2024 ಮಾರುತಿ ಡಿಜೈರ್ 24.5 ಕಿ.ಮೀ ಮೈಲೇಜ್... ಅದ್ಭುತ ಫೀಚರ್ಸ್, ಬೆಲೆ ಎಷ್ಟು ಗೊತ್ತಾ?
2024 Maruti Dzire: ಭಾರತದಲ್ಲಿ ಮಾರುತಿ ಸುಜುಕಿಯ ಬಹುತೇಕ ಕಾರುಗಳು ಹೆಚ್ಚು ಜನಪ್ರಿಯತೆ ಪಡೆದಿವೆ. ಅದರಲ್ಲಿ ಕೆಲವು ಮಾರುಕಟ್ಟೆಗೆ ಬಂದು ದಶಕಗಳೇ ಕಳೆದರೂ ಕಂಪನಿ ಗ್ರಾಹಕರ ಬೇಡಿಕೆಯಿಂದಾಗಿ ಹೊಸ ನವೀಕರಣಗಳೊಂದಿಗೆ ಮುಂದುವರೆಸುತ್ತಿದೆ. ಇದೀಗ ಇತರ ಕಂಪನಿಗಳ ಪೈಪೋಟಿಯನ್ನು ಎದುರಿಸಲು ತನ್ನ ಎರಡು ಮಾದರಿಗಳನ್ನು ಹೊಸ ಬದಲಾವಣೆಗಳೊಂದಿಗೆ ತರಲು ಸಜ್ಜಾಗಿದೆ.
ಮಾರುತಿ ಸುಜುಕಿ ಸ್ವಿಫ್ಟ್, ಡಿಜೈರ್: ಹೊಸ ಜೆನ್ ಮಾರುತಿ ಸುಜುಕಿ ಸ್ವಿಫ್ಟ್ ಹಾಗೂ ಡಿಜೈರ್ ಎರಡೂ ಮಾದರಿಗಳು ಇದೇ ವರ್ಷ (2024)ದ ಆರಂಭದಲ್ಲಿ ಬಿಡುಗಡೆಯಾಗಲಿವೆ. ಈ ಬಗ್ಗೆ ಭಾರತೀಯ ಆಟೋಮೋಟಿವ್ ಉದ್ಯಮದಲ್ಲಿ ಆಸಕ್ತಿ ಹೊಂದಿರುವ ಬಹುತೇಕರಿಗೆ ತಿಳಿದೇ ಇದೆ. ಆದರೆ ಈ ಮಾದರಿಗಳ ಅಧಿಕೃತ ಬಿಡುಗಡೆ ವಿವರಗಳನ್ನು ಕಂಪನಿಯು ಪ್ರಕಟಿಸಬೇಕಾಗಿದೆ.

ಈ ಎರಡೂ ಹೊಸ ಜೆನ್ ಮಾದರಿಗಳು ಈಗಾಗಲೇ ಜಪಾನ್ ಮೋಟಾರ್ ಶೋನಲ್ಲಿ ಪ್ರದರ್ಶನಗೊಂಡಿವೆ. ಇವು ನಾಲ್ಕನೇ ಜೆನ್ ಮಾದರಿಗಳಾಗಿ ಭಾರತಕ್ಕೆ ಬರುತ್ತವೆ. ನಮಗಿರುವ ಮಾಹಿತಿಯ ಪ್ರಕಾರ ಇವು ಹೊಸ ವಿನ್ಯಾಸ, ನವೀಕರಿಸಿದ ಒಳಾಂಗಣ, ಹೊಸ Z- ಸಿರೀಸ್ ಪೆಟ್ರೋಲ್ ಎಂಜಿನ್ ಸೇರಿದಂತೆ ಹಲವಾರು ಪ್ರಮುಖ ನವೀಕರಣಗಳನ್ನು ಪಡೆಯುವ ನಿರೀಕ್ಷೆಯಿದೆ.
ಪವರ್‌ಟ್ರೇನ್: ಹೊಸ ಸ್ವಿಫ್ಟ್ ಮತ್ತು ಡಿಜೈರ್ ಎರಡೂ ಹೊಸ 1.2-ಲೀಟರ್ ಮೂರು-ಸಿಲಿಂಡರ್ ಪೆಟ್ರೋಲ್ ಎಂಜಿನ್‌ನೊಂದಿಗೆ ಬರಲಿವೆ. ಇದು ಹೆಚ್ಚಿನ ಪರ್ಫಾಮೆನ್ಸ್ ಮತ್ತು ಮೈಲೇಜ್ ನೀಡಲಿದೆ ಎಂದು ಬಲವಾಗಿ ಹೇಳಲಾಗುತ್ತಿದೆ. CVT ಗೇರ್‌ಬಾಕ್ಸ್‌ಗೆ ಜೋಡಿಸಲಾದ ಈ Z-ಸಿರೀಸ್ ಎಂಜಿನ್ ಜಪಾನ್-ಸ್ಪೆಕ್ ಸ್ವಿಫ್ಟ್‌ನಲ್ಲಿ ಜನಪ್ರಿಯವಾಗಿದೆ.

ಈ ಎಂಜಿನ್ ಪವರ್ ಮತ್ತು ಟಾರ್ಕ್ ಬಗ್ಗೆ ಹೇಳುವುದಾದರೆ, ಇದು ಗರಿಷ್ಠ 82bhp ಪವರ್ ಮತ್ತು 108Nm ಟಾರ್ಕ್ ಅನ್ನು ಉತ್ಪಾದಿಸುತ್ತದೆ. ಈಗ ಬಳಕೆಯಲ್ಲಿರುವ ಕೆ-ಸಿರೀಸ್ ನಾಲ್ಕು ಸಿಲಿಂಡರ್ ಎಂಜಿನ್ ಜಾಗದಲ್ಲಿ, ಹೊಸ 1.2-ಲೀಟರ್ ಮೂರು-ಸಿಲಿಂಡರ್ ಪೆಟ್ರೋಲ್ ಎಂಜಿನ್ ಬರಲಿದೆ. ಇದು 24.5kmpl ಮೈಲೇಜ್ ನೀಡುವುದು ಖಚಿತವೆಂದು ಹೇಳಲಾಗುತ್ತಿದೆ.
ಬೆಲೆ: ಯಾವುದೇ ಅಧಿಕೃತ ದೃಢೀಕರಣವನ್ನು ಮಾಡಲಾಗಿಲ್ಲವಾದರೂ ಈಗಿರುವ ಮಾದರಿಗಿಂತ ಸ್ವಲ್ಪ ಹೆಚ್ಚಿನ ಬೆಲೆಯನ್ನು ನಿರೀಕ್ಷಿಸಬಹುದು, ಆರಂಭಿಕ ಬೆಲೆಯು ಸುಮಾರು 6.99 ದಿಂದ ರೂ. 9.70 ಲಕ್ಷ (ಎರಡೂ ಬೆಲೆಗಳು, ಎಕ್ಸ್ ಶೋ ರೂಂ)ದವರೆಗೆ ಇರಬಹುದು. ಕಂಪನಿಯು ಈ ಬಗ್ಗೆ ಶೀಘ್ರದಲ್ಲೆ ಪ್ರಕಟಣೆ ನೀಡುವ ಸಾಧ್ಯತೆಗಳಿವೆ.

ಡಿಸೈನ್: ಇತ್ತೀಚೆಗೆ, ಮುಂಬರುವ 2024 ಮಾರುತಿ ಡಿಜೈರ್ ಅನ್ನು AI ರಚಿತ ಡಿಜಿಟಲ್ ರೆಂಡರಿಂಗ್ ಮೂಲಕ ನಿರೂಪಿಸಲಾಗಿದೆ. ಈ ಮಾದರಿಯು ಹೊಸ ಸ್ವಿಫ್ಟ್‌ಗೆ ಹೊಸ ನೋಟವನ್ನು ಪರಿಚಯಿಸುತ್ತದೆ. ಮರುವಿನ್ಯಾಸಗೊಳಿಸಲಾದ ಗ್ರಿಲ್, ನವೀಕರಿಸಿದ ಮುಂಭಾಗ, ಹೊಸ ಹೆಡ್‌ಲ್ಯಾಂಪ್ ಕ್ಲಸ್ಟರ್‌ಗಳು ಸೇರಿದಂತೆ ಹಳೆಯ ಮಾದರಿಗೆ ಹೋಲಿಸಿದರೆ ಬಹುತೇಕ ಹೊಸ ವಿನ್ಯಾಸವನ್ನು ಪಡೆದಿದೆ.
ಇತರ ಪ್ರಮುಖ ಬದಲಾವಣೆಗಳನ್ನು ನೋಡುವುದಾದ್ರೆ ಹೆಚ್ಚು ಆಂಗುಲರ್ ವಿನ್ಯಾಸ, ಕ್ರೋಮ್ ವಿವರಗಳೊಂದಿಗೆ ವಿಶಿಷ್ಟವಾದ ಫಾಗ್‌ಲ್ಯಾಂಪ್ ಜೋಡಣೆ, ಅಗಲವಾದ ವೀಲ್ ಆರ್ಚ್‌ಗಳು, ದೊಡ್ಡ ವೀಲ್‌ಗಳು ಸೇರಿವೆ. ಹಿಂದಿನ ಪ್ರೊಫೈಲ್ ಅನ್ನು ಹೊಸ ಟೈಲ್‌ಲ್ಯಾಂಪ್‌ಗಳೊಂದಿಗೆ ಗಮನಾರ್ಹವಾಗಿ ಪರಿಷ್ಕರಿಸಲಾಗಿದ್ದು, ಬಂಪೆರ್ ಅನ್ನು ಕೂಡ ಮರುವಿನ್ಯಾಸಗೊಳಿಸಲಾಗಿದೆ.
ಇಂಟೀರಿಯರ್: ಇಂಟೀರಿಯರ್ ಬಗ್ಗೆ ಹೇಳುವುದಾದ್ರೆ, ಹೊಸ ಮಾರುತಿ ಸುಜುಕಿ ಸ್ವಿಫ್ಟ್ ನಿಂದ ಸ್ಫೂರ್ತಿ ಪಡೆದಿದೆ. ದೊಡ್ಡ ಫ್ಲೋಟಿಂಗ್ ಟಚ್‌ಸ್ಕ್ರೀನ್ ಇನ್ಫೋಟೈನ್‌ಮೆಂಟ್ ಸಿಸ್ಟಮ್, Apple CarPlay, Android Auto ಜೊತೆಗೆ ವೈರ್‌ಲೆಸ್ ಸಂಪರ್ಕದೊಂದಿಗೆ ವಿಶಾಲವಾದ ಕ್ಯಾಬಿನ್ ಪಡೆದಿದೆ. ನವೀಕರಿಸಿದ ಸ್ವಿಚ್‌ಗಿಯರ್‌ನೊಂದಿಗೆ ಹೊಸ ಸೆಂಟರ್ ಕನ್ಸೋಲ್, 3-ಸ್ಪೋಕ್ ಸ್ಟೀರಿಂಗ್ ವೀಲ್, ಆಟೋಮ್ಯಾಟಿಕ್ AC ಯೂನಿಟ್ ಒಳಗೊಂಡಿವೆ.
ಡ್ರೈವ್‌ಸ್ಪಾರ್ಕ್ ಕನ್ನಡ ವೆಬ್‌ಸೈಟ್ ತ್ವರಿತವಾಗಿ ಆಟೋಮೊಬೈಲ್ ಸಂಬಂಧಿಸಿದ ಸುದ್ದಿಗಳನ್ನು ನೀಡುತ್ತದೆ. ಜೊತೆಗೆ ಸೋಷಿಯಲ್ ಮೀಡಿಯಾಗಳ ಮೂಲಕ ತಕ್ಷಣವೇ ಓದುಗರೊಂದಿಗೆ ಸುದ್ದಿಗಳನ್ನು ಶೇರ್ ಮಾಡುತ್ತೇವೆ. ಇತ್ತೀಚಿನ ಕಾರು, ಬೈಕ್ ಸುದ್ದಿ, ಟೆಸ್ಟ್ ಡ್ರೈವ್ ವರದಿಗಳು ಮತ್ತು ವೀಡಿಯೊಗಳನ್ನು ಪಡೆಯಲು ನಮ್ಮ ಫೇಸ್‌ಬುಕ್, ಇನ್‌ಸ್ಟಾಗ್ರಾಮ್, ಯೂಟ್ಯೂಬ್ ಪೇಜ್‌ಗಳೊಂದಿಗೆ ಫಾಲೋ ಮಾಡಿ. ನಿಮಗೆ ನಮ್ಮ ಯಾವುದೇ ಸುದ್ದಿ ಇಷ್ಟವಾದರೆ ಲೈಕ್, ಕಾಮೆಂಟ್ ಮಾಡುವುದನ್ನು ಮರೆಯದಿರಿ.


Click it and Unblock the Notifications