ಮಾರುತಿ ಹೊಸ ಕಾರು: 7 ಲಕ್ಷ ಬೆಲೆಯಲ್ಲಿ 6 ಏರ್‌ಬ್ಯಾಗ್‌, ಸನ್‌ರೂಫ್, 25 ಕಿ.ಮೀ ಮೈಲೇಜ್!

ಹೊಸ 2024ರ ಮಾರುತಿ ಸುಜುಕಿ ಸ್ವಿಫ್ಟ್ ಅದ್ದೂರಿಯಾಗಿ ಬಿಡುಗಡೆಯಾಗಿ ಉತ್ತಮ ಬುಕಿಂಗ್ಸ್ ಪಡೆದು ಮುನ್ನುಗ್ಗುತ್ತಿದೆ. ಆದ್ರೆ ಸ್ವಿಫ್ಟ್ ಒಡಹುಟ್ಟಿದ ಹೊಸ ಡಿಜೈರ್ ಇನ್ನೂ ಬಿಡುಗಡೆಯಾಗಿಲ್ಲ, ಮೂಲಗಳ ಪ್ರಕಾರ ಹೊಸ ನವೀಕರಣ ಹಾಗೂ ಹಲವು ಅಪ್‌ಡೇಟ್‌ಗಳನ್ನು ನೀಡುತ್ತಿರುವ ಕಾರಣ ತಡವಾಗುತ್ತಿರುವುದು ತಿಳಿದುಬಂದಿದೆ. ಈ ಹೊಸ ಡಿಜೈರ್‌ನಲ್ಲಿ ಹೊಸ ಸ್ವಿಫ್ಟ್ ಎಂಜಿನ್ ಮಾತ್ರವಲ್ಲದೇ, ಕೆಲವು ವಿನ್ಯಾಸ ಅಂಶಗಳು ಮತ್ತು ವಿಶೇಷಣಗಳನ್ನು ಪಡೆಯಲಿದೆ. ಇತ್ತೀಚೆಗೆ ಟೆಸ್ಟಿಂಗ್ ಮಾಡುವಾಗ ಡಿಜೈರ್‌ನಲ್ಲಿ ಸನ್‌ರೂಫ್ ಇರುವುದು ಕಂಡುಬಂದಿದೆ. ಇಂತಹ ಹಲವು ವಿಶೇಷತೆಗಳೊಂದಿಗೆ ಬರಲಿರುವ ಹೊಸ ಡಿಜೈರ್ ಅಪ್‌ಡೇಟ್‌ಗಳನ್ನು ಇಲ್ಲಿ ನೋಡೋಣ.

ಹೊಸ ಡಿಜೈರ್ ಪ್ರಮುಖ ವಿಶೇಷತೆಗಳು: ಹೊಸ 2024 ಮಾರುತಿ ಡಿಜೈರ್ ತನ್ನ ಕೆಲವು ವಿನ್ಯಾಸ ಅಂಶಗಳು ಮತ್ತು ವಿಶೇಷಣಗಳನ್ನು ಹೊಸ ಸ್ವಿಫ್ಟ್ ಹ್ಯಾಚ್‌ಬ್ಯಾಕ್‌ನಿಂದ ಎರವಲು ಪಡೆಯಲಿದೆ. ಸ್ಮಾರ್ಟ್ಫೋನ್ ಕನೆಕ್ಟಿವಿಟಿ, ವೈರ್‌ಲೆಸ್ ಫೋನ್ ಚಾರ್ಜರ್, ಕ್ರೂಸ್ ಕಂಟ್ರೋಲ್, ರಿಯರ್ ಎಸಿ ವೆಂಟ್ಸ್, ಸ್ಟೀರಿಂಗ್ ಮೌಂಟೆಡ್ ಕಂಟ್ರೋಲ್‌ಗಳು, ಹೊಸ ಸೀಟ್ ಅಪ್ಹೋಲ್ಸ್ಟರಿ, ನವೀಕರಿಸಿದ ಇನ್ಸ್ಟ್ರುಮೆಂಟ್ ಕ್ಲಸ್ಟರ್ ನಂತಹ ವೈಶಿಷ್ಟ್ಯಗಳು ಇರಲಿವೆ.

2024-maruti-suzuki-dzire-will-get-sunroof-and-6-airbags

ಇವಿಷ್ಟೇ ಅಲ್ಲದೇ ಹಿಂಭಾಗದ ಕ್ಯಾಮೆರಾ, ಪುಶ್ ಬಟನ್ ಸ್ಟಾರ್ಟ್ / ಸ್ಟಾಪ್ ಮತ್ತು ಪವರ್ ಅಡ್ಜಸ್ಟ್ ಮಾಡಬಹುದಾದ ಮತ್ತು ಮಡಚುವ ವಿಂಗ್ ಮಿರರ್‌ಗಳೊಂದಿಗೆ ದೊಡ್ಡ ತೇಲುವ 9 - ಇಂಚಿನ ಟಚ್ಸ್ಕ್ರೀನ್ ಇನ್ಫೋಟೈನ್ಮೆಂಟ್ ಸಿಸ್ಟಂ ಅನ್ನು ಇದು ಪಡೆಯಲಿದೆ. ಹೊಸ ಡಿಜೈರ್‌ನ ಸುರಕ್ಷತಾ ವೈಶಿಷ್ಟ್ಯಗಳ ಬಗ್ಗೆ ಹೇಳುವುದಾದ್ರೆ 6 ಏರ್ ಬ್ಯಾಗ್‌ಗಳನ್ನು ಸ್ಟ್ಯಾಂಡರ್ಡ್ ಆಗಿ ಒಳಗೊಂಡಿರುತ್ತದೆ.

ಇದು ಇಬಿಡಿಯೊಂದಿಗೆ ಎಬಿಎಸ್, ರಿಯರ್ ಪಾರ್ಕಿಂಗ್ ಸೆನ್ಸಾರ್‌ಗಳು, ಐಸೊಫಿಕ್ಸ್ ಆಂಕರ್‌ಗಳು, ಹಿಲ್ ಸ್ಟಾರ್ಟ್ ಅಸಿಸ್ಟ್ ಮತ್ತು ಎಲೆಕ್ಟ್ರಾನಿಕ್ ಸ್ಟೆಬಿಲಿಟಿ ಕಂಟ್ರೋಲ್ ಅನ್ನು ಸಹ ಹೊಂದಿರಲಿದೆ. ಈ ಕಾರನ್ನು 2024 ರ ಜೂನ್‌ನಲ್ಲಿ ಬಿಡುಗಡೆ ಮಾಡಬಹುದು. ಹೊಸ ಪವರ್‌ಟ್ರೇನ್ ನೊಂದಿಗೆ, ಕಾಂಪ್ಯಾಕ್ಟ್ ಸೆಡಾನ್ ಮೊದಲಿಗಿಂತ ಹೆಚ್ಚು ಕೈಗೆಟುಕುವ ಬೆಲೆಯಲ್ಲಿ ಸಿಗಲಿದೆ. ಹೊಸ ಡಿಜೈರ್ ಅನ್ನು ಮ್ಯಾನುವಲ್ ಮತ್ತು ಎಎಂಟಿ ಗೇರ್ ಬಾಕ್ಸ್ ಆಯ್ಕೆಗಳೊಂದಿಗೆ ನೀಡಲಾಗುವುದು.

2024-maruti-suzuki-dzire-will-get-sunroof-and-6-airbags

ವಿನ್ಯಾಸ: ಹೊಸ ಸ್ವಿಫ್ಟ್ ನಂತೆ, ಮುಂದಿನ ತಲೆಮಾರಿನ ಡಿಜೈರ್ ಅನ್ನು ಹೊಸ ಬಾಹ್ಯ ಬಣ್ಣ ಆಯ್ಕೆಗಳನ್ನು ನೀಡಬಹುದು. ನವೀಕರಿಸಿದ ಹಾರ್ಟೆಕ್ಟ್ ಪ್ಲಾಟ್ ಫಾರ್ಮ್ ಅನ್ನು ಆಧರಿಸಿ, ಹೊಸ 2024 ಮಾರುತಿ ಡಿಜೈರ್ ದೊಡ್ಡ ಮತ್ತು ಮರುವಿನ್ಯಾಸಗೊಳಿಸಿದ ಮುಂಭಾಗದ ಗ್ರಿಲ್, ನವೀಕರಿಸಿದ ಬಂಪರ್, ಕ್ಲಾಮ್ ಶೆಲ್ ಬಾನೆಟ್, ಹೊಸ ಅಲಾಯ್ ವೀಲ್‌ಗಳು, ನವೀಕರಿಸಿದ ಬಾಗಿಲುಗಳು ಮತ್ತು ಪಿಲ್ಲರ್‌ಗಳೊಂದಿಗೆ ಬರಲಿದೆ.

ನಾಲ್ಕನೇ ತಲೆಮಾರಿನ ಮಾರುತಿ ಸ್ವಿಫ್ಟ್ ಅನ್ನು ಇತ್ತೀಚೆಗೆ ಭಾರತದಲ್ಲಿ ಬಿಡುಗಡೆ ಮಾಡಲಾಗಿದ್ದು, ಇದರ ಬೆಲೆಯು ರೂ. 6.49 ಲಕ್ಷದಿಂದ ರೂ.9.56 (ಎಕ್ಸ್ ಶೋರೂಂ) ಲಕ್ಷಗಳಾಗಿದೆ. ಉತ್ತಮ ಸ್ಟೈಲಿಂಗ್, ಹೆಚ್ಚಿನ ವೈಶಿಷ್ಟ್ಯಗಳು ಮತ್ತು ಹೆಚ್ಚು ಮೈಲೇಜ್ ನೀಡುತ್ತದೆ ಎಂದು ಕಂಪನಿ ಭರವಸೆ ನೀಡಿದೆ. ಇದೇ ಆಸುಪಾಸಿನ ಬೆಲೆಯಲ್ಲಿ ಡಿಜೈರ್ ಕೂಡ ಬಿಡುಗಡೆಯಾಗಬಹುದು.

2024-maruti-suzuki-dzire-will-get-sunroof-and-6-airbags

ಹೊಸ 1.2 ಲೀಟರ್, 3-ಸಿಲಿಂಡರ್ ಪೆಟ್ರೋಲ್ ಎಂಜಿನ್ 82 ಬಿಹೆಚ್ ಪಿ ಮತ್ತು 112 ಎನ್ಎಂ ಉತ್ಪಾದಿಸುತ್ತದೆ. ಸುಜುಕಿಯ ಹೊಸ ಝಡ್-ಸೀರಿಸ್ ಎಂಜಿನ್ ಎಎಂಟಿಯೊಂದಿಗೆ 25.75 ಕಿ.ಮೀ ಮತ್ತು ಮ್ಯಾನುವಲ್ ಗೇರ್ ಬಾಕ್ಸ್ ನೊಂದಿಗೆ 24.8 ಕಿ.ಮೀ ಮೈಲೇಜ್ ನೀಡುತ್ತದೆ ಎಂದು ಕಂಪನಿ ಹೇಳುಕೊಂಡಿದೆ. ಇದೇ ಪವರ್ ಹಾಗೂ ಮೈಲೇಜ್ ಅನ್ನು ಡಿಜೈರ್‌ನಿಂದಲೂ ನಿರೀಕ್ಷಿಸಬಹುದು.

ಡ್ರೈವ್‌ಸ್ಪಾರ್ಕ್ ಕನ್ನಡ ವೆಬ್‌ಸೈಟ್ ತ್ವರಿತವಾಗಿ ಆಟೋಮೊಬೈಲ್ ಸಂಬಂಧಿಸಿದ ಸುದ್ದಿಗಳನ್ನು ನೀಡುತ್ತದೆ. ಜೊತೆಗೆ ಸೋಷಿಯಲ್ ಮೀಡಿಯಾಗಳ ಮೂಲಕ ತಕ್ಷಣವೇ ಓದುಗರೊಂದಿಗೆ ಸುದ್ದಿಗಳನ್ನು ಶೇರ್ ಮಾಡುತ್ತೇವೆ. ಇತ್ತೀಚಿನ ಕಾರು, ಬೈಕ್ ಸುದ್ದಿ, ಟೆಸ್ಟ್ ಡ್ರೈವ್ ವರದಿಗಳು ಮತ್ತು ವೀಡಿಯೊಗಳನ್ನು ಪಡೆಯಲು ನಮ್ಮ ಫೇಸ್‌ಬುಕ್, ಇನ್‌ಸ್ಟಾಗ್ರಾಮ್, ಯೂಟ್ಯೂಬ್ ಪೇಜ್‌ಗಳೊಂದಿಗೆ ಫಾಲೋ ಮಾಡಿ. ನಿಮಗೆ ನಮ್ಮ ಯಾವುದೇ ಸುದ್ದಿ ಇಷ್ಟವಾದರೆ ಲೈಕ್, ಕಾಮೆಂಟ್ ಮಾಡುವುದನ್ನು ಮರೆಯದಿರಿ.

Article Published On: Thursday, May 30, 2024, 15:41 [IST]
English summary
2024 maruti suzuki dzire will get sunroof and 6 airbags
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+