ಈ ಕಾರನ್ನು ಥಾರ್‌ನ ದೊಡ್ಡಪ್ಪ ಎಂದರೆ ತಪ್ಪಾಗಲ್ಲ: ಜೀಪ್ ರಾಂಗ್ಲರ್ ಟಾಪ್ 5 ಫೀಚರ್‌ಗಳು!
ನಿಮಗೆಲ್ಲಾ ತಿಳಿದಿರುವಂತೆ ಭಾರತೀಯ ಮಾರುಕಟ್ಟೆಗೆ ಪ್ರಸಿದ್ಧ ಕಾರು ನಿರ್ಮಾಣ ಕಂಪನಿಯಾದ ಜೀಪ್, ತನ್ನ 2024 ರಾಂಗ್ಲರ್ ಫೇಸ್‌ಲಿಫ್ಟ್ ಅನ್ನು ಬಿಡುಗಡೆ ಮಾಡಿದೆ. ಈ ಹಿಂದೆ ಇದ್ದಂತಹ ರಾಂಗ್ಲರ್‌ಗಿಂತಲೂ ಸಾಕಷ್ಟು ಹೆಚ್ಚು ಫೀಚರ್ ಮತ್ತು ಪರ್ಫಾಮೆನ್ಸ್ ಜೊತೆ ಬಂದಿರುವ ಈ ಕಾರಿನ ಟಾಪ್ 5 ಫೀಚರ್ಸ್ ಬಗ್ಗೆ ನೋಡೊಣ.
1. ಡಿಸೈನ್: ಜೀಪ್ ರಾಂಗ್ಲರ್‌ನಲ್ಲಿ (2024 Jeep Wrangler) ಡಿಸೈನ್ ಅನ್ನು ನೋಡುವುದಾದರೆ, ಈ ಕಾರಿನ ಹೊರಾಂಗಣ ವಿಭಾಗದಲ್ಲಿ ಸಣ್ಣ ಪುಟ್ಟ ಬದಲಾವಣೆಯಷ್ಟೇ ಆಗಿದೆ. ಹೊಸ ಅಪ್‌ಟೆಟೆಟ್ ಗ್ರಿಲ್, 17 ಮತ್ತು 18 ಇಂಚ್ ಅಯ್ಕೆಯಲ್ಲಿನ ಲಾಯ್ ವ್ಹೀಲ್‌ಗಳು, ಮತ್ತು ನೀವು ಆಯ್ದುಕೊಳ್ಳುವ ಆಯ್ಕೆಯ ಆಧಾರದ ಮೇಲೆ ಗೊರಿಲ್ಲಾ ಗ್ಲಾಸ್ ವಿಂಡ್ ಶೀಲ್ಡ್‌ಗಳು ಈ ಕಾರಿನಲ್ಲಿ ಹೊಸದಾಗಿ ಲಭ್ಯವಿದೆ.

ಪ್ರಮುಖವಾಗಿ ಈ ಕಾರಿನ ಗ್ರಿಲ್ ನೋಡುವುದಾದರೆ, ಇದೀಗ ಈ ಗ್ರಿಲ್ ಸಂಪೂರ್ಣ ಕಪ್ಪು ಬಣ್ಣದಲ್ಲಿ ಫಿನಿಶಿಂಗ್ ಅನ್ನುಹೊಂದಿದೆ. ಇದರಲ್ಲಿಯೇ ಫ್ರಂಟ್ ಪಾರ್ಕಿಂಗ್ ಕ್ಯಾಮೆರಾವನ್ನು ಸಹ ಅಳವಡಿಸಲಾಗಿದೆ. ಇನ್ನು ಉಳಿದಂತೆ ಕಳೆದ ಬಾರಿಯ ರಾಂಗ್ಲರ್ ವಿನ್ಯಾಸವನ್ನೇ ಹೋಲುತ್ತಿದ್ದು, ಅಧಿಕ ಬದಲಾವಣೆಗಳನ್ನು ಮಾಡಲಾಗಿಲ್ಲ.
2. ಹೊಸ ಇನ್ಪೋಟೈನ್‌ಮೆಂಟ್ ಸಿಸ್ಟಂ: ಈ ಕಾರಿನ ಇಂಟೀರಿಯರ್‌ನಲ್ಲಿ ಸಾಕಷ್ಟು ಬದಲಾವಣೆಗಳಾಗಿವೆ ಎಂದು ಹೇಳಬಹುದು. ಇದೀಗ ಹೊಸದಾಗಿ 12.3 ಇಂಚ್‌ನ ಇನ್ಪೋಟೇನ್‌ಮೆಂಟ್ ಡಿಸ್ಪ್ಲೇ ಈ ಕಾರಿನಲ್ಲಿ ಲಭ್ಯವಾಗುತ್ತಿದೆ. ಇದರಲ್ಲಿ ಜೀಪ್‌ನ ಇತ್ತೀಚಿನ ಅನ್‌ಕನೆಕ್ಟ್ 5 ಆಪರೆಟಿಂಗ್ ಸಿಸ್ಟಂ ಅನ್ನು ಕಾಣಬಹುದಾಗಿದೆ. ಇನ್ನು ಈ ಡಿಸ್ಪ್ಲೇಯು ವೈರ್‌ಲೆಸ್ ಆ್ಯಂಡ್ರಾಯ್ಡ್ ಆಟೋ ಮತ್ತು ಆ್ಯಪಲ್ ಕಾರ್‌ಪ್ಲೇ ಬೆಂಬಲಿತವಾಗಿದೆ.

3. ಎಂಜಿನ್: ನಿಮಗೆ ಈ ಕಾರಿನ ಎಂಜಿನ್ ಹೆಚ್ಚು ಆಕರ್ಷಕ ಎನಿಸಬಹುದು. ರಾಂಗ್ಲರ್‌ನಲ್ಲಿ 2.0-ಲೀಟರ್ ಟರ್ಬೋ ಪೆಟ್ರೋಲ್ ಫಿಯಟ್ ಎಂಜಿನ್ ಅನ್ನು ಅಳವಡಿಸಲಾಗಿದೆ. ಭಾರತದಲ್ಲಿ ಲಭ್ಯವಿರುವ ರಾಂಗ್ಲರ್‌ಗೆ ೮ ಸ್ಪೀಡ್ ಟಾರ್ಕ್ ಕನ್ವರ್ಟರ್ ಗೇರ್ ಬಾಕ್ಸ್ ಆಯ್ಕೆಯಾಗಿ ಲಭ್ಯವಾಗಲಿದೆ. ಈ ಎಂಜಿನ್ ಸಹಾಯದಿಂದ ಜೀಪ್ ರಾಂಗ್ಲರ್ ಸುಮಾರು 270bhp ಮತ್ತು 400Nm ಟಾರ್ಕ್ ಅನ್ನು ಉತ್ಪಾದಿಸುತ್ತದೆ. ಇದು ಫೋರ್ ವ್ಹೀಲ್ ಟ್ರೈವ್ ಬೆಂಬಲಿತವಾಗಿದೆ.
4. ಸೇಪ್ಟಿ: ಜೀಪ್ ಕಾರುಗಳಲ್ಲಿ ಸುರಕ್ಷತೆ ಅತೀ ಮೇಲ್ದರ್ಜೆಯದ್ದಾಗಿರುತ್ತದೆ. ಅತ್ಯಾಧುನಿಕ ಟ್ರೈವರ್ ಅಸಿಸ್ಟೆಂಟ್ ಸಿಸ್ಟಂ/ಅಡಾಸ್ ಅನ್ನು ಅಳವಡಿಸಲಾಗಿದೆ. ಅದೇ ರೀತಿ ಸಾಧಾರಣವಾಗಿ ಈ ಕಾರಿನಲ್ಲಿ ಸಿಗುವಂತಹ ಇತರ ಸೇಫ್ಟಿ ಫೀಚರ್‌ಗಳಾದ ೬ ಏರ್ ಬ್ಯಾಗ್‌ಗಳು, ಎಲೆಕ್ಟ್ರಾನಿಕ್ ಸ್ಟೆಬಿಲಿಟಿ ಕಂಟ್ರೋಲ್, ಹಿಲ್ ಸ್ಟಾರ್ಟ್ ಅಸಿಸ್ಟ್, ಹಿಲ್ ಡಿಸೆಂಟ್ ಕಂಟ್ರೋಲ್, ಎಲೆಕ್ಟ್ರಾನಿಕ್ ರೋಲ್ ಬಿಗಿಟೇಷನ್, ಆಟೋ ಹೆಡ್‌ಲ್ಯಾಂಪ್, ಟೈರ್ ಪ್ರೆಶರ್ ಮಾನಿಟರಿಂಗ್, ರೇರ್ ಪಾರ್ಕಿಂಗ್ ಸೆನ್ಸಾರ್ ಜೊತೆಗೆ ಪಾರ್ಕಿಂಗ್ ಕ್ಯಾಮೆರಾಗಳು ಲಭ್ಯವಿದೆ.

ಈ ಕಾರಿನಲ್ಲಿರುವ 2.0-ಲೀಟರ್ ಟರ್ಬೋ ಪೆಟ್ರೋಲ್ ಫಿಯಟ್ ಎಂಜಿನ್ ಕಡಿಮೆ ವೇಗದಲ್ಲೂ ಸಹ ಉತ್ತಮ ಟಾರ್ಕ್ ಅನ್ನು ವಾಹನದ ನಾಲ್ಕೂ ಟೈರ್‌ಗಳಿಗೆ ಸರಬರಾಜು ಮಾಡುತ್ತದೆ. ಇದೇ ಕಾರಣದಿಂದಾಗಿ ಈ ಕಾರು ಸಣ್ಣ ವೇಗದಲ್ಲಿ ದೊಡ್ಡ ದೊಡ್ಡ ಕಲ್ಲುಗಳ ನಡುವೆಯೂ ಸಾರಾಗವಾಗಿ ಚಲಿಸುತ್ತದೆ. ಈ ವಾಹನದ ಲೋ ಎಂಡ್ ಟಾರ್ಕ್ ಯಾವುದೇ ಸನ್ನಿವೇಶದಲ್ಲಿಯಾದರೂ, ಯಾವುದೇ ಭೌಗೋಳಿಕ ಪ್ರದೇಶದಲ್ಲಾದರೂ ಉತ್ತಮ ರೀತಿಯಲ್ಲಿ ಕಾರ್ಯ ನಿರ್ವಹಿಸುತ್ತದೆ.
ಡ್ರೈವ್‌ಸ್ಪಾರ್ಕ್ ಕನ್ನಡ ವೆಬ್‌ಸೈಟ್ ತ್ವರಿತವಾಗಿ ಆಟೋಮೊಬೈಲ್ ಸಂಬಂಧಿಸಿದ ಸುದ್ದಿಗಳನ್ನು ನೀಡುತ್ತದೆ. ಜೊತೆಗೆ ಸೋಷಿಯಲ್ ಮೀಡಿಯಾಗಳ ಮೂಲಕ ತಕ್ಷಣವೇ ಓದುಗರೊಂದಿಗೆ ಸುದ್ದಿಗಳನ್ನು ಶೇರ್ ಮಾಡುತ್ತೇವೆ. ಇತ್ತೀಚಿನ ಕಾರು, ಬೈಕ್ ಸುದ್ದಿ, ಟೆಸ್ಟ್ ಡ್ರೈವ್ ವರದಿಗಳು ಮತ್ತು ವೀಡಿಯೊಗಳನ್ನು ಪಡೆಯಲು ನಮ್ಮ ಫೇಸ್‌ಬುಕ್, ಇನ್‌ಸ್ಟಾಗ್ರಾಮ್, ಯೂಟ್ಯೂಬ್ ಪೇಜ್‌ಗಳೊಂದಿಗೆ ಫಾಲೋ ಮಾಡಿ. ನಿಮಗೆ ನಮ್ಮ ಯಾವುದೇ ಸುದ್ದಿ ಇಷ್ಟವಾದರೆ ಲೈಕ್, ಕಾಮೆಂಟ್ ಮಾಡುವುದನ್ನು ಮರೆಯದಿರಿ.


Click it and Unblock the Notifications