2024 ಮಾರುತಿ ಸ್ವಿಫ್ಟ್‌ನ ಹೊಸ ವಿಡಿಯೋ ವೈರಲ್: ವಿಡಿಯೋ ನೋಡಿ ಆನಂದಿಸುತ್ತಿರುವ ಕಾರು ಮಾಲೀಕರು!
ಭಾರತದಲ್ಲಿ ಕೆಲ ದಿನಗಳ ಹಿಂದೆಯಷ್ಟೇ ಪ್ರಖ್ಯಾತ ಕಾರು ನಿರ್ಮಾಣ ಕಂಪನಿಯಾದ ಮಾರುತಿ ಸುಜುಕಿ ಬಹುನಿರೀಕ್ಷಿತ 2024, ಸ್ವಿಫ್ಟ್ ಅನ್ನು ಲಾಂಚ್ ಮಾಡಿತ್ತು. ಹಲವಾರು ನಿರೀಕ್ಷೆಗಳೊಂದಿಗೆ ಮಾರುಕಟ್ಟೆಗೆ ಬಂದಿತ್ತಾದರೂ, ಎಲ್ಲರ ನಿರೀಕ್ಷೆಯನ್ನು ಪೂರ್ಣಗೊಳಿಸುವಲ್ಲಿ ಕೊಂಚ ವಿಫಲವಾಯಿತು ಎನ್ನಬಹುದು. ಇದೀಗ ಈ ಕಾರಿನ ಬಗ್ಗೆ ಹೊಸ ಅಪ್‌ಡೇಟ್ ಒಂದು ಬಂದಿದೆ.
ಈ ಕಾರು ಲಾಂಚ್ ಆದಾಗ, ಮಾರುತಿ ಸುಜುಕಿ ಸುಮಾರು 30 ಸೆಕೆಂಡ್‌ಗಳ ಟಿವಿ ಕಮರ್ಷಿಯಲ್ ಒಂದನ್ನು ಬಿಡುಗಡೆ ಮಾಡಿತ್ತು. ಆದರೆ ಇದೀಗ ಮತ್ತೊಮ್ಮೆ ಈ ಕಾರಿನ ಟಿವಿ ಕಮರ್ಷಿಯಲ್ ಅನ್ನು ಬಿಡುಗಡೆ ಮಾಡಿದ್ದು, ಇದು ಸದ್ಯಕ್ಕೆ ಇಂಟರ್‌ನೆಟ್‌ನಲ್ಲಿ ಸದ್ದು ಮಾಡುತ್ತಿದೆ. ಸುಮಾರು 70 ಸೆಕೆಂಡ್‌ಗಳಷ್ಟು ದೊಡ್ಡದಿರುವ ಈ ವಿಡಿಯೋದಲ್ಲಿ ಕಾರಿನ ಕುರಿತಾಗಿನ ಸಾಕಷ್ಟು ಮಾಹಿತಿಗಳಿದೆ.

ಟಿವಿ ಕಮರ್ಷಿಯಲ್‌ಗಳಿಂದ ನಾವು ಒಂದು ವಸ್ತುವಿನ ಕುರಿತಾದ ಮಾಹಿತಿಗಳನ್ನು ನಿಖರವಾಗಿ ಅರಿಯಲು ಸಾಧ್ಯವಿದೆ. ಹಾಗಾಗಿ ಸದ್ಯಕ್ಕೆ ಬಿಡುಗಡೆಯಾಗಿರುವ ಸ್ವಿಫ್ಟ್ ಟಿವಿ ಕಮರ್ಷಿಯಲ್ ಸಹ ಈ ಕಾರಿನ ಕುರಿತಾಗಿ ಮಾಹಿತಿಗಳನ್ನು ಪಡೆಯಲು ಸಾಧ್ಯವಾಗುತ್ತದೆ. ಸದ್ಯಕ್ಕೆ ಹೊಸ ಸ್ವಿಫ್ಟ್‌ನಲ್ಲಿ ಲಭ್ಯವಿರುವ ಎಲ್ಲಾ ಬಣ್ಣಗಳನ್ನು ಸಹ ಈ ವಿಡಿಯೋದಲ್ಲಿ ತೋರಿಸಿದ್ದು ಹೆಚ್ಚು ಆಕರ್ಷಕವಾಗಿ ಕಂಡು ಬಂದಿದೆ.
ಈ ಹೊಸ ಮಾರುತಿ ಸುಜುಕಿ ಸ್ವಿಫ್ಟ್ ಕುರಿತಾಗಿ ನೋಡುವುದಾದರೆ, ಈ ಕಾರಿನ ಬೆಲೆಯು ಎಕ್ಸ್ ಶೋರೂಂ ಪ್ರಕಾರ ರೂ.6.49 ಲಕ್ಷದಿಂದ ರೂ.9.64 ಲಕ್ಷವಾಗಿದೆ. ಈ ಸ್ವಿಫ್ಟ್ ಕಾರಿನ ವಿನ್ಯಾಸ, ಒಳಭಾಗ ಮತ್ತು ತಾಂತ್ರಿಕ ವಿಷಯದಲ್ಲಿ ಗಮನಾರ್ಹ ಬದಲಾವಣೆಗಳೊಂದಿಗೆ ಬಂದಿದೆ. ಕಳೆದ ಸ್ವಿಫ್ಟ್‌ಗಿಂತ ಬೆಲೆ ಕೊಂಚ ಹೆಚ್ಚಾಗಿದೆ.

ನ್ಯೂ ಜನರೇಷನ್ ಮಾರುತಿ ಸುಜುಕಿ ಸ್ವಿಫ್ ವಿನ್ಯಾಸದ ಬಗ್ಗೆ ಹೇಳುವುದಾದರೆ, ಈ ಮಾದರಿಯು ಹೊಸ ಮುಂಭಾಗದ ಬಂಪರ್ ಅನ್ನು ಹೊಂದಿದ್ದು, ಇದು ಸ್ವಲ್ಪಮಟ್ಟಿಗೆ ಟ್ವೀಕ್ ಮಾಡಲಾದ ಹೆಡ್ ಲೈಟ್ ಗಳು ಮತ್ತು ಬ್ಲ್ಯಾಕ್ ಬಣ್ಣದ ಮರುವಿನ್ಯಾಸಗೊಳಿಸಲಾದ ಗ್ರಿಲ್ ಅನ್ನು ನೀಡಿದೆ. ಸುಜುಕಿ ಬ್ಯಾಡ್ಜ್ ಗ್ರಿಲ್‌ನ ಮೇಲೆ ಕೂರುತ್ತದೆ ಮತ್ತು ಕರ್ವೇಸಿಯಸ್ ಬಾನೆಟ್ ಹೊಂದಿದೆ. ಈ ಕಾರಿನಲ್ಲಿ 15-ಇಂಚಿನ ಎಲಾಯ್ ವ್ಹೀಲ್ ಗಳಿಗೆ ಹೊಸ ವಿನ್ಯಾಸದ ಆಯ್ಕೆಗಳಿವೆ.
ಎಂಜಿನ್: 2024ರ ಮಾರುತಿ ಸುಜುಕಿ ಸ್ವಿಫ್ಟ್‌ಗೆ ದೊಡ್ಡ ಬದಲಾವಣೆಯನ್ನು ಬಾನೆಟ್ ಅಡಿಯಲ್ಲಿ ಮಾಡಲಾಗಿದೆ. ಸ್ವಿಫ್ಟ್ ಸುಜುಕಿಯ K-ಸರಣಿ ಎಂಜಿನ್‌ಗಳನ್ನು ಕೈಬಿಟ್ಟು Z ಸೀರಿಸ್ ಎಂಜಿನ್ ನೀಡಲಾಗಿದೆ. ಈ 2024ರ ಸ್ವಿಫ್ಟ್ ಕಾರಿನಲ್ಲಿ ಹೊಸ Z-ಸೀರಿಸ್ 1.2 ಲೀಟರ್ ಪೆಟ್ರೋಲ್ ಎಂಜಿನ್ ಅನ್ನು ನೀಡಿದೆ. ಈ ಎಂಜಿನ್ 5,700rpm ನಲ್ಲಿ 80.46bhp ಮತ್ತು 4,300rpm ನಲ್ಲಿ 111.7Nm ಟಾರ್ಕ್ ಅನ್ನು ಉತ್ಪಾದಿಸುವ ಸಾಮರ್ಥ್ಯವನ್ನು ಹೊಂದಿದೆ.
ಹೊಸ ಎಂಜಿನ್ ಅನ್ನು 5-ಸ್ಪೀಡ್ ಮ್ಯಾನುವಲ್ ಮತ್ತು AMT ಗೇರ್ ಬಾಕ್ಸ್ ಆಯ್ಕೆಗಳೊಂದಿಗೆ ನೀಡಲಾಗುತ್ತದೆ. ಸ್ವಿಫ್ಟ್ ಮ್ಯಾನುವಲ್ 24.8 km ಮೈಲೇಜ್ ನೀಡುತ್ತದೆ ಆದರೆ AMT ರೂಪಾಂತರವು 25.75 km ಮೈಲೇಜ್ ಅನ್ನು ನೀಡುತ್ತದೆ. ಇನ್ನು ಹೊಸ ಸ್ವಿಫ್ಟ್ ಅದರ ಹಿಂದಿನ ಮಾದರಿಗಿಂತ ಸ್ವಲ್ಪ ದೊಡ್ಡದಾಗಿದೆ. 2024ರ ಮಾರುತಿ ಸುಜುಕಿ ಸ್ವಿಫ್ಟ್ 3,860mm ಉದ್ದ, 1,735mm ಅಗಲ ಮತ್ತು 1,520mm ಎತ್ತರವನ್ನು ಹೊಂದಿದೆ.
ಡ್ರೈವ್‌ಸ್ಪಾರ್ಕ್ ಕನ್ನಡ ವೆಬ್‌ಸೈಟ್ ತ್ವರಿತವಾಗಿ ಆಟೋಮೊಬೈಲ್ ಸಂಬಂಧಿಸಿದ ಸುದ್ದಿಗಳನ್ನು ನೀಡುತ್ತದೆ. ಜೊತೆಗೆ ಸೋಷಿಯಲ್ ಮೀಡಿಯಾಗಳ ಮೂಲಕ ತಕ್ಷಣವೇ ಓದುಗರೊಂದಿಗೆ ಸುದ್ದಿಗಳನ್ನು ಶೇರ್ ಮಾಡುತ್ತೇವೆ. ಇತ್ತೀಚಿನ ಕಾರು, ಬೈಕ್ ಸುದ್ದಿ, ಟೆಸ್ಟ್ ಡ್ರೈವ್ ವರದಿಗಳು ಮತ್ತು ವೀಡಿಯೊಗಳನ್ನು ಪಡೆಯಲು ನಮ್ಮ ಫೇಸ್‌ಬುಕ್, ಇನ್‌ಸ್ಟಾಗ್ರಾಮ್, ಯೂಟ್ಯೂಬ್ ಪೇಜ್‌ಗಳೊಂದಿಗೆ ಫಾಲೋ ಮಾಡಿ. ನಿಮಗೆ ನಮ್ಮ ಯಾವುದೇ ಸುದ್ದಿ ಇಷ್ಟವಾದರೆ ಲೈಕ್, ಕಾಮೆಂಟ್ ಮಾಡುವುದನ್ನು ಮರೆಯದಿರಿ.


Click it and Unblock the Notifications