ಹಬ್ಬಕ್ಕೆಂದು ನೂತನ ಮಹೀಂದ್ರಾ ಸ್ಕಾರ್ಪಿಯೋ ಕ್ಲಾಸಿಕ್ ಬಾಸ್ ಎಡಿಷನ್ ಬಿಡುಗಡೆ.. 7-ಸೀಟರ್, ಹೇಗಿದೆ ಗೊತ್ತಾ?

ಭಾರತದ ವಿಶ್ವಾಸಾರ್ಹ ವಾಹನ ತಯಾರಕ ಕಂಪನಿಯಾಗಿ ಮಹೀಂದ್ರಾ (Mahindra) ಮನೆ ಮಾತಾಗಿದೆ. ದೇಶೀಯ ಮಾರುಕಟ್ಟೆಯಲ್ಲಿ ದಶಕಗಳಿಂದ 'ಸ್ಕಾರ್ಪಿಯೋ' ಎಸ್‌ಯುವಿಯನ್ನು ಯಶಸ್ವಿಯಾಗಿ ಮಾರಾಟ ಮಾಡುತ್ತಿದ್ದು, ಗ್ರಾಹಕರು ಕೂಡ ಮುಗಿಬಿದ್ದು ಖರೀದಿಸುತ್ತಿದ್ದಾರೆ. ಸದ್ಯ, ದೀಪಾವಳಿ ಹಬ್ಬಕ್ಕೆಂದು ಸ್ಕಾರ್ಪಿಯೋ ಕ್ಲಾಸಿಕ್‌ನ ವಿಶೇಷ ಮಾದರಿಯಾದ ಬಾಸ್ ಎಡಿಷನ್‌ನ್ನು ಮಾರಾಟಕ್ಕೆ ತಂದಿದೆ. ಆದರೆ, ಈ ನೂತನ 'ಸ್ಕಾರ್ಪಿಯೋ ಕ್ಲಾಸಿಕ್‌ ಬಾಸ್ ಎಡಿಷನ್‌' ಬೆಲೆಯನ್ನು ಕಂಪನಿಯು ಇನ್ನೂ ಪ್ರಕಟಿಸಿಲ್ಲ.

ಹೊಚ್ಚ ಹೊಸ ಮಹೀಂದ್ರಾ ಸ್ಕಾರ್ಪಿಯೋ ಕ್ಲಾಸಿಕ್‌ ಬಾಸ್ ಎಡಿಷನ್‌ (Mahindra Scorpio Classic Boss Edition) ಎಸ್‌ಯುವಿ ಹೊರಭಾಗದಲ್ಲಿ ಅತ್ಯಾಧುನಿಕ ವಿನ್ಯಾಸ (ಡಿಸೈನ್) ಹೊಂದಿದ್ದು, ಸಂಪೂರ್ಣವಾಗಿ ಕಪ್ಪು (ಬ್ಲ್ಯಾಕ್) ಬಣ್ಣದಿಂದ ಸುತ್ತುವರಿಯಲ್ಪಟ್ಟಿದೆ. ಈ ಕಾರಿನ ಬಂಪರ್‌ಗಳು, ಗ್ರಿಲ್, ಡೋರ್ ಹ್ಯಾಂಡಲ್‌ಗಳು, ಹೈಡ್‌ಲೈಟ್‌ಗಳು ಮತ್ತು ಫಾಗ್ ಲೈಟ್‌ಗಳಲ್ಲಿಯೂ ಕಪ್ಪು ಬಣ್ಣವನ್ನು ಎದ್ದುಕಾಣುವಂತೆ ಮಾಡಲಾಗಿದೆ.

2024 Mahindra Scorpio Classic Boss Edition Launched In India Details

ನೂತನ ಬಾಸ್ ಎಡಿಷನ್‌ ಒಳಭಾಗವು ಹೆಚ್ಚು ಆಕರ್ಷಣೀಯವಾಗಿದ್ದು, ಉತ್ತಮವಾಗಿರುವ ಡುಯಲ್-ಟೋನ್ ಡ್ಯಾಶ್‌ಬೋರ್ಡ್‌ನ್ನು ಒಳಗೊಂಡಿದೆ. ಇದರ ಸೀಟ್‌ಗಳು (ಆಸನ) ಸಹ ಕಪ್ಪು ಬಣ್ಣವನ್ನು ಹೊಂದಿವೆ. ಈ ಹೊಸ ಕಾರು, 7 ಆಸನ ಆಯ್ಕೆ ವ್ಯವಸ್ಥೆಯಲ್ಲಿ ಗ್ರಾಹಕರಿಗೆ ಲಭ್ಯವಾಗಲಿದೆ. ಪ್ರಯಾಣಿಕರ ಅನುಕೂಲಕ್ಕಾಗಿ 5-ಡೋರ್‌ಗಳನ್ನು ಹೊಂದಿದೆ.

ಮಹೀಂದ್ರಾ ಸ್ಕಾರ್ಪಿಯೋ ಕ್ಲಾಸಿಕ್‌ ಬಾಸ್ ಎಡಿಷನ್‌ ಎಸ್‌ಯುವಿ ಶಕ್ತಿಯುತ 2.2-ಲೀಟರ್ ಡೀಸೆಲ್ ಎಂಜಿನ್‌ನ್ನು ಒಳಗೊಂಡಿದೆ. 132 ಪಿಎಸ್ ಅಶ್ವ ಶಕ್ತಿ (ಹಾರ್ಸ್ ಪವರ್) ಮತ್ತು 300 ಎನ್ಎಂ (ನ್ಯೂಟನ್ ಮೀಟರ್) ಪೀಕ್ ಟಾರ್ಕ್ ಹೊರಹಾಕುತ್ತದೆ. 6-ಸ್ಪೀಡ್ ಮ್ಯಾನುವಲ್ ಗೇರ್‌ಬಾಕ್ಸ್‌ನ್ನು ಹೊಂದಿದೆ. 14.44 ಕೆಎಂಪಿಎಲ್‌ವರೆಗೆ ಮೈಲೇಜ್ ನೀಡುತ್ತದೆ.

2024 Mahindra Scorpio Classic Boss Edition Launched In India Details

ಹೊಸ ಸ್ಕಾರ್ಪಿಯೋ ಕ್ಲಾಸಿಕ್‌ ಬಾಸ್ ಎಡಿಷನ್‌ ಕಾರು ಯುವ ಗ್ರಾಹಕರನ್ನು ಆಕರ್ಷಿಸುವ ಹತ್ತಾರು ನವೀನ ವೈಶಿಷ್ಟ್ಯಗಳನ್ನು ಹೊಂದಿದೆ. 9-ಇಂಚಿನ ಟಚ್‌ಸ್ಕ್ರೀನ್ ಇನ್ಫೋಟೈನ್ಮೆಂಟ್ ಸಿಸ್ಟಮ್, ಆಟೋ ಎಸಿ, ಕ್ರೂಸ್ ಕಂಟ್ರೋಲ್, ಡುಯಲ್ ಫ್ರಂಟ್ ಏರ್‌ಬ್ಯಾಗ್‌ಗಳು, ರೇರ್ ಪಾರ್ಕಿಂಗ್ ಸೆನ್ಸಾರ್‌ಗಳು ಮತ್ತು ರೇರ್ ಪಾರ್ಕಿಂಗ್ ಕ್ಯಾಮೆರಾವನ್ನು ಪಡೆದಿದೆ.

ಈವರೆಗೆಗೂ ಸ್ಕಾರ್ಪಿಯೋ ಕ್ಲಾಸಿಕ್‌ ಬಾಸ್ ಎಡಿಷನ್‌ ಬೆಲೆ ಎಷ್ಟಿರಲಿದೆ ಎಂಬುದನ್ನು ಕಂಪನಿ ಘೋಷಣೆ ಮಾಡಿಲ್ಲ. ಪ್ರಸ್ತುತ ದೇಶೀಯವಾಗಿ ಖರೀದಿಗೆ ಲಭ್ಯವಿರುವ ಸ್ಕಾರ್ಪಿಯೋ ಕ್ಲಾಸಿಕ್‌ ಎಸ್‌ಯುವಿಯ ಇತರೆ ರೂಪಾಂತರಗಳು (ವೇರಿಯೆಂಟ್) ರೂ.13.62 ರಿಂದ ರೂ.17.42 ಲಕ್ಷ ಎಕ್ಸ್ ಶೋರೂಂ ಬೆಲೆಯನ್ನು ಹೊಂದಿವೆ. ಈ ಕಾರಿಗೆ ಮಾರುತಿ ಸುಜುಕಿ ಗ್ರ್ಯಾಂಡ್ ವಿಟಾರಾ, ಪೋಕ್ಸ್‌ವ್ಯಾಗನ್ ಟೈಗನ್ ಮತ್ತು ಸಿಟ್ರನ್ ಏರ್‌ಕ್ರಾಸ್ ಎಸ್‌ಯುವಿಗಳು ಪ್ರಬಲವಾದ ಪ್ರತಿಸ್ಪರ್ಧಿಯಾಗಿವೆ.

2024 Mahindra Scorpio Classic Boss Edition Launched In India Details

ಮಹೀಂದ್ರಾ ಸ್ಕಾರ್ಪಿಯೋ ಎನ್ (Mahindra Scorpio N) ಎಸ್‌ಯುವಿ ಕೂಡ ಗ್ರಾಹಕರಿಗೆ ಖರೀದಿಗೆ ದೊರೆಯುತ್ತದೆ. ಇದು ರೂ.13.85 ರಿಂದ ರೂ.24.54 ಲಕ್ಷ ದರವನ್ನು ಪಡೆದಿದೆ. ಪೆಟ್ರೋಲ್ & ಡೀಸೆಲ್ ಎಂಜಿನ್‌ನ್ನು ಹೊಂದಿದ್ದು, ರೂಪಾಂತರಗಳಿಗೆ ಅನುಗುಣವಾಗಿ 6-ಸ್ಪೀಡ್ ಮ್ಯಾನುವಲ್ ಅಥವಾ 6-ಸ್ಪೀಡ್ ಆಟೋಮೆಟಿಕ್ ಗೇರ್‌ಬಾಕ್ಸ್‌ನ್ನು ಒಳಗೊಂಡಿದೆ.

ಈ ಸ್ಕಾರ್ಪಿಯೋ ಎನ್ 6/ 7 ಆಸನ ಆಯ್ಕೆ ವ್ಯವಸ್ಥೆಯನ್ನು ಪಡೆದಿದೆ. ಟಚ್‌ಸ್ಕ್ರೀನ್ ಇನ್ಫೋಟೈನ್‌ಮೆಂಟ್ ಸಿಸ್ಟಮ್ (8-ಇಂಚು), ಡಿಜಿಟಲ್ ಇನ್ಸ್ಟ್ರುಮೆಂಟ್ ಕ್ಲಸ್ಟರ್, ಡುಯಲ್-ಝೋನ್ ಕ್ಲೇಮೇಟ್ ಕಂಟ್ರೋಲ್, ವೈರ್‌ಲೆಸ್ ಫೋನ್ ಚಾರ್ಜಿಂಗ್ ಮತ್ತು ಸನ್‌ರೂಫ್ ಸೇರಿದಂತೆ ವಿವಿಧ ವೈಶಿಷ್ಟ್ಯಗಳನ್ನು ಒಳಗೊಂಡಿದೆ. ಪ್ರಯಾಣಿಕರ ರಕ್ಷಣೆಯಾಗಿ 6-ಏರ್‌ಬ್ಯಾಗ್‌ನ್ನು ಹೊಂದಿದೆ.

ಡ್ರೈವ್‌ಸ್ಪಾರ್ಕ್ ಕನ್ನಡ ವೆಬ್‌ಸೈಟ್ ತ್ವರಿತವಾಗಿ ಆಟೋಮೊಬೈಲ್ ಸಂಬಂಧಿಸಿದ ಸುದ್ದಿಗಳನ್ನು ನೀಡುತ್ತದೆ. ಜೊತೆಗೆ ಸೋಷಿಯಲ್ ಮೀಡಿಯಾಗಳ ಮೂಲಕ ತಕ್ಷಣವೇ ಓದುಗರೊಂದಿಗೆ ಸುದ್ದಿಗಳನ್ನು ಶೇರ್ ಮಾಡುತ್ತೇವೆ. ಇತ್ತೀಚಿನ ಕಾರು, ಬೈಕ್ ಸುದ್ದಿ, ಟೆಸ್ಟ್ ಡ್ರೈವ್ ವರದಿಗಳು ಮತ್ತು ವೀಡಿಯೊ ಗಳನ್ನು ಪಡೆಯಲು ನಮ್ಮ ಫೇಸ್‌ ಬುಕ್, ಇನ್‌ಸ್ಟಾಗ್ರಾಮ್, ಯೂಟ್ಯೂಬ್ ಪೇಜ್‌ಗಳೊಂದಿಗೆ ಫಾಲೋ ಮಾಡಿ. ನಿಮಗೆ ನಮ್ಮ ಯಾವುದೇ ಸುದ್ದಿ ಇಷ್ಟವಾದರೆ ಲೈಕ್, ಕಾಮೆಂಟ್ ಮಾಡುವುದನ್ನು ಮರೆಯದಿರಿ.

More from DriveSpark

Article Published On: Friday, October 18, 2024, 12:02 [IST]
English summary
2024 mahindra scorpio classic boss edition launched in india details
Read more on mahindra india
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+