New Maruti Dzire: ಹೊಸ ಸ್ವಿಫ್ಟ್ ಆಯ್ತು, ಈಗ ಡಿಜೈರ್ ಸರದಿ: ಎಂಜಿನ್, ವೈಶಿಷ್ಟ್ಯಗಳ ಸಂಪೂರ್ಣ ವಿವರ!
ಹೊಸ 2024 ರ ಮಾರುತಿ ಸುಜುಕಿ ಸ್ವಿಫ್ಟ್ ಬಿಡುಗಡೆಯ ನಂತರ ಹೊಸ ಮಾರುತಿ ಡಿಜೈರ್ ಬಿಡುಗಡೆಗೆ ಜೋರು ಸಿದ್ದತೆಗಳು ನಡೆಯುತ್ತಿವೆ. ಹೊಸ ಸ್ವಿಫ್ಟ್ ಎಂಜಿನ್ ಮಾತ್ರವಲ್ಲದೇ, ಮುಂಬರುವ ಮಾರುತಿ ಡಿಜೈರ್ ತನ್ನ ಕೆಲವು ವಿನ್ಯಾಸ ಅಂಶಗಳು ಮತ್ತು ವಿಶೇಷಣಗಳನ್ನು ಹೊಸ ಸ್ವಿಫ್ಟ್ ಹ್ಯಾಚ್ ಬ್ಯಾಕ್‌ನೊಂದಿಗೆ ಹಂಚಿಕೊಳ್ಳಲಿದೆ.
ನಾಲ್ಕನೇ ತಲೆಮಾರಿನ ಮಾರುತಿ ಸ್ವಿಫ್ಟ್ ಅನ್ನು ಇತ್ತೀಚೆಗೆ ಭಾರತದಲ್ಲಿ ಬಿಡುಗಡೆ ಮಾಡಲಾಗಿದ್ದು, ಇದರ ಬೆಲೆಯು ರೂ. 6.49 ಲಕ್ಷದಿಂದ ರೂ.9.56 (ಎಕ್ಸ್ ಶೋರೂಂ) ಲಕ್ಷಗಳಾಗಿದೆ. ಉತ್ತಮ ಸ್ಟೈಲಿಂಗ್, ಹೆಚ್ಚಿನ ವೈಶಿಷ್ಟ್ಯಗಳು ಮತ್ತು ಹೆಚ್ಚು ಮೈಲೇಜ್ ನೀಡುತ್ತದೆ ಎಂದು ಕಂಪನಿ ಭರವಸೆ ನೀಡಿದೆ. ಹೊಸ 1.2 ಲೀಟರ್, 3-ಸಿಲಿಂಡರ್ ಪೆಟ್ರೋಲ್ ಎಂಜಿನ್ 82 ಬಿಹೆಚ್ ಪಿ ಮತ್ತು 112 ಎನ್ಎಂ ಉತ್ಪಾದಿಸುತ್ತದೆ. ಸುಜುಕಿಯ ಹೊಸ ಝಡ್-ಸೀರಿಸ್ ಎಂಜಿನ್ ಎಎಂಟಿಯೊಂದಿಗೆ 25.75 ಕಿ.ಮೀ ಮತ್ತು ಮ್ಯಾನುವಲ್ ಗೇರ್ ಬಾಕ್ಸ್ ನೊಂದಿಗೆ 24.8 ಕಿ.ಮೀ ಮೈಲೇಜ್ ನೀಡುತ್ತದೆ ಎಂದು ಕಂಫನಿ ಹೇಳುಕೊಂಡಿದೆ.

ಅದೇ ಹೊಸ ಪೆಟ್ರೋಲ್ ಎಂಜಿನ್ ಮುಂದಿನ ತಲೆಮಾರಿನ ಮಾರುತಿ ಡಿಜೈರ್‌ನಲ್ಲೂ ಸಿಗಲಿದೆ. ಇದನ್ನು 2024 ರ ದ್ವಿತೀಯಾರ್ಧದಲ್ಲಿ (ಬಹುಶಃ ದೀಪಾವಳಿಯ ಸಮಯದಲ್ಲಿ) ಬಿಡುಗಡೆ ಮಾಡಬಹುದು. ಹೊಸ ಪವರ್‌ಟ್ರೇನ್ ನೊಂದಿಗೆ, ಕಾಂಪ್ಯಾಕ್ಟ್ ಸೆಡಾನ್ ಮೊದಲಿಗಿಂತ ಹೆಚ್ಚು ಕೈಗೆಟುಕಲಿದೆ. ಹೊಸ ಡಿಜೈರ್ ಅನ್ನು ಮ್ಯಾನುವಲ್ ಮತ್ತು ಎಎಂಟಿ ಗೇರ್ ಬಾಕ್ಸ್ ಆಯ್ಕೆಗಳೊಂದಿಗೆ ನೀಡಲಾಗುವುದು.
ಹೊಸ ಡಿಜೈರ್ ಪ್ರಮುಖ ವಿಶೇಷತೆಗಳು: ಹೊಸ 2024 ಮಾರುತಿ ಡಿಜೈರ್ ತನ್ನ ಕೆಲವು ವಿನ್ಯಾಸ ಅಂಶಗಳು ಮತ್ತು ವಿಶೇಷಣಗಳನ್ನು ಹೊಸ ಸ್ವಿಫ್ಟ್ ಹ್ಯಾಚ್ ಬ್ಯಾಕ್ ನೊಂದಿಗೆ ಹಂಚಿಕೊಳ್ಳಲಿದೆ. ಸ್ಮಾರ್ಟ್ಫೋನ್ ಕನೆಕ್ಟಿವಿಟಿ, ವೈರ್ಲೆಸ್ ಫೋನ್ ಚಾರ್ಜರ್, ಕ್ರೂಸ್ ಕಂಟ್ರೋಲ್, ರಿಯರ್ ಎಸಿ ವೆಂಟ್ಸ್, ಸ್ಟೀರಿಂಗ್ ಮೌಂಟೆಡ್ ಕಂಟ್ರೋಲ್‌ಗಳು, ಹೊಸ ಸೀಟ್ ಅಪ್ಹೋಲ್ಸ್ಟರಿ, ನವೀಕರಿಸಿದ ಇನ್ಸ್ಟ್ರುಮೆಂಟ್ ಕ್ಲಸ್ಟರ್ ನಂತಹ ವೈಶಿಷ್ಟ್ಯಗಳು ಇರಲಿವೆ.

ಇವಿಷ್ಟೇ ಅಲ್ಲದೇ ಹಿಂಭಾಗದ ಕ್ಯಾಮೆರಾ, ಪುಶ್ ಬಟನ್ ಸ್ಟಾರ್ಟ್ / ಸ್ಟಾಪ್ ಮತ್ತುಪವರ್ ಅಡ್ಜಸ್ಟ್ ಮಾಡಬಹುದಾದ ಮತ್ತು ಮಡಚುವ ವಿಂಗ್ ಮಿರರ್‌ಗಳೊಂದಿಗೆ ದೊಡ್ಡ ತೇಲುವ 9 - ಇಂಚಿನ ಟಚ್ಸ್ಕ್ರೀನ್ ಇನ್ಫೋಟೈನ್ಮೆಂಟ್ ಸಿಸ್ಟಂ ಅನ್ನು ಇದು ಪಡೆಯುತ್ತದೆ. ಹೊಸ ಡಿಜೈರ್‌ನ ಸುರಕ್ಷತಾ ವೈಶಿಷ್ಟ್ಯಗಳ ಬಗ್ಗೆ ಹೇಳುವುದಾದ್ರೆ 6 ಏರ್ ಬ್ಯಾಗ್‌ಗಳನ್ನು ಸ್ಟ್ಯಾಂಡರ್ಡ್ ಆಗಿ ಒಳಗೊಂಡಿರುತ್ತದೆ. ಇದು ಇಬಿಡಿಯೊಂದಿಗೆ ಎಬಿಎಸ್, ರಿಯರ್ ಪಾರ್ಕಿಂಗ್ ಸೆನ್ಸಾರ್ ಗಳು, ಐಸೊಫಿಕ್ಸ್ ಆಂಕರ್ ಗಳು, ಹಿಲ್ ಸ್ಟಾರ್ಟ್ ಅಸಿಸ್ಟ್ ಮತ್ತು ಎಲೆಕ್ಟ್ರಾನಿಕ್ ಸ್ಟೆಬಿಲಿಟಿ ಕಂಟ್ರೋಲ್ ಅನ್ನು ಸಹ ಹೊಂದಿರಲಿದೆ.
ವಿನ್ಯಾಸ: ಹೊಸ ಸ್ವಿಫ್ಟ್ ನಂತೆ, ಮುಂದಿನ ತಲೆಮಾರಿನ ಡಿಜೈರ್ ಅನ್ನು ಹೊಸ ಬಾಹ್ಯ ಬಣ್ಣ ಆಯ್ಕೆಗಳನ್ನು ನೀಡಬಹುದು. ನವೀಕರಿಸಿದ ಹಾರ್ಟೆಕ್ಟ್ ಪ್ಲಾಟ್ ಫಾರ್ಮ್ ಅನ್ನು ಆಧರಿಸಿ, ಹೊಸ 2024 ಮಾರುತಿ ಡಿಜೈರ್ ದೊಡ್ಡ ಮತ್ತು ಮರುವಿನ್ಯಾಸಗೊಳಿಸಿದ ಮುಂಭಾಗದ ಗ್ರಿಲ್, ನವೀಕರಿಸಿದ ಬಂಪರ್, ಕ್ಲಾಮ್ ಶೆಲ್ ಬಾನೆಟ್, ಹೊಸ ಅಲಾಯ್ ವೀಲ್‌ಗಳು, ನವೀಕರಿಸಿದ ಬಾಗಿಲುಗಳು ಮತ್ತು ಪಿಲ್ಲರ್‌ಗಳೊಂದಿಗೆ ಬರಲಿದೆ.

ಸದ್ಯ ಹೊಸ ಮಾರುತಿ ಸುಜುಕಿ ಸ್ವಿಫ್ಟ್ ಬಿಡುಗಡೆಯಾಗಿದ್ದು, ಇದೇ ಕಾರಿನ ಒಡಹುಟ್ಟಿದವನೆಂದು ಜನಪ್ರಿಯತೆ ಗಳಿಸಿರುವ ಡಿಜೈರ್ ಮೇಲೆ ಈಗ ನಿರೀಕ್ಷೆಗಳು ಹೆಚ್ಚಾಗಿವೆ. ಮೂಲಗಳ ಪ್ರಕಾರ ಹೊಸ ಡಿಜೈರ್‌ನಲ್ಲಿ ಸನ್‌ರೂಫ್ ಅನ್ನು ಕೂಡ ನೀಡಲಿದ್ದಾರೆ ಎಂದು ಹೇಳಲಾಗುತ್ತಿದೆ. ಇನ್ನು ಕೆಲವೇ ದಿನಗಳಲ್ಲಿ ಈ ಕಾರಿನ ಕುರಿತ ಹೆಚ್ಚಿನ ವಿವರಗಳು ಹೊರಬರಲಿವೆ.
ಡ್ರೈವ್‌ಸ್ಪಾರ್ಕ್ ಕನ್ನಡ ವೆಬ್‌ಸೈಟ್ ತ್ವರಿತವಾಗಿ ಆಟೋಮೊಬೈಲ್ ಸಂಬಂಧಿಸಿದ ಸುದ್ದಿಗಳನ್ನು ನೀಡುತ್ತದೆ. ಜೊತೆಗೆ ಸೋಷಿಯಲ್ ಮೀಡಿಯಾಗಳ ಮೂಲಕ ತಕ್ಷಣವೇ ಓದುಗರೊಂದಿಗೆ ಸುದ್ದಿಗಳನ್ನು ಶೇರ್ ಮಾಡುತ್ತೇವೆ. ಇತ್ತೀಚಿನ ಕಾರು, ಬೈಕ್ ಸುದ್ದಿ, ಟೆಸ್ಟ್ ಡ್ರೈವ್ ವರದಿಗಳು ಮತ್ತು ವೀಡಿಯೊಗಳನ್ನು ಪಡೆಯಲು ನಮ್ಮ ಫೇಸ್‌ಬುಕ್, ಇನ್‌ಸ್ಟಾಗ್ರಾಮ್, ಯೂಟ್ಯೂಬ್ ಪೇಜ್‌ಗಳೊಂದಿಗೆ ಫಾಲೋ ಮಾಡಿ. ನಿಮಗೆ ನಮ್ಮ ಯಾವುದೇ ಸುದ್ದಿ ಇಷ್ಟವಾದರೆ ಲೈಕ್, ಕಾಮೆಂಟ್ ಮಾಡುವುದನ್ನು ಮರೆಯದಿರಿ.


Click it and Unblock the Notifications