ಮಾರುತಿ ಹೊಸ CNG ಕಾರು: ಕೇವಲ 8 ಲಕ್ಷ ಬೆಲೆ... 32 ಕಿ.ಮೀ ಮೈಲೇಜ್... 6 ಏರ್‌ಬ್ಯಾಗ್!
ಮಾರುತಿ ಸುಜುಕಿ ಇಂಡಿಯಾ ಲಿಮಿಟೆಡ್ (MSIL) ಇಂದು ಹೊಸ ಸ್ವಿಫ್ಟ್‌ನ S-CNG ರೂಪಾಂತರವನ್ನು ಬಿಡುಗಡೆ ಮಾಡಿದೆ. ಈ ಹೊಸ ಸಿಎನ್‌ಜಿ ಕಾರು ಉತ್ತಮ ಕಾರ್ಯಕ್ಷಮತೆ ಮತ್ತು ಅತ್ಯಾಧುನಿಕ ವೈಶಿಷ್ಟ್ಯಗಳೊಂದಿಗೆ ಒಂದು ಕೆ.ಜಿ ಸಿಎನ್‌ಜಿಗೆ 32.85 ಕಿ.ಮೀ ಮೈಲೇಜ್ ನೀಡುವುದಾಗಿ ಕಂಪನಿ ಹೇಳಿದೆ. ವೈವಿಧ್ಯಮಯ ಗ್ರಾಹಕರ ಆದ್ಯತೆಗಳನ್ನು ಪೂರೈಸಲು, ಸ್ವಿಫ್ಟ್ CNG ಕಾರನ್ನು ಈಗ VXi, VXi(O), ಮತ್ತು ZXi ಎಂಬ ಮೂರು ವೇರಿಯೆಂಟ್‌ಗಳಲ್ಲಿ ನೀಡಲಾಗುತ್ತಿದೆ. ಈ ಹೊಸ ಕಾರನ್ನು ಕೇವಲ 5-ಸ್ಪೀಡ್ ಮ್ಯಾನುವಲ್ ಗೇರ್ ಬಾಕ್ಸ್‌ನಲ್ಲಿ ಮಾತ್ರ ನೀಡಲಾಗಿದೆ.
ಬೆಲೆ: ಹೊಸ ಮಾರುತಿ ಸುಜುಕಿ ಸ್ವಿಫ್ಟ್‌ನ S-CNG ಕಾರಿನ ವೇರಿಯೆಂಟ್ ವಾರು ಬೆಲೆಗಳನ್ನು ನೋಡುವುದಾದ್ರೆ, VXi ವೇರಿಯೆಂಟ್ ಬೆಲೆಯು 8,19,500 ರೂ., VXi (O) ವೇರಿಯೆಂಟ್ 8,46,500 ರೂ., ZXi ವೇರಿಯೆಂಟ್ 9,19,500 ರೂ. ಬೆಲೆಯಿದೆ. ಇವೆಲ್ಲವು ಎಕ್ಸ್ ಶೋರೂಂ ಬೆಲೆಗಳಾಗಿವೆ.
ಕಂಪನಿಯ ಪ್ರಕಾರ ತನ್ನ ಎಲ್ಲಾ ಸಿಎನ್‌ಜಿ ಕಾರುಗಳಿಗಿಂತ ಹೊಸ ಸ್ವಿಫ್ಟ್ ಮೈಲೇಜ್ ವಿಷಯದಲ್ಲಿ ಸುಧಾರಣೆ ಕಂಡಿದೆ. ಕಂಪನಿಯ ಹೊಸ Z-ಸರಣಿಯ ಎಂಜಿನ್ ಇದಕ್ಕೆ ಮುಖ್ಯ ಕಾರಣವಾಗಿದೆ, ಇದು ಒಂದು ಕೆ.ಜಿ ಸಿಎನ್‌ಜಿಗೆ ಬರೋಬ್ಬರಿ 32.85 ಕಿ.ಮೀ ನಷ್ಟು ಗಮನಾರ್ಹ ಇಂಧನ-ದಕ್ಷತೆಯನ್ನು ನೀಡುತ್ತದೆ. ಈ ಮೂಲಕ ಅದರ ಹಿಂದಿನದಕ್ಕಿಂತ ಶೇ6 ಕ್ಕಿಂತ ಹೆಚ್ಚು ಸುಧಾರಣೆಯಾಗಿದೆ ಎಂದು ಕಂಪನಿ ತಿಳಿಸಿದೆ.
ಮಾರುತಿ ಸುಜುಕಿ 2010 ರಲ್ಲಿ ಭಾರತದಲ್ಲಿ ಸಿಎನ್‌ಜಿ ವಾಹನಗಳ ಉತ್ಪಾದನೆ ಪ್ರಾರಂಭಿಸಿತು. ಅಂದಿನಿಂದ ಇಲ್ಲಿಯವರೆಗೆ 20 ಲಕ್ಷ ಸಿಎನ್‌ಜಿ ವಾಹನಗಳನ್ನು ಮಾರಾಟ ಮಾಡಿದೆ. ಮಾರುತಿ ಸುಜುಕಿ ಪ್ರಸ್ತುತ ತನ್ನ ಲೈನ್‌ಅಪ್‌ನಲ್ಲಿ ಬರೋಬ್ಬರಿ 14 ಸಿಎನ್‌ಜಿ ಚಾಲಿತ ವಾಹನಗಳ ವ್ಯಾಪಕ ಶ್ರೇಣಿಯನ್ನು ಹೊಂದಿದೆ.

ಕಳೆದ ಆರ್ಥಿಕ ವರ್ಷದಲ್ಲಿ, ಪ್ರಯಾಣಿಕ ವಾಹನ ವಿಭಾಗದಲ್ಲಿನ ಮಾರುತಿ CNG ಮಾರಾಟವು 2022-23 ಹಣಕಾಸು ವರ್ಷಕ್ಕೆ ಹೋಲಿಸಿದರೆ ಶೇ46.8 ರಷ್ಟು ಬೆಳವಣಿಗೆಯನ್ನು ಕಂಡಿದೆ. ಇದೀಗ ಹೊಸ ಸ್ವಿಫ್ಟ್ CNG ವಾಹನವನ್ನು ಗ್ರಾಹಕರಿಗೆ ಲಭ್ಯವಾಗುವ ಮೊದಲು ವಿಶ್ವ-ದರ್ಜೆಯ ಸಂಶೋಧನೆ ಮತ್ತು ಅಭಿವೃದ್ಧಿ ಸೌಲಭ್ಯದಲ್ಲಿ ಪರಿಕಲ್ಪನೆ, ವಿನ್ಯಾಸ, ಅಭಿವೃದ್ಧಿ ಮತ್ತು ಕಠಿಣ ಪರೀಕ್ಷೆಗೆ ಒಳಪಡಿಸಿರುವುದಾಗಿ ಮಾರುತಿ ಹೇಳಿದೆ.
ಡ್ರೈವ್‌ಸ್ಪಾರ್ಕ್ ಕನ್ನಡ ವೆಬ್‌ಸೈಟ್ ತ್ವರಿತವಾಗಿ ಆಟೋಮೊಬೈಲ್ ಸಂಬಂಧಿಸಿದ ಸುದ್ದಿಗಳನ್ನು ನೀಡುತ್ತದೆ. ಜೊತೆಗೆ ಸೋಷಿಯಲ್ ಮೀಡಿಯಾಗಳ ಮೂಲಕ ತಕ್ಷಣವೇ ಓದುಗರೊಂದಿಗೆ ಸುದ್ದಿಗಳನ್ನು ಶೇರ್ ಮಾಡುತ್ತೇವೆ. ಇತ್ತೀಚಿನ ಕಾರು, ಬೈಕ್ ಸುದ್ದಿ, ಟೆಸ್ಟ್ ಡ್ರೈವ್ ವರದಿಗಳು ಮತ್ತು ವೀಡಿಯೊಗಳನ್ನು ಪಡೆಯಲು ನಮ್ಮ ಫೇಸ್‌ಬುಕ್, ಇನ್‌ಸ್ಟಾಗ್ರಾಮ್, ಯೂಟ್ಯೂಬ್ ಪೇಜ್‌ಗಳೊಂದಿಗೆ ಫಾಲೋ ಮಾಡಿ. ನಿಮಗೆ ನಮ್ಮ ಯಾವುದೇ ಸುದ್ದಿ ಇಷ್ಟವಾದರೆ ಲೈಕ್, ಕಾಮೆಂಟ್ ಮಾಡುವುದನ್ನು ಮರೆಯದಿರಿ.


Click it and Unblock the Notifications