ಹೊಸ ಸ್ವಿಫ್ಟ್‌ ಡಿಸೈರ್‌ನಲ್ಲಿ ಬರಲಿದೆ ಈ ಲಕ್ಷುರಿ ಫೀಚರ್‌: ಇದಕ್ಕಾಗಿ ಶಬರಿಯಂತೆ ಕಾದಿದ್ದು ಸಾರ್ಥಕವಾಯಿತು!

ಭಾರತದಲ್ಲಿ ಮಾರುತಿ ಸ್ವಿಫ್ಟ್‌ ಹ್ಯಾಚ್‌ಬ್ಯಾಕ್‌ ಎಷ್ಟು ಪ್ರಸಿದ್ದವೋ, ಅಷ್ಟೇ ಇದರ ಸೆಡಾನ್‌ ಸಹ ಎಲ್ಲರಿಗೂ ಅಚ್ಚು ಮೆಚ್ಚು. ನಿಮಗೆಲ್ಲಾ ತಿಳಿದಿರುವಂತೆ ಮಾರುತಿಯ ಮುಂದಿನ ಬಹುದೊಡ್ಡ ಲಾಂಚ್ ಎಂದರೆ ಅದು ಮಾರುತಿ ಸುಜುಕಿ ಸ್ವಿಫ್ಟ್‌ ಡಿಸೈರ್ ಫೇಸ್‌ಲಿಫ್ಟ್‌‌. ಈಗಾಗಲೇ ಸಾಕಷ್ಟು ಪ್ರಸಿದ್ದಿಯಾಗಿರುವ ಈ ಕಾರು ಮತ್ತಷ್ಟು ಅಪ್‌ಡೇಟ್‌ಗಳೊಂದಿಗೆ ಬರುತ್ತಿದೆ.

ನಿಮಗೆಲ್ಲಾ ತಿಳಿದಿರುವಂತೆ ಸದ್ಯದಲ್ಲೇ ಬಾರತೀಯ ಮಾರುಕಟ್ಟೆಯಲ್ಲಿ ಮಾರುತಿ ಸುಜುಕಿ ಹೊಸ ಸ್ವಿಫ್ಟ್‌ ಡಿಸೈರ್‌ ಫೇಸ್‌ ಲಿಫ್ಟ್‌ ಅನ್ನು ಲಾಂಚ್ ಮಾಡಲಿದ್ದು ಈಗಾಗಲೇ ಈ ಕುರಿತಾದ ಹಲವಾರು ವಿಷಯಗಳು ಹೊರ ಬಿದ್ದಿದೆ. ಅದರಲ್ಲಿ ಪ್ರಮುಖವಾದ ವಿಚಾರವೆಂದರೆ ಮುಂಬರುವ ಸ್ವಿಫ್ಟ್‌ ಡಿಸೈರ್‌ನಲ್ಲಿ ಸನ್‌ ರೂಫ್‌ ಸಿಗಲಿದೆ ಎಂಬುದು.

2024 Maruti Swift Dzire To Be Get Sunroof New Updates revealed

ಈಗಾಗಲೇ ಸಾಕಷ್ಟು ಮಾರಾಟ ಹೊಂದುತ್ತಿರುವ ಈ ಕಾರು (2024 Maruti Swift Dzire), ಸನ್‌ರೂಫ್‌ನ ಆಗಮನದೊಂದಿಗೆ ಇದರ ಮಾರಾಟ ದ್ವಿಪಟ್ಟು ಆಗುವುದರಲ್ಲಿ ಸಂಶಯವಿಲ್ಲ. ಈಗಾಗಲೇ ಈ ಕಾರಿನ ಡಿಸೈನ್‌ ಮತ್ತು ಇತರ ಫೀಚರ್‌ಗಳು ಹೊರ ಬಿದ್ದಿದ್ದು, ಕಳೆದ ಬಾರಿಯ ಡಿಸೈರ್‌ಗಿಂತ ಕೊಂಚ ಬದಲಾವಣೆಗಳನ್ನು ನೋಡಬಹುದಾಗಿದೆ. ಇದೀಗ ಮಾರುಕಟ್ಟೆಗೆ ಬಂದಿರುವ ಸ್ವಿಫ್ಟ್‌ನ ಫೀಚರ್‌ಗಳನ್ನು ಸಹ ಇದರಲ್ಲಿ ಕಾಣ ಸಿಗಬಹುದು ಎಂಬುದು ಹಲವರ ಅಭಿಪ್ರಾಯ.

ಹೊಸ ಡಿಜೈರ್ ಪ್ರಮುಖ ವಿಶೇಷತೆಗಳು: ಹೊಸ 2024 ಮಾರುತಿ ಡಿಜೈರ್ ತನ್ನ ಕೆಲವು ವಿನ್ಯಾಸ ಅಂಶಗಳು ಮತ್ತು ವಿಶೇಷಣಗಳನ್ನು ಹೊಸ ಸ್ವಿಫ್ಟ್ ಹ್ಯಾಚ್ ಬ್ಯಾಕ್ ನೊಂದಿಗೆ ಹಂಚಿಕೊಳ್ಳಲಿದೆ. ಸ್ಮಾರ್ಟ್ಫೋನ್ ಕನೆಕ್ಟಿವಿಟಿ, ವೈರ್ಲೆಸ್ ಫೋನ್ ಚಾರ್ಜರ್, ಕ್ರೂಸ್ ಕಂಟ್ರೋಲ್, ರಿಯರ್ ಎಸಿ ವೆಂಟ್ಸ್, ಸ್ಟೀರಿಂಗ್ ಮೌಂಟೆಡ್ ಕಂಟ್ರೋಲ್‌ಗಳು, ಹೊಸ ಸೀಟ್ ಅಪ್ಹೋಲ್ಸ್ಟರಿ, ನವೀಕರಿಸಿದ ಇನ್ಸ್ಟ್ರುಮೆಂಟ್ ಕ್ಲಸ್ಟರ್ ನಂತಹ ವೈಶಿಷ್ಟ್ಯಗಳು ಇರಲಿವೆ.

2024 Maruti Swift Dzire To Be Get Sunroof New Updates revealed

ಇವಿಷ್ಟೇ ಅಲ್ಲದೇ ಹಿಂಭಾಗದ ಕ್ಯಾಮೆರಾ, ಪುಶ್ ಬಟನ್ ಸ್ಟಾರ್ಟ್ / ಸ್ಟಾಪ್ ಮತ್ತುಪವರ್ ಅಡ್ಜಸ್ಟ್ ಮಾಡಬಹುದಾದ ಮತ್ತು ಮಡಚುವ ವಿಂಗ್ ಮಿರರ್‌ಗಳೊಂದಿಗೆ ದೊಡ್ಡ ತೇಲುವ 9 - ಇಂಚಿನ ಟಚ್ಸ್ಕ್ರೀನ್ ಇನ್ಫೋಟೈನ್ಮೆಂಟ್ ಸಿಸ್ಟಂ ಅನ್ನು ಇದು ಪಡೆಯುತ್ತದೆ. ಹೊಸ ಡಿಜೈರ್‌ನ ಸುರಕ್ಷತಾ ವೈಶಿಷ್ಟ್ಯಗಳ ಬಗ್ಗೆ ಹೇಳುವುದಾದ್ರೆ 6 ಏರ್ ಬ್ಯಾಗ್‌ಗಳನ್ನು ಸ್ಟ್ಯಾಂಡರ್ಡ್ ಆಗಿ ಒಳಗೊಂಡಿರುತ್ತದೆ. ಇದು ಇಬಿಡಿಯೊಂದಿಗೆ ಎಬಿಎಸ್, ರಿಯರ್ ಪಾರ್ಕಿಂಗ್ ಸೆನ್ಸಾರ್ ಗಳು, ಐಸೊಫಿಕ್ಸ್ ಆಂಕರ್ ಗಳು, ಹಿಲ್ ಸ್ಟಾರ್ಟ್ ಅಸಿಸ್ಟ್ ಮತ್ತು ಎಲೆಕ್ಟ್ರಾನಿಕ್ ಸ್ಟೆಬಿಲಿಟಿ ಕಂಟ್ರೋಲ್ ಅನ್ನು ಸಹ ಹೊಂದಿರಲಿದೆ.

ಸದ್ಯ ಹೊಸ ಮಾರುತಿ ಸುಜುಕಿ ಸ್ವಿಫ್ಟ್ ಬಿಡುಗಡೆಯಾಗಿದ್ದು, ಇದೇ ಕಾರಿನ ಒಡಹುಟ್ಟಿದವನೆಂದು ಜನಪ್ರಿಯತೆ ಗಳಿಸಿರುವ ಡಿಜೈರ್ ಮೇಲೆ ಈಗ ನಿರೀಕ್ಷೆಗಳು ಹೆಚ್ಚಾಗಿವೆ. ಮೂಲಗಳ ಪ್ರಕಾರ ಹೊಸ ಡಿಜೈರ್‌ನಲ್ಲಿ ಸನ್‌ರೂಫ್ ಅನ್ನು ಕೂಡ ನೀಡಲಿದ್ದಾರೆ ಎಂದು ಹೇಳಲಾಗುತ್ತಿದೆ. ಇನ್ನು ಕೆಲವೇ ದಿನಗಳಲ್ಲಿ ಈ ಕಾರಿನ ಕುರಿತ ಹೆಚ್ಚಿನ ವಿವರಗಳು ಹೊರಬರಲಿವೆ.

2024 Maruti Swift Dzire To Be Get Sunroof New Updates revealed

ನಾಲ್ಕನೇ ತಲೆಮಾರಿನ ಮಾರುತಿ ಸ್ವಿಫ್ಟ್ ಅನ್ನು ಇತ್ತೀಚೆಗೆ ಭಾರತದಲ್ಲಿ ಬಿಡುಗಡೆ ಮಾಡಲಾಗಿದ್ದು, ಇದರ ಬೆಲೆಯು ರೂ. 6.49 ಲಕ್ಷದಿಂದ ರೂ.9.56 (ಎಕ್ಸ್ ಶೋರೂಂ) ಲಕ್ಷಗಳಾಗಿದೆ. ಉತ್ತಮ ಸ್ಟೈಲಿಂಗ್, ಹೆಚ್ಚಿನ ವೈಶಿಷ್ಟ್ಯಗಳು ಮತ್ತು ಹೆಚ್ಚು ಮೈಲೇಜ್ ನೀಡುತ್ತದೆ ಎಂದು ಕಂಪನಿ ಭರವಸೆ ನೀಡಿದೆ. ಹೊಸ 1.2 ಲೀಟರ್, 3-ಸಿಲಿಂಡರ್ ಪೆಟ್ರೋಲ್ ಎಂಜಿನ್ 82 ಬಿಹೆಚ್ ಪಿ ಮತ್ತು 112 ಎನ್ಎಂ ಉತ್ಪಾದಿಸುತ್ತದೆ. ಸುಜುಕಿಯ ಹೊಸ ಝಡ್-ಸೀರಿಸ್ ಎಂಜಿನ್ ಎಎಂಟಿಯೊಂದಿಗೆ 25.75 ಕಿ.ಮೀ ಮತ್ತು ಮ್ಯಾನುವಲ್ ಗೇರ್ ಬಾಕ್ಸ್ ನೊಂದಿಗೆ 24.8 ಕಿ.ಮೀ ಮೈಲೇಜ್ ನೀಡುತ್ತದೆ ಎಂದು ಕಂಪನಿ ಹೇಳಿಕೊಂಡಿದೆ.

ಡ್ರೈವ್‌ಸ್ಪಾರ್ಕ್ ಕನ್ನಡ ವೆಬ್‌ಸೈಟ್ ತ್ವರಿತವಾಗಿ ಆಟೋಮೊಬೈಲ್ ಸಂಬಂಧಿಸಿದ ಸುದ್ದಿಗಳನ್ನು ನೀಡುತ್ತದೆ. ಜೊತೆಗೆ ಸೋಷಿಯಲ್ ಮೀಡಿಯಾಗಳ ಮೂಲಕ ತಕ್ಷಣವೇ ಓದುಗರೊಂದಿಗೆ ಸುದ್ದಿಗಳನ್ನು ಶೇರ್ ಮಾಡುತ್ತೇವೆ. ಇತ್ತೀಚಿನ ಕಾರು, ಬೈಕ್ ಸುದ್ದಿ, ಟೆಸ್ಟ್ ಡ್ರೈವ್ ವರದಿಗಳು ಮತ್ತು ವೀಡಿಯೊಗಳನ್ನು ಪಡೆಯಲು ನಮ್ಮ ಫೇಸ್‌ಬುಕ್, ಇನ್‌ಸ್ಟಾಗ್ರಾಮ್, ಯೂಟ್ಯೂಬ್ ಪೇಜ್‌ಗಳೊಂದಿಗೆ ಫಾಲೋ ಮಾಡಿ. ನಿಮಗೆ ನಮ್ಮ ಯಾವುದೇ ಸುದ್ದಿ ಇಷ್ಟವಾದರೆ ಲೈಕ್, ಕಾಮೆಂಟ್ ಮಾಡುವುದನ್ನು ಮರೆಯದಿರಿ.

Article Published On: Monday, May 20, 2024, 16:36 [IST]
English summary
2024 maruti swift dzire to be get sunroof new updates revealed
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+