ಹೊಸ ನವೀಕರಣಗಳೊಂದಿಗೆ ಹುಂಡೈ ಕಂಪನಿಯ ಗೇಮ್ ಚೇಂಜರ್ ಕ್ರೆಟಾ ಅನಾವರಣ

ಜನಪ್ರಿಯ ಕಾರು ತಯಾರಕ ಕಂಪನಿಯಾದ ಹ್ಯುಂಡೈ ತನ್ನ ಬಹು ನಿರೀಕ್ಷಿತ 2024ರ ಹ್ಯುಂಡೈ ಕ್ರೆಟಾ ಫೇಸ್‌ಲಿಫ್ಟ್ (Hyundai Creta Facelift) ಎಸ್‍ಯುವಿಯನ್ನು ಅನಾವರಣಗೊಳಿಸಿದೆ. ಈ ಹೊಸ ಹ್ಯುಂಡೈ ಕ್ರೆಟಾ ಫೇಸ್‌ಲಿಫ್ಟ್ ಎಸ್‍ಯುವಿಯ ಖರೀದಿಗಾಗಿ ಬುಕ್ಕಿಂಗ್ ಅನ್ನು ಪ್ರಾರಂಭಿಸಿದ್ದು, ಈ ಹೊಸ ಎಸ್‍ಯುವಿಯನ್ನು ಖರೀದಿಸಲು ಬಯಸುವ ಗ್ರಾಹಕರು ರೂ.25,000 ಟೋಕನ್ ಮೊತ್ತವನ್ನು ಪಾವತಿಸಿ ಬುಕ್ಕಿಂಗ್ ಮಾಡಿಕೊಳ್ಳಬಹುದು.

ಹೊಸ ಹ್ಯುಂಡೈ ಕ್ರೆಟಾ ಫೇಸ್‌ಲಿಫ್ಟ್ ಎಸ್‍ಯುವಿಯ ವಿತರಣೆಯು ಈ ತಿಂಗಳ ಅಂತ್ಯದ ಪ್ರಾರಂಭವಾಗಲಿದೆ. ಹ್ಯುಂಡೈ ಕ್ರೆಟಾ ಫೇಸ್‌ಲಿಫ್ಟ್ ಅಂತರರಾಷ್ಟ್ರೀಯ ಮಾರುಕಟ್ಟೆಗಳಲ್ಲಿ ಮಾರಾಟದಲ್ಲಿರುವ ನವೀಕರಿಸಿದ ಕ್ರೆಟಾಕ್ಕಿಂತ ಭಿನ್ನವಾಗಿ ಕಾಣುತ್ತಿದೆ. ಹೊಸ ಕ್ರೆಟಾ ಸ್ಟೈಲಿಂಗ್ ಮತ್ತು ಇಂಟೀರಿಯರ್ ವಿಷಯದಲ್ಲಿ ಹಲವಾರು ಬದಲಾವಣೆಗಳನ್ನು ಪಡೆದುಕೊಂಡಿದೆ. ಈ ಹೊಸ ಹ್ಯುಂಡೈ ಕ್ರೆಟಾ ಎಸ್‍ಯುವಿಯ ಮುಂಭಾಗ ಫಾಸಿಕದೊಂದಿಗೆ ಬರುತ್ತದೆ, ಇದು ಹೊಸ ಸಾಂಟಾ ಫೆ ಸೇರಿದಂತೆ ಜಾಗತಿಕ ಹ್ಯುಂಡೈ ಎಸ್‍ಯುವಿಗಳಿಂದ ಸ್ಫೂರ್ತಿ ಪಡೆದಿದೆ.

Hyundai Creta Facelift

ಹೊಸ ಕ್ರೆಟಾ ಎಸ್‍ಯುವಿ ಕ್ರೋಮ್ ಮತ್ತು ಬ್ರಷ್ಡ್ ಅಲ್ಯೂಮಿನಿಯಂ ಟ್ರಿಟ್ ಮೆಂಟ್ ನೊಂದಿಗೆ ಬಂದಿದೆ. ಈ ಎಸ್‍ಯುವಿಯು ಕ್ರೋಮ್ ಮತ್ತು ಬ್ರಷ್ಡ್ ಅಲ್ಯೂಮಿನಿಯಂ ಅಂಶಗಳೊಂದಿಗೆ ಪೂರಕವಾದ ಪಿಯಾನೋ ಬ್ಲ್ಯಾಕ್ ಫಿನಿಶಿಂಗ್ ಅನ್ನು ಹೊಂದಿದೆ. ಈ ಎಸ್‍ಯುವಿಯು ಎಲ್ಇಡಿ ಲೈಟಿಂಗ್ ಸಿಸ್ಟಮ್ನೊಂದಿಗೆ ಬರುತ್ತದೆ. ಈ ಎಸ್‍ಯುವಿ ಹಿಂಭಾಗದಲ್ಲಿ ಒಂದೇ ರೀತಿಯ ವಿನ್ಯಾಸದ ED ಟೈಲ್-ಲೈಟ್‌ಗಳನ್ನು ಹೊಂದಿದೆ.

ಇನ್ನು ಈ ಎಸ್‍ಯುವಿಯಲ್ಲಿ LED ಲೈಟ್ ಬಾರ್ ಅನ್ನು ಹೊಂದಿದೆ. ಇನ್ನು ಈ ಎಸ್‍ಯುವಿಯ ಹಿಂಭಾಗದಲ್ಲಿ ಗಮನಾರ್ಹ ಬದಲಾವಣೆಗಳನ್ನು ಪಡೆದುಕೊಂಡಿದೆ. ಇನ್ನು ಈ ಎಸ್‍ಯುವಿಯಲ್ಲಿ 17-ಅಥವಾ 18-ಇಂಚಿನ ಚಕ್ರ ಆಯ್ಕೆಗಳೊಂದಿಗೆ ಹೊಸದಾಗಿ ವಿನ್ಯಾಸಗೊಳಿಸಲಾದ ಅಲಾಯ್ ವ್ಹೀಲ್ ಗಳನ್ನು ಹೊರತುಪಡಿಸಿ, ಸೈಡ್ ಪ್ರೊಫೈಲ್ ಹಿಂದಿನ ಮಾದರಿಯನ್ನು ಹೋಲುತ್ತದೆ.

Hyundai Creta Facelift

ಕ್ರೆಟಾ ಫೇಸ್‌ಲಿಫ್ಟ್ ಎಸ್‍ಯುವಿಯಲ್ಲಿ ಆಟೋ ಹೈ ಬೀಮ್, ಅಡಾಪ್ಟಿವ್ ಕ್ರೂಸ್ ಕಂಟ್ರೋಲ್, ಬ್ಲೈಂಡ್ ಸ್ಪಾಟ್ ಮಾನಿಟರಿಂಗ್, ಲೇನ್ ಅಸಿಸ್ಟ್ ಮತ್ತು ಇತರ ವೈಶಿಷ್ಟ್ಯಗಳೊಂದಿಗೆ ಲೆವೆಲ್ 2 ADAS ಅನ್ನು ಹೊಂದಿದೆ. ಈ ಎಸ್‍ಯುವಿಯಲ್ಲಿ 70 ಕ್ಕೂ ಹೆಚ್ಚು ಸುರಕ್ಷತಾ ವೈಶಿಷ್ಟ್ಯಗಳ ಸಮಗ್ರ ಸೂಟ್‌ನೊಂದಿಗೆ ಬರುತ್ತದೆ, ಜೊತೆಗೆ 36 ವೈಶಿಷ್ಟ್ಯಗಳನ್ನು ಸ್ಟ್ಯಾಂಡರ್ಡ್ ಆಗಿ ನೀಡಲಾಗುತ್ತದೆ. ಈ ಎಸ್‍ಯುವಿಯಲ್ಲಿ ಆರು ಏರ್‌ಬ್ಯಾಗ್‌ಗಳೊಂದಿಗೆ ESC, ಆಲ್-ವೀಲ್ ಡಿಸ್ಕ್ ಬ್ರೇಕ್‌ಗಳನ್ನು ಸ್ಟ್ಯಾಂಡರ್ಡ್ ಆಗಿ ನೀಡಲಾಗುತ್ತದೆ.

ಹಿಂದಿನ ಮಾದರಿಗೆ ಹೋಲಿಸಿದರೆ, ಹೊಸ ಕ್ರೆಟಾ ಬ್ಲೈಂಡ್ ಸ್ಪಾಟ್ ವ್ಯೂ ಮಾನಿಟರ್, ಸರೌಂಡ್ ವ್ಯೂ ಮಾನಿಟರ್, ಡ್ಯುಯಲ್-ಝೋನ್ ಕ್ಲೈಮೇಟ್ ಕಂಟ್ರೋಲ್, ವಾಯ್ಸ್ ಕಂಟ್ರೋಲ್ ಪನೋರಮಿಕ್ ಸನ್‌ರೂಫ್ ಮತ್ತು 8-ವೇ ಪವರ್ ಡ್ರೈವರ್ ಸೀಟ್ ನೊಂದಿಗೆ ಬರುತ್ತದೆ. ಇನ್ನು ಈ ಎಸ್‍ಯುವಿಯಲ್ಲಿ ADAS ವಾರ್ನಿಂಗ್, ಬ್ಲೈಂಡ್ ವ್ಯೂ ಮಾನಿಟರ್, ಹೈಲೈನ್‌ನಂತಹ ವೈಶಿಷ್ಟ್ಯಗಳನ್ನು ತೋರಿಸುತ್ತದೆ. ಇನ್ನು 8-ಸ್ಪೀಕರ್ ಬೋಸ್ ಸೌಂಡ್ ಸಿಸ್ಟಮ್ ಅನ್ನು ಸಹ ಹೊಂದಿದೆ.

Hyundai Creta Facelift

ಹೊಸ ಹ್ಯುಂಡೈ ಕ್ರೆಟಾ ಫೇಸ್‌ಲಿಫ್ಟ್ ಎಸ್‍ಯುವಿಯಲ್ಲಿ 3 ಎಂಜಿನ್ ಆಯ್ಕೆಗಳೊಂದಿಗೆ ಬರಲಿದೆ. ಇದರಲ್ಲಿ ಮೊದಲಿಗೆ 1.5 ಲೀಟರ್ ಟರ್ಬೊ ಪೆಟ್ರೋಲ್ ಎಂಜಿನ್ ಅನ್ನು ಹೊಂದಿದ್ದು, ಇದು 160PS ಪವರ್ ಅನ್ನು ಉತ್ಪಾದಿಸಿದರೆ, 1.5 ಲೀಟರ್ ಪೆಟ್ರೋಲ್ ಎಂಜಿನ್ 115PS ಪವರ್ ಅನ್ನು ಉತ್ಪಾದಿಸುತ್ತದೆ. ಇನ್ನು ಈ ಎಸ್‍ಯುವಿಯಲ್ಲಿ 1.5 ಲೀಟರ್ ಡೀಸೆಲ್ ಎಂಜಿನ್ ಅನ್ನು ಹೊಂದಿದ್ದು, ಇದು 116PS ಪವರ್ ಅನ್ನು ಉತ್ಪಾದಿಸುವ ಸಾಮರ್ಥ್ಯವನ್ನು ಹೊಂದಿದೆ.

ಇನ್ನು ಗೇರ್ ಬಾಕ್ಸ್ ಬಗ್ಗೆ ಹೇಳುವುದಾದರೆ. 6-ಸ್ಪೀಡ್ ಮ್ಯಾನುವಲ್, iVT (ಇಂಟೆಲಿಜೆಂಟ್ ವೇರಿಯಬಲ್ ಟ್ರಾನ್ಸ್‌ಮಿಷನ್), 7-ಸ್ಪೀಡ್ DCT (ಡ್ಯುಯಲ್ ಕ್ಲಚ್ ಟ್ರಾನ್ಸ್‌ಮಿಷನ್), ಮತ್ತು 6-ಸ್ಪೀಡ್ ಟಾರ್ಕ್ ಕರ್ನವಾಟರ್ ಆಟೋಮ್ಯಾಟಿಕ್ ಸೇರಿವೆ. ಹ್ಯುಂಡೈ ಕ್ರೆಟಾ (Hyundai Creta) ಭಾರತೀಯ ಮಾರುಕಟ್ಟೆಯಲ್ಲಿ ಹೆಚ್ಚು ಮಾರಾಟವಾಗುವ ಎಸ್‍ಯುವಿಗಳಲ್ಲಿ ಒಂದಾಗಿದೆಹುಂಡೈ ಕಂಪನಿಯು ತನ್ನ ಜನಪ್ರಿಯ ಹ್ಯುಂಡೈ ಕ್ರೆಟಾ ಎಸ್‌ಯುವಿಯ ಹೊಸ ನವೀಕರಣಗಳೊಂದಿಗೆ ಬಿಡುಗಡೆಗೊಳಿಸಲು ಸಜ್ಜಾಗಿದೆ.

ಡ್ರೈವ್‌ಸ್ಪಾರ್ಕ್ ಕನ್ನಡ ವೆಬ್‌ಸೈಟ್ ತ್ವರಿತವಾಗಿ ಆಟೋಮೊಬೈಲ್ ಸಂಬಂಧಿಸಿದ ಸುದ್ದಿಗಳನ್ನು ನೀಡುತ್ತದೆ. ಇನ್ನು ಸೋಷಿಯಲ್ ಮೀಡಿಯಾಗಳ ಮೂಲಕ ತಕ್ಷಣವೇ ಓದುಗರೊಂದಿಗೆ ಸುದ್ದಿಗಳನ್ನು ಹಂಚಿಕೊಳ್ಳುತ್ತೇವೆ. ಇತ್ತೀಚಿನ ಕಾರು, ಬೈಕ್ ಸುದ್ದಿ, ಟೆಸ್ಟ್ ಡ್ರೈವ್ ವರದಿಗಳು ಮತ್ತು ವೀಡಿಯೊಗಳನ್ನು ಪಡೆಯಲು ನಮ್ಮ ಫೇಸ್‌ಬುಕ್, ಇನ್‌ಸ್ಟಾಗ್ರಾಮ್, ಯೂಟ್ಯೂಬ್ ಪೇಜ್‌ಗಳೊಂದಿಗೆ ಫಾಲೋ ಮಾಡಿ. ನಿಮಗೆ ಯಾವುದೇ ಸುದ್ದಿ ಇಷ್ಟವಾದರೆ ಲೈಕ್, ಕಾಮೆಂಟ್ ಮಾಡುವುದನ್ನು ಮರೆಯದಿರಿ. ಜೊತೆಗೆ ನಿಮ್ಮ ಸ್ನೇಹಿತರಿಗೂ ಶೇರ್ ಮಾಡಿ.

Article Published On: Wednesday, January 10, 2024, 19:00 [IST]
English summary
2024 hyundai creta facelift revealed new details
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+