Swift: ಸದ್ದಿಲ್ಲದೇ ಮಾರುತಿ ಸ್ವಿಫ್ಟ್ CNG ಕಾರು ಬಿಡುಗಡೆಗೆ ಸಿದ್ಧತೆ, ಮುಂದಿನ ವಾರವೇ ಮಾರಾಟಕ್ಕೆ.. ಬೆಲೆ ಎಷ್ಟು?

ಮಾರುತಿ ಸುಜುಕಿ ಇಂಡಿಯಾ (Maruti Suzuki India), ಮೇ ತಿಂಗಳ ಆರಂಭದಲ್ಲಿ ನಾಲ್ಕನೇ ತಲೆಮಾರಿನ ಸ್ವಿಫ್ಟ್ (Fourth Generation Swift) ಕಾರನ್ನು ಅದ್ದೂರಿಯಾಗಿ ಬಿಡುಗಡೆ ಮಾಡಿತ್ತು. ಸದ್ಯ, ಕಂಪನಿಯು ಈ ಜನಪ್ರಿಯ ಹ್ಯಾಚ್‌ಬ್ಯಾಕ್‌ನ್ನು ಸಿಎನ್‌ಜಿ (CNG) ರೂಪದಲ್ಲಿ ಪರಿಚಯಿಸಲು ಯೋಜಿಸುತ್ತಿದೆ. ಮೂಲಗಳ ಪ್ರಕಾರ, ಸ್ವಿಫ್ಟ್ ಸಿಎನ್‌ಜಿ ಕಾರು ಸೆಪ್ಟೆಂಬರ್ (September) 2ನೇ ವಾರ ದೇಶೀಯ ಮಾರುಕಟ್ಟೆಯಲ್ಲಿ ಮಾರಾಟಕ್ಕೆ ಬರಲಿದೆ. ಆದರೆ, ನೂತನ ಹ್ಯಾಚ್‌ಬ್ಯಾಕ್‌ ಬಿಡುಗಡೆ ಕುರಿತಂತೆ ಮಾರುತಿ ಸುಜುಕಿ ಕಡೆಯಿಂದ ಯಾವುದೇ ಅಧಿಕೃತ ವಿವರಗಳು ಲಭ್ಯವಾಗಿಲ್ಲ.

ಭಾರತದಲ್ಲಿ ಮಾರುತಿ ಸುಜುಕಿ ಇಂಡಿಯಾ ಅತಿದೊಡ್ಡ ಸಿಎನ್‌ಜಿ ಪೋರ್ಟ್‌ಫೋಲಿಯೊವನ್ನು ಹೊಂದಿದೆ. ಬರೊಬ್ಬರಿ 14 ಕಾರುಗಳನ್ನು ಮಾರಾಟ ಮಾಡುತ್ತಿದೆ. ಅದರಲ್ಲಿ ಬ್ರೆಝಾ, ಡಿಜೈರ್ ಹಾಗೂ ಎರ್ಟಿಗಾಗೆ ಭಾರಿ ಬೇಡಿಕೆಯಿದೆ. ವಿಶೇಷವಾಗಿ 2024ರ ಆಗಸ್ಟ್‌ನಲ್ಲಿ ಕಂಪನಿಯು 49,602 ಯುನಿಟ್ ಸಿಎನ್‌ಜಿ ಕಾರುಗಳನ್ನು ಮಾರಾಟ ಮಾಡಿದೆ.

2024 Maruti Suzuki Swift CNG Car Launch In September 2nd Week Expected Price And Mileage

ಸದ್ಯ ಖರೀದಿಗೆ ದೊರೆಯುವ 2024ರ ಪೆಟ್ರೋಲ್ (Petrol) ಚಾಲಿತ ಹೊಸ ಮಾರುತಿ ಸುಜುಕಿ ಸ್ವಿಫ್ಟ್ ಹ್ಯಾಚ್‌ಬ್ಯಾಕ್‌ ರೂ.6.49 ಲಕ್ಷದಿಂದ ರೂ.9.59 ಲಕ್ಷ ಎಕ್ಸ್ ಶೋರೂಂ ಬೆಲೆಯನ್ನು ಹೊಂದಿದೆ. ಸಿಎನ್‌ಜಿ ಚಾಲಿತ ಕಾರು ರೂ.95,000 ಹೆಚ್ಚುವರಿ ದರವನ್ನು ಹೊಂದಿರಬಹುದು ಎಂದು ಅಂದಾಜಿಸಲಾಗಿದ್ದು, ರೂ.7.50 ಲಕ್ಷ ಆರಂಭಿಕ ಬೆಲೆಯನ್ನು ಪಡೆದಿರುವ ನೀರಿಕ್ಷೆಯಿದೆ. 30.9 ಕೆಎಂ/ಕೆಜಿ ಮೈಲೇಜ್ ನೀಡಬಹುದು ಎಂದು ಹೇಳಲಾಗಿದೆ.

ಕಳೆದ ಮೇ 9ರಂದು ಮಾರಾಟಕ್ಕೆ ಬಂದ ಈ ಪೆಟ್ರೋಲ್ ಚಾಲಿತ ನೂತನ ಸ್ವಿಫ್ಟ್ ಕಾರು ಎಲ್ಎಕ್ಸ್ಐ, ವಿಎಕ್ಸ್ಐ, ವಿಎಕ್ಸ್ಐ (ಒ), ಝಡ್ಎಕ್ಸ್ಐ, ಝಡ್ಎಕ್ಸ್ಐ ಪ್ಲಸ್ ರೂಪಾಂತರಗಳನ್ನು (ವೇರಿಯೆಂಟ್) ಹೊಂದಿದೆ. ಜೊತೆಗೆ ಸಿಜ್ಲಿಂಗ್ ರೆಡ್, ಪರ್ಲ್ ಆರ್ಕ್ಟಿಕ್ ವೈಟ್, ಮ್ಯಾಗ್ಮಾ ಗ್ರೇ, ನಾವೆಲ್ ಆರೆಂಜ್ ಸೇರಿದಂತೆ ವಿವಿಧ ಆಕರ್ಷಕ ಬಣ್ಣಗಳೊಂದಿಗೂ ದೊರೆಯುತ್ತದೆ.

2024 Maruti Suzuki Swift CNG Car Launch In September 2nd Week Expected Price And Mileage

ಹೊಚ್ಚ ಹೊಸ ಮಾರುತಿ ಸುಜುಕಿ ಸ್ವಿಫ್ಟ್ (Maruti Suzuki Swift) ಹ್ಯಾಚ್‌ಬ್ಯಾಕ್ 1.2-ಲೀಟರ್ 3-ಸಿಲಿಂಡರ್ ಝಡ್ ಸೀರಿಯಸ್ ಪೆಟ್ರೋಲ್ ಎಂಜಿನ್ ಪಡೆದಿದೆ. 80 ಪಿಎಸ್ ಗರಿಷ್ಠ ಶಕ್ತಿ (ಪವರ್) ಮತ್ತು 112 ಎನ್ಎಂ ಪೀಕ್ ಟಾರ್ಕ್ ಉತ್ಪಾದಿಸುವ ಸಾಮರ್ಥ್ಯ ಹೊಂದಿದೆ. 5-ಸ್ಪೀಡ್ ಮ್ಯಾನುವಲ್/ 5-ಸ್ಪೀಡ್ ಆಟೋಮೆಟಿಕ್ ಗೇರ್‌ಬಾಕ್ಸ್‌ನ್ನು ಒಳಗೊಂಡಿದೆ. 24.8 ರಿಂದ 25.72 ಕೆಎಂಪಿಎಲ್‌ವರೆಗೆ ಮೈಲೇಜ್ ಕೊಡುತ್ತದೆ.

ಮಾರುತಿ ಸುಜುಕಿ ಸ್ವಿಫ್ಟ್ ಕಾರಿನಲ್ಲಿ 5-ಮಂದಿ ಆರಾಮದಾಯಕವಾಗಿ ಕುಳಿತುಕೊಂಡು ದೂರದ ಊರುಗಳಿಗೆ ಪ್ರಯಾಣಿಸಬಹುದು. ವಾರಾಂತ್ಯ ಹಾಗೂ ರಜಾದಿನಗಳಲ್ಲಿ ಹೆಚ್ಚಿನ ಲಗೇಜ್ ಸಾಗಿಸಲು 265 ಲೀಟರ್ ಸಾಮರ್ಥ್ಯದ ಬೂಟ್ ಸ್ಪೇಸ್‌ನ್ನು ಒಳಗೊಂಡಿದೆ. 9-ಇಂಚಿನ ಇನ್ಫೋಟೈನ್‌ಮೆಂಟ್ ಸಿಸ್ಟಮ್, ಆಟೋ ಕ್ಲೇಮೇಟ್ ಕಂಟ್ರೋಲ್, ಸೆಮಿ-ಡಿಜಿಟಲ್ ಇನ್ಸ್ಟ್ರುಮೆಂಟ್ ಕ್ಲಸ್ಟರ್, ವೈರ್‌ಲೆಸ್ ಚಾರ್ಜರ್, ಯುಎಸ್‌ಬಿ ಟೈಪ್-ಎ & ಟೈಪ್-ಸಿ ಪೋರ್ಟ್‌ ಸೇರಿದಂತೆ ವಿವಿಧ ವೈಶಿಷ್ಟ್ಯಗಳನ್ನು ಹೊಂದಿದೆ.

ಈ ಮಾರುತಿ ಸುಜುಕಿ ಸ್ವಿಫ್ಟ್ ಪ್ರಯಾಣಿಕರಿಗೆ ಹೆಚ್ಚಿನ ರಕ್ಷಣೆ ಒದಗಿಸುತ್ತದೆ. ಸುರಕ್ಷತೆಯ ಸಲುವಾಗಿ 6 ಏರ್‌ಬ್ಯಾಗ್‌, ಎಬಿಎಸ್ (ಆಂಟಿಲಾಕ್ ಬ್ರೇಕಿಂಗ್ ಸಿಸ್ಟಮ್), ಇಬಿಡಿ (ಎಲೆಕ್ಟ್ರಾನಿಕ್ ಬ್ರೇಕ್‌ಫೋರ್ಸ್ ಡಿಸ್ಟ್ರಿಬ್ಯೂಷನ್), ಟಿಸಿಎಸ್ (ಟ್ರಾಕ್ಷನ್ ಕಂಟ್ರೋಲ್ ಸಿಸ್ಟಮ್), ಸೀಟ್ ಬೆಲ್ಟ್ ರಿಮೈಂಡರ್‌, 3-ಪಾಯಿಂಟ್ ಸೀಟ್‌ಬೆಲ್ಟ್‌ಗಳನ್ನು ಪಡೆದಿದೆ.

ಡ್ರೈವ್‌ಸ್ಪಾರ್ಕ್ ಕನ್ನಡ ವೆಬ್‌ಸೈಟ್ ತ್ವರಿತವಾಗಿ ಆಟೋಮೊಬೈಲ್ ಸಂಬಂಧಿಸಿದ ಸುದ್ದಿಗಳನ್ನು ನೀಡುತ್ತದೆ. ಜೊತೆಗೆ ಸೋಷಿಯಲ್ ಮೀಡಿಯಾಗಳ ಮೂಲಕ ತಕ್ಷಣವೇ ಓದುಗರೊಂದಿಗೆ ಸುದ್ದಿಗಳನ್ನು ಶೇರ್ ಮಾಡುತ್ತೇವೆ. ಇತ್ತೀಚಿನ ಕಾರು, ಬೈಕ್ ಸುದ್ದಿ, ಟೆಸ್ಟ್ ಡ್ರೈವ್ ವರದಿಗಳು ಮತ್ತು ವೀಡಿಯೊಗಳನ್ನು ಪಡೆಯಲು ನಮ್ಮ ಫೇಸ್‌ಬುಕ್, ಇನ್‌ಸ್ಟಾಗ್ರಾಮ್, ಯೂಟ್ಯೂಬ್ ಪೇಜ್‌ಗಳೊಂದಿಗೆ ಫಾಲೋ ಮಾಡಿ. ನಿಮಗೆ ನಮ್ಮ ಯಾವುದೇ ಸುದ್ದಿ ಇಷ್ಟವಾದರೆ ಲೈಕ್, ಕಾಮೆಂಟ್ ಮಾಡುವುದನ್ನು ಮರೆಯದಿರಿ.

Article Published On: Thursday, September 5, 2024, 14:53 [IST]
English summary
2024 maruti suzuki swift cng car launch in september 2nd week expected price and mileage
Read more on maruti suzuki india
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+