Maruti Suzuki Dzire: 2024ರ ಮಾರುತಿ ಸ್ವಿಫ್ಟ್, ಡಿಜೈರ್‌ನಲ್ಲಿ ಸನ್‌ರೂಫ್ ಕನ್ಫರ್ಮ್! ಚಿತ್ರಗಳು ಸೋರಿಕೆ!
ಬಹುನಿರೀಕ್ಷಿತ 2024ರ ಹೊಸ ಮಾರುತಿ ಸುಜುಕಿ ಸ್ವಿಫ್ಟ್ ಹಾಗೂ ಡಿಜೈರ್ ಕಾರುಗಳ ಮೇಲೆ ನಿರೀಕ್ಷೆಗಳು ಹೆಚ್ಚಾಗಿವೆ. ಈ ಎರಡೂ ಮಾದರಿಗಳು ಹೆಚ್ಚಿನ ವೈಶಿಷ್ಟ್ಯಗಳು ಹಾಗೂ ಅತ್ಯಾಧುನಿಕ ತಂತ್ರಜ್ಞಾನ ಸೇರಿದಂತೆ ಹಿಂದೆಂದೂ ನೋಡಿರದ ಮೈಲೇಜ್‌ನೊಂದಿಗೆ ಬರಲಿವೆ ಎಂದು ಬಲ್ಲ ಮೂಲಗಳು ಹೇಳಿವೆ. ಇದೀಗ ಹೊಸ ಅಪ್‌ಡೇಟ್ ಹೊರಬಿದ್ದಿದ್ದು, ಸನ್‌ರೂಫ್ ಖಚಿತವಾಗಿದೆ.
ಮಾರುತಿ ಸುಜುಕಿ ಕಂಪನಿಯು ಮುಂಬರುವ ತಿಂಗಳುಗಳಲ್ಲಿ ಈ ಕಾರುಗಳನ್ನು ಬಿಡುಗಡೆ ಮಾಡಲು ಜೋರು ತಯಾರಿ ನಡೆಸಿದೆ. ಹಾಗಾಗಿಯೇ ವಿವಿಧ ಪ್ರದೇಶಗಳಲ್ಲಿ ಕಾರುಗಳನ್ನು ರೋಡ್ ಟೆಸ್ಟ್ ನಡೆಸುತ್ತಿದೆ. ಇತ್ತೀಚೆಗೆ ಇದೇ ರೀತಿ ಪರೀಕ್ಷೆ ನಡೆಸುವ ವೇಳೆ ಮಾರುತಿ ಡಿಜೈರ್ ಕ್ಯಾಮರಾ ಕಣ್ಣಿಗೆ ಬಿದ್ದಿದ್ದು, ಇದರಲ್ಲಿ ಕುತೂಹಲಕಾರಿಯಾಗಿ ಸನ್‌ರೂಫ್ ಕಾನಿಸಿಕೊಂಡಿದ್ದು, ಅಭಿಮಾನಿಗಳನ್ನು ಅಚ್ಚರಿಗೊಳಿಸಿದೆ.

ಆದರೆ ಈ ಬಗ್ಗೆ ಕಂಪನಿ ಖಚಿತಪಡಿಸಲ್ಲವಾದರೂ, ಹೊರಬಿದ್ದಿರುವ ಟೆಸ್ಟಿಂಗ್ ಕಾರಿನಲ್ಲಿ ಸನ್‌ರೂಫ್ ಇರುವುದಂತೂ ನಿಜ. ಇನ್ನು ವೈರಲ್ ಫೋಟೋ ವಿಷಯಕ್ಕೆ ಬಂದರೆ ಮಾರುತಿ ಡಿಜೈರ್ ಸುತ್ತಾ ಹಿಮ ಬಿದ್ದಿರುವುದನ್ನು ಕಾಣಬಹುದು. ಅಂದರೆ ಒಂದು ಕಾರು ಮಾರುಕಟ್ಟೆಗೆ ಬರುವ ಮುನ್ನ ವಿವಿಧ ಹವಾಮಾನ ಪರಿಸ್ಥಿಗಳನ್ನು ತಡೆದುಕೊಳ್ಳಬಲ್ಲದೇ ಎಂಬುದನ್ನು ಖಚಿತಪಡಿಸಿಕೊಳ್ಳಲು ಹೀಗೆ ಪರೀಕ್ಷೆ ನಡೆಸಲಾಗುತ್ತದೆ.
ಹಾಗಾಗಿಯೇ ಮಾರುತಿ ಸುಜುಕಿ, ಡಿಜೈರ್ ಅನ್ನು ಜಾರುವ ರಸ್ತೆಗಳು ಹಾಗೂ ಅತಿ ಶೀತ ವಾತಾವರಣದಲ್ಲಿ ತೊಂದರೆ ಕೊಡುತ್ತದೆಯೇ ಎಂಬುದನ್ನು ಪರೀಕ್ಷಿಸಲಾಗಿದೆ. ಇನ್ನು ಫೋಟೋದಲ್ಲಿ ಕಾಣುವಂತೆ ಡಿಜೈರ್ ಕೆಲವು ವಿನ್ಯಾಸ ಬದಲಾವಣೆಗೆ ಒಳಗಾಗಿದೆ. ಡಿಜೈರ್ ಹಿಂಭಾಗವು ಹೊಸ ನವೀಕರಣ ಪಡೆದಿದ್ದು, ಈಗ ಮಾರಾಟದಲ್ಲಿರುವ ಡಿಜೈರ್‌ಗಿಂತ ಭಿನ್ನವಾಗಿ ಕಾಣುತ್ತಿದೆ.

ಇಂಟೀರಿಯರ್ ಬಗ್ಗೆ ಹೇಳುವುದಾದರೆ, ಎರಡೂ ಕಾರುಗಳು ಒಂದೇ ರಿತಿಯ ಕ್ಯಾಬಿನ್ ಪಡೆಯಲಿವೆ. ಸದ್ಯ ಎಲ್ಲಾ ಬ್ರಾಂಡ್‌ಗಳು ಕಡಿಮೆ ಬೆಲೆಯಲ್ಲಿ ಉತ್ತಮ ಇಂಟೀರಿಯರ್ ನೀಡುತ್ತಿರುವುದರಿಂದ ಮಾರುತಿ ಕೂಡ ಈ ಬಾರಿ ಡಿಜೈರ್ ಹಾಗೂ ಸ್ವಿಫ್ಟ್‌ನಲ್ಲಿ ಪ್ರೀಮಿಯಂ ಆಗಿ ನೀಡಲಿದೆ. ಮೂಲಗಳ ಪ್ರಕಾರ ಬಲೆನೋದಿಂದ ಸ್ಪೂರ್ತಿ ಪಡೆದ ಡ್ಯುಯಲ್ ಟೋನ್ ಡ್ಯಾಷ್‌ಬೋರ್ಡ್, ಟಚ್ ಸ್ಕ್ರೀನ್ ಇನ್‌ಫೋಟೈನ್‌ಮೆಂಟ್, ಆಪಲ್ ಕಾರ್‌ಪ್ಲೇ ಮತ್ತು ಆಂಡ್ರಾಯ್ಡ್ ಆಟೋದೊಂದಿಗೆ ಬರಲಿದೆ.
ಆಟೋಮ್ಯಾಟಿಕ್ ಕ್ಲೈಮೆಟ್ ಕಂಟ್ರೋಲ್, ಅನಲಾಗ್ ಡಯಲ್, ಡಿಜಿಟಲ್ ಮಲ್ಟಿ ಇನ್‌ಫರ್ಮೆಷನ್ ಡಿಸ್ಪ್ಲೆ ಹೊಂದಿರುವ ಇನ್‌ಸ್ಟ್ರೂಮೆಂಟ್ ಕ್ಲಸ್ಟರ್ ನೀಡುವ ಸಾಧ್ಯತೆ ಇದೆ. ಎಂಜಿನ್ ವಿಷಯಕ್ಕೆ ಬಂದರೆ ಈಗಿರುವ ಎಂಜಿನ್ ಅನ್ನು ಸ್ಥಗಿತಗೊಳಿಸಿ Z-12 ಎಂಬ ಹೊಸ ಎಂಜಿನ್ ಅನ್ನು ಪರಿಚಯಿಸಲಿದ್ದಾರೆ. ಪ್ರಸ್ತುತವಿರುವ ಎಂಜಿನ್ 4 - ಸಿಲಿಂಡರ್ ಹೊಂದಿದ್ದರೇ ಮುಂಬರಲಿರುವುದು 3 ಸಿಲಿಂಡರ್ ಪೆಟ್ರೋಲ್ ಎಂಜಿನ್ ಆಗಿದೆ.

ಮುಂಬರಲಿರುವ ಹೊಸ ಎಂಜಿನ್ ಸ್ವಿಫ್ಟ್ ಹಾಗೂ ಡಿಜೈರ್ ಕಾರುಗಳಲ್ಲಿ 80 bhp ಪವರ್ 108 Nm ಟಾರ್ಕ್ ಅನ್ನು ಹೊರಹಾಕುತ್ತದೆ. ಆದರೆ ಈಗಿರುವ ಮಾದರಿಗಳು 88 bhp ಪವರ್ ಹಾಗೂ 113 Nm ಗರಿಷ್ಟ ಟಾರ್ಕ್ ಅನ್ನು ಹೊರಹಾಕುತ್ತವೆ. ಪ್ರಸ್ತುತವಿರುವ ಡಿಜೈರ್ ಹಾಗೂ ಸ್ವಿಫ್ಟ್‌ಗಳಿಗೆ ಹೋಲಿಸಿಕೊಂಡರೆ ಮುಂಬರಲಿರುವ ಕಾರುಗಳಲ್ಲಿ ಪವರ್ ಹಾಗೂ ಟಾರ್ಕ್ ಕಡಿಮೆಯಾಗಿದೆ.
ಆದರೂ ಮುಂಬರುವ ಹೊಸ ಮಾದರಿಯು ಭರ್ಜರಿ 24 ಕಿ.ಮೀ ಮೈಲೇಜ್ ನೀಡಲಿದೆ ಎನ್ನಲಾಗಿದೆ. ಈ ಕಾರುಗಳು ಶೀಘ್ರದಲ್ಲೇ ಬಿಡುಗಡೆಯಾಗಲಿವೆ, ಅಂದರೆ 2024ರ ಮಧ್ಯದಲ್ಲಿ ಅನಾವರಣಗೊಂಡು ವರ್ಷಾಂತ್ಯದಲ್ಲಿ ಬಿಡುಗಡೆಯಾಗುವ ಸಾಧ್ಯತೆಗಳು ಇವೆ. ಮುಂಬರಲಿರುವ ಈ ಎರಡೂ ಕಾರುಗಳ ಬಗ್ಗೆ ನಿಮ್ಮ ಅನಿಸಿಕೆಗಳನ್ನು ಕಮೆಂಟ್‌ನಲ್ಲಿ ತಿಳಿಸಿ.
ಡ್ರೈವ್‌ಸ್ಪಾರ್ಕ್ ಕನ್ನಡ ವೆಬ್‌ಸೈಟ್ ತ್ವರಿತವಾಗಿ ಆಟೋಮೊಬೈಲ್ ಸಂಬಂಧಿಸಿದ ಸುದ್ದಿಗಳನ್ನು ನೀಡುತ್ತದೆ. ಜೊತೆಗೆ ಸೋಷಿಯಲ್ ಮೀಡಿಯಾಗಳ ಮೂಲಕ ತಕ್ಷಣವೇ ಓದುಗರೊಂದಿಗೆ ಸುದ್ದಿಗಳನ್ನು ಶೇರ್ ಮಾಡುತ್ತೇವೆ. ಇತ್ತೀಚಿನ ಕಾರು, ಬೈಕ್ ಸುದ್ದಿ, ಟೆಸ್ಟ್ ಡ್ರೈವ್ ವರದಿಗಳು ಮತ್ತು ವೀಡಿಯೊಗಳನ್ನು ಪಡೆಯಲು ನಮ್ಮ ಫೇಸ್‌ಬುಕ್, ಇನ್‌ಸ್ಟಾಗ್ರಾಮ್, ಯೂಟ್ಯೂಬ್ ಪೇಜ್‌ಗಳೊಂದಿಗೆ ಫಾಲೋ ಮಾಡಿ. ನಿಮಗೆ ನಮ್ಮ ಯಾವುದೇ ಸುದ್ದಿ ಇಷ್ಟವಾದರೆ ಲೈಕ್, ಕಾಮೆಂಟ್ ಮಾಡುವುದನ್ನು ಮರೆಯದಿರಿ.


Click it and Unblock the Notifications