ಹೊಸ 2024 ಮಾರುತಿ ಡಿಜೈರ್ ರಸ್ತೆ ಪರೀಕ್ಷೆ... 24 ಕಿ.ಮೀ ಮೈಲೇಜ್, ಶೀಘ್ರದಲ್ಲಿ ಬಿಡುಗಡೆ

ಮಾರುತಿ ಸುಜುಕಿ ಹೊಸ ತಲೆಮಾರಿನ ಸ್ವಿಫ್ಟ್ ಮತ್ತು ಡಿಜೈರ್‌ನೊಂದಿಗೆ ಗ್ರಾಹಕರನ್ನು ಮೆಚ್ಚಿಸಲು ಸಜ್ಜಾಗುತ್ತಿದೆ. ಸ್ವಿಫ್ಟ್ ಮತ್ತು ಡಿಜೈರ್ ಸಮಾನವಾದ ಬೇಡಿಕೆಯೊಂದಿಗೆ ಎರಡೂ ಮಾದರಿಗಳು ಭಾರತದಲ್ಲಿ ಹೆಚ್ಚು ಮಾರಾಟವಾಗುವ ಕಾರುಗಳಲ್ಲಿ ಸ್ಥಿರವಾಗಿ ತಮ್ಮ ಸ್ಥಾನಗಳನ್ನು ಉಳಿಸಿಕೊಂಡಿವೆ. ಇದೀಗ ಮುಂಬರುವ ಡಿಜೈರ್ ಟೆಸ್ಟಿಂಗ್ ವೇಳೆ ಕಾಣಿಸಿಕೊಂಡಿದೆ.

ಮಾರುತಿ ಡಿಜೈರ್ ಮೊದಲ ಬರಿಗೆ ರಸ್ತೆ ಪರೀಕ್ಷೆಯಲ್ಲಿ ಕಾಣಿಸಿಕೊಂಡಿದೆ, ಸುಜುಕಿ ಸ್ವಿಫ್ಟ್ ಈಗಾಗಲೇ ತನ್ನ ಜಾಗತಿಕ ಚೊಚ್ಚಲ ಪ್ರವೇಶವನ್ನು ಮಾಡಿದೆ. ಹೊಸ ಸ್ವಿಫ್ಟ್ ಸ್ಟೈಲಿಂಗ್‌ನ ಒಳನೋಟಗಳು ಬಹಿರಂಗಗೊಂಡಿವೆ. ಇದು ಮುಂಬರುವ ಡಿಜೈರ್‌ನಲ್ಲಿ ಪ್ರತಿಬಿಂಬಿಸುವ ನಿರೀಕ್ಷೆಯಿದೆ. ಎರಡೂ ಕಾರುಗಳು ಒಂದೇ ಪ್ಲಾಟ್‌ಫಾರ್ಮ್ ಅನ್ನು ಹಂಚಿಕೊಳ್ಳುತ್ತವೆ. ಒಂದೇ ರೀತಿಯ ಎಂಜಿನ್ ಆಯ್ಕೆಗಳೊಂದಿಗೆ ಸಜ್ಜುಗೊಳ್ಳಲಿವೆ.

2024-maruti-dzire-road-test-24-km-mileage-launch-soon

ಹೊಸ ಮಾರುತಿ ಡಿಜೈರ್ 1.2L 3-ಸಿಲಿಂಡರ್ Z-ಸಿರೀಸ್ ನ್ಯಾಚುರಲ್ಲಿ ಆಸ್ಪೈರ್ಡ್ ಪೆಟ್ರೋಲ್ ಎಂಜಿನ್ ಹೊಂದಿದ್ದು, ಇದು 82 bhp ಗರಿಷ್ಠ ಪವರ್ ಮತ್ತು 108 Nm ಗರಿಷ್ಠ ಟಾರ್ಕ್ ಅನ್ನು ಉತ್ಪಾದಿಸುವ ಸಾಮರ್ಥ್ಯವನ್ನು ಹೊಂದಿದೆ. ಇದು ಕಾರ್ಯಕ್ಷಮತೆ ಮತ್ತು ಇಂಧನ ದಕ್ಷತೆಯ ನಡುವಿನ ಸಮತೋಲನದ ಭರವಸೆ ನೀಡುತ್ತದೆ ಎಂದು ಕಂಪನಿ ಹೇಳಿಕೊಂಡಿದೆ.

ಪ್ರಸ್ತುತ ಸ್ವಿಫ್ಟ್ ಮತ್ತು ಡಿಜೈರ್ K-ಸೀರೀಸ್ 4-ಸಿಲಿಂಡರ್ ಎಂಜಿನ್‌ನಲ್ಲಿ ಓಡುತ್ತಿವೆ. ಮುಂಬರುವ ಮಾದರಿಗಳಲ್ಲಿ ಈ ಎಂಜಿನ್ ಅನ್ನು ನಿಲ್ಲಿಸಿ ಮೇಲೆ ತಿಳಿಸಲಾದ 3-ಸಿಲಿಂಡರ್ Z-ಸಿರೀಸ್ ನ್ಯಾಚುರಲ್ಲಿ ಆಸ್ಪೈರ್ಡ್ ಎಂಜಿನ್ ಅನ್ನು ಹೊಸ ಮಾದರಿಗಳಲ್ಲಿ ಪರಿಚಯಿಸಲಿದ್ದಾರೆ. ಈ ಹೊಸ ಎಂಜಿನ್ 24.5 km/l ವರೆಗಿನ ಪ್ರಭಾವಶಾಲಿ ಮೈಲೇಜ್ ಹೊಂದಿರುವುದು ವಿಶೇಷ.

2024-maruti-dzire-road-test-24-km-mileage-launch-soon

ಮಾರುತಿ ಸುಜುಕಿ ಮುಂಬರುವ ವಾರಗಳಲ್ಲಿ ಹೊಸ ಸ್ವಿಫ್ಟ್ ಅನ್ನು ಬಿಡುಗಡೆ ಮಾಡುವ ನಿರೀಕ್ಷೆಯಿದೆ, ನಂತರ ಡಿಜೈರ್ ಕೂಡ ಬಿಡುಗಡೆಯಾಗಲಿದೆ. ಹೊಸ ತಲೆಮಾರಿನ ಸ್ವಿಫ್ಟ್ ಮತ್ತು ಡಿಜೈರ್ ಭಾರತೀಯ ವಾಹನ ಮಾರುಕಟ್ಟೆಗೆ ತರಲು ಸಿದ್ಧವಾಗಿರುವ ವರ್ಧಿತ ವೈಶಿಷ್ಟ್ಯಗಳು, ರಿಫ್ರೆಶ್ ವಿನ್ಯಾಸ ಮತ್ತು ಸುಧಾರಿತ ಪರ್ಫಾಮೆನ್ಸ್‌ನೊಂದಿಗೆ ವಾಹನ ಮಾರುಕಟ್ಟೆಯಲ್ಲಿ ಹೊಸ ಅಲೆ ಎಬ್ಬಿಸುವ ಸಾಧ್ಯತೆಯಿದೆ.

ಹೊಸ ಡಿಜೈರ್ ಡಿಸೈನ್ ಹೇಗಿದೆ?: ಹೊಸ ಡಿಜೈರ್‌ನ ಬಾಹ್ಯ ವಿನ್ಯಾಸವು ನಾಲ್ಕನೇ ತಲೆಮಾರಿನ ಸ್ವಿಫ್ಟ್‌ನಿಂದ ಸ್ಫೂರ್ತಿ ಪಡೆಯುತ್ತದೆ, ಇದು ವಿಶಿಷ್ಟವಾದ ದೊಡ್ಡ ಗ್ರಿಲ್, ಗಮನಾರ್ಹ ಸುಜುಕಿ ಲೋಗೋ ಈಗ ಗ್ರಿಲ್‌ನ ಹೊರಗೆ ವಿನ್ಯಾಸವನ್ನು ಪ್ರದರ್ಶಿಸುತ್ತದೆ. ಕ್ಲಾಮ್‌ಶೆಲ್ ಬಾನೆಟ್ ಮಸ್ಕುಲರ್ ಲುಕ್ ನೀಡುತ್ತದೆ, ಡಿಜೈರ್‌ಗೆ ಅದರ ಹಳೆಯ ಮಾಡಲ್‌ಗಿಂದ ಹೆಚ್ಚು ದೃಢವಾದ ನೋಟವನ್ನು ನೀಡುತ್ತದೆ.

2024-maruti-dzire-road-test-24-km-mileage-launch-soon

ಡಿಜೈರ್ ಮೇಲೆ ಸ್ವಿಫ್ಟ್ ಪ್ರಭಾವ: ಡಿಜೈರ್ ಒಟ್ಟಾರೆ ಸ್ಪೋರ್ಟಿ ಆಕರ್ಷಣೆಗೆ ಕೊಡುಗೆ ನೀಡುತ್ತದೆ. ಡಿಜೈರ್‌ಗೆ ವಿಶಿಷ್ಟವಾದ 5-ಸ್ಪೋಕ್ ಅಲಾಯ್ ವೀಲ್‌ಗಳು ಸ್ವಿಫ್ಟ್‌ನಿಂದ ಪ್ರತ್ಯೇಕಿಸುತ್ತವೆ. ಮುಂಭಾಗದ ಗ್ರಿಲ್ ಸ್ವಿಫ್ಟ್ ಅನ್ನು ಹೋಲುತ್ತದೆ, ಸೈಡ್ ಪ್ರೊಫೈಲ್ ಗಮನಾರ್ಹ ವ್ಯತ್ಯಾಸಗಳನ್ನು ಪಡೆದಿದೆ. ವಿಂಡೋ ಲೈನ್ ಉದ್ದಕ್ಕೂ ಕ್ರೋಮ್ ಲೈನಿಂಗ್ ನೀಡಿ ಸೌಂದರ್ಯವನ್ನು ಹೆಚ್ಚಿಸಲಾಗಿದೆ.

ಇಂಟೀರಿಯರ್: ಡ್ಯಾಶ್‌ಬೋರ್ಡ್ ಮತ್ತು ಸೆಂಟರ್‌ ಕನ್ಸೋಲ್‌ ಬಹುಮಟ್ಟಿಗೆ ಬದಲಾಗದೆ ಉಳಿದಿದೆ. ಉಳಿದಂತೆ ಹೊಸ ಸೆಂಟರ್ ಎಸಿ ವೆಂಟ್‌ಗಳು, ದೊಡ್ಡ 9-ಇಂಚಿನ ಇನ್ಫೋಟೈನ್‌ಮೆಂಟ್ ಸ್ಕ್ರೀನ್ ಮತ್ತು ದೊಡ್ಡ ಮಾರುತಿ ಮಾದರಿಗಳಿಂದ ಟಾಗಲ್-ಶೈಲಿಯ ಆಟೋಮ್ಯಾಟಿಕ್ ಕ್ಲೈಮೆಟ್ ಕಂಟ್ರೋಲ್ ಪ್ಯಾನಲ್ ಇಂಟೀರಿಯರ್ ಅನುಭವವನ್ನು ಹೆಚ್ಚಿಸುತ್ತದೆ.

2024-maruti-dzire-road-test-24-km-mileage-launch-soon

ಡ್ರೈವ್‌ಸ್ಪಾರ್ಕ್ ಕನ್ನಡ ವೆಬ್‌ಸೈಟ್ ತ್ವರಿತವಾಗಿ ಆಟೋಮೊಬೈಲ್ ಸಂಬಂಧಿಸಿದ ಸುದ್ದಿಗಳನ್ನು ನೀಡುತ್ತದೆ. ಜೊತೆಗೆ ಸೋಷಿಯಲ್ ಮೀಡಿಯಾಗಳ ಮೂಲಕ ತಕ್ಷಣವೇ ಓದುಗರೊಂದಿಗೆ ಸುದ್ದಿಗಳನ್ನು ಶೇರ್ ಮಾಡುತ್ತೇವೆ. ಇತ್ತೀಚಿನ ಕಾರು, ಬೈಕ್ ಸುದ್ದಿ, ಟೆಸ್ಟ್ ಡ್ರೈವ್ ವರದಿಗಳು ಮತ್ತು ವೀಡಿಯೊಗಳನ್ನು ಪಡೆಯಲು ನಮ್ಮ ಫೇಸ್‌ಬುಕ್, ಇನ್‌ಸ್ಟಾಗ್ರಾಮ್, ಯೂಟ್ಯೂಬ್ ಪೇಜ್‌ಗಳೊಂದಿಗೆ ಫಾಲೋ ಮಾಡಿ. ನಿಮಗೆ ನಮ್ಮ ಯಾವುದೇ ಸುದ್ದಿ ಇಷ್ಟವಾದರೆ ಲೈಕ್, ಕಾಮೆಂಟ್ ಮಾಡುವುದನ್ನು ಮರೆಯದಿರಿ.

Article Published On: Monday, February 5, 2024, 16:07 [IST]
English summary
2024 maruti dzire road test 24 km mileage launch soon
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+