ಮಾರುತಿ ಸ್ವಿಫ್ಟ್ ಖರೀದಿಸುತ್ತಿದ್ದೀರಾ? ಸ್ವಲ್ಪ ಕಾಯಿರಿ... ಹೊಸ ಸ್ವಿಫ್ಟ್ ಬರುತ್ತಿದೆ! 35 ಕಿ.ಮೀ ಮೈಲೇಜ್

ಬಹುನಿರೀಕ್ಷಿತ 2024ರ ಹೊಸ ಮಾರುತಿ ಸುಜುಕಿ ಸ್ವಿಫ್ಟ್ ಹಾಗೂ ಡಿಜೈರ್ ಕಾರುಗಳು ಶೀಘ್ರದಲ್ಲೇ ಬಿಡುಗಡೆಯಾಗಲಿವೆ. ಮಾರುತಿ ಸುಜುಕಿ ಕಂಪನಿಯು ತನ್ನ ಹೊಸ 2024ರ ಸ್ವಿಫ್ಟ್ (Maruti Suzuki Swift) ಕಾರನ್ನು ಮೇ 9, 2024ರಂದು ಬಿಡುಗಡೆಗೊಳಿಸಲು ಎಲ್ಲಾ ಸಿದ್ಧತೆಗಳನ್ನು ಮಾಡಿಕೊಂಡಿದೆ ಎಂದು ಹೇಳಲಾಗುತ್ತಿದೆ.

ಈ ಮುಂಬರುವ ಹೊಸ ಕಾರು ಕೇವಲ ನವೀಕರಣ ಮಾತ್ರವಲ್ಲದೇ ತಂತ್ರಜ್ಞಾನ, ಸುರಕ್ಷತೆ ಮತ್ತು ವಿನ್ಯಾಸ ವರ್ಧನೆಗಳನ್ನು ಹೊಂದಿರಲಿವೆ. ಇತ್ತೀಚೆಗೆ ಸ್ವಿಫ್ಟ್ ಡಿಜೈರ್ ಅನ್ನು ರಸ್ತೆ ಪರೀಕ್ಷೆ ಮಾಡುವಾಗ ಸನ್‌ರೂಫ್‌ನೊಂದಿಗೆ ಕಾಣಿಸಿಕೊಂಡಿದೆ. ಮಾರುತಿ ಡಿಜೈರ್ ಕುತೂಹಲಕಾರಿಯಾಗಿ ಸನ್‌ರೂಫ್‌ನೊಂದಿಗೆ ಕಾಣಿಸಿಕೊಂಡಿದೆಯಾದರೂ, ಕಂಪನಿ ಈ ಬಗ್ಗೆ ಅಧಿಕೃತವಾಗಿ ಖಚಿತಪಡಿಸಲ್ಲ. ಖಚಿತ ಮೂಲಗಳ ಪ್ರಕಾರ, ಮಾರುತಿ ಸುಜುಕಿ ಸ್ವಿಫ್ಟ್‌ನ ಹೊರಭಾಗವು ಮರುವಿನ್ಯಾಸಗೊಳಿಸಿದ ಫ್ರಂಟ್ ಗ್ರಿಲ್, ಸುಧಾರಿತ ಸುರಕ್ಷತಾ ವೈಶಿಷ್ಟ್ಯಗಳು, ಕ್ರೋಮ್ ಸ್ಟ್ರಿಪ್ ಮತ್ತು ಇಂಟಿಗ್ರೇಟೆಡ್ ರಾಡಾರ್ ಮಾಡ್ಯೂಲ್‌ನಂತಹ ಅಪ್‌ಡೇಟ್‌ಗಳು ಇರುವುದಾಗಿ ತಿಳಿದುಬಂದಿದೆ. ಹಾಗೆಯೇ ಇದು ಬರೋಬ್ಬರಿ 35km/l ಮೈಲೇಜ್ ನೀಡಲಿದೆ.

2024-maruti-suzuki-swift-expected-launch-date

ಮಾರುತಿ ಸುಜುಕಿ ಸ್ವಿಫ್ಟ್ ಹಾಗೂ ಡಿಜೈರ್ ಕಾರುಗಳು ಹೈಬ್ರಿಡ್ ತಂತ್ರಜ್ಞಾನವನ್ನು ಹೊಂದಿರಲಿವೆ. ಹಾಗಾಗಿಯೇ ಮುಂಬರುವ ಈ ಹೊಸ ಮಾದರಿಗಳು ಭರ್ಜರಿ 35 ಕಿ.ಮೀ ಮೈಲೇಜ್ ನೀಡಲಿವೆ ಎನ್ನಲಾಗಿದೆ. ಹೊಸ ಪವರ್‌ಟ್ರೇನ್ ಸ್ವಿಫ್ಟ್ ಹ್ಯಾಚ್‌ಬ್ಯಾಕ್‌ನ ಈಗಿರುವ ಎಂಜಿನ್‌ಗಿಂತ ಹೆಚ್ಚು ಪರಿಣಾಮಕಾರಿಯಾಗಿದೆ. 1.2 ಲೀಟರಿನ ಝಡ್ ಸೀರಿಸ್ ಪೆಟ್ರೋಲ್ ಎಂಜಿನ್ ಅಳವಡಿಸಲಾಗಿದ್ದು, ಈ ಎಂಜಿನ್ 83 ಬಿಹೆಚ್‌ಪಿ ಪವರ್ ಹಾಗೂ 108 ಎನ್‌ಎಂ ಟಾರ್ಕ್ ಉತ್ಪಾದಿಸಲಿದೆ.

ಈ ಎಂಜಿನ್ ಸಿಎನ್‌ಜಿ ಸೇರಿದಂತೆ ಮ್ಯಾನುವಲ್ ಮತ್ತು ಆಟೋಮ್ಯಾಟಿಕ್ ಟ್ರಾನ್ಸ್ಮಿಷನ್ ಆಯ್ಕೆಗಳೊಂದಿಗೆ ಲಭ್ಯವಾಗಲಿದೆ. ಸದ್ಯ ಮಾರಾಟದಲ್ಲಿರುವ ಸ್ವಿಫ್ಟ್ ಎಂಜಿನ್‌ಗೆ ಸುಧೀರ್ಘ ಇತಿಹಾಸವಿದೆ. ಇದು 1.2-ಲೀಟರ್ 4-ಸಿಲಿಂಡರ್, ನ್ಯಾಚುರಲ್ಲಿ-ಆಸ್ಪಿರೇಟೆಡ್ K12 ಪೆಟ್ರೋಲ್ ಎಂಜಿನ್ ಆಗಿದ್ದು, 2010 ರಲ್ಲಿ ಮೊದಲ-ಜನ್ ಮಾರುತಿ ಸ್ವಿಫ್ಟ್ ಹ್ಯಾಚ್‌ಬ್ಯಾಕ್‌ನಲ್ಲಿ ಪರಿಚಯಿಸಲಾಯಿತು.

2024-maruti-suzuki-swift-expected-launch-date

ಇಂಟೀರಿಯರ್: ಮೂಲಗಳ ಪ್ರಕಾರ ಬಲೆನೋದಿಂದ ಸ್ಪೂರ್ತಿ ಪಡೆದ ಡ್ಯುಯಲ್ ಟೋನ್ ಡ್ಯಾಷ್‌ಬೋರ್ಡ್ ಜೊತೆಗೆ ಡಿಜೈರ್ ಹಾಗೂ ಸ್ವಿಫ್ಟ್‌ನಲ್ಲಿ ಪ್ರೀಮಿಯಂ ಇಂಟೀರಿಯರ್ ಸಿಗಲಿದೆ. ಆಟೋಮ್ಯಾಟಿಕ್ ಕ್ಲೈಮೆಟ್ ಕಂಟ್ರೋಲ್, ಅನಲಾಗ್ ಡಯಲ್, ಡಿಜಿಟಲ್ ಮಲ್ಟಿ ಇನ್‌ಫರ್ಮೆಷನ್ ಡಿಸ್ಪ್ಲೆ ಹೊಂದಿರುವ ಇನ್‌ಸ್ಟ್ರೂಮೆಂಟ್ ಕ್ಲಸ್ಟರ್ ನೀಡುವ ಸಾಧ್ಯತೆ ಇದೆ. ಜೊತೆಗೆ ಆಂಡ್ರಾಯ್ಡ್ ಆಟೋ ಮತ್ತು ಆಪಲ್ ಕಾರ್ ಪ್ಲೇಗಾಗಿ ವೈರ್ ಲೆಸ್ ಕನೆಕ್ಟಿವಿಟಿಯೊಂದಿಗೆ ಅತ್ಯಾಧುನಿಕ 9.0 - ಇಂಚಿನ ಟಚ್ ಸ್ಕ್ರೀನ್ ಇನ್ಫೋಟೈನ್ ಮೆಂಟ್ ಅನ್ನು ನೀಡಲಾಗಿದೆ. ಇವಿಷ್ಟೇ ಅಲ್ಲದೇ ಸನ್‌ರೂಫ್ ನೀಡುವ ಕುರಿತ ಮಾತುಗಳು ಬಲವಾಗಿ ಕೇಳಿಬರುತ್ತಿವೆ.

ಹೊಸ ವೈಶಿಷ್ಟ್ಯಗಳು: 2024ರ ಮಾರುತಿ ಸ್ವಿಫ್ಟ್ ಕಾರಿನ ಒಳಭಾಗದಲ್ಲಿ ಸುಧಾರಿತ ಚಾಲಕ ಸಹಾಯ ವ್ಯವಸ್ಥೆಗಳ (Advanced driver - assistance systems (ADAS) ಸಂಭಾವ್ಯ ಸೇರ್ಪಡೆಯೊಂದಿಗೆ ಆರು ಏರ್‌ಬ್ಯಾಗ್‌ಗಳು ಮತ್ತು ಎಲೆಕ್ಟ್ರಾನಿಕ್ ಸ್ಥಿರತೆ (Electronic stability) ಅನ್ನು ಸೇರಿಸುವುದರೊಂದಿಗೆ ಸುರಕ್ಷತೆಗೆ ಹೆಚ್ಚಿನ ಆದ್ಯತೆ ನೀಡಲಾಗುತ್ತದೆ ಎಂದು ಹೇಳಲಾಗಿದೆ.

2024-maruti-suzuki-swift-expected-launch-date

ವಿನ್ಯಾಸ: 2024ರ ಮಾರುತಿ ಸ್ವಿಫ್ಟ್ ನವೀಕರಿಸಿದ ಎಲ್ಇಡಿ ಹೆಡ್‌ಲ್ಯಾಂಪ್‌ಗಳು ಮತ್ತು ಟೈಲ್‌ಲ್ಯಾಂಪ್‌ಗಳನ್ನು ಸಹ ಹೊಂದಿರಲಿದೆ. ಇದು ಹೆಚ್ಚು ಆಧುನಿಕ ಮತ್ತು ಆಕರ್ಷಕ ನೋಟಕ್ಕೆ ಕೊಡುಗೆ ನೀಡಲಿದೆ. ಈ ಹ್ಯಾಚ್ ಬ್ಯಾಕ್ ಸ್ಪೋರ್ಟಿ ಅಲಾಯ್ ವೀಲ್‌ಗಳನ್ನು ಸಹ ಹೊಂದಿರಲಿದ್ದು, ಮಾರುತಿ ಸುಜುಕಿಯ ಜನಪ್ರಿಯ ಬಲೆನೊ ಮತ್ತು ಫ್ರಾಂಕ್ಸ್ ಮಾದರಿಗಳಂತೆ ಅಪ್‌ಡೇಟೆಡ್ ಇಂಟೀರಿಯರ್ ಪಡೆಯಲಿದೆ.

ಡ್ರೈವ್‌ಸ್ಪಾರ್ಕ್ ಕನ್ನಡ ವೆಬ್‌ಸೈಟ್ ತ್ವರಿತವಾಗಿ ಆಟೋಮೊಬೈಲ್ ಸಂಬಂಧಿಸಿದ ಸುದ್ದಿಗಳನ್ನು ನೀಡುತ್ತದೆ. ಜೊತೆಗೆ ಸೋಷಿಯಲ್ ಮೀಡಿಯಾಗಳ ಮೂಲಕ ತಕ್ಷಣವೇ ಓದುಗರೊಂದಿಗೆ ಸುದ್ದಿಗಳನ್ನು ಶೇರ್ ಮಾಡುತ್ತೇವೆ. ಇತ್ತೀಚಿನ ಕಾರು, ಬೈಕ್ ಸುದ್ದಿ, ಟೆಸ್ಟ್ ಡ್ರೈವ್ ವರದಿಗಳು ಮತ್ತು ವೀಡಿಯೊಗಳನ್ನು ಪಡೆಯಲು ನಮ್ಮ ಫೇಸ್‌ಬುಕ್, ಇನ್‌ಸ್ಟಾಗ್ರಾಮ್, ಯೂಟ್ಯೂಬ್ ಪೇಜ್‌ಗಳೊಂದಿಗೆ ಫಾಲೋ ಮಾಡಿ. ನಿಮಗೆ ನಮ್ಮ ಯಾವುದೇ ಸುದ್ದಿ ಇಷ್ಟವಾದರೆ ಲೈಕ್, ಕಾಮೆಂಟ್ ಮಾಡುವುದನ್ನು ಮರೆಯದಿರಿ.

Article Published On: Wednesday, April 24, 2024, 13:28 [IST]
English summary
2024 maruti suzuki swift expected launch date
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+