Maruti Suzuki: 2024ರ ಮಾರುತಿ ಸ್ವಿಫ್ಟ್ ವಿಶೇಷತೆಗಳು: ಸನ್‌ರೂಫ್, 35 ಕಿ.ಮೀ ಮೈಲೇಜ್!

ಭಾರತದಲ್ಲಿ ಅಗ್ಗದ ಬೆಲೆಗೆ ಉತ್ತಮ ಮೈಲೇಜ್ ನೀಡುವ ಕಾರು ಬ್ರಾಂಡ್‌ ಆಗಿ ಗುರ್ತಿಸಿಕೊಂಡಿರುವ ಮಾರುತಿ ಸುಜುಕಿ, ತನ್ನ ಮುಂಬರುವ ಮಾರುತಿ ಸ್ವಿಫ್ಟ್ ಹಾಗೂ ಡಿಜೈರ್ ಮೂಲಕ ಹೊಸ ಅಲೆ ಎಬ್ಬಿಸಲು ಸಜ್ಜಾಗಿದೆ. ಈ ಬಹುನಿರೀಕ್ಷಿತ 2024ರ ಹೊಸ ಮಾರುತಿ ಸುಜುಕಿ ಸ್ವಿಫ್ಟ್ ಹಾಗೂ ಡಿಜೈರ್ ಕಾರುಗಳು ಸನ್‌ರೂಫ್‌ನೊಂದಿಗೆ ಬರಲಿವೆ.

ಇತ್ತೀಚೆಗೆ ಸ್ವಿಫ್ಟ್ ಡಿಜೈರ್ ಅನ್ನು ರಸ್ತೆ ಪರೀಕ್ಷೆ ಮಾಡುವಾಗ ಸನ್‌ರೂಫ್‌ನೊಂದಿಗೆ ಕಾಣಿಸಿಕೊಂಡಿದೆ. ಮಾರುತಿ ಡಿಜೈರ್ ಕುತೂಹಲಕಾರಿಯಾಗಿ ಸನ್‌ರೂಫ್‌ನೊಂದಿಗೆ ಕಾಣಿಸಿಕೊಂಡಿದೆಯಾದರೂ, ಕಂಪನಿ ಈ ಬಗ್ಗೆ ಅಧಿಕೃತವಾಗಿ ಖಚಿತಪಡಿಸಲ್ಲ. ಇನ್ನು ಮೈಲೇಜ್ ವಿಷಯಕ್ಕೆ ಬಂದರೆ ಮುಂಬರಲಿರುವ ಮಾರುತಿ ಸ್ವಿಫ್ಟ್ ಮೂಲಗಳ ಪ್ರಕಾರ ಬರೋಬ್ಬರಿ 35km/l ಮೈಲೇಜ್ ಅನ್ನು ಹಿಂದಿರುಗಿಸಲಿದೆ ಎಂದು ವರದಿಯಾಗಿದೆ.

2024-maruti-suzuki-swift-comes-with-sunroof-and-35-km-mileage

ಮಾರುತಿ ಸುಜುಕಿ ಸ್ವಿಫ್ಟ್ ಹಾಗೂ ಡಿಜೈರ್ ಕಾರುಗಳು ಹೈಬ್ರಿಡ್ ತಂತ್ರಜ್ಞಾನವನ್ನು ಹೊಂದಿರಲಿವೆ. ಹಾಗಾಗಿಯೇ ಮುಂಬರುವ ಈ ಹೊಸ ಮಾದರಿಗಳು ಭರ್ಜರಿ 35 ಕಿ.ಮೀ ಮೈಲೇಜ್ ನೀಡಲಿವೆ ಎನ್ನಲಾಗಿದೆ. ಈ ಕಾರುಗಳು ಶೀಘ್ರದಲ್ಲೇ ಬಿಡುಗಡೆಯಾಗಲಿವೆ, ಅಂದರೆ 2024 ರ ಮಧ್ಯದಲ್ಲಿ ಅನಾವರಣಗೊಂಡು ವರ್ಷಾಂತ್ಯದಲ್ಲಿ ಬಿಡುಗಡೆಯಾಗುವ ಸಾಧ್ಯತೆ ಇದೆ.

ಹೊಸ ಎಂಜಿನ್: ಹೊಸ ಪವರ್‌ಟ್ರೇನ್ ಸ್ವಿಫ್ಟ್ ಹ್ಯಾಚ್‌ಬ್ಯಾಕ್‌ನ ಈಗಿರುವ ಎಂಜಿನ್‌ಗಿಂತ ಹೆಚ್ಚು ಪರಿಣಾಮಕಾರಿಯಾಗಿದೆ ಎಂದು ಹೇಳಲಾಗುತ್ತಿದೆ. ಸದ್ಯ ಮಾರಾಟದಲ್ಲಿರುವ ಸ್ವಿಫ್ಟ್ ಎಂಜಿನ್‌ಗೆ ಸುಧೀರ್ಘ ಇತಿಹಾಸವಿದೆ. ಇದು 1.2-ಲೀಟರ್ 4-ಸಿಲಿಂಡರ್, ನ್ಯಾಚುರಲ್ಲಿ-ಆಸ್ಪಿರೇ ಟೆಡ್ K12 ಪೆಟ್ರೋಲ್ ಎಂಜಿನ್ ಆಗಿದ್ದು, 2010 ರಲ್ಲಿ ಮೊದಲ-ಜನ್ ಮಾರುತಿ ಸ್ವಿಫ್ಟ್ ಹ್ಯಾಚ್‌ಬ್ಯಾಕ್‌ನಲ್ಲಿ ಪರಿಚಯಿಸಲಾಯಿತು.

2024-maruti-suzuki-swift-comes-with-sunroof-and-35-km-mileage

ಸುಧೀರ್ಘ ವರ್ಷಗಳ ನಂತರ ಅದರ ಜಾಗದಲ್ಲಿ ಈಗ ಹೊಸ 1.2-ಲೀಟರ್, 3-ಸಿಲಿಂಡರ್, ನ್ಯಾಚುರಲ್ಲಿ-ಆಸ್ಪಿರೇಟೆಡ್ Z12 ಪೆಟ್ರೋಲ್ ಎಂಜಿನ್ ಬರುತ್ತಿದೆ. ಇಲ್ಲಿ ಮುಖ್ಯವಾಗಿ ನೀವು ಗಮನಿಸಬೇಕಾದ ಸಂಗತಿಯೆಂದರೆ ಮುಂಬರುವ ಸ್ವಿಫ್ಟ್ ಈಗಿರುವ ಸ್ವಿಫ್ಟ್ ಎಂಜಿನ್‌ಗೆ ಹೋಲಿಸಿದರೆ ಒಂದು ಸಿಲಿಂಡರ್ ಕಡಿಮೆಯಾಗಿದೆ. ಆದ್ರೂ ಅದೇ ಸಾಮರ್ಥ್ಯವನ್ನು ಹೊಂದಿದೆ.

ಹೊಸ Z12 ಎಂಜಿನ್ ಕಡಿಮೆ ಸಿಲಿಂಡರ್‌ಗಳೊಂದಿಗೆ ಒಂದೇ ರೀತಿಯ ಸಾಮರ್ಥ್ಯವನ್ನು ಹೊಂದಿರುವುದರಿಂದ, ಎಂಜಿನ್ ಉತ್ತಮ ವಾಲ್ಯೂಮೆಟ್ರಿಕ್ ದಕ್ಷತೆಯನ್ನು ಹೊಂದಿದೆ ಎಂದು ಹೇಳಲಾಗುತ್ತಿದೆ. ಜೊತೆಗೆ 3-ಸಿಲಿಂಡರ್ ಎಂಜಿನ್ ಆಗಿರುವುದರಿಂದ, ಹೊಸ Z12 ಎಂಜಿನ್ ಈಗಿರುವ ಮಾರುತಿ ಸ್ವಿಫ್ಟ್ ಹ್ಯಾಚ್‌ಬ್ಯಾಕ್‌ನಲ್ಲಿರುವ K12 ಎಂಜಿನ್‌ಗಿಂತ ಹಗುರವಾಗಿರುವುದರಿಂದ ಮೈಲೇಜ್ ಕೂಡ ಹೆಚ್ಚಾಗಿ ನೀಡಲಿದೆ.

2024-maruti-suzuki-swift-comes-with-sunroof-and-35-km-mileage

ಮುಂಬರುವ ಸ್ವಿಫ್ಟ್ ಹಾಗೂ ಡಿಜೈರ್ ಕಾರುಗಳಲ್ಲಿ 80 bhp ಪವರ್ 108 Nm ಟಾರ್ಕ್ ಅನ್ನು ಹೊರಹಾಕುವಂತೆ ಟ್ಯೂನ್ ಮಾಡಲಾಗಿದೆ. ಆದರೆ ಈಗಿರುವ ಹಳೆಯ ಸ್ವಿಫ್ಟ್ ಹಾಗೂ ಡಿಜೈರ್ ಮಾದರಿಗಳು 88 bhp ಪವರ್ ಹಾಗೂ 113 Nm ಗರಿಷ್ಟ ಟಾರ್ಕ್ ಅನ್ನು ಹೊರಹಾಕುತ್ತವೆ.

ಇಂಟೀರಿಯರ್: ಎರಡೂ ಕಾರುಗಳು ಒಂದೇ ರಿತಿಯ ಕ್ಯಾಬಿನ್ ಪಡೆಯಲಿವೆ. ಮೂಲಗಳ ಪ್ರಕಾರ ಬಲೆನೋದಿಂದ ಸ್ಪೂರ್ತಿ ಪಡೆದ ಡ್ಯುಯಲ್ ಟೋನ್ ಡ್ಯಾಷ್‌ಬೋರ್ಡ್, ಟಚ್ ಸ್ಕ್ರೀನ್ ಇನ್‌ಫೋಟೈನ್‌ಮೆಂಟ್, ಆಪಲ್ ಕಾರ್‌ಪ್ಲೇ ಮತ್ತು ಆಂಡ್ರಾಯ್ಡ್ ಆಟೋದೊಂದಿಗೆ ಬರಲಿದೆ. ಸದ್ಯ ಎಲ್ಲಾ ಬ್ರಾಂಡ್‌ಗಳು ಕಡಿಮೆ ಬೆಲೆಯಲ್ಲಿ ಉತ್ತಮ ಇಂಟೀರಿಯರ್ ನೀಡುತ್ತಿರುವುದರಿಂದ ಮಾರುತಿ ಕೂಡ ಈ ಬಾರಿ ಡಿಜೈರ್ ಹಾಗೂ ಸ್ವಿಫ್ಟ್‌ನಲ್ಲಿ ಪ್ರೀಮಿಯಂ ಆಗಿ ನೀಡಲಿದೆ.

2024-maruti-suzuki-swift-comes-with-sunroof-and-35-km-mileage

ವೈಶಿಷ್ಟ್ಯಗಳು: ಆಟೋಮ್ಯಾಟಿಕ್ ಕ್ಲೈಮೆಟ್ ಕಂಟ್ರೋಲ್, ಅನಲಾಗ್ ಡಯಲ್, ಡಿಜಿಟಲ್ ಮಲ್ಟಿ ಇನ್‌ಫರ್ಮೆಷನ್ ಡಿಸ್ಪ್ಲೆ ಹೊಂದಿರುವ ಇನ್‌ಸ್ಟ್ರೂಮೆಂಟ್ ಕ್ಲಸ್ಟರ್ ನೀಡುವ ಸಾಧ್ಯತೆ ಇದೆ. ಇತ್ತೀಚಿನ ಕಾರು, ಬೈಕ್ ಸುದ್ದಿ, ಟೆಸ್ಟ್ ಡ್ರೈವ್ ವರದಿಗಳು ಮತ್ತು ವೀಡಿಯೊಗಳನ್ನು ಪಡೆಯಲು ನಮ್ಮ ಫೇಸ್‌ಬುಕ್, ಇನ್‌ಸ್ಟಾಗ್ರಾಮ್, ಯೂಟ್ಯೂಬ್ ಪೇಜ್‌ಗಳೊಂದಿಗೆ ಫಾಲೋ ಮಾಡಿ. ನಿಮಗೆ ನಮ್ಮ ಯಾವುದೇ ಸುದ್ದಿ ಇಷ್ಟವಾದರೆ ಲೈಕ್, ಕಾಮೆಂಟ್ ಮಾಡುವುದನ್ನು ಮರೆಯದಿರಿ.

Article Published On: Thursday, March 28, 2024, 17:52 [IST]
English summary
2024 maruti suzuki swift comes with sunroof and 35 km mileage
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+