಟಾ ಕರ್ವ್ ICE ಎಸ್‍ಯುವಿ ಆಧುನಿಕ ವಿನ್ಯಾಸ ಮತ್ತು ಸುಧಾರಿತ ವೈಶಿಷ್ಟ್ಯಗಳೊಂದಿಗೆ ಪ್ರತಿಸ್ಪರ್ಧಿಗಳಿಗೆ ಸವಾಲು ಹಾಕಲು ರೆಡೆಯಾಗಿದೆ. ಹೊಸ ಟಾಟಾ ಕರ್ವ್ ICE ಎಸ್‍ಯುವಿ ಲೋ ಸ್ಥಾನದಲ್ಲಿರುವ ಹೆಡ್‌ಲ್ಯಾಂಪ್‌ಗಳು, ಸಿಗ್ನೇಚರ್ LED ಮತ್ತು ದೊಡ್ಡ ಬಂಪರ್‌ಗಳನ್ನು ಒಳಗೊಂಡಿದೆ. ಸೈಡ್ ಪ್ರೊಫೈಲ್ ಪಾಪ್-ಔಟ್ ಡೋರ್ ಹ್ಯಾಂಡಲ್‌ಗಳು ಮತ್ತು ಅಲಾಯ್ ವ್ಹೀಲ್ ಗಳಿಂದ ಸುತ್ತುವರೆದಿದೆ. ಇನ್ನು ಈ ಟಾಟಾ ಕರ್ವ್ ICE ಎಸ್‍ಯುವಿ ಸಿ-ಪಿಲ್ಲರ್ ವಿನ್ಯಾಸದಲ್ಲಿ ಸಂಯೋಜಿಸಲ್ಪಟ್ಟ ಹಿಂಭಾಗದ ಸ್ಪಾಯ್ಲರ್ಗೆ ಕಾರಣವಾಗುತ್ತದೆ.

ಟಾಟಾ ಕರ್ವ್ ICE ಎಸ್‍ಯುವಿ ಹಿಂಭಾಗದಲ್ಲಿ ಲೈಟ್ ಸ್ಟ್ರಿಪ್ ಮತ್ತು ಚಂಕಿಯರ್-ಲುಕಿಂಗ್ ಹಿಂಭಾಗದ ಬಂಪರ್ ಇದೆ. ಎಲೆಕ್ಟ್ರಿಕ್ ಹಾಗೂ ಇಂಧನ ಚಾಲಿತ ಕರ್ವ್ ಕಾರುಗಳು, ಬಹುತೇಕ ಒಂದೇ ರೀತಿಯ ವೈಶಿಷ್ಟ್ಯಗಳನ್ನು ಒಳಗೊಂಡಿವೆ. ನೂತನ ಟಾಟಾ ಕರ್ವ್ ಮಿಡ್-ಸೈಜ್ ಕೂಪೆ ಎಸ್‌ಯುವಿ 3 ವಿವಿಧ ಎಂಜಿನ್ ಆಯ್ಕೆಯಲ್ಲಿ ಖರೀದಿಗೆ ಲಭ್ಯವಿರಲಿದೆ ಎಂದು ಮೂಲಗಳು ಹೇಳಿವೆ.

Tata Curvv ICE

ಇದರ 1.2-ಲೀಟರ್ ಟರ್ಬೊ-ಪೆಟ್ರೋಲ್ ಎಂಜಿನ್ 118 ಬಿಹೆಚ್‌ಪಿ ಪವರ್ ಹಾಗೂ 170 ಎನ್ಎಂ ಪೀಕ್ ಟಾರ್ಕ್ ಉತ್ಪಾದಿಸುತ್ತದೆ. 1.5-ಲೀಟರ್ ಡೀಸೆಲ್ ಎಂಜಿನ್ 113 ಬಿಹೆಚ್‌ಪಿ ಪವರ್ ಮತ್ತು 260 ಎನ್ಎಂ ಪೀಕ್ ಟಾರ್ಕ್ ಉತ್ಪಾದಿಸುವ ಸಾಮರ್ಥ್ಯವನ್ನು ಹೊಂದಿರಲಿದೆ ಎನ್ನಲಾಗಿದೆ. ಮತ್ತೊಂದು 1.2-ಲೀಟರ್ ಡೈರೆಕ್ಟ್-ಇಂಕ್ಷನ್ ಪೆಟ್ರೋಲ್ ಎಂಜಿನ್ 123 ಬಿಹೆಚ್‌ಪಿ ಪವರ್ ಹಾಗೂ 225 ಎನ್ಎಂ ಪೀಕ್ ಟಾರ್ಕ್ ಉತ್ಪಾದಿಸುತ್ತದೆ

ರೂಪಾಂತರಗಳಿಗೆ ಅನುಗುಣವಾಗಿ 6-ಸ್ಪೀಡ್ ಮ್ಯಾನುವಲ್ ಮತ್ತು 7-ಸ್ಪೀಡ್ ಡಿಸಿಟಿ (ಡುಯಲ್ ಕ್ಲಚ್ ಟ್ರಾಸ್ಮಿಷನ್) ಗೇರ್‌ಬಾಕ್ಸ್‌ನ್ನು ಒಳಗೊಂಡಿರಲಿದೆ ಎಂದು ಹೇಳಲಾಗಿದೆ. ಲೆವೆಲ್-2 ADAS ನಂತಹ ಡೈನಾಮಿಕ್ ಸ್ಟೈಲಿಂಗ್ ಮತ್ತು ಸುಧಾರಿತ ವೈಶಿಷ್ಟ್ಯಗಳೊಂದಿಗೆ, ಟಾಟಾ ಕರ್ವ್ ಖಂಡಿತವಾಗಿಯೂ ಮಿಡ್ ಸೈಜ್ ಎಸ್‍ಯುವಿ ವಿಭಾಗದಲ್ಲಿ ಗಮನಾರ್ಹ ಪರಿಣಾಮ ಬೀರುವ ಸಾಮರ್ಥ್ಯವನ್ನು ಹೊಂದಿದೆ.

Tata Nexon CNG

ಟಾಟಾ ನೆಕ್ಸಾನ್ ಸಿಎನ್‌ಜಿ: ನೂತನ ಟಾಟಾ ನೆಕ್ಸಾನ್ ಸಿಎನ್‌ಜಿ (Tata Nexon CNG) ಎಸ್‌ಯುವಿ, 5-ಸ್ಪೀಡ್ ಮ್ಯಾನುವಲ್/ 5-ಸ್ಪೀಡ್ ಆಟೋಮೆಟಿಕ್ ಗೇರ್‌ಬಾಕ್ಸ್ ಆಯ್ಕೆಯನ್ನು ಕೂಡ ಹೊಂದಿರಲಿದೆ ಎಂದು ತಿಳಿದುಬಂದಿದೆ. 1.2-ಲೀಟರ್ ಟರ್ಬೋಚಾರ್ಜ್ಡ್ 3-ಸಿಲಿಂಡರ್ ಎಂಜಿನ್ ಪಡೆದಿರಲಿದ್ದು, 100 ಪಿಎಸ್ ಪವರ್ ಮತ್ತು 150 ಎನ್ಎಂ ಪೀಕ್ ಟಾರ್ಕ್ ಉತ್ಪಾದಿಸಬಹುದು.

ಟಾಟಾ ನೆಕ್ಸಾನ್ ಸಿಎನ್‌ಜಿ ಎಸ್‌ಯುವಿ ಗರಿಷ್ಠ ಇಂಧನ ದಕ್ಷತೆ ಹೊಂದಿರಲಿದ್ದು, 26.99 ಕಿ.ಮೀ/ಕೆಜಿ ಮೈಲೇಜ್ ಕೊಡಬಹುದು ಎಂದು ಅಂದಾಜಿಸಲಾಗಿದೆ. ಈ ಕಾರು ಸ್ಪರ್ಧಾತ್ಮಕ ಬೆಲೆಯಲ್ಲಿ ಖರೀದಿಗೆ ದೊರೆಯಲಿದ್ದು, ರೂ.9 ಎಕ್ಸ್ ಶೋರೂಂ ಬೆಲೆಯನ್ನು ಪಡೆದುಕೊಂಡಿರಬಹುದು ಎಂದು ಹೇಳಲಾಗಿದೆ. ಈ ಟಾಟಾ ನೆಕ್ಸಾನ್ ಸಿಎನ್‌ಜಿ ಸಹ ಅತ್ಯಾಧುನಿಕ ವಿನ್ಯಾಸ ಹಾಗೂ ವೈಶಿಷ್ಟ್ಯಗಳನ್ನು ಹೊಂದಿರಲಿದೆ. ಇಂಧನ ಚಾಲಿತ (ಪೆಟ್ರೋಲ್/ಡೀಸೆಲ್) ನೆಕ್ಸಾನ್ ಕಾರಿಗೆ ಬಹುತೇಕ ಹೋಲಿಕೆಯಾಗುತ್ತದೆ.

Article Published On: Thursday, August 29, 2024, 16:38 [IST]
English summary
2 new tata suvs launching in india coming weeks
Read more on tata motors india
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+