Maruti Dzire: ಹೊಸ ಮಾರುತಿ ಡಿಜೈರ್ ಕಾರಿನ ವಿತರಣೆ ಶುರು.. ಆನ್-ರೋಡ್ ಬೆಲೆ ಎಷ್ಟು, EMI ಏನು?
ಮಾರುತಿ ಸುಜುಕಿ ಇಂಡಿಯಾ (Maruti Suzuki India), ಸೋಮವಾರ ಹೊಚ್ಚ ಹೊಸ 4ನೇ ತಲೆಮಾರಿನ ಡಿಜೈರ್ (4th Generation Dzire) ಸೆಡಾನ್‌ನ್ನು ಬಿಡುಗಡೆಗೊಳಿಸಿತ್ತು. ಇದು ಜನಪ್ರಿಯ ಕಾರಾಗಿ ಹೊರಹೊಮ್ಮಿದ್ದು, ಕಳೆದ 15 ವರ್ಷಗಳಲ್ಲಿ ಕಂಪನಿಯು ಬರೋಬ್ಬರಿ 27 ಲಕ್ಷ ಯುನಿಟ್ ಡಿಜೈರ್ ಸೆಡಾನ್‌ಗಳನ್ನು ಮಾರಾಟಗೊಳಿಸಲು ಯಶಸ್ವಿಯಾಗಿದೆ. ಈಗಾಗಲೇ ನೂತನ ಡಿಜೈರ್ ಶೋರೂಂಗಳಿಗೆ ತಲುಪಿಸಲು ಶುರು ಮಾಡಲಾಗಿದ್ದು, ವಿತರಣೆಯೂ ಆರಂಭವಾಗಿದೆ ಎಂದು ವರದಿಯಾಗಿದೆ. ಅದಕ್ಕೆ ಸಂಬಂಧಿಸಿದ ವಿಡಿಯೋವೊಂದು ಸಾಮಾಜಿಕ ಜಾಲತಾಣದಲ್ಲಿ ಭಾರಿ ವೈರಲ್ ಆಗುತ್ತಿದೆ.
ನೀವು ನೂತನ ಮಾರುತಿ ಸುಜುಕಿ ಡಿಜೈರ್ (Maruti Suzuki Dzire) ಸೆಡಾನ್‌ನ್ನು ಖರೀದಿಸಲು ಆಯೋಚಿಸಿದ್ದೀರಾ.. ಇಲ್ಲಿ ಈ ಕಾರಿನ ನಿರೀಕ್ಷಿತ ಆನ್-ರೋಡ್ ಬೆಲೆ (On-Road price) ಹಾಗೂ ಮಾಸಿಕ ಕಂತಿನಲ್ಲಿ ಪಾವತಿ ಮಾಡಬೇಕಾದ ಇಎಂಐ (EMI) ಆಯ್ಕೆಯ ಕುರಿತಂತೆ ಸಂಕ್ಷಿಪ್ತವಾಗಿ ತಿಳಿಸಿಕೊಡಲು ಪ್ರಯತ್ನಿಸಿದ್ದೇವೆ.

ಬೆಂಗಳೂರಿನಲ್ಲಿ ಹೊಚ್ಚ ಹೊಸ ಮಾರುತಿ ಡಿಜೈರ್ ಸೆಡಾನ್ ವಿವಿಧ ರೂಪಾಂತರಗಳ (ವೇರಿಯೆಂಟ್) ಆಯ್ಕೆಯಲ್ಲಿ ಗ್ರಾಹಕರ ಖರೀದಿಗೆ ಸಿಗುತ್ತದೆ. ಇದರ ಎಲ್ಎಕ್ಸ್ಐ (ಪೆಟ್ರೋಲ್) ರೂಪಾಂತರ, ರೂ.8.22 ಲಕ್ಷವರೆಗೆ ಆನ್-ರೋಡ್ ಬೆಲೆಯನ್ನು ಹೊಂದಿರಲಿದೆ. ರೂ.2.50 ಲಕ್ಷ ಡೌನ್-ಪೇಮೆಂಟ್ ಪಾವತಿಸಿ ಈ ಕಾರನ್ನು ಖರೀದಿ ಮಾಡಿದರೆ, ರೂ.5.72 ಲಕ್ಷವರೆಗೆ ಸಾಲವಿರುತ್ತದೆ. ಶೇಕಡ 8% ಬಡ್ಡಿ ದರದಲ್ಲಿ 5 ವರ್ಷಕ್ಕೆ ತಿಂಗಳಿಗೆ ರೂ.11,600 ವರೆಗೆ ಇಎಂಐ ಕಟ್ಟಬೇಕಾಗುತ್ತದೆ.
ಈ ಡಿಜೈರ್ ಕಾರಿನ ವಿಎಕ್ಸ್ಐ (ಪೆಟ್ರೋಲ್) ರೂಪಾಂತರ, ರೂ.9.41 ಲಕ್ಷವರೆಗೆ ಆನ್-ರೋಡ್ ದರವನ್ನು ಪಡೆದಿರಲಿದೆ. ಇದನ್ನು ರೂ.2.50 ಲಕ್ಷ ಡೌನ್-ಪೇಮೆಂಟ್ ಕಟ್ಟಿ ಮನೆಗೆ ತಂದರೆ, ರೂ.6.91 ಲಕ್ಷವರೆಗೆ ಸಾಲ ಬಾಕಿ ಉಳಿಯುತ್ತದೆ. ಶೇಕಡ 8% ಬಡ್ಡಿ ಹಾಕಿ 5 ವರ್ಷದ ಅವಧಿಗೆ (60 ತಿಂಗಳು) ಮಾಸಿಕ ರೂ.14,000 ವರೆಗೆ ಇಎಂಐ ಪಾವತಿ ಮಾಡಬೇಕಾಗುತ್ತದೆ.

ನೂತನ ಮಾರುತಿ ಸುಜುಕಿ ಡಿಜೈರ್ ಸೆಡಾನ್‌ನ ಝಡ್ಎಕ್ಸ್ಐ (ಪೆಟ್ರೋಲ್) ರೂಪಾಂತರ, ರೂ.10.73 ಲಕ್ಷವರೆಗೆ ಆನ್-ರೋಡ್ ಬೆಲೆಯನ್ನು ಹೊಂದಿರಲಿದೆ. ರೂ.2.50 ಲಕ್ಷ ಡೌನ್-ಪೇಮೆಂಟ್ ಪಾವತಿಸಿ ಈ ಕಾರನ್ನು ಮನೆಗೆ ತಂದರೆ, ರೂ.8.22 ಲಕ್ಷವರೆಗೆ ಸಾಲವಿರುತ್ತದೆ. ಅದಕ್ಕೆ 8% ಬ್ಯಾಂಕ್ ಬಡ್ಡಿ ದರದಲ್ಲಿ 5 ವರ್ಷಕ್ಕೆ ತಿಂಗಳಿಗೆ ರೂ.16,600 ವರೆಗೆ ಇಎಂಐ ಕಟ್ಟಬೇಕಾಗುತ್ತದೆ.
ಇದೇ ಡಿಜೈರ್ ಕಾರಿನ ವಿಎಕ್ಸ್ಐ (ಸಿಎನ್‌ಜಿ) ರೂಪಾಂತರ, ರೂ.9.80 ಲಕ್ಷವರೆಗೆ ಆನ್-ರೋಡ್ ದರವನ್ನು ಒಳಗೊಂಡಿರಲಿದೆ. ಈ ಕಾರನ್ನು ರೂ.2.50 ಲಕ್ಷ ಡೌನ್-ಪೇಮೆಂಟ್ ಕಟ್ಟಿ ಖರೀದಿಸಿದರೆ, ರೂ.7.30 ಲಕ್ಷವರೆಗೆ ಸಾಲ ಬಾಕಿಯಿರುತ್ತದೆ. ಶೇಕಡ 8% ಬಡ್ಡಿ ಹಾಕಿ 5 ವರ್ಷದ ಅವಧಿಗೆ ಮಾಸಿಕ 14,800 ವರೆಗೆ ಇಎಂಐ ಪಾವತಿಬೇಕಾಗುತ್ತದೆ.
ಹೊಸ ಮಾರುತಿ ಡಿಜೈರ್ ಸೆಡಾನ್‌ನ ಝಡ್ಎಕ್ಸ್ಐ (ಸಿಎನ್‌ಜಿ) ರೂಪಾಂತರ, ರೂ.11 ಲಕ್ಷವರೆಗೆ ಆನ್-ರೋಡ್ ಬೆಲೆಯನ್ನು ಹೊಂದಿರಲಿದೆ. ಇದನ್ನು ಸಹ ರೂ.2.50 ಲಕ್ಷ ಡೌನ್-ಪೇಮೆಂಟ್ ಪಾವತಿಸಿ ಮನೆಗೆ ತಂದರೆ, ರೂ.8.50 ಲಕ್ಷವರೆಗೆ ಸಾಲವಿರುತ್ತದೆ. 8% ಬಡ್ಡಿ ದರದಲ್ಲಿ 5 ವರ್ಷಗಳಿಗೆ ತಿಂಗಳಿಗೆ ರೂ.17,000 ವರೆಗೆ ಇಎಂಐ ಕಟ್ಟಬೇಕಾಗುತ್ತದೆ.
ನೂತನ ಮಾರುತಿ ಸುಜುಕಿ ಡಿಜೈರ್ ಕಾರು 1.2-ಲೀಟರ್ ಪೆಟ್ರೋಲ್ ಮತ್ತು ಸಿಎನ್‌ಜಿ ಎಂಜಿನ್‌ನ್ನು ಒಳಗೊಂಡಿದೆ. 5-ಸ್ಪೀಡ್ ಮ್ಯಾನುವಲ್ ಅಥವಾ 5-ಸ್ಪೀಡ್ ಆಟೋಮೆಟೆಕ್ ಗೇರ್‌ಬಾಕ್ಸ್ ಆಯ್ಕೆಯನ್ನು ಹೊಂದಿದೆ. 24.79 ರಿಂದ 33.73 ಕೆಎಂಪಿಎಲ್‌ವರೆಗೆ ಮೈಲೇಜ್ ನೀಡುತ್ತದೆ. ಇದರಲ್ಲಿ 5 ಮಂದಿ ಸುಲಭವಾಗಿ ಪ್ರಯಾಣಿಯಬಹುದು.
ಈ ಸೆಡಾನ್ ಟಚ್‌ಸ್ಕ್ರೀನ್ ಇನ್ಫೋಟೈನ್‌ಮೆಂಟ್ ಸಿಸ್ಟಮ್, ವೈರ್‌ಲೆಸ್ ಫೋನ್ ಚಾರ್ಜರ್, ಕ್ರೂಸ್ ಕಂಟ್ರೋಲ್, ಸನ್‌ರೂಫ್, ಆಟೋ ಎಸಿ ಮತ್ತು 360-ಡಿಗ್ರಿ ಕ್ಯಾಮೆರಾ ಸೇರಿದಂತೆ ವಿವಿಧ ವೈಶಿಷ್ಟ್ಯಗಳನ್ನು ಒಳಗೊಂಡಿದೆ. ಸುರಕ್ಷತೆಯ ದೃಷ್ಟಿಯಿಂದ 6 ಏರ್‌ಬ್ಯಾಗ್‌ಗಳು, ಇಎಸ್‌ಸಿ (ಎಲೆಕ್ಟ್ರಾನಿಕ್ ಸ್ಟೆಬಿಲಿಟಿ ಕಂಟ್ರೋಲ್) ಮತ್ತು 3-ಪಾಯಿಂಟ್ ಸೀಟ್ ಬೆಲ್ಟ್‌ಗಳನ್ನು ಹೊಂದಿದೆ.
ನಿಮ್ಮ ಗಮನಕ್ಕೆ.. ನಾವಿಲ್ಲಿ ಡಿಜೈರ್ ಕಾರಿನ ಕೆಲವೊಂದು ರೂಪಾಂತರಗಳ ನಿರೀಕ್ಷಿತ ಆನ್-ರೋಡ್ ಬೆಲೆ ಹಾಗೂ ಇಎಂಐ ಆಯ್ಕೆಯ ಬಗ್ಗೆ ಮಾತ್ರ ತಿಳಿಸಿದ್ದೇವೆ. ಹೆಚ್ಚಿನ ಮಾಹಿತಿಗೆ ನಿಮ್ಮ ಸಮೀಪದ ಶೋರೂಂಗೆ ಭೇಟಿ ನೀಡಿರಿ.


Click it and Unblock the Notifications